HOME » NEWS » State » 2 LAKH 80 THUSAND CUSEC WATER RELEASED FROM BASAVASAGAR DAM TO KRISHNA RIVER GNR

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ - ಕೊಳ್ಳೂರು ಸೇತುವೆ ಜಲಾವೃತ

ಕೃಷ್ಣಾ ನದಿಯು ಅಪಾಯಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಗ್ರಾಮದ ಸೇತುವೆ ಜಲಾವೃತವಾಗಿದೆ. ಕೊಳ್ಳೂರು-ಹೂವಿನಹೆಡಗಿ ಸೇತುವೆಯೂ ಮುಳುಗಡೆಯಾಗಿದೆ.

news18-kannada
Updated:August 17, 2020, 12:58 PM IST
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ - ಕೊಳ್ಳೂರು ಸೇತುವೆ ಜಲಾವೃತ
ಕೃಷ್ಣಾ ನದಿ
  • Share this:
ಯಾದಗಿರಿ(ಆ.17): ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಯಾದಗಿರಿ ಜಿಲ್ಲೆಯ ಕೃಷ್ಣಾ ನದಿ ತೀರದ ಜನರು ಈಗ ಪ್ರವಾಹ ಎದುರಿಸುವಂತಾಗಿದೆ. ಯಾದಗಿರಿ ಜಿಲ್ಲೆಯ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಈಗ 2 ಲಕ್ಷ 80 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಬಸವಸಾಗರ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿದೆ. ಕೃಷ್ಣಾ ನದಿ ತೀರದಲ್ಲಿ ಈಗ ಪ್ರವಾಹ ಭೀತಿ ಎದುರಾಗಿದೆ.

ಕೊಳ್ಳುರು ಸೇತುವೆ ಜಲಾವೃತ..!

ಕೃಷ್ಣಾ ನದಿಯು ಅಪಾಯಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಗ್ರಾಮದ ಸೇತುವೆ ಜಲಾವೃತವಾಗಿದೆ. ಕೊಳ್ಳೂರು-ಹೂವಿನಹೆಡಗಿ ಸೇತುವೆಯೂ ಮುಳುಗಡೆಯಾಗಿದೆ. ಹೀಗಾಗಿ ಯಾದಗಿರಿ-ರಾಯಚೂರು ಸಂಚಾರ ನಿಷೇಧ ಮಾಡಲಾಗಿದೆ. ಕೊಳ್ಳೂರು ಸೇತುವೆ ಮೂಲಕ ಜನರ ಸಂಚಾರಕ್ಕೆ ನಿಷೇಧ ಮಾಡಲಾಗಿದೆ. ಕೊಳ್ಳೂರು ಸೇತುವೆಯಲ್ಲಿ ವ್ಯಾಪಾಕ ಪೊಲೀಸ ಭದ್ರತೆ ಕಲ್ಪಿಸಲಾಗಿದೆ.

ದೇಗುಲಗಳು ಮುಳುಗಡೆ ಭೀತಿ..!

ಕೃಷ್ಣಾ ನದಿ ಆರ್ಭಟಕ್ಕೆ ನದಿ ತೀರದಲ್ಲಿರುವ ದೇಗುಲಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ಜಿಲ್ಲೆಯ ಸುರಪುರ ತಾಲೂಕಿನ ಶೆಳ್ಳಗಿ ಗ್ರಾಮದ ಕೃಷ್ಣಾ ‌ನದಿ ತೀರದಲ್ಲಿರುವ ಆಂಜನೇಯ ಹಾಗೂ ಬಸವೇಶ್ವರ ದೇಗುಲಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ನದಿಯಲ್ಲಿ ಇನ್ನಷ್ಟು ನೀರಿನ ಹರಿವು ಹೆಚ್ಚಾದರೆ ದೇಗುಲಗಳಿಗೆ ನೀರು ನುಗ್ಗಲಿವೆ.

ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಮಹಾಪೂರ – ವಿಜಯಪುರದ ಹಲವು ಗ್ರಾಮಗಳಿಗೆ ಮುಳುಗಡೆ ಭೀತಿ; ಪರಿಹಾರಕ್ಕೆ ಅನ್ನದಾತರ ಆಗ್ರಹ

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಶೆಳ್ಳಗಿ ಗ್ರಾಮಸ್ಥ ಶರಣಗೌಡ ಮಾತನಾಡಿ, ಕೃಷ್ಣಾ ನದಿಯ ಪ್ರವಾಹಕ್ಕೆ ನದಿ ತೀರದಲ್ಲಿ ಬೆಳೆ ಹಾನಿಯಾಗಿದೆ. ಅದೇ ರೀತಿ ನೀರು ಹೆಚ್ಚು ಬಂದರೆ ದೇಗುಲಗಳು ಮುಳುಗಡೆಯಾಗುತ್ತವೆ ಎಂದರು.

ಕೃಷ್ಣಾ ನದಿಯ ಅರ್ಭಟಕ್ಕೆ ಶೆಳ್ಳಗಿ ಶೆಳ್ಳಗಿ, ಕೊಳ್ಳುರು, ಮದರಕಲ್,ಮೊದಲಾದ ಗ್ರಾಮದಲ್ಲಿ ಬೆಳೆ ಜಲಾವೃತಗೊಂಡು ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.
Published by: Ganesh Nachikethu
First published: August 17, 2020, 12:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories