• Home
 • »
 • News
 • »
 • state
 • »
 • ಹೊಸಪೇಟೆ ಕಾರು ಅಪಘಾತವಾದ ಕಾರನ್ನು ಡ್ರೈವ್​ ಮಾಡಿದ್ದು ರಾಹುಲ್​ ಎಂಬ ವ್ಯಕ್ತಿ: ಬಳ್ಳಾರಿ ಎಸ್​ಪಿ

ಹೊಸಪೇಟೆ ಕಾರು ಅಪಘಾತವಾದ ಕಾರನ್ನು ಡ್ರೈವ್​ ಮಾಡಿದ್ದು ರಾಹುಲ್​ ಎಂಬ ವ್ಯಕ್ತಿ: ಬಳ್ಳಾರಿ ಎಸ್​ಪಿ

ಹೊಸಪೇಟೆಯಲ್ಲಿ ಅಪಘಾತವಾದ ಕಾರು

ಹೊಸಪೇಟೆಯಲ್ಲಿ ಅಪಘಾತವಾದ ಕಾರು

ಬಳ್ಳಾರಿ ಎಸ್​ಪಿ ಪತ್ರಿಕಾಗೋಷ್ಠಿ ನಡೆಸಿದ್ದು, ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯ ಹೆಸರು ರಾಹುಲ್​ ಎಂದು ಸ್ಪಷ್ಟನೆ ನೀಡಿದ್ದಾರೆ. ರಾಹುಲ್​ ಕಾರು ಚಲಿಸುತ್ತಿದ್ದರು, ಈ ವೇಳೆ ಅಪಘಾತವಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಚಿನ್​ ಮೃತಪಟ್ಟಿದ್ದಾರೆ. ರಾಹುಲ್​ ಕೂಡ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮುಂದೆ ಓದಿ ...
 • Share this:

  ಬಳ್ಳಾರಿ: ಅಧಿಕಾರ ಹಾಗೂ ಹಣದ ಮದದಿಂದ ರಾಜಕಾರಣಿಗಳ ಮಕ್ಕಳು ಮನಸೋ ಇಚ್ಛೆ ನಡೆದುಕೊಳ್ಳುತ್ತಿರುವ ಪ್ರಕರಣ ಇತ್ತೀಚೆಗೆ ಹೆಚ್ಚುತ್ತಿದೆ. ಶಾಂತಿನಗರ ಕಾಂಗ್ರೆಸ್​ ಶಾಸಕ ಹ್ಯಾರಿಸ್​ ಮಗ ಮೊಹಮದ್​ ನಲಪಾಡ್​ ಕಾರು ಅಪಘಾತ ಮಾಡಿದ್ದಾರೆ ಎನ್ನುವ ವಿಚಾರ ಚರ್ಚೆಯಲ್ಲಿರುವಾಗಲೇ ಇದೇ ಮಾದರಿಯ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ಅಪಘಾತವೊಂದು ಘಟಿಸಿತ್ತು. ಈ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಅಪಘಾತವನ್ನು ಬಿಜೆಪಿಯ ಪ್ರಭಾವಿ ಸಚಿವರ ಮಗ ಮಾಡಿದ್ದಾನೆ ಎಂಬ ಆರೋಪ ಇದೀಗ ಕೇಳಿ ಬಂದಿತ್ತು. ಆದರೆ ಘಟನೆಯ ಬಗ್ಗೆ ಮಾಹಿತಿ ನೀಡಿರುವ ಬಳ್ಳಾರಿ ಎಸ್​ಪಿ ಘಟನೆಗೂ ಸಚಿವರ ಮಗನಿಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

  ಬಳ್ಳಾರಿಯಲ್ಲಿ ಮರಿಯಮ್ಮನ ಹಳ್ಳಿಯಲ್ಲಿ ಕಾರು ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ರಸ್ತೆ ಮೇಲೆ ನಡೆದು ಹೋಗುತ್ತಿದ್ದ ರವಿನಾಯ್ಕ್, ಸಚಿನ್ ಹೆಸರಿನ ಇಬ್ಬರು ಮೃತಪಟ್ಟಿದ್ದರು. ಈ ವೇಳೆ ಕಾರು ಚಲಾಯಿಸಿದ್ದು ರಾಜ್ಯ ಸಚಿವರ ಮಗ ಎಂದು ಹೇಳಲಾಗಿತ್ತು. ಜತೆಗೆ ಪೊಲೀಸರು ಕೂಡ ಈ ಪ್ರಕರಣದ ಸಂಬಂಧ ಮುಗುಮ್ಮಾಗಿದ್ದರು. ಇವೆಲ್ಲವೂ ಊಹಾಪೋಹಕ್ಕೆ ಪುಷ್ಠಿ ನೀಡಿತ್ತು.

  ಈ ನಡುವೆ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್​ ಅಶೋಕ್​, ಅಪಘಾತವಾದ ಕಾರಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು. "ಅಪಘಾತದಲ್ಲಿ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಘಟನೆ ನಿಜಕ್ಕೂ ಬೇಸರ ತರಿಸಿದೆ. ಮಂತ್ರಿಯಾಗಿ ನಾನು ಪ್ರತಿಕ್ರಿಯಿಸುತ್ತಿಲ್ಲ. ಕೆಲ ಮಾಧ್ಯಮದಲ್ಲಿ ಕೆಲವು ವಿಚಾರಗಳು ಬಂದಿವೆ. ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಸತ್ಯಾಂಶ ಹೊರಬರುತ್ತದೆ ಎಂಬ ವಿಶ್ವಾಸವಿದೆ. ಕಾನೂನು ಎಲ್ಲರಿಗೂ ಒಂದೇ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ," ಎಂದು ಆರ್​ ಅಶೋಕ್​ ಹೇಳಿದರು.

  ಇದರ ಬೆನ್ನಲ್ಲೇ ಬಳ್ಳಾರಿ ಎಸ್​ಪಿ ಪತ್ರಿಕಾಗೋಷ್ಠಿ ನಡೆಸಿದ್ದು, ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯ ಹೆಸರು ರಾಹುಲ್​ ಎಂದು ಸ್ಪಷ್ಟನೆ ನೀಡಿದ್ದಾರೆ. ರಾಹುಲ್​ ಕಾರು ಚಲಿಸುತ್ತಿದ್ದರು, ಈ ವೇಳೆ ಅಪಘಾತವಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಚಿನ್​ ಮೃತಪಟ್ಟಿದ್ದಾರೆ. ರಾಹುಲ್​ ಕೂಡ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಎಂದರು.

  ಅಪಘಾತವಾದ ಕಾರು ನ್ಯಾಷನಲ್ ಪಬ್ಲಿಕ್ ಶಾಲೆ ಹೆಸರಲ್ಲಿ ನೋಂದಣಿಯಾಗಿದೆ. ಈ ಕಾರನ್ನು ರಾಜ್ಯ ಬಿಜೆಪಿ ನಾಯಕನ ಮಗ ಓಡಿಸುತ್ತಿದ್ದ ಎಂಬ ಸುದ್ದಿ ಬಳ್ಳಾರಿಯಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಆದರೆ, ಎಫ್​ಐಆರ್​ನಲ್ಲಿ ಈ ಬಗ್ಗೆ ಎಲ್ಲಿಯೂ ಉಲ್ಲೇಖಿತವಾಗಿರಲಿಲ್ಲ. ಈ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  ಸಚಿವರ ಮಗನೇ ಕಾರು ಚಾಲನೆ ಮಾಡುತ್ತಿದ್ದ ಎಂಬುದಕ್ಕೆ ಯಾವುದೇ ಸಾಕ್ಷ್ಯವೂ ಇರಲಿಲ್ಲ, ಆದರೂ ಈ ಸುದ್ದಿ ರಾಜ್ಯದ ತುಂಬೆಲ್ಲಾ ಹರಿದಾಡಲಾರಂಭಿಸಿತ್ತು.

  ಏನಿದು ಪ್ರಕರಣ?:

  ಫೆ.10 ಮಧ್ಯಾಹ್ನ 3.30ಕ್ಕೆ ಬಳ್ಳಾರಿ ಮರಿಯಮ್ಮನ ಹಳ್ಳಿಯಲ್ಲಿ ವೇಗವಾಗಿ ಬಂದ ಐಷಾರಾಮಿ ಕಾರೊಂದು ಅಪಘಾತಕ್ಕೆ ಈಡಾಗಿತ್ತು. ಈ ವೇಳೆ ಪಾದಚಾರಿ ರವಿನಾಯ್ಕ್, ಮತ್ತೊಂದು ಕಾರು ಚಲಿಸುತ್ತಿದ್ದ ಸಚಿನ್ ಮೃತಪಟ್ಟಿದ್ದರು. ಘಟನೆ ನಡೆದು ಮೂರು ದಿನಗಳ ನಂತರ ಈ ಬಗ್ಗೆ ಗುಸುಗುಸು ಆರಂಭವಾಗಿತ್ತು.

  First published: