Teachers Recruitment: 15 ಸಾವಿರ ಶಿಕ್ಷಕರ ನೇಮಕಾತಿಗೆ ಗ್ರೀನ್ ಸಿಗ್ನಲ್, ಸೋಮವಾರವೇ ರಾಜ್ಯ ಸರ್ಕಾರದಿಂದ ನೋಟಿಫಿಕೇಷನ್

ನಿರುದ್ಯೋಗಿಗಳಿಗೆ ಶಿಕ್ಷಣ ಇಲಾಖೆಯಿಂದ ಬಂಪರ್ ಗಿಫ್ಟ್ ಇದಾಗಿದೆ. ಶಿಕ್ಷಣ ಗುಣಮಟ್ಟ ಉತ್ತಮ ಗೊಳಿಸಲು ಶಿಕ್ಷಣ ಇಲಾಖೆ ಪ್ರಯತ್ನ ನಡೆಸಿದೆ. ಗುಣಮಟ್ಟ ಹೆಚ್ಚಿಸಲು ಶಿಕ್ಷಕರ ನೇಮಕಕ್ಕೆ ಇಲಾಖೆಯು ಮುಂದಾಗಿದೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಶಿಕ್ಷಣ ಸಚಿವ ಬಿ.ಸಿ.ನಾಗೇಶ್

  • Share this:
ಬೆಂಗಳೂರು (ಮಾ.18): ನಿರುದ್ಯೋಗಿಗಳಿಗೆ ಶಿಕ್ಷಣ ಇಲಾಖೆ ಬಿಗ್ ಗಿಫ್ಟ್ ನೀಡ್ತಿದೆ. ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಹಾಕಲು ಕಾಯ್ತಿದ್ದವರಿಗೆ ಸಚಿವ ಬಿ.ಸಿ ನಾಗೇಶ್​ ಗುಡ್​ ನ್ಯೂಸ್ (Good News)​ ಕೊಟ್ಟಿದ್ದಾರೆ. ಶಿಕ್ಷಣ ಗುಣಮಟ್ಟ ಹೆಚ್ಚಿಸಲು, ಹಾಗೂ ಉತ್ತಮ ಗೊಳಿಸಲು ಶಿಕ್ಷಣ ಇಲಾಖೆ (Education Department) ಪ್ರಯತ್ನ ನಡೆಸಿದ್ದು, ಗುಣಮಟ್ಟ ಹೆಚ್ಚಿಸಲು ಶಿಕ್ಷಕರ ನೇಮಕಕ್ಕೆ (Teachers Recruitment) ಮುಂದಾಗಿರೋದಾಗಿ ಸಚಿವ ಬಿ.ಸಿ ನಾಗೇಶ್​ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಚಿವ ಬಿ.ಸಿ ನಾಗೇಶ್ (B.C Nagesh)​, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ.  15,000 ಹುದ್ದೆಗಳ ನೇಮಕಾತಿಗೆ ಇಲಾಖೆ ಮುಂದಾಗಿದ್ದು, ಹೈದರಾಬಾದ್-ಕರ್ನಾಟಕಕ್ಕೆ ಐದು ಸಾವಿರ ಹುದ್ದೆಗಳು ಮೀಸಲು ಇಡಲಾಗಿದೆ. ಈ ಬಾರಿ ಮಂಗಳಮುಖಿಯರಿಗೆ ವಿಶೇಷವಾಗಿ ಶೇಕಡಾ 1% ರಿಸರ್ವೇಷನ್ ಕೂಡ ಇರಲಿದೆ.

ಹೈದರಾಬಾದ್-ಕರ್ನಾಟಕಕ್ಕೆ 5  ಸಾವಿರ ಹುದ್ದೆ ಮೀಸಲು

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ನಿರುದ್ಯೋಗಿಗಳಿಗೆ ಶಿಕ್ಷಣ ಇಲಾಖೆಯಿಂದ ಬಂಪರ್ ಗಿಫ್ಟ್ ಇದಾಗಿದೆ. ಶಿಕ್ಷಣ ಗುಣಮಟ್ಟ ಉತ್ತಮ ಗೊಳಿಸಲು ಶಿಕ್ಷಣ ಇಲಾಖೆ ಪ್ರಯತ್ನ ನಡೆಸಿದೆ. ಗುಣಮಟ್ಟ ಹೆಚ್ಚಿಸಲು ಶಿಕ್ಷಕರ ನೇಮಕಕ್ಕೆ ಇಲಾಖೆಯು ಮುಂದಾಗಿದೆ. ಅದರ ಅಂಗವಾಗಿ ಹೈದರಾಬಾದ್-ಕರ್ನಾಟಕಕ್ಕೆ ಐದು ಸಾವಿರ ಹುದ್ದೆಗಳು ಮೀಸಲು ಇಡಲಾಗಿದೆ. ಉಳಿದ ಕಡೆಗಳಿಗೆ 10 ಸಾವಿರ ಶಿಕ್ಷಕರ ನೇಮಕವಾಗಲಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಾರೆ.

ಸುಮಾರು 36 ಸಾವಿರ ಶಿಕ್ಷಕರ ಕೊರತೆ ಇದೆ

1 ರಿಂದ 8ನೇ ತರಗತಿ  ಶಾಲೆಗಳಲ್ಲಿ ಸುಮಾರು 36 ಸಾವಿರ ಶಿಕ್ಷಕರ ಕೊರತೆ ಇದೆ. 15 ಸಾವಿರ ಶಿಕ್ಷಕರ ನೇಮಕಾತಿ ಮಾಡೋದಾಗಿ ಹೇಳಿದ್ದು, ಶಿಕ್ಷಕರ ಹುದ್ದೆಗೆ ಸೋಮವಾರ ನೋಟಿಫಿಕೇಶನ್ ಹೊರಡಿಸಲಾಗುತ್ತೆ ಎಂದು ತಿಳಿಸಿದ್ರು. ಇದ್ರಿಂದ ಹಲವು ದಿನಗಳಿಂದ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಕಾಯ್ತಿದ್ದವರು ಮಾರ್ಚ್​ 23 ರಿಂದ ಅರ್ಜಿ ಸಲ್ಲಿಸಬಹುದಾಗಿದೆ.

ಏಪ್ರಿಲ್ 22ಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ

ಏಪ್ರಿಲ್ 22ಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ. ಮೇ 21, 22 ರಂದು ಪರೀಕ್ಷೆ ನಡೆಸಲು ದಿನಾಂಕ ಕೂಡ ನಿಗದಿ ಮಾಡಲಾಗಿದೆ.  ಮಾರ್ಚ್ 23 ರಂದು ಅರ್ಜಿ ಸಲ್ಲಿಸಲು ಅವಕಾಶ. ಈ ಬಾರಿ ಹೊಸ ಹೊಸ ಕಾಂಬಿನೇಷನ್ ನಲ್ಲಿ ಹುದ್ದೆ ಭರ್ತಿ ಮಾಡಲು ಚಿಂತಿಸಲಾಗಿದೆ ಅಂತ ಸಚಿವ ನಾಗೇಶ್​ ಹೇಳಿದ್ದಾರೆ.

ಇದನ್ನೂ ಓದಿ: GPSTR Recruitment: 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಜಿಲ್ಲಾವಾರು, ವಿಷಯವಾರು ಪಟ್ಟಿ ಪ್ರಕಟ

400 ಮಾರ್ಕ್ಸ್​ಗೆ ನಡೆಯಲಿದೆ ಪರೀಕ್ಷೆ

ಒಟ್ಟು 400 ಮಾರ್ಕ್ಸ್ ಗೆ ಪರೀಕ್ಷೆ ನಡೆಯಲಿದೆ. ಮೊದಲ ಪತ್ರಿಕೆ ಜನರಲ್ ಪೇಪರ್ ಆಗಿದ್ದು 150 ಅಂಕ ನಿಗದಿಯಾಗಿದೆ. 2ನೇ ಪತ್ರಿಕೆಗಾಗಿ 150 ಮಾರ್ಕ್ ಇರುತ್ತೆ. ವಿಷಯವಾರು ಪರೀಕ್ಷೆ ಇದಾಗಿರುತ್ತದೆ. ಪಾಸ್ ಆಗಲು 45 ಮಾರ್ಕ್ ಕಡ್ಡಾಯವಾಗಿರುತ್ತದೆ. 3 ನೇ ಪತ್ರಿಕೆ ಭಾಷಾವಾರು ಪರೀಕ್ಷೆಯಾಗಿದ್ದು, 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪಾಸ್ ಆಗಲು 50 ಮಾರ್ಕ್ಸ್ ಕಡ್ಡಾಯವಾಗಿದೆ.

ಎಂಜಿನಿಯರಿಂಗ್ ಪದವೀಧರರೂ ಗಣಿತ ಶಿಕ್ಷಕ ಪರೀಕ್ಷೆಗೆ ಅರ್ಹರು

ಎಂಜಿನಿಯರಿಂಗ್ ಮುಗಿಸಿದ ವಿದ್ಯಾರ್ಥಿಗಳು ಕೂಡ ಈ ಬಾರಿ ಗಣಿತ ಶಿಕ್ಷಕ ನೇಮಕಾತಿ ಪರೀಕ್ಷೆ ಬರೆಯಬಹುದು. ಈ ಬಾರಿ ವಯೋಮಿತಿ 2 ವರ್ಷ ಸಡಲಿಕೆ ಮಾಡಲಾಗಿದೆ. 45 ವರ್ಷದಿಂದ 47 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಇದು SC, ST ಮತ್ತು ಅಂಗವಿಕಲರಿಗೆ ಅನ್ವಯ.

ಇದನ್ನೂ ಓದಿ: Court Job: ಚಾಮರಾಜನಗರ ಇ-ಕೋರ್ಟ್​ನಲ್ಲಿ 26 ಹುದ್ದೆಗೆ ಅರ್ಜಿ ಆಹ್ವಾನ - ಇಲ್ಲಿದೆ ಸಂಪೂರ್ಣ ಮಾಹಿತಿ

ಮಂಗಳಮುಖಿಯರಿಗೆ ಅವಕಾಶ

ಈ‌ ಬಾರಿ ಶಿಕ್ಷಕರ ಹುದ್ದೆಗೆ ಅರ್ಜಿ ಹಾಕಲು ಮಂಗಳಮುಖಿಯವರಿಗೆ ಅವಕಾಶ.  ಪೊಲೀಸ್ ಇಲಾಖೆಯಂತೆಯೇ ಶಿಕ್ಷಕ ಹುದ್ದೆಗೆ ಮಂಗಳಮುಖಿಯರಿಗೂ ಅವಕಾಶ ನೀಡಲಾಗಿದೆ. ಈ ಬಾರಿ ಮಂಗಳಮುಖಿಯರಿಗೆ ವಿಶೇಷವಾಗಿ ಶೇ.1% ರಿಸರ್ವೇಷನ್ ಮಾಡಿರೋದಾಗಿ ಬಿ.ಸಿ ನಾಗೇಶ್​ ಹೇಳಿದ್ದಾರೆ.
Published by:Pavana HS
First published: