ರಾಜ್ಯದಲ್ಲಿ ಎಚ್​1ಎನ್​1 ಮಹಾಮಾರಿಗೆ 17 ಬಲಿ; ಸಿಲಿಕಾನ್​ ಸಿಟಿಯಲ್ಲಿ 190 ಪ್ರಕರಣ ಪತ್ತೆ

Seema.R | news18
Updated:November 3, 2018, 3:21 PM IST
ರಾಜ್ಯದಲ್ಲಿ ಎಚ್​1ಎನ್​1 ಮಹಾಮಾರಿಗೆ 17 ಬಲಿ; ಸಿಲಿಕಾನ್​ ಸಿಟಿಯಲ್ಲಿ 190 ಪ್ರಕರಣ ಪತ್ತೆ
  • Advertorial
  • Last Updated: November 3, 2018, 3:21 PM IST
  • Share this:
ಸೌಮ್ಯ ಕಳಸ, ನ್ಯೂಸ್​ 18 ಕನ್ನಡ

ಬೆಂಗಳೂರು (ನ.3): ರಾಜ್ಯದಲ್ಲಿ ಈಗಾಗಲೇ ಎಚ್​1ಎನ್​1 ಭೀತಿ ಹೆಚ್ಚಾಗಿದ್ದು, ಇಲ್ಲಿವರೆಗೂ 17 ಜನ ಈ ಮಾರಕ ರೋಗಕ್ಕೆ ಬಲಿಯಾಗಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಈ ಸೋಂಕು ಜನರಲ್ಲಿ ಹೆಚ್ಚಾಗಿದ್ದು, ಈಗಾಗಲೇ ರಾಜ್ಯದಲ್ಲಿ 999 ಎಚ್‌ 1 ಎನ್‌ 1 ಪ್ರಕರಣಗಳು ಪತ್ತೆಯಾಗಿದೆ.  ಬಹುತೇಕ ಆಸ್ಪತ್ರೆಗಳಲ್ಲಿ ನೆಗಡಿ, ಕೆಮ್ಮು, ಜ್ವರ ಸೇರಿದಂತೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆ ದಾಖಲಾಗುತ್ತಿರುವವರ ಸಂಖ್ಯೆ ಅಧಿಕವಾಗಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಎಚ್​ 1ಎನ್​ 1 ವರದಿಯಲ್ಲಿ ಉಲ್ಲೇಖವಾಗಿದೆ.

ಇನ್ನು ರಾಜಧಾನಿಯಲ್ಲಿಯೂ ಈ ಪ್ರಕರಣಗಳು ಹೆಚ್ಚಾಗಿದ್ದು, ಈ ಸೋಂಕಿನಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ 190 ಪ್ರಕರಣಗಳು ದಾಖಲಾಗಿದ್ದು, 17 ಜನ ಸಾವನ್ನಪ್ಪಿದ್ದಾರೆ. ಎಚ್​1ಎನ್​1 ತಡೆಗಟ್ಟಲು ಆರೋಗ್ಯ ಇಲಾಖೆ ಎಲ್ಲ ಕ್ರಮ ಕೈಗೊಂಡಿದ್ದು, ಈ ಬಗ್ಗೆ ಜಾಗೃತಿ ಕೂಡ ಮೂಡಿಸಲಾಗಿದೆ.



ಹಂದಿಜ್ವರ ಎಂದೇ ಖ್ಯಾತಿ ಹೊಂದಿರುವ ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಶೀಘ್ರವಾಗಿ ಹರಡುವುದರಿಂದ ಸೋಂಕು ಹರಡುವುದರಿಂದ ದ್ವಿಗುಣಗೊಳ್ಳುತ್ತಿದೆ. ನೀರಿನ ಸೇವನೆಯಿಂದ ಈ ಕಾಯಿಲೆ ಜನರಿಗೆ ತಗಲುತ್ತಿದ್ದು, ಸ್ವಲ್ಪ ಜ್ವರ, ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿದ್ದರೆ, ಆಸ್ಪತ್ರೆಗೆ ಸೂಕ್ತ ಚಿಕಿತ್ಸೆಗೆ ಮುಂದಾಗಬೇಕು ಆರೋಗ್ಯ ಇಲಾಖೆ ತಿಳಿಸಿದೆ.

ಇನ್ನು ಜಿಲ್ಲಾ ಮಟ್ಟದಲ್ಲಿ ಕೂಡ ರೋಗದ ಸೋಂಕಿನ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿಂದೆ ಈ ಬಗ್ಗೆ ಉಪಮುಖ್ಯಮಂತ್ರಿ ಜಿ ಪರಮೇಶ್ವರ್​ ಕೂಡ ಮೇಯರ್, ಅಧಿಕಾರಿಗಳ ಸಭೆ ನಡೆಸಿ  ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಸಿದ್ದರು.
First published:November 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ