2ನೇ ಬಾರಿ NDA ಅಧಿಕಾರಕ್ಕೆ ಬಂದು 2 ವರ್ಷ; ರಾಜ್ಯದಲ್ಲಿ ಸಂಭ್ರಮಾಚರಣೆಗೆ ಬ್ರೇಕ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕೊರೊನಾ ಸೋಂಕಿತರಿಗೆ ಹಾಗೂ ಕೊರೋನಾ ವಾರಿಯರ್ಸ್ ಗಳಿಗೆ ವಿವಿಧ ರೀತಿಯ ಕಿಟ್ ವಿತರಣೆ ಸೇರಿದಂತೆ ಗಿಡ ನೆಡುವ, ರಕ್ತದಾನ ಶಿಬಿರ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಕನ್ನಡ(ಮೇ 28): ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಎರಡನೇ  ಅವಧಿಗೆ ಅಧಿಕಾರಕ್ಕೆ ಬಂದು ಬರುವ ಮೇ 30 ಕ್ಕೆ 7 ವರ್ಷಗಳಾಗುತ್ತಿದ್ದು, ಕೊರೋನಾ ಕಾರಣಕ್ಕಾಗಿ ಈ ಬಾರಿಯೂ ಸಂಭ್ರಮಾಚರಣೆಯನ್ನು ಕೈಬಿಡಲು ಬಿಜೆಪಿ ಪಕ್ಷ ತೀರ್ಮಾನಿಸಿದೆ. ಸಂಭ್ರಮಾಚರಣೆಯ ಬದಲು ಈ ಬಾರಿ ಸೇವಾ ಹೀ ಸಂಘಟನ್ ಎನ್ನುವ ರೀತಿಯಲ್ಲಿ ವರ್ಷಾಚರಣೆಯನ್ನು ನಡೆಸಲು ಎಲ್ಲಾ ಘಟಕಗಳಿಗೂ ಕೇಂದ್ರ ಬಿಜೆಪಿ ನಾಯಕರು ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕೊರೊನಾ ಸೋಂಕಿತರಿಗೆ ಹಾಗು ಕೊರೋನಾ ವಾರಿಯರ್ಸ್ ಗಳಿಗೆ ವಿವಿಧ ರೀತಿಯ ಕಿಟ್ ವಿತರಣೆ ಸೇರಿದಂತೆ ಗಿಡ ನೆಡುವ, ರಕ್ತದಾನ ಶಿಬಿರ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಿದೆ. 

ಎನ್.ಡಿ.ಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಒಟ್ಟು ಏಳು ವರ್ಷಗಳು ತುಂಬುತ್ತಿರುವ ನಡುವೆ ಕೊರೋನಾ ಪ್ರಕರಣಗಳೂ ಹೆಚ್ಚುತ್ತಿರುವ ಕಾರಣಕ್ಕೆ ಕೊರೊನಾ ವಾರಿಯರ್ಸ್ ಗಳಾದ ವೈದ್ಯರು, ದಾದಿಯರು, ಪೌರಕಾರ್ಮಿಕರನ್ನು ಗೌರವಿಸುವ ಕಾರ್ಯಕ್ರಮದ ಜೊತೆಗೆ ಅಗತ್ಯವಿದ್ದವರಿಗೆ ಆಹಾರ ಕಿಟ್ ವಿತರಿಸುವ ಕಾರ್ಯವೂ ನಡೆಯಲಿದೆ. ಅಲ್ಲದೆ ಕೊರೊನಾ ಸೋಂಕಿತರಿಗೂ ಆಹಾರ ಕಿಟ್ ವಿತರಿಸಲು ಈ ಬಾರಿ ತೀರ್ಮಾನಿಸಲಾಗಿದೆ. ಬಿಜೆಪಿಯ ಎಸ್.ಸಿ,ಎಸ್.ಟಿ ಮೋರ್ಚಾ, ಒಬಿಸಿ ಮೋರ್ಚಾ, ಯುವಮೋರ್ಚಾ,ಮಹಿಳಾ ಮೋರ್ಚಾ .ಮತ್ತು ರೈತ ಮೋರ್ಚಗಳ ಮೂಲಕವೂ ಸೇವಾ ಹಿ ಸಂಘಟನ್ ಕಾರ್ಯಕ್ರಮಗಳು ನಡೆಯಲಿದೆ.

ಇದನ್ನೂ ಓದಿ:Black Fungus: ಒಂದು ಕಡೆ ಫಂಗಸ್ ಆರ್ಭಟ, ಮತ್ತೊಂದೆಡೆ ಸಿಗದ ಔಷಧ; ರೋಗಿಗಳ ಗೋಳು ಕೇಳೋರ್ಯಾರು?

ಪ್ರತೀ ಮೋರ್ಚಗಳೂ ಮಂಡಲ ಮಟ್ಟದಲ್ಲಿ ಕನಿಷ್ಟ 100 ಜನರಿಗೆ ಆಹಾರ ಕಿಟ್ ವಿತರಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ರಕ್ತದಾನ ಶಿಬಿರದ ಮೂಲಕ ಅಗತ್ಯವಿದ್ದ ಕಡೆ ರಕ್ತವನ್ನು ಪೂರೈಸುವ ಕೆಲಸವೂ ಈ ಸಂಭ್ರಮಾಚರಣೆಯ ಕಾರ್ಯಕ್ರಮಗಳಲ್ಲಿ ಜೋಡಿಸಲ್ಪಟ್ಟಿದೆ. ಪುತ್ತೂರು ತಾಲೂಕಿನಲ್ಲಿ ರಕ್ತದಾನ ಶಿಬಿರವನ್ನು ನಡೆಸದೆ ಅಗತ್ಯವಿದ್ದ ಸಂದರ್ಭದಲ್ಲಿ ತನ್ನ ಕಾರ್ಯಕರ್ತರ‌ ಮೂಲಕ ರಕ್ತ ನೀಡಲು ತೀರ್ಮಾನಿಸಲಾಗಿದ್ದು, ಪುತ್ತೂರು ಬ್ಲಡ್ ಬ್ಯಾಂಕ್ ನಲ್ಲಿ ರಕ್ತದ ಕೊರತೆ ಇಲ್ಲದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ ಗಿಡ ನೆಡುವ‌ ಕಾರ್ಯಕ್ರಮಗಳೂ ಅಲ್ಲಲ್ಲಿ ನಡೆಯಲಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾದ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ್ ಮಾಹಿತಿ ನೀಡಿದ್ಧಾರೆ.

ಮೇ 28 ರಿಂದ  ಮೇ 31 ರ ವರೆಗೆ ಈ ಕಾರ್ಯಕ್ರಮಗಳು ರಾಜ್ಯದೆಲ್ಲೆಡೆ ನಡೆಯಲಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬಿಜೆಪಿ ಪಕ್ಷದ ವತಿಯಿಂದ ಪ್ರತೀ ಬೂತ್ ಮಟ್ಟದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಫಲಾನುಭವಿಗಳನ್ನು ಗುರುತಿಸುವ ಕೆಲಸವೂ ಆಯಾ ಬೂತ್ ಮಟ್ಟದಿಂದಲೇ ನಡೆಯಲಿದೆ. ಅದೇ ರೀತಿ ಮೋರ್ಚಾಗಳ ವತಿಯಿಂದ ನಡೆಯುವ ಕಾರ್ಯಕ್ರಮಗಳು ಮಂಡಲ ಮಟ್ಟದಲ್ಲಿ ನಡೆಯಲಿದೆ.

ಇದನ್ನೂ ಓದಿ:Mangalore: ಮಾಸ್ಕ್ ಧರಿಸಲು ಸೂಚಿಸಿದ ಪಿಡಿಓ ಮೇಲೆ ಹಲ್ಲೆ; ನಾಲ್ವರ ಬಂಧನ

ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದ ಹಿನ್ನಲೆಯಲ್ಲಿ ಹಾಗೂ ಕೊರೊನಾ ಸಮಯದಲ್ಲಿ ಅಧಿಕಾರಕ್ಕೆ ಬಂದ ವರ್ಷಾಚರಣೆಯನ್ನು ಆಚರಿಸಿದಲ್ಲಿ ಪಕ್ಷದ ವಿರುದ್ಧ ಋಣಾತ್ಮಕ ಅಭಿಪ್ರಾಯಗಳು ಬರುವ ಸಾಧ್ಯತೆಯನ್ನು ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

ಎನ್.ಡಿ.ಎ ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದು 2 ವರ್ಷ ಪೂರ್ಣಗೊಳ್ಳಲಿದ್ದು, ಎರಡು ವರ್ಷವೂ ಕೊರೋನಾ ಕಾರಣಕ್ಕಾಗಿ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ.
Published by:Latha CG
First published: