ಸರ್ಕಾರಿ ಮಹಿಳಾ ಸಿಬ್ಬಂದಿಗೆ 180 ದಿನ ಶಿಶುಪಾಲನಾ ರಜೆ; ಸದುಪಯೋಗವಾಗುವುದೇ?

ಈ ನಿಯಮ ಸದುಪಯೋಗಕ್ಕಿಂತ ಅಧಿಕವಾಗಿ ದುರ್ಬಳಕೆಯಾಗುವ ಸಾಧ್ಯತೆಯೇ ಹೆಚ್ಚಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಪ್ಪಳ (ಆ. 5):  ಸರಕಾರಿ ಕೆಲಸದಲ್ಲಿರುವ ಮಹಿಳಾ ಸಿಬ್ಬಂದಿಯು ತನ್ನ ಕಿರಿಯ ಮಗ ಅಥವಾ ಮಗಳು 18 ವರ್ಷದೊಳಗಿನವರಿರುವಾಗ ಯಾವಾಗ ಬೇಕಾದರೂ 180 ದಿನ ಶಿಶುಪಾಲನಾ ರಜೆ ಪಡೆಯಬಹುದು ಎಂದು ರಾಜ್ಯ ಸರಕಾರವು ರಾಜ್ಯಪಾಲರ ಪರವಾಗಿ ಆರ್ಥಿಕ ಇಲಾಖೆಯ ಉಪಕಾರ್ಯದರ್ಶಿಗಳು ಜೂ 29 ರಂದು ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಸರಕಾರಿ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಯು ರಜೆ ಪಡೆಯಲು ಮುಂದಾಗಿದ್ದು ಇದು ದುರಪಯೋಗವಾಗುವ ಸಾಧ್ಯತೆ ಹೆಚ್ಚಾಗಿದೆ. ರಾಜ್ಯದಲ್ಲಿ ಒಟ್ಟು 6.50 ಲಕ್ಷ ಸರಕಾರಿ ನೌಕರರಿದ್ದು, ಅವರಲ್ಲಿ ಶೇ 45 ರಷ್ಟು ಮಹಿಳಾ ಸಿಬ್ಬಂದಿ ಇದ್ದಾರೆ,  ಮಹಿಳಾ ಸಿಬ್ಬಂದಿಗಳಿಗೆ ಈ ಮೊದಲು ಶಿಶುಪಾಲನಾ ರಜೆಯನ್ನು ವರ್ಷದಲ್ಲಿ ಮೂರು ಕಂತುಗಳಲ್ಲಿ  15 ದಿನ ಕಡಿಮೆಯಾಗದಂತೆ ಸೇವಾವಧಿಯಲ್ಲಿ ಒಟ್ಟು 70 ದಿನಗಳ ವರೆಗೆ ಅಂದರೆ ಎರಡು ವರ್ಷದವರೆಗೆ ರಜೆ ಪಡೆಯಬಹುದಾಗಿತ್ತು. ಅದು ತಾಯಿಯ ಮಗು ಬುದ್ದಿಮಾಂದ್ಯ, ಅಂಗವಿಕಲ ಮಕ್ಕಳಿದ್ದರೆ ಅವರಿಗೆ ವೈದ್ಯಕೀಯ ಪ್ರಮಾಣ ಪತ್ರ ನೀಡಿ ರಜೆಯನ್ನು ಪಡೆಯಬಹುದಾಗಿತ್ತು.

ಆದರೆ ಈಗಿನ ಹೊಸ ಆದೇಶದಲ್ಲಿ ಈ ನಿಯಮವನ್ನು ಬದಲಾಯಿಸಲಾಗಿದೆ.ಈಗ ಸರಕಾರಿ ನೌಕರಿಯಲ್ಲಿರುವ ತಾಯಿ, ತನ್ನ ಕಿರಿಯ ಮಗು (ಇಲ್ಲಿ ಎಷ್ಟೆ ಮಕ್ಕಳಿದ್ದರೂ ಸರಿ) 18 ವರ್ಷದೊಳಗಿನವರಾಗಿದ್ದರೆ ಈ ಮಗುವಿನ ಶಿಶುಪಾಲನೆ ತಮ್ಮ ಸೇವಾವಧಿಯಲ್ಲಿ 180 ದಿನ ರಜೆ ಪಡೆಯಬಹುದಾಗಿದೆ. ಇದರಲ್ಲಿ ಪ್ರಸೂತಿ ರಜೆ ಸೇರಿರುವುದಿಲ್ಲ, ಪ್ರಸೂತಿ ರಜೆಗೆ 6 ತಿಂಗಳು ರಜೆ ಸಹ ಇದೆ. ಶಿಶುಪಾಲನಾ ಅವಧಿಯಲ್ಲಿ ಪೂರ್ಣ ವೇತನ ಪಡೆಯಬಹುದಾಗಿದೆ.ಸದ್ಯ ಜಿಲ್ಲೆಯಲ್ಲಿ 730 ಶಿಶುಪಾಲನಾ ರಜೆಗೆ ಅರ್ಹರಾಗಿರುವ ಮಹಿಳಾ ಸಿಬ್ಬಂದಿ ಈ ರಜೆಯನ್ನು ಪಡೆಯಲು ಅರ್ಹರಾಗಿರುತ್ತಾರೆ,. ಈ ರಜೆ ಪಡೆದಾಗ ಯಾವುದೇ ಈ ಮೊದಲು ಇದ್ದ ರಜೆಯ ಲೆಕ್ಕದಲ್ಲಿ ಕಳೆಯುವಂತೆ ಇಲ್ಲ ಎಂದು ಆದೇಶಿಸಿದೆ. ಇದಕ್ಕಾಗಿ ಪ್ರತ್ಯೇಕ ಶಿಶುಪಾಲನಾ ಪ್ರಮಾಣ ಪತ್ರವನ್ನು ನೀಡಬೇಕಾಗಿಲ್ಲ ಎಂದು ಸೂಚಿಸಲಾಗಿದೆ. ಸರಕಾರದ ಈ ಆದೇಶದಿಂದ ಮಹಿಳಾ‌ ಸರಕಾರಿ ಸಿಬ್ಬಂದಿಗಳಲ್ಲಿ ಶೇ 70 ರಷ್ಟು ಜನ ಇದರ ಲಾಭ ಪಡೆಯಬಹುದಾಗಿದೆ. ಈಗಿನ ಆದೇಶದಿಂದಾಗಿ ಶಿಶುಪಾಲನೆಗೆ ಅವಶ್ಯಕತೆ ಇಲ್ಲದಿದ್ದರೂ ರಜೆ ಒಡೆಯಬಹುದಾಗಿದೆ, ಇದರಿಂದಾಗಿ ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಕಾಣಲಿದೆ, ಮೊದಲೇ ರಾಜ್ಯ ಸರಕಾರದ ಬಹುತೇಕ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇರುವಾಗ ಈಗ ಮತ್ತೆ ಈ ಆದೇಶದಿಂದಾಗಿ ಕೆಲವರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಈ ಬಗ್ಗೆ ಈಗ ನೌಕರ ವಲಯದಲ್ಲಿ ಜಿಜ್ಞಾಸೆ ಆರಂಭವಾಗಿದೆ.

ಮಕ್ಕಳು 18 ವರ್ಷದವರೆಗೂ ಈ ರಜೆಯನ್ಜು ಪಡೆಯುವ ಸೌಲಭ್ಯ ನೀಡಲಾಗಿದೆ, ಈ ಸೌಲಭ್ಯವನ್ನು ಬಹುತೇಕ ಸಿಬ್ಬಂದಿಗಳು ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಮಗುವಿಗೆ 6 ತಿಂಗಳಿನಿಂದ 5 ವರ್ಷದೊಳಗೆ ಆರೈಕೆಗೆ ಅವಕಾಶವಿದೆ, ಅದರ ನಂತರ ಮಗು ಶಾಲೆಗೆ ಹೋಗಿ ತನ್ನ ಕೆಲಸವನ್ನು ತಾನು ಯಾವಾಗ ಬೇಕಾದರೂ ಆವಾಗ ಮಾಡಿಕೊಳ್ಳಬಹುದಾಗಿದೆ, 18 ವರ್ಷದೊಳಗಿನವರೆ ಇರುವ ಮಗು ಆಗಲೇ ಪ್ರೌಢಾವಸ್ಥೆಯಲ್ಲಿರುವ ಕಾರಣ ಈ ನಿಯಮ ಸದುಪಯೋಗಕ್ಕಿಂತ ಅಧಿಕವಾಗಿ ದುರ್ಬಳಕೆಯಾಗುವ ಸಾಧ್ಯತೆಯೇ ಹೆಚ್ಚಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ, ಈ ಸರಕಾರ ಮತ್ತೊಮ್ಮೆ ವೈಜ್ಞಾನಿಕವಾಗಿ ಪರಾಮರ್ಶಿಸಬೇಕೆಂಬ ಅಭಿಪ್ರಾಯ ವೂ ಕೇಳಿ ಬಂದಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Seema R
First published: