ಬೆಂಗಳೂರು: ಮಹಿಳಾ ಸಬಲೀಕರಣ (Women's Empowerment), ಮಹಿಳಾ ಅಭಿವೃದ್ಧಿ ಎಂದು ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷಗಳು ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿವೆ. ಆದರೆ ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ (Molestation) ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಕರ್ನಾಟಕದಲ್ಲಿ (Karnataka) 2022ರ ಅಂಕಿ ಅಂಶದ ಪ್ರಕಾರ ಪ್ರತಿದಿನ ಸರಾಸರಿ ಕನಿಷ್ಠ 15 ಮಹಿಳೆಯರು ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಕ್ಕೆ ಒಳಗಾಗಿರುವ ಕುರಿತು ದೂರುಗಳನ್ನು ದಾಖಲಿಸಿದ್ದಾರೆ. ಬೆಂಗಳೂರು (Bengaluru) ಜಿಲ್ಲೆಯಲ್ಲೇ 5,800ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ ಕಳೆದ ವರ್ಷ ದಾಖಲಾದ 5,807 ಪ್ರಕರಣಗಳಲ್ಲಿ 1,877 ಪ್ರಕರಣಗಳಯ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು 973 ಖಾಸಗಿ ಸ್ಥಳಗಳಲ್ಲಿವೆ ಸಂಭವಿಸಿವೆ. ಸಾರ್ವಜನಿಕ ಸಾರಿಗೆಗಳಲ್ಲಿ ಒಂಬತ್ತು ಪ್ರಕರಣಗಳು ದಾಖಲಾಗಿವೆ. 2,829 ಪ್ರಕರಣಗಳನ್ನು ಇತರ ಸ್ಥಳಗಳಲ್ಲಿ ಸಂಭವಿಸಿವೆ ಎಂದು ವರ್ಗೀಕರಣ ಮಾಡಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನ 2021ಕ್ಕೆ ಹೋಲಿಕೆ ಮಾಡಿದರೆ ಸಾರ್ವಜನಿಕ ಸ್ಥಳಗಳಲ್ಲಿ 1,566 ಹಾಗೂ 817 ಖಾಸಗಿ ಸ್ಥಳಗಳಲ್ಲಿ ನಡೆದಿವೆ ಎಂದು ದಾಖಲಾಗಿವೆ.
ಕಳೆದ 4 ವರ್ಷಗಳಲ್ಲಿ 25 ಸಾವಿರ ಪ್ರಕರಣ
2018ರ ಜನವರಿಯಿಂದ 2022ರ ಡಿಸೆಂಬರ್ ನಡುವಿನ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಪ್ರತಿ ತಿಂಗಳು ಸರಾಸರಿ 500 ರಂತೆ 25,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷವನ್ನು ಹೊರತುಪಡಿಸಿದರೆ 2018ರಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಂದರೆ 2022ರ ಅಂಕಿ ಅಂಶ ಕೋವಿಡ್ 19 ವರ್ಷಗಳ ಹಿಂದಿನ ಮಟ್ಟವನ್ನು ಮೀರಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಇಂತಹ ಪ್ರಕರಣಗಳು ಕಡಿಮೆಯಾಗಿದ್ದವು.
ಕೋವಿಡ್ 19 ಸಂದರ್ಭದಲ್ಲಿ ಕಡಿಮೆ ಪ್ರಕರಣ
ಕೋವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ ಸಾರ್ಜಜನಿಕರ ಸಂಚಾರ, ಸಭೆ, ಕಾರ್ಯಾಕ್ರಮಗಳಿಗೆ ನಿರ್ಬಂಧಿ ಏರಿದ್ದರಿಂದ 2020ರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿತ್ತು. ಆದರೆ ನಿರ್ಬಂಧ ಸಡಿಲವಾಗುತ್ತಿದ್ದಂತೆ 2021 ಮತ್ತು 2022 ರಲ್ಲಿ ಮತ್ತೆ 5,000 ಪ್ರಕರಣಗಳ ಗಡಿ ದಾಟಿದೆ. ಮಹಿಳೆಯರು ನೀಡುವ ಎಲ್ಲಾ ದೂರಗಳನ್ನು ಸ್ವೀಕರಿಸಿ ಪೊಲೀಸ್ ಇಲಾಖೆ ಕಾನೂನಿನ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೂ ಈ ಸಮಸ್ಯೆಗಳು ಸಮಾಜದಲ್ಲಿ ಕಡಿಮೆಯಾಗುತ್ತಿಲ್ಲ. ಸಾಮಾಜಿಕ ಹಾಗೂ ಮಾನಸಿಕ ಬದಲಾವಣೆಯಿಂದ ಮಾತ್ರ ನಿಯಂತ್ರಣ ಸಾಧ್ಯ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ವರ್ಷ ಜೈಲು ಶಿಕ್ಷೆ
ಇನ್ನುಇಂತಹ ಪ್ರಕರಣಗಳನ್ನು ಭಾರತೀಯ ದಂಡ ಸಂಹಿತೆಯ (IPC)ಸೆಕ್ಷನ್ 354 ರ ಅಡಿಯಲ್ಲಿ ದಾಖಲಿಸಲಾಗಿದೆ. ಇದರಲ್ಲಿ ತಪ್ಪಿತಸ್ಥರಿಸಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಇನ್ನು ಹಲವಾರು ಪ್ರಕರಣಗಳಲ್ಲಿ ಗಂಭೀರವಾದ ಹಲ್ಲೆ ಅಥವಾ ಕಿರುಕುಳ ನಡೆಯದಿದ್ದರೂ ಸಹ ಸಂತ್ರಸ್ತರ ಹೇಳಿಕೆಯ ಆಧಾರದ ಮೇಲೆ ಅಂತಹ ಎಲ್ಲಾ ದೂರುಗಳನ್ನು ಸೆಕ್ಸನ್ 354 ರ ಅಡಿಯಲ್ಲಿ ದಾಖಲಿಸಿಕೊಳ್ಳಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
15 ಸಾವಿರ ಇತರೆ ಅಪರಾಧ ಪ್ರಕರಣಗಳ
ಟೈಮ್ ಆಫ್ ಇಂಡಿಯಾ ವರಧಿ ಪ್ರಕಾರ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಹೊರತುಪಡಿಸಿ ರಾಜ್ಯದಲ್ಲಿ 2022 ರಲ್ಲಿ ರಾಜ್ಯದಲ್ಲಿ ಮಹಿಳೆಯ ಮೇಲೆ ಒಟ್ಟು 15,492 ಅಪರಾಧ ಪ್ರಕರಣಗಳು ನಡೆದಿವೆ. ಅವುಗಳಲ್ಲಿ 500 ಕ್ಕೂ ಹೆಚ್ಚು ಅತ್ಯಾಚಾರಗಳು ಪ್ರಕರಣಗಳಿವೆ. 2,843 ಪತಿಯಿಂದ ಹಲ್ಲೆ, 15 ವರದಕ್ಷಿಣೆ ಕೊಲೆಗಳು, 241 ಕಳ್ಳಸಾಗಣೆ, 4,082 ಸೈಬರ್ ಕ್ರೈಮ್, 166 ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಬೇರೆ ಕಾರಣಗಳಿಂದ 432 ಕೊಲೆಗಳು ನಡೆದಿವೆ.
ಐದು ವರ್ಷಗಳ ಅಂಕಿ ಅಂಶ
ಕಳೆದ ಐದು ವರ್ಷಗಳ ಡೇಟಾ ಗಮನಿಸಿದರೆ, ಮಹಿಳೆಯರ ಮೇಲೆ ನಡೆಯುತ್ತಿರುವ ಒಟ್ಟು ಅಪರಾಧಗಳ ಸಂಖ್ಯೆಯು ಕೋವಿಡ್ ಸಾಂಕ್ರಾಮಿಕ ಹಿಂದಿನ ಮಟ್ಟವನ್ನು ಮೀರಿ ಬೆಳೆಯುತ್ತಿದೆ. ಅಂದರೆ ಕೋವಿಡ್ ಹಿಂದಿನ ವರ್ಷವಾದ 2018 ರಲ್ಲಿ 13,513 ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ 15,942 ಪ್ರಕರಣಗಳು ದಾಖಲಾಗಿವೆ. ಕೋವಿಡ್ ಬಿಕ್ಕಟ್ಟಿನ ನಂತರ ಅಪರಾಧ ಪ್ರಕರಣಗಳು 14% ಹೆಚ್ಚಾಗಿವೆ. 2019 ರಲ್ಲಿ 13,824, 2020 ರಲ್ಲಿ 12,680ಕ್ಕೆ ಇಳಿದಿದ್ದರೆ, 2021ರಲ್ಲಿ ಮತ್ತೆ14,468 ಪ್ರಕರಣಗಳಿಗೆ ಏರಿಕೆಯಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ