• Home
  • »
  • News
  • »
  • state
  • »
  • Kalaburgi: 4ರ ಬಾಲೆಯ ಮೇಲೆ ಅತ್ಯಾಚಾರ; 16 ವರ್ಷದ ಅಪ್ರಾಪ್ತ ವಶಕ್ಕೆ

Kalaburgi: 4ರ ಬಾಲೆಯ ಮೇಲೆ ಅತ್ಯಾಚಾರ; 16 ವರ್ಷದ ಅಪ್ರಾಪ್ತ ವಶಕ್ಕೆ

ಚಿಂಚೋಳಿ ಪೊಲೀಸ್ ಠಾಣೆ

ಚಿಂಚೋಳಿ ಪೊಲೀಸ್ ಠಾಣೆ

ಇನ್ನು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಸ್​ಪಿ ಇಶಾ ಪಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • Share this:

ಕಲಬುರಗಿ: ಎಂಟನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಪ್ರಕರಣವೊಂದು ಕೊಪ್ಪಳ ತಾಲೂಕಿನಲ್ಲಿ (Koppal taluku_ ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅತ್ಯಾಚಾರ ಪ್ರಕರಣ ಕಲಬುರಗಿ ಜಿಲ್ಲೆಯ ಚಿಂಚೋಳಿ (Chincholi, Kalaburgi) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ನಾಲ್ಕು ವರ್ಷದ ಬಾಲೆಯ ಮೇಲೆ ಅತ್ಯಾಚಾರ ನಡೆದಿದ್ದು, ಈ ಪ್ರಕರಣ ಸಂಬಂಧ ಪೊಲೀಸರು 16 ವರ್ಷದ ಅಪ್ರಾಪ್ತನನ್ನು (Minor Accused) ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಕಿ (Girl) ಚಾಕೊಲೇಟ್ ತರಲು ಅಂಗಡಿಗೆ ತೆರಳಿದ್ದಳು. ಈ ವೇಳೆ ಬಾಲಕಿಯನ್ನು ಒಳಗೆ ಎಳೆದೊಯ್ದು ಅತ್ಯಾಚಾರ ಎಸಗಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.


ಇನ್ನು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಸ್​ಪಿ ಇಶಾ ಪಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.


ಎಂಟನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ


ಎಂಟನೇ ತರಗತಿ ವಿದ್ಯಾರ್ಥಿನಿ (8th Class Student) ಗರ್ಭಿಣಿಯಾಗಿರುವ (Pregnant) ಆಘಾತಕಾರಿ ಘಟನೆ ಕೊಪ್ಪಳ ತಾಲೂಕಿನಲ್ಲಿ (Koppal Taluk) ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ಮೇಲೆ ಮೂವರಿಂದ ಅತ್ಯಾಚಾರ ನಡೆದಿರುವ ಅನುಮಾನಗಳು ವ್ಯಕ್ತವಾಗಿವೆ.


ಕೊಪ್ಪಳ ತಾಲೂಕಿನ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿ ಭಯದಿಂದ ತನ್ನ ಮೇಲಾದ ಅತ್ಯಾಚಾರವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಇದೀಗ ಆರು ತಿಂಗಳ ನಂತರ ಆಕೆ ಗರ್ಭಿಣಿಯಾಗಿದ್ದರಿಂದ ಈ ವಿಷಯ ಪೋಷಕರಿಗೆ (Parents) ಗೊತ್ತಾಗಿದೆ.


ಇದನ್ನೂ ಓದಿ:  Mathura: ಅಪ್ರಾಪ್ತೆಯ ಗ್ಯಾಂಗ್​ರೇಪ್, ಬಳಿಕ ಹತ್ಯೆ: ಆರೋಪಿಗಳನ್ನು ಖಾಕಿ ಕೈಗೊಪ್ಪಿಸಿದ ಗ್ರಾಮಸ್ಥರು!


ಈ ಸಂಬಂಧ ವಿದ್ಯಾರ್ಥಿನಿ ಪೋಷಕರು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ (Judicial Custody) ನೀಡಿದೆ.


ಕುಡಿದ ಮತ್ತಿನಲ್ಲಿ ಯುವಕನ ಕಿರಿಕ್!


ಕುಡಿದ ಮತ್ತಿನಲ್ಲಿ ಯುವಕ ಕಿರಿಕ್ ಮಾಡಿರೋ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಶ್ರೀ ಕೃಷ್ಣ ಕ್ಯಾಂಟೀನ್ ಗ್ಲಾಸ್ ಪುಡಿ ಪುಡಿ ಮಾಡಿದ್ದಾನೆ. ಸ್ಥಳೀಯರು ಯುವಕನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.


ಪೊಲೀಸರ ಸಮ್ಮುಖದಲ್ಲೇ ಯುವಕ ಜನರಿಗೆ ಆವಾಜ್‌ ಹಾಕಿದ್ದಾನೆ. ಆತನನ್ನು ಉಪನಗರ ಪೊಲೀಸ್ ಠಾಣೆಗೆ ಪೊಲೀಸರು ಕರೆದೊಯ್ದಿದ್ದು, ವಿಚಾರಣೆ ಮಾಡ್ತಿದ್ದಾರೆ.


ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಕಂಬಕ್ಕೆ ಕಟ್ಟಿ ಕಾಮುಕನಿಗೆ ಥಳಿಸಿದ ಪೋಷಕರು


ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದ್ದು, ಡಿಸೆಂಬರ್ 13 ರಂದು ಕರೆಕಾಡು ಎಂಬಲ್ಲಿ ನಡೆದಿದೆ. ಬೈಕ್ ಮೂಲಕ ಹಿಂಬಾಲಿಸಿ ಯುವಕನೋರ್ವ ಬಾಲಕಿ ಜೊತೆಗೆ ಅಸಭ್ಯವಾಗಿ ವರ್ತಿಸಿ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದನು.


ಇದರಿಂದ ಬೇಸತ್ತ ಬಾಲಕಿ ಕೊನೆಗೆ ಈ ವಿಚಾರವನ್ನು ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಳು.


ಕಾಮುಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೋಷಕರು


ಮರುದಿನ ಮತ್ತೆ ಕರೆಕಾಡು ಪ್ರದೇಶದಲ್ಲಿ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡುವುದನ್ನು ಆರೋಪಿ ಮುಂದುವರಿಸಿದ್ದಾನೆ.


ಹೀಗಾಗಿ ಬಾಲಕಿಯಿಂದ ಮಾಹಿತಿ ಪಡೆದ ಪೋಷಕರು ಆತನಿಗೆ ತಿಳಿಯದಂತೆ ಬಾಲಕಿಯನ್ನು ಹಿಂಬಾಲಿಸಿದ್ದಾರೆ.


ಈ ವೇಳೆ ಆರೋಪಿ ಮತ್ತೆ ತನ್ನ ಹಳೆ ಚಾಳಿಯನ್ನು ಬಾಲಕಿಯೊಂದಿಗೆ ಮುಂದುವರಿಸಿದ್ದನ್ನು ಕಂಡು ಬಾಲಕಿಯ ಪೋಷಕರು ಮತ್ತು ಅವರ ಜೊತೆಗಿದ್ದವನ್ನು ಆತನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ.

Published by:Mahmadrafik K
First published: