ಜೈಶ್ರೀರಾಮ್ ಘೋಷಣೆ ಕೂಗಿಲ್ಲ ಎಂದು ಮುಸ್ಲಿಂ ಬಾಲಕನಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಮತ್ತೊಂದು ಹೇಯ ಪ್ರಕರಣಕ್ಕೆ ಸಾಕ್ಷಿಯಾದ ಉತ್ತರಪ್ರದೇಶ!

ಶೇ.45 ರಷ್ಟು ಸುಟ್ಟಗಾಯಗಳಿಗೆ ಒಳಗಾಗಿರುವ ಬಾಲಕನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಲಾಗುತ್ತಿದ್ದು, ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

MAshok Kumar | news18
Updated:July 29, 2019, 3:57 PM IST
ಜೈಶ್ರೀರಾಮ್ ಘೋಷಣೆ ಕೂಗಿಲ್ಲ ಎಂದು ಮುಸ್ಲಿಂ ಬಾಲಕನಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಮತ್ತೊಂದು ಹೇಯ ಪ್ರಕರಣಕ್ಕೆ ಸಾಕ್ಷಿಯಾದ ಉತ್ತರಪ್ರದೇಶ!
ಸಾಂದರ್ಭಿಕ ಚಿತ್ರ
MAshok Kumar | news18
Updated: July 29, 2019, 3:57 PM IST
ಚಂದೌಲಿ (ಜುಲೈ.29); ಜೈಶ್ರೀರಾಮ್ ಘೋಷಣೆ ಕೂಗಿಲ್ಲ ಎಂಬ ಕಾರಣಕ್ಕೆ 17 ವರ್ಷದ ಮುಸ್ಲಿಂ ಬಾಲಕನ್ನು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿರುವ ಹೇಯ ಘಟನೆ ಉತ್ತರಪ್ರದೇಶ ಚಂದೌಲಿ ಜಿಲ್ಲೆಯಲ್ಲಿ ನಡೆದಿದೆ.

ಶೇ.45 ರಷ್ಟು ಸುಟ್ಟಗಾಯಗಳಿಗೆ ಒಳಗಾಗಿರುವ ಬಾಲಕನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಲಾಗುತ್ತಿದ್ದು, ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ಕುರಿತು ಸಂತ್ರಸ್ಥ ಬಾಲಕ ಹೇಳಿಕೆ ನೀಡಿದ್ದು, “ದುದಾರಿ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ನಾಲ್ಕು ಜನ ನನ್ನನ್ನು ಅಪಹರಿಸಿದರು. ಜೈ ಶ್ರೀರಾಮ್ ಎಂಬ ಘೋಷಣೆ ಕೂಗಲು ಒತ್ತಾಯಿಸಿದರು. ಇದನ್ನು ನಿರಾಕರಿಸಿದ ಕಾರಣ ಅವರಲ್ಲಿ ಇಬ್ಬರು ನನ್ನ ಕೈಗಳನ್ನು ಹಗ್ಗದಲ್ಲಿ ಕಟ್ಟಿದ್ದರು. ಮೂರನೇ ವ್ಯಕ್ತಿ ನನ್ನ ಮೇಲೆ ಸೀಮೆ ಎಣ್ಣೆ ಸುರಿದ, ನಂತರ ಬೆಂಕಿ ಹಚ್ಚಿದರು. ನಾನು ಮನೆಗೆ ಓಡಿಬರುವಷ್ಟರಲ್ಲಿ ದೇಹ ಸುಟ್ಟುಹೋಯಿತು ಎಂದಿದ್ದಾನೆ.

ಆದರೆ, ಪ್ರಕರಣದ ಕುರಿತು ಮಾಹಿತಿ ನೀಡಿರುವ ಚಂದೌಲಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್, “ಸುಟ್ಟು ಗಾಯಕ್ಕೆ ಒಳಗಾಗಿರುವ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಆತ ಒಬ್ಬೊಬ್ಬರ ಬಳಿ ಒಂದೊಂದು ಹೇಳಿಕೆ ನೀಡುತ್ತಿದ್ದಾನೆ. ಅವನ ಹೇಳಿಕೆಗಳು ವಿರೋಧಾಬಾಸದಿಂದ ಕೂಡಿವೆ. ಹೀಗಾಗಿ ಘಟನೆ ನಡೆದ ಸ್ಥಳದಲ್ಲಿನ ಎಲ್ಲಾ ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಶೀಘ್ರದಲ್ಲಿ ಘಟನೆಗೆ ನಿಖರ ಕಾರಣ ಏನು? ಹಾಗೂ ಆರೋಪಿಗಳು ಯಾರು? ಎಂದು ಪತ್ತೆ ಹಚ್ಚಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Loading...ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಸ್ವಯಂಘೋಷಿತ ಧರ್ಮ ರಕ್ಷಕರ ಉಪಟಳ ಹೆಚ್ಚಾಗುತ್ತಿದ್ದು, ಮುಸ್ಲಿಂ ಸಮುದಾಯದ ಮೇಲೆ ವ್ಯಾಪಕವಾಗಿ ನಡೆಯುತ್ತಿರುವ ಇಂತಹ ಹಲ್ಲೆಗಳು ದೇಶದಾದ್ಯಂತ ಖಂಡನೆಗೆ ಗುರಿಯಾಗುತ್ತಿದೆ.

ಇದನ್ನೂ ಓದಿ : ಮ್ಯಾನ್​ VS ವೈಲ್ಡ್​ ಕಾರ್ಯಕ್ರಮದಲ್ಲಿ ಪ್ರಧಾನಿ; ಹೇಗಿದೆ ಗೊತ್ತಾ ಕಾಡಿನಲ್ಲಿ ಮೋದಿ ಸಾಹಸಮಯ ಪಯಣ!

First published:July 29, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...