ಎಟಿಎಂಗೆ ಸ್ಕೀಮ್ಮರ್ ಅಳವಡಿಸಲು ಯತ್ನ; ಇಬ್ಬರು ವಿದೇಶಿ ಪ್ರಜೆಗಳ ಬಂಧನ

ಆರೋಪಿಗಳ ಬಳಿ ವಿವಿಧ ಬ್ಯಾಂಕ್ ಗಳ ಎಟಿಎಂ ಕಾರ್ಡ್, ಮೂರು ಮೊಬೈಲ್ ಪೋನ್ ಗಳು, ಸ್ಕೀಮ್ಮರ್ ಮತ್ತು ಹಿಡನ್ ಕ್ಯಾಮೆರಾವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಕೃತ್ಯಕ್ಕೆ ಬಳಸಿದ ವಸ್ತುಗಳು

ಆರೋಪಿಗಳು ಕೃತ್ಯಕ್ಕೆ ಬಳಸಿದ ವಸ್ತುಗಳು

  • Share this:
ಬೆಂಗಳೂರು(ಜೂ.23): ಎಟಿಎಂಗಳಿಗೆ ಸ್ಕೀಮ್ಮರ್ ಮಷಿನ್ ಆಳವಡಿಸಿ ಎಟಿಎಂ ಕಾರ್ಡ್ ಮಾಹಿತಿ ಕದಿಯುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನ ಆರ್ ಟಿ ನಗರ ಪೊಲೀಸರು ಬಂಧಿಸಿದ್ದಾರೆ. ಉಗಾಂಡಾ ದೇಶದ ಪ್ರಜೆ ಫೆಲಿಕ್ಸ್ ಕಿಸಿಬೊ ಹಾಗೂ ತಾಂಜಾನೀಯ ದೇಶದ ಪ್ರಜೆ ಖೈರುನ್ ಅಬ್ದುಲಾ ಬಂಧಿತ ಆರೋಪಿಗಳು.

ಆರ್ ಟಿ ನಗರದ ಗಂಗಾನಗರ ಯೂನಿಯನ್ ಬ್ರಾಂಚ್ ಎಟಿಎಂನಲ್ಲಿ ಓರ್ವ ವಿದೇಶಿ ಮಹಿಳೆ ಹಾಗೂ ವ್ಯಕ್ತಿಯೊರ್ವ ಕೈಯಲ್ಲಿ ಎಟಿಎಂ ಸ್ಕೀಮ್ಮರ್ ಹಾಗೂ ಹಲವು ಎಟಿಎಂ ಕಾರ್ಡ್ ಗಳನ್ನ ಹೊಂದಿದ್ದು ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಇದೇ ವೇಳೆ ಎಟಿಎಂ ಉಸ್ತುವಾರಿ ಉಮಾಮಹೇಶ್ವರ್ ಅವರು ಎಟಿಎಂನ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿ ಎಟಿಎಂ ಯಂತ್ರ ತಪಾಸಣೆ ನಡೆಸಿದ್ದಾರೆ. ಎಟಿಎಂ ಯಂತ್ರ ತಪಾಸಣೆ ವೇಳೆ ಇಬ್ಬರು ವಿದೇಶಿ ಪ್ರಜೆಗಳ ಬಳಿ ಸ್ಕೀಮ್ಮರ್ ಇರುವುದು ಪತ್ತೆಯಾಗಿದೆ. ಇಬ್ಬರು ವಿದೇಶಿ ಪ್ರಜೆಗಳನ್ನ ಪ್ರಶ್ನಿಸಲು ಮುಂದಾದ ವೇಳೆ ಆರೋಪಿಗಳು ಎಟಿಎಂನಿಂದ ಎಸ್ಕೇಪ್ ಆಗಿದ್ದಾರೆ.

ಈ ಬಗ್ಗೆ ಎಟಿಎಂ ಉಸ್ತುವಾರಿ ಬ್ಯಾಂಕ್ ಗೆ ಮಾಹಿತಿ ನೀಡಿದ್ದು, ಬ್ಯಾಂಕ್ ಮ್ಯಾನೇಜರ್ ಶ್ರೀನಿವಾಸರೆಡ್ಡಿ ಆರ್ ಟಿ‌ ನಗರ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿದ ಪೊಲೀಸರು ಎಟಿಎಂ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿ ಉಗಾಂಡಾ ಹಾಗೂ ತಾಂಜಾನೀಯ ದೇಶದ ಪ್ರಜೆಗಳನ್ನ ಬಂಧಿಸಿದ್ದಾರೆ.

ಇದನ್ನೂ ಓದಿ : ಕಡಿಮೆ ಬೆಲೆಗೆ ಕೋವಿಡ್ ಟೆಸ್ಟ್ ಕಿಟ್ ತಯಾರಿಸಿದ ಬೆಂಗಳೂರಿನ ಬಯೋಅಜೈಲ್ ಸಂಸ್ಥೆ

ಬಂಧಿತರು ಎಟಿಎಂಗಳಿಗೆ ಸ್ಕೀಮ್ಮರ್ ಆಳವಡಿಸಿ ಆ ಮೂಲಕ ಗ್ರಾಹಕರ ಎಟಿಎಂ ಕಾರ್ಡ್ ಮಾಹಿತಿ ಕದಿಯುತ್ತಿದ್ದರು. ಕದ್ದ ಮಾಹಿತಿಯಲ್ಲಿ ನಕಲಿ ಎಟಿಎಂ ಕಾರ್ಡ್ ತಯಾರಿಸಿ ಬಳಿಕ ಹಣ ಲಪಟಾಯಿಸುತ್ತಿದ್ದರು ಎನ್ನಲಾಗಿದೆ.

ಇನ್ನೂ ಆರೋಪಿಗಳ ಬಳಿ ವಿವಿಧ ಬ್ಯಾಂಕ್ ಗಳ ಎಟಿಎಂ ಕಾರ್ಡ್, ಮೂರು ಮೊಬೈಲ್ ಪೋನ್ ಗಳು, ಸ್ಕೀಮ್ಮರ್ ಮತ್ತು ಹಿಡನ್ ಕ್ಯಾಮೆರಾವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
First published: