• Home
  • »
  • News
  • »
  • state
  • »
  • Chikkamagaluru: ಪ್ರಿಯಕರ ತಿರಸ್ಕರಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ 17 ವರ್ಷದ ಯುವತಿ

Chikkamagaluru: ಪ್ರಿಯಕರ ತಿರಸ್ಕರಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ 17 ವರ್ಷದ ಯುವತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅಪ್ರಾಪ್ತ ಹುಡುಗಿಯ ಆತ್ಮಹತ್ಯೆ ಪ್ರಕರಣವು ಕುತೂಹಲಕಾರಿ ತಿರುವು ಪಡೆದುಕೊಂಡಿದ್ದು, ಪೊಲೀಸರು ಆಕೆಯ ಡೆತ್ ನೋಟ್ ಅನ್ನು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಆ ನೋಟ್ ನಲ್ಲಿ 25 ವರ್ಷದ ಆ ಯುವಕ ಬಿಜೆಪಿ ಕಾರ್ಯಕರ್ತನೆಂದು ಹೇಳಿದ್ದು, ಆಕೆಯನ್ನು ಪ್ರೀತಿಸುತ್ತಿದ್ದ ನಾಟಕ ಆಡಿದ್ದಾನೆ.

  • News18 Kannada
  • 4-MIN READ
  • Last Updated :
  • Karnataka, India
  • Share this:

ಈಗಂತೂ ನಾವು ಪ್ರತಿದಿನ ರಾಜ್ಯದ (State)  ಹಲವೆಡೆ ಈ ಆತ್ಮಹತ್ಯೆ ಪ್ರಕರಣಗಳನ್ನು ಸ್ವಲ್ಪ ಜಾಸ್ತಿಯೇ ನೋಡುತ್ತಿದ್ದೇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸುದ್ದಿಗಳು, ಪರೀಕ್ಷೆಯಲ್ಲಿ ಒಳ್ಳೆಯ ಅಂಕ (Marks) ಬರಲಿಲ್ಲ ಅಂತ ವಿದ್ಯಾರ್ಥಿಗಳು (Students), ಯಾವುದೋ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತು ಈ ಕಾಲೇಜಿನಲ್ಲಿ ಓದುವ ಹುಡುಗ (Boy) ಹುಡುಗಿಯರು ಪ್ರೀತಿ (Love) ಎಂಬ ಬಲೆಗೆ ಬಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ತುಂಬಾನೇ ಜಾಸ್ತಿಯಾಗಿವೆ ಅಂತ ಹೇಳಬಹುದು.


ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಅಂತ ಗೊತ್ತಿದ್ದರೂ ಸಹ ಜನರು ಹತಾಶೆಯ ಮನಸ್ಸಿಗೆ ತಮ್ಮ ಬುದ್ದಿಯನ್ನು ಕೊಟ್ಟು ಈ ರೀತಿಯಾಗಿ ತಮ್ಮ ಜೀವನವನ್ನು ತಾವೇ ಕೊನೆಗೊಳಿಸಿಕೊಳ್ಳುವ ಒಂದು ಕೆಟ್ಟ ಪ್ರಯತ್ನಕ್ಕೆ ಮುಂದಾಗುತ್ತಾರೆ ಅಂತ ಹೇಳಬಹುದು.


ಪ್ರಿಯಕರನ ತಿರಸ್ಕಾರದಿಂದ ಮನನೊಂದ ಹುಡುಗಿ ಆತ್ಮಹತ್ಯೆ


ಮೊನ್ನೆ ಸಹ ಇಂತಹದೇ ಒಂದು ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ ನೋಡಿ. ಚಿಕ್ಕಮಗಳೂರಿನ ಕಳಸದಲ್ಲಿ 17 ವರ್ಷದ ಪಿಯುಸಿ ಓದುತ್ತಿದ್ದಂತಹ ಹುಡುಗಿಯೊಬ್ಬಳು ತನ್ನ ಪ್ರಿಯಕರನ ತಿರಸ್ಕಾರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಳಸ ನಗರದ ಬಳಿ ಇರುವಂತಹ ಸಂಸೆ ಎಂಬ ಊರಿನ ನಿವಾಸಿಯಾಗಿರುವ ದ್ವಿತೀಯ ಪಿಯು ವಿದ್ಯಾರ್ಥಿನಿ ಪಕ್ಕದ ಗ್ರಾಮದ ಯುವಕನನ್ನು ಮನಸಾರೆ ಪ್ರೀತಿಸುತ್ತಿದ್ದಳು.


ಆದರೆ ಇತ್ತೀಚೆಗೆ ಕೆಲವು ಭಿನ್ನಾಭಿಪ್ರಾಯದಿಂದಾಗಿ ಆತ ಆಕೆಯನ್ನು ತಿರಸ್ಕರಿಸಿದ್ದ ಎಂದು ಆಕೆಯ ಪೋಷಕರು ಕುದುರೆಮುಖ ಪೊಲೀಸ್ ಠಾಣೆಯ ಪೊಲೀಸರಿಗೆ ತಿಳಿಸಿದ್ದಾರೆ. ತನ್ನ ಪ್ರೇಮ ಸಂಬಂಧ ವಿಫಲವಾದ ಕಾರಣ ಮನನೊಂದ ಆಕೆ ಜನವರಿ 11ರಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಕೂಡಲೇ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಆಕೆ ವೈದ್ಯರು ನೀಡಿದಂತಹ ಯಾವುದೇ ಚಿಕಿತ್ಸೆಗೂ ಸ್ಪಂದಿಸದೇ ಶನಿವಾರ ರಾತ್ರಿ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಳು ಅಂತ ಹೇಳಲಾಗುತ್ತಿದೆ.




ಮಗಳ ಸಾವಿಗೆ ನಿತೇಶ್ ಎಂಬ ಹುಡುಗ ಕಾರಣ ಎಂದ ಹುಡುಗಿ ತಂದೆ


ತನ್ನ ಮಗಳ ಸಾವಿಗೆ ಕರಗದ್ದೆಯ 25 ವರ್ಷ ವಯಸ್ಸಿನ ನಿತೇಶ್ ಎಂಬ ಹುಡುಗನೇ ಕಾರಣ ಎಂದು ಸಂತ್ರಸ್ತೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಆತನ ಹೆಸರನ್ನು ಉಲ್ಲೇಖಿಸಿ ಸಂತ್ರಸ್ತೆ ಪತ್ರ ಬರೆದಿದ್ದಳು ಎಂದು ಆರೋಪಿಸಲಾಗಿದೆ. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ.


ಇದನ್ನೂ ಓದಿ: Exam Tips: ಪಬ್ಲಿಕ್​ ಎಕ್ಸಾಂಗೆ ರೆಡಿ ಆಗ್ತಿದಿರಾ? ಹಾಗಾದ್ರೆ ಈ ಆ್ಯಪ್​ ಡೌನ್​ಲೋಡ್​​ ಮಾಡಿ


ಆ ಹುಡುಗಿ ಬರೆದ ಡೆತ್‌ನೋಟ್ ನಲ್ಲಿ ಏನಿತ್ತು?


ಈಗ ಈ ಅಪ್ರಾಪ್ತ ಹುಡುಗಿಯ ಆತ್ಮಹತ್ಯೆ ಪ್ರಕರಣವು ಕುತೂಹಲಕಾರಿ ತಿರುವು ಪಡೆದುಕೊಂಡಿದ್ದು, ಪೊಲೀಸರು ಆಕೆಯ ಡೆತ್ ನೋಟ್ ಅನ್ನು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಆ ನೋಟ್ ನಲ್ಲಿ 25 ವರ್ಷದ ಆ ಯುವಕ ಬಿಜೆಪಿ ಕಾರ್ಯಕರ್ತನೆಂದು ಹೇಳಿದ್ದು, ಆಕೆಯನ್ನು ಪ್ರೀತಿಸುತ್ತಿದ್ದ ನಾಟಕವನ್ನು ಆಡಿದ್ದಾನೆ. ಈಗ ತನಗೆ ಮೋಸ ಮಾಡಿದ್ದಾನೆ ಎಂದು ಅವಳು ಆರೋಪಿಸಿದ್ದಾಳೆ. ಅವನು ತನಗೆ ಕಿರುಕುಳ ನೀಡಿದ್ದಾನೆ ಅಂತ ಸಹ ಆ ಹುಡುಗಿ ಪತ್ರದಲ್ಲಿ ಹೇಳಿಕೊಂಡಿದ್ದಾಳೆ.


ಕುದುರೆಮುಖ ಪೊಲೀಸರು ಹುಡುಗನ ವಿರುದ್ಧ ಎಫ್ಐಆರ್ ದಾಖಲಿಸಿರಲಿಲ್ವಂತೆ


ಕುದುರೆಮುಖ ಪೊಲೀಸ್ ಠಾಣೆಯ ಪೊಲೀಸರು ಘಟನೆ ಸಂಭವಿಸಿದಾಗ ಮೊದಲು ಡೆತ್ ನೋಟ್ ನಲ್ಲಿ ಯುವತಿ ಬರೆದ ಆ ಹುಡುಗನ ವಿರುದ್ಧ ಎಫ್ಐಆರ್ ದಾಖಲಿಸಿಲ್ಲ ಎಂದು ಮೃತ ಬಾಲಕಿಯ ಕುಟುಂಬ ಮತ್ತು ಸಂಬಂಧಿಕರು ಆರೋಪಿಸಿದ್ದಾರೆ. ಅಂತಿಮವಾಗಿ ಪೊಲೀಸ್ ಅಧೀಕ್ಷಕರ ಮಧ್ಯಪ್ರವೇಶದ ನಂತರವೇ ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಸಹ ಅವರು ಹೇಳಿದ್ದಾರೆ. ಪೊಲೀಸರು ಇನ್ನೂ ಈ ಹುಡುಗನನ್ನು ಬಂಧಿಸದಿರುವುದಕ್ಕೆ ಪೋಷಕರು ತುಂಬಾನೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು