• Home
  • »
  • News
  • »
  • state
  • »
  • B C Nagesh: 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ; ಇಂದೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

B C Nagesh: 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ; ಇಂದೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬಿ.ಸಿ.ನಾಗೇಶ್​

ಬಿ.ಸಿ.ನಾಗೇಶ್​

15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ 1:2 ಅಭ್ಯರ್ಥಿಗಳ ಬೆಂಗಳೂರು ವಿಭಾಗದ ದಾಖಲಾತಿ ಪರಿಶೀಲನೆ ಪಟ್ಟಿಯನ್ನು ಇಂದು ಪ್ರಕಟಿಸಲಾಗುತ್ತದೆ ಎಂದು ಸಚಿವ ಬಿ.ಸಿ ನಾಗೇಶ್ ಟ್ವೀಟ್​ ಮಾಡಿದ್ದಾರೆ.

  • Share this:

ಬೆಂಗಳೂರು: 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (Primary School Teacher Recruitment) ಪರೀಕ್ಷೆಯ 1:2 ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ಪಟ್ಟಿಯನ್ನು ಇಂದೇ (ಸೆ. 27) ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ (B C Nagesh) ಮಾಹಿತಿ ನೀಡಿದ್ದಾರೆ. 5 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿದ ಬಳಿಕ ಇಲಾಖೆಯು ಸಿಇಟಿ ನಡೆಸಿ ಈಗಾಗಲೆ ಅಭ್ಯರ್ಥಿಗಳ ಫಲಿತಾಂಶ (Result) ಪ್ರಕಟಿಸಿದೆ. ಶಿಕ್ಷಕರ ನೇಮಕಾತಿಗೆ ಆಯ್ಕೆ ಪಟ್ಟಿ (Selection List For Recruitment) ಸಿದ್ಧಪಡಿಸಿದ್ದು, ಇದೀಗ ಸಚಿವರೇ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಇಂದೇ ದಾಖಲಾತಿ  ಪರಿಶೀಲನಾ ಪಟ್ಟಿ ಬಿಡುಗಡೆ ಮಾಡೋದಾಗಿ ತಿಳಿಸಿದ್ದಾರೆ.


ಸಚಿವ ಬಿ.ಸಿ ನಾಗೇಶ್​ ಟ್ವೀಟ್​


15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ 1:2 ಅಭ್ಯರ್ಥಿಗಳ ಬೆಂಗಳೂರು ವಿಭಾಗದ ದಾಖಲಾತಿ ಪರಿಶೀಲನೆ ಪಟ್ಟಿಯನ್ನು ಇಂದು ಪ್ರಕಟಿಸಲಾಗುತ್ತದೆ. ಬೆಳಗಾವಿ, ಮೈಸೂರು ಮತ್ತು ಕಲಬುರಗಿ ವಿಭಾಗದ ಪಟ್ಟಿಯನ್ನು ಕ್ರಮವಾಗಿ ಬುಧವಾರ ಮತ್ತು ಗುರುವಾರ ಸಂಜೆ ಪ್ರಕಟಿಸಲಾಗುತ್ತದೆ ಎಂದು ಬಿ.ಸಿ ನಾಗೇಶ್ ತಿಳಿಸಿದ್ದಾರೆ. 


ಈ ವೆಬ್​ ಸೈಟ್ ನಲ್ಲಿ ಫಲಿತಾಂಶ


ಬೆಳಗಾವಿ, ಮೈಸೂರು ಮತ್ತು ಕಲಬುರಗಿ ವಿಭಾಗದ ಪಟ್ಟಿಯನ್ನು ಕ್ರಮವಾಗಿ ಬುಧವಾರ ಮತ್ತು ಗುರುವಾರ ಸಂಜೆ ನಂತರ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಪರಿಶೀಲನಾ ಪಟ್ಟಿ ನೋಡಲು ಈ ವೆಬ್​ ಸೈಟ್​ ಮೇಲೆ ಕ್ಲಿಕ್ ಮಾಡಿ


ಇಲ್ಲಿ ಕ್ಲಿಕ್ ಮಾಡಿ:  schooleducation.kar.nic.in/index.html


ಇದನ್ನೂ ಓದಿ: Sudha Murthy: ರಾಜಮಾತೆ ಕಾಲಿಗೆ ನಮಸ್ಕರಿಸಿದ ಸುಧಾ ಮೂರ್ತಿ; ನೀವು ಮಾಡಿದ್ದು ಸರೀನಾ ಎಂದು ನೆಟ್ಟಿಗರ ಪ್ರಶ್ನೆ!ಮೇ 21, 22 ರಂದು ನಡೆದ ಪರೀಕ್ಷೆ


ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು 2022 ರ ಮಾರ್ಚ್‌ /ಏಪ್ರಿಲ್‌ ತಿಂಗಳಲ್ಲಿ ಅರ್ಜಿ ಸ್ವೀಕಾರ ಮಾಡಿತ್ತು. ಹಾಗೂ ಮೇ 21, 22 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಸುಮಾರು 1,00683 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.


ಅಕ್ರಮ ತಡೆಗೆ ಸಿಸಿಟಿವಿ ಅಳವಡಿಸಲಾಗಿತ್ತು


2 ದಿನ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿದೆ. ರಾಜ್ಯದ 435 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಸಿಇಟಿ ಪರೀಕ್ಷೆ ನಡೆಯಿತು. ಯಾವುದೇ ಅಕ್ರಮ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಕಣ್ಗಾವಲು ವಹಿಸಲಾಗಿತ್ತು.


ಇದನ್ನೂ ಓದಿ: Health Department: ಬೈಕ್ ಆ್ಯಂಬುಲೆನ್ಸ್​ಗೆ ಬ್ರೇಕ್​ ಹಾಕಿದ ಸರ್ಕಾರ!; ಸೇವೆ ಸ್ಥಗಿತ ಎಂದ ಆರೋಗ್ಯ ಇಲಾಖೆ


ಕಿವಿ ಒಲೆ, ವಾಚ್ ಚೆಕ್​ ಮಾಡಿ ಬಿಡಲಾಗಿದೆ


ಹೆಚ್ಚುವರಿ ಭದ್ರತೆಯಲ್ಲಿ ಪರೀಕ್ಷೆ ನಡೆದಿದೆ. ಪ್ರತಿಯೊಬ್ಬರ ಕಿವಿ ಒಲೆ, ವಾಚ್ ಎಲ್ಲವನ್ನು ಚೆಕ್ ಮಾಡಿ ಪರೀಕ್ಷಾ ಕೇಂದ್ರಕ್ಕೆ ಹೋಗಲು ಅನುಮತಿ ನೀಡಲಾಗಿತ್ತು. ಯಾವುದೇ ಅಕ್ರಮ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದ್ದು, ಮೊಬೈಕ್ ಪೋನ್, ಬ್ಲೂಟೂತ್, ಡಿಜಿಟಲ್ ಸಾಮಾಗ್ರಿ, ಕೈಗಡಿಯಾರಕ್ಕೆ ಪರೀಕ್ಷಾ ಕೇಂದ್ರದಲ್ಲಿ ಅನುಮತಿ ಇರಲಿಲ್ಲ.


ಪರೀಕ್ಷಾ ನಿಯಮಗಳ ಉಲ್ಲಂಘನೆ ಮಾಡಿರುವ ಹಾಗೂ ಇನ್ನಿತರ ಕಾರಣಗಳಿಂದ ಒಟ್ಟು 61 ಅಭ್ಯರ್ಥಿಗಳ ಫಲಿತಾಂಶಗಳನ್ನು ತಡೆಯಿಡಿದಿದ್ದು, ಇಬ್ಬರು ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಗಿತ್ತು. ಒಟ್ಟು 63 ಅಭ್ಯಥಿಗಳ ಪಟ್ಟಿಯನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿತ್ತು.

Published by:ಪಾವನ ಎಚ್ ಎಸ್
First published: