Gurukula; ಗುರುಕುಲ ಪದ್ದತಿ ಬಗ್ಗೆ‌ ಜಾಗೃತಿ ಮೂಡಿಸಲು ಯುವಕನ ಪಾದಯಾತ್ರೆ

19ವರ್ಷದ ಯುವಕನ ಪಾದಯಾತ್ರೆ ಗೆ ಎಲ್ಲಡೆ ಮೆಚ್ಚುಗೆ...ಈಗಾಗಲೆ ನಾಲ್ಕುನೂರು ದಿನ ಪಾದಯಾತ್ರೆ ಮುಗಿಸಿದ ರೋಹನ್ ....ಗೋವಾದತ್ತ ಪ್ರಯಾಣ ಬೆಳಸಿದೆ ಯುವಕ

ರೋಹನ್

ರೋಹನ್

  • Share this:
ಕಾರವಾರ: 19 ವರ್ಷದ ಯುವಕ (Young Boy) ಕಾಲೇಜು ಓದಿಕೊಂಡಿದ್ದ ಆತನಿಗೆ ದೇಶ ಸುತ್ತಬೇಕು ಎನ್ನುವ ಭಾವನೆ ಬೆಳೆಯುತ್ತದೆ. ಬಳಿಕ ತಡಮಾಡದೇ ಪವಿತ್ರ ಧಾರ್ಮಿಕ ಕ್ಷೇತ್ರದಿಂದ (Holy Place) ತನ್ನ ಪ್ರಯಾಣವನ್ನ ಆರಂಭಿಸಿದ ಆ ಯುವಕ ಒಂದು ವರ್ಷದಲ್ಲಿ ಪಾದಯಾತ್ರೆ ಮೂಲಕವೇ 15 ರಾಜ್ಯಗಳನ್ನ ಸುತ್ತಿದ್ದಾನೆ. ಇಡೀ ದೇಶವನ್ನ ಪಾದಯಾತ್ರೆ ಮೂಲಕವೇ ಸುತ್ತಬೇಕು ಎನ್ನುವ ಹಂಬಲವಿರುವ ಆ ಯುವಕ ತನ್ನ ಯಾತ್ರೆಗೆ ಯಾವುದೇ ಹಣವನ್ನ ವ್ಯಯಿಸುತ್ತಿಲ್ಲ. ಈ ಯುವಕನ ನಡಿಗೆಗೆ ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಕಾರವಾರ (Karwar) ತಲುಪಿದ ಯುವಕ ಸಿಕ್ಕಿದ್ದು ಮಾದ್ಯಮದ ಮುಂದೆ.

ಯಾರು ಈ  ಯುವಕ?

ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ. ಹೆಗಲಿಗೆ ಬ್ಯಾಗ್ ಏರಿಸಿ, ನಡೆದುಕೊಂಡು ಹೋಗುತ್ತಿರುವ ಯುವಕನ ಹೆಸರು ರೋಹನ್. ಕೇವಲ 19 ವರ್ಷದ ಈ ಯುವಕ ಮಹಾರಾಷ್ಟ್ರದ ಮೂಲದವನು. ಪಾದಯಾತ್ರೆ ಮೂಲಕವೇ ದೇಶವನ್ನ ಸುತ್ತಬೇಕು, ಜೊತೆಗೆ ಪುರಾತನ ಕಾಲದಲ್ಲಿ ಆಚರಣೆಯಲ್ಲಿದ್ದ ಗುರುಕುಲ ಪದ್ದತಿಯ ಬಗ್ಗೆ ಜನರಿಗೆ ತಿಳಿಸಬೇಕು ಎನ್ನುವ ಗುರಿಯೊಂದಿಗೆ ಆತ ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣ ಬೆಳೆಸಿದ್ದಾನೆ.

2020ರ ಅಗಸ್ಟ್ 25ರಂದು ವಾರಣಾಸಿಯಿಂದ ತನ್ನ ಪಾದಯಾತ್ರೆ ಆರಂಭಿಸಿರುವ ರೋಹನ್ 420 ದಿನಗಳಲ್ಲಿ ಉತ್ತರಪ್ರದೇಶ, ರಾಜಸ್ತಾನ, ಹರಿಯಾಣ, ದೆಹಲಿ, ಮದ್ಯಪ್ರದೇಶ, ಕೇರಳ ಸೇರಿದಂತೆ ಸುಮಾರು 15 ರಾಜ್ಯಗಳಿಗೆ ಭೇಟಿ ನೀಡಿದ್ದಾನೆ. ಇದೀಗ ಕರ್ನಾಟಕದ ಕರಾವಳಿ ಮಾರ್ಗವಾಗಿ ಗೋವಾದತ್ತ ಪ್ರಯಾಣ ಬೆಳೆಸಿದ್ದು ಕೇವಲ ಕಾಲ್ನಡಿಗೆ ಮೂಲಕವೇ ತನ್ನ ಯಾತ್ರೆಯನ್ನ ಕೈಗೊಳ್ಳಬೇಕು ಎಂದು ಯಾವುದೇ ಹಣವನ್ನೇ ವ್ಯಯಿಸದೇ ಪಾದಯಾತ್ರೆಯನ್ನ ಮುಂದುವರೆಸಿದ್ದಾನೆ.

ಇದನ್ನೂ ಓದಿ:  Cashew Trees: ಚಂಡಮಾರುತದಿಂದ ಗೋಡಂಬಿ ಮರಗಳನ್ನು ರಕ್ಷಿಸಿಕೊಳ್ಳಲು ಹೊಸ ವಿಧಾನ ಕಂಡುಹಿಡಿದ ರೈತ ಮಹಿಳೆ

ಈತನ‌ ಗುರಿ ವಾರಣಾಸಿಯಿಂದ ಸೈಬೇರಿಯಾಗೆ ಪಾದಯಾತ್ರೆ

ಇನ್ನು ಬಿಕಾಂ ವಿದ್ಯಾರ್ಥಿಯಾಗಿದ್ದ ರೋಹನ್‌ನಿಗೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಸುವುದಕ್ಕಿಂತ ಹೊರಗಡೆ ತಿರುಗಾಡುವುದರಿಂದಲೇ ಹೆಚ್ಚಿನ ಜ್ಞಾನ ಸಿಗುತ್ತದೆ ಎನ್ನುವ ಅರಿವಾಗಿತ್ತು. ಹಿಂದಿನ ಕಾಲದಲ್ಲಿ ಗುರುಕುಲ ಪದ್ದತಿಯಲ್ಲಿ ಪರ್ಯಟಣೆ ಮಾಡುವುದನ್ನೂ ಶಿಕ್ಷಣದ ಭಾಗವಾಗಿ ರೂಢಿಸಿಕೊಂಡಿದ್ದು ಇದರಿಂದಾಗಿ ಹೆಚ್ಚಿನ ಜ್ಞಾನಾರ್ಜನೆಗೆ ಅನುಕೂಲವಾಗುತ್ತಿತ್ತು. ಆದ್ರೆ ಗುರುಕುಲ ಪದ್ದತಿಯ ಹೆಚ್ಚಿನ ಅಂಶಗಳು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಇಲ್ಲದಿರುವುದರಿಂದ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಹಣ ವ್ಯಯಿಸದೇ ಯಾತ್ರೆಯನ್ನ ಕೈಗೊಳ್ಳುವ ಮೂಲಕ ಮಾನವೀಯತೆ ಇಂದಿಗೂ ಜೀವಂತವಾಗಿದೆ ಎನ್ನುವುದನ್ನ ತೋರಿಸಬೇಕು ಎನ್ನುವ ನಿಟ್ಟಿನಲ್ಲಿ ರೋಹನ್ ಪಾದಯಾತ್ರೆ ನಡೆಸುತ್ತಿದ್ದಾನೆ.

ಇದನ್ನೂ ಓದಿ:  MP Cop; ಒಂದೂವರೆ ವರ್ಷದ ಮಗಳ ಜೊತೆ ಕೆಲಸ್ಕೆ ಹಾಜರಾದ ಪೊಲೀಸ್ ಅಧಿಕಾರಿ: ಪೋಟೋ ವೈರಲ್

ರೋಹನ್ ನಡಿಗೆಗೆ ಸಾರ್ವಜನಿಕರ ಮೆಚ್ಚುಗೆ

ಮಾರ್ಗಮದ್ಯೆ ಜನರು ನೀಡುವ ಆಹಾರ ಸೇವಿಸುತ್ತಾ, ಸಿಕ್ಕಲ್ಲಿ ಆಶ್ರಯವನ್ನ ಪಡೆದು ಯಾತ್ರೆ ಮುಂದುವರೆಸುತ್ತಿದ್ದು ರಸ್ತೆಯಲ್ಲಿ ಸವಾರರು ಕರೆದಲ್ಲಿ ಅವರಿಂದ ಲಿಫ್ಟ್ ಪಡೆದುಕೊಂಡು ಪ್ರಯಾಣ ನಡೆಸುತ್ತಿದ್ದಾನೆ. ಇನ್ನು ದೇಶವನ್ನ ಸುತ್ತಿದ ಬಳಿಕ ಇದುವರೆಗೆ ಯಾವುದೇ ಭಾರತೀಯ ಭೇಟಿ ನೀಡದ ವಿಶ್ವದ ಅತ್ಯಂತ ಶೀತಲಪ್ರದೇಶ ಸೈಬೀರಿಯಾಕ್ಕೆ ಪಾದಯಾತ್ರೆ ಮೂಲಕವೇ ತೆರಳಬೇಕು ಎನ್ನುವ ಗುರಿಯನ್ನ ಯುವಕ ಹೊಂದಿದ್ದು ಕಿರಿಯ ವಯಸ್ಸಿನ ಯುವಕನಲ್ಲಿನ ಜ್ಞಾನಾರ್ಜನೆಯ ಹಂಬಲಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಯುವಕನ ನಡಿಗೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸ್ಥಳೀಯರು ಮುಂದಿನ ಮಾರ್ಗದ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ರೋಹನ್ ಗೆ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿದ್ದಾರೆ.

ಒಟ್ಟಾರೇ ಹಿಂದಿನ ಗುರುಕುಲ ಪದ್ದತಿಯ ಮಹತ್ವವನ್ನ ಸಾರುವ ನಿಟ್ಟಿನಲ್ಲಿ ಯುವಕನೋರ್ವ ಪಾದಯಾತ್ರೆ ಆರಂಭಿಸಿರೋದು ನಿಜಕ್ಕೂ ಅಚ್ಚರಿ ಪಡುವಂತದ್ದು. ರಸ್ತೆಯೇ ನನ್ನ ವಿಶ್ವವಿದ್ಯಾಲಯ ಎನ್ನುವ ಗುರಿಯೊಂದು ಯಾತ್ರೆ ಮಾಡುತ್ತಿರುವ ಯುವಕ ಯಶಸ್ವಿಯಾಗಿ ಗುರಿ ಮುಟ್ಟಲಿ ಅಂತಾ ನಾವೂ ಕೂಡಾ ಹಾರೈಸೋಣ.
Published by:Mahmadrafik K
First published: