ಕೋಲಾರ(ಮೇ.22) ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಸರ್ಕಾರಕ್ಕೆ (Govt) ಬೇಡವಾಯ್ತಾ ಎಂಬ ಪ್ರಶ್ನೆ ಪೋಷಕರನ್ನ ಕಾಡುತ್ತಿದೆ. ಇದಕ್ಕೆ ಕಾರಣ ಇಲ್ಲಿನ ಸರ್ಕಾರಿ ಶಾಲೆಗಳ ದುರಸ್ತಿಗೆ (Renovation) ಅನುದಾನ ಬಿಡುಗಡೆ ಮಾಡದೆ, ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಮಾಡುತ್ತಿರುವ ಆರೋಪ ಕೇಳಿಬರುತ್ತಿದೆ. ಕಳೆದ 5 ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ (Rain) 10 ಕ್ಕು ಹೆಚ್ಚು ಶಾಲಾ ಕೊಠಡಿಗಳು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿದ್ದು, ಅದರಲ್ಲಿ 9 ಸಾವಿರಕ್ಕು ಅಧಿಕ ಕೊಠಡಿಗಳಿದೆ. ಇದ್ರಲ್ಲಿ 3400 ರಕ್ಕು ಹೆಚ್ಚು ಕೊಠಡಿಗಲು ಬಳಕೆ ಮಾಡಲಾಗದ ಸ್ತಿತಿಯಲ್ಲಿದೆ ಎಂದು ಅಧಿಕಾರಗಳೇ ನ್ಯೂಸ್ 18 ಗೆ ಮಾಹಿತಿ ನೀಡಿದ್ದಾರೆ.
2 ವರ್ಷಗಳಿಂದ 500 ಕೊಠಡಿಗಳು ಕುಸಿತ
ಕಳೆದ ಎರಡು ವರ್ಷಗಳಿಂದ 500 ಕೊಠಡಿಗಳು ಕುಸಿದು ಬಿದ್ದಿದ್ದು ಹೊಸದಾಗಿ ಕಟ್ಟಬೇಕಿದೆ. ಇನ್ನು 1500 ಕೊಠಡಿಗಳು ಭಾಗಶಃ ಬಳಸಲು ಯೋಗ್ಯವಿಲ್ಲದೆ ದುರಸ್ತಿಯಾಗದೆ ಹಾಗೆ ಉಳಿದಿದೆ, ಇನ್ನು 1400 ಕೊಠಡಿಗಳಲ್ಲಿ ಸಣ್ಣ ಪುಟ್ಟ ರಿಪೇರಿ ಕೆಲಸಗಳು ಆಗಬೇಕಿದೆ ಎಂದು, ಸರ್ಕಾರಿ ಇಂಜಿನಿಯರ್ ಗಳಿಂದ ಪರಿಶೀಲನೆ ನಡೆಸಿದ ಮಾಹಿತಿಯನ್ನು ಸರ್ಕಾರ ಹಾಗು ಶಿಕ್ಞ ಇಲಾಖೆಗೆ ಮನವಿ ನೀಡಲಾಗಿದೆ.
ದುರಸ್ತಿ ಕಾರ್ಯ ಇನ್ನೂ ನಡೆದಿಲ್ಲ
ಆದರೆ ಈ ವರ್ಷವೂ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಇನ್ನೂ ನಡೆದಿಲ್ಲ, ಕೋಲಾರದಲ್ಲಿ ಕಳೆದ ಕಳೆದೊಂದು ವಾರದಿಂದ ನಿತ್ಯ ಮಳೆಯಾಗುತ್ತಿದೆ, ದಿನೇ ದಿನೇ ಶಾಲಾ ಕೊಠಡಿ ಸಮಸ್ಯೆಗಳು ಹೆಚ್ಚುತ್ತಲೇ ಇದೆ, ಹಲವೆಡೆ ಶಾಲಾ ಕೊಠಡಿಗಳ ಮೇಲ್ಚಾವಣಿ ಬಿರುಕು ಬಿಟ್ಟು, ಸಿಮೆಂಟ್ ಪ್ಲಾಸ್ಟಿಂಗ್ ಉದುರಿಹೊಗಿದೆ, ಮಳೆಯಾದರೆ ಮೇಲ್ಚಾವಣಿಗಳು ಸೋರುತ್ತಿದೆ.
ನೀರು ಸೋರುವ ಕೊಠಡಿಗಳಲ್ಲೆ ಪಾಠ
ನೀರು ಸೋರುವ ಕೊಠಡಿಗಳಲ್ಲೆ ಮಕ್ಕಳು ಮಳೆ ಗಾಳಿ ಲೆಕ್ಕಿಸದೆ ಪಾಠ ಪ್ರವಚನ ಕೇಳುತ್ತಿದ್ದು, ಮಕ್ಕಳ ಜೀವದ ಜೊತೆಗೆ ಶಿಕ್ಷಣ ಇಲಾಖೆ ಚೆಲ್ಲಾಟ ಆಡ್ತಿದೆಯಾ ಎನ್ನುವ ಮಾತುಗಳು ಕೇಳಿಬರ್ತಿದೆ. ಶ್ರೀನಿವಾಸಪುರ, ಹಾಗು ಮುಳಬಾಗಿಲು ತಾಲೂಕಿನಲ್ಲಿ ಹೆಚ್ಚು ಕಡೆ ಶಾಲಾ ಕೊಠಡಿಗಳು ದುರಸ್ತಿಯಾಗಬೇಕಿದ್ದು, ಕೇವಲ ಮೇಲಧಿಕಾರಿಗಳ ಗಮನಕ್ಕೆ ತರುತ್ತಿರುವ ಕೋಲಾರ ಶಿಕ್ಷಣ ಇಲಾಖೆ ಅಧಿಕಾರಿಗಳು ಹಲವು ಬಾರಿ ಮನವಿ ಮಾಡಿ ಇದೀಗ ಸುಮ್ಮನಾಗಿದ್ದಾರೆ.
ಇದನ್ನೂ ಓದಿ: Facebookನಲ್ಲಿ ಫೇಸ್ ನೋಡದೇ ಲವ್ ಮಾಡಿದ! ಮದುವೆ ವೇಳೆ ಗೊತ್ತಾಯ್ತು ಆಕೆ ಹುಡುಗಿಯಲ್ಲ, ಆಂಟಿ!
ಜಿಲ್ಲೆಯಾದ್ಯಂತ ಸುಮಾರು 20 ಶಾಲೆಗಳಲ್ಲಿ ಎಲ್ಲಾ ಕೊಠಡಿಗಳು ಬಳಕೆಗೆ ಯೋಗ್ಯವಿಲ್ಲದ ಕಾರಣ, ಸಮುದಾಯ ಭವನ, ಸಹಕಾರ ಸಂಘದ ಕಟ್ಟಡ, ಹಾಗು ಖಾಸಗಿ ಕಟ್ಟಡದಲ್ಲಿ ಮಕ್ಕಳು ಪಾಠವನ್ನ ಕೇಳ್ತಿದ್ದಾರೆ, ಮೇಲ್ಚಾವಣಿ ಸೋರುವ ಕೊಠಡಿಗಳಲ್ಲಿ ಮುಂದೆ ಏನಾದರು ಅನಾಹುತ ಆದಲ್ಲಿ ಯಾರು ಹೊಣೆ ಎಂಬುದನ್ನ ಶಿಕ್ಷಣ ಇಲಾಖೆ ಗಂಭೀರವಾಗಿ ಚಿಂತಿಸಬೇಕಿದೆ.
ಮಕ್ಕಳ ಜೀವ ಮುಖ್ಯ ಅಂತಿದ್ದಾರೆ ಪೋಷಕರು
ಈ ಬಗ್ಗೆ ಆಕ್ರೋಶ ಹೊರಹಾಕಿರುವ ಮಕ್ಕಳ ಪೋಷಕರು, ನಮ್ಮ ಮಕ್ಕಳನ್ನ ಬೇರೆ ಶಾಲೆಗೆ ಬೇಕಾದರು ಸೇರಿಸುತ್ತೀವಿ, ನಮ್ಮ ಮಕ್ಕಳ ಜೀವವೇ ನಮಗೆ ಮುಖ್ಯ ಎಂದು ತಿಳಿಸಿದ್ದಾರೆ, ಇತ್ತ ಶಾಲಾ ಕೊಠಡಿ ದುರಸ್ತಿ ಸಮಸ್ಯೆಯನ್ನ ಶಿಕ್ಷಣ ಇಲಾಖೆಯವರು ಗಂಭೀರವಾಗಿ ಪರಿಗಣಿಸಬೇಕು ಎಂದು ಮುಳಬಾಗಿಲು ತಾಲೂಕಿನ ನಂಗಲಿ ಸರ್ಕಾರಿ ಶಾಲೆ ಶಿಕ್ಷಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Govt. School: ಮಕ್ಕಳ ದಾಖಲಾತಿಗೆ ಮುಗಿಬಿದ್ದ ಪೋಷಕರು! ಇದು ಮಾದರಿ ಸರ್ಕಾರಿ ಪ್ರೌಢಶಾಲೆಯ ಹಿರಿಮೆ
ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೋಲಾರ ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೃಷ್ಣಮೂರ್ತಿ, ಜಿಲ್ಲೆಯಲ್ಲಿನ ಶಾಲಾ ಸ್ತಿತಿಗತಿ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿರೊದಾಗಿ ತಿಳಿಸಿದ್ದು, ಕುಸಿಯುವ ಹಂತದಲ್ಲಿರೊ ಕೊಠಡಿಯಲ್ಲಿ ಮಕ್ಕಳನ್ನ ಕೂರಿಸುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ನ್ಯೂಸ್ 18 ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್, ಸರ್ಕಾರದಿಂದ ಅನುದಾನವೇ ಬಂದಿಲ್ಲ, ವಿಶೇಷ ಅನುದಾನ ಬಂದಾಕ್ಷಣ ಹೆಚ್ಚಿನ ಪ್ರಾಮುಖ್ಯತೆ ಇರುವ ಶಾಲೆಗಳ ದುರಸ್ತಿ ಕಾರ್ಯ ಮಾಡುವುದಾಗಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ