ರಾಜ್ಯದಲ್ಲಿ ಉಂಟಾಗಿದ್ದ ಹಿಜಾಬ್ ಸಂಘರ್ಷಕ್ಕೆ (Hijab Row) ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ (Karnataka High court) ತೀರ್ಪು ನೀಡಿದೆ. ಕೆಲ ವಿದ್ಯಾರ್ಥಿನಿಯರು (Students) ಈ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ (Supreme Court) ಮೊರೆ ಹೋಗಿದ್ದಾರೆ. ಸದ್ಯ ನ್ಯಾಯಾಲಯದ ತೀರ್ಪಿನ ಪ್ರಕಾರ, ಶಾಲಾ ತರಗತಿಗಳಲ್ಲಿ ಧರ್ಮಕ್ಕೆ ಸಂಬಂಧಿಸಿದ ವಸ್ತ್ರ (Religion Cloths) ಧರಿಸುವಂತಿಲ್ಲ. ಅದೇ ರೀತಿ ಶಾಲಾ-ಕಾಲೇಜುಗಳು (School And Colleges) ನಡೆಯುತ್ತಿವೆ. ರಾಜ್ಯದಲ್ಲಿ ಹಿಜಾಬ್ ಸಂಘರ್ಷವೂ ಶಾಂತವಾಗಿದೆ. ಆದ್ರೆ ಈ ಸಮಯದಲ್ಲಿ ಮತ್ತೆ ಹಿಜಾಬ್ ಕಿಡಿ ಕಾಣಿಸಿಕೊಳ್ಳುವ ಸುಳಿವು ಸಿಗ್ತಿದೆ. ತಣ್ಣಗಾಯ್ತು ಅನ್ನೋ ಹೊತ್ತಿಗೇ ಕರಾವಳಿ ಜಿಲ್ಲೆಗಳಲ್ಲಿ ಹಿಜಾಬ್ ಸಮರ ಶುರುವಾಗಿದೆ. ಹಿಜಾಬ್ಗೆ ಅವಕಾಶ ಇಲ್ಲದ ಕಾರಣಕ್ಕೆ ಕಾಲೇಜ್ಗೆ ಬೈ ಬೈ ಹೇಳಿದ್ದಾರೆ.
ಹಿಜಾಬ್ಗೆ ಅನುಮತಿ ಸಿಗದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಶೇ.16ರಷ್ಟು ವಿದ್ಯಾರ್ಥಿನಿಯರು TC ವಾಪಾಸ್ ಪಡೆದುಕೊಂಡಿದ್ದಾರೆ. RTIನಿಂದ TC ಪಡೆದಿರುವ ಆತಂಕಕಾರಿ ವಿಚಾರ ಬಹಿರಂಗವಾಗಿದೆ.
ಟಿಸಿ ಪಡೆದ 145 ವಿದ್ಯಾರ್ಥಿಗಳು
ಕೋರ್ಟ್ ಹಾಗೂ ಸರ್ಕಾರದ ಆದೇಶದ ನಂತರ ಕಂಗೆಟ್ಟಿರೋ ಕಟ್ಟರ್ ಮುಸ್ಲಿಂ ಹಿಜಾಬ್ ವಿದ್ಯಾರ್ಥಿನಿಯರು ಮಂಗಳೂರು ವಿವಿ ಅಧೀನದಲ್ಲಿರೋ ಸರ್ಕಾರಿ ಶಾಲಾ, ಕಾಲೇಜುಗಳಿಂದ ಟಿಸಿ ಪಡೆದು ಖಾಸಗಿ ಶಾಲೆ ಮೊರೆ ಹೋಗಿದ್ದಾರೆ.ಒಟ್ಟು 900 ವಿದ್ಯಾರ್ಥಿನಿಯರ ಪೈಕಿ 145 (ಶೇ.16) ವಿದ್ಯಾರ್ಥಿನಿಯರು ಟಿಸಿ ಪಡೆದಿದ್ದಾರೆ.
ಇದನ್ನೂ ಓದಿ: Hijab Controversy: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಜಾಬ್ ವಿವಾದ ಗಂಭೀರ ಚರ್ಚೆ, ಈಗ UAE ರಾಣಿಯೂ ಇದರಲ್ಲಿ ಭಾಗಿ
ಹಿಜಾಬ್ಗಾಗಿ TC ವಾಪಾಸ್
*ದಕ್ಷಿಣ ಕನ್ನಡ, ಉಡುಪಿ: ಶೇ.16
*ಸರ್ಕಾರಿ ಕಾಲೇಜು: ಶೇ. 34
*ಅನುದಾನಿತ ಕಾಲೇಜು: ಶೇ13
TC ಪಡೆದ ವಿದ್ಯಾರ್ಥಿಗಳ ಸಿಟ್ಟು ಯಾರ ಮೇಲೆ?
ವಿದ್ಯಾರ್ಥಿನಿಯರು TC ಪಡೆಯಲು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಕಾರಣವಂತೆ. ಶಿಕ್ಷಣ ಸಚಿವರ ವರ್ತನೆಯಿಂದಲೇ TC ಪಡೆಯಲಾಗಿದೆ ಎಂದು ಮಂಗಳೂರು ವಿವಿ ಕಾಲೇಜಿನ ವಿದ್ಯಾರ್ಥಿನಿ ಗೌಸಿಯಾ ಹೇಳಿಕೆ ನೀಡಿದ್ದಾರೆ.
ಹಿಜಾಬ್ಗೆ ಅವಕಾಶವಿಲ್ಲದ್ದಕ್ಕೆ ಕಾಲೇಜಿನಿಂದ TC ಪಡೆಯಲಾಗಿದೆ. ನಾವು TC ಪಡೆಯೋದಕ್ಕೆ ಕಾರಣ ಸಚಿವ ಬಿ.ಸಿ ನಾಗೇಶ್. ಸಂವಿಧಾನದ ಹಕ್ಕಿನ ಪ್ರಕಾರ ಶಿಕ್ಷಣ ಪಡೆಯಲು ನಾಗೇಶ್ ಅವರು ಬಿಡಲಿಲ್ಲ. ತುಂಡು ಬಟ್ಟೆಯನ್ನೇ ದೊಡ್ಡ ವಿವಾದವನ್ನಾಗಿ ನಾಗೇಶ್ ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಹಿಜಾಬ್ ವಿವಾದದ ಹಾದಿ
ಡಿ. 27, 2021: ಉಡುಪಿಯಲ್ಲಿ ಹಿಜಾಬ್ ವಿವಾದ ಶುರು
ಡಿ. 27, 2021: ಕಾಲೇಜಿನಿಂದ ಹೊರಬಂದ 6 ವಿದ್ಯಾರ್ಥಿನಿಯರು
ಜನವರಿ 31, 2022: ಹೈಕೋರ್ಟ್ ಮೊರೆ ಹೋದ ವಿದ್ಯಾರ್ಥಿನಿಯರು
ಫೆ 2, 2022: ಕುಂದಾಪುರದಲ್ಲಿ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು
ಫೆ 4, 2022: ಉಡುಪಿಯ ಭಂಡಾರ್ಕರ್ ಕಾಲೇಜಿನಲ್ಲೂ ಹಿಜಾಬ್ ವಿವಾದ
ಫೆ 5, 2022 : ಯೂನಿಫಾರಂ ಮಾತ್ರ ಧರಿಸಲು ಶಿಕ್ಷಣ ಇಲಾಖೆ ಆದೇಶ
ಫೆ 7, 2022: ಬಹುತೇಕ ಕಡೆ ಪ್ರೊಟೆಸ್ಟ್, ಶಾಂತಿ ಕಾಪಾಡಲು ಸಿಎಂ ಮನವಿ
ಫೆ 8, 2022: ಹಿಜಾಬ್ ವಿವಾದದಿಂದ 3 ದಿನ ಕಾಲೇಜುಗಳಿಗೆ ರಜೆ
ಫೆ 11, 2022: ಕಾಲೇಜುಗಳಲ್ಲಿ ಹಿಜಾಬ್ ಧರಿಸದಂತೆ ಮಧ್ಯಂತರ ಆದೇಶ
ಫೆ 12, 2022: 3 ದಿನ ಕಾಲೇಜುಗಳಿಗೆ ರಜೆ ಘೋಷಣೆ
ಫೆ 18, 2022 : ಹಿಜಾಬ್ ಧರಿಸಿ ಬಂದ ತುಮಕೂರಿನ 15-20 ಮಂದಿ ಮೇಲೆ FIR
ಇದನ್ನೂ ಓದಿ: Explained: ಹಿಜಾಬ್, ಬುರ್ಖಾ, ನಿಕಾಬ್.. ಈ ಮೂರರಲ್ಲೂ ಇರೋ ವ್ಯತ್ಯಾಸವೇನು? ಯಾವ ದಿರಿಸು ಯಾವ ಸಂದರ್ಭದಲ್ಲಿ ತೊಡುತ್ತಾರೆ?
ಹಿಜಾಬ್ ಮತ್ತು ಬುರ್ಖಾ ನಡುವಿನ ವ್ಯತ್ಯಾಸ
ಹಿಜಾಬ್ ತಲೆಯ ಸ್ಕಾರ್ಫ್ ಆಗಿದ್ದು ಅದು ಕೂದಲು, ಕುತ್ತಿಗೆ ಮತ್ತು ಕೆಲವೊಮ್ಮೆ ಮಹಿಳೆಯ ಭುಜಗಳನ್ನು ಆವರಿಸುತ್ತದೆ. ಮತ್ತೊಂದೆಡೆ, ಬುರ್ಖಾ ಮುಖ ಮತ್ತು ದೇಹವನ್ನು ಆವರಿಸುವ ಒಂದು ತುಂಡು ಮುಸುಕಾಗಿದ್ದು, ಕಣ್ಣುಗಳು ಮಾತ್ರ ಕಾಣಿಸುತ್ತವೆ. ಅಲ್ಲದೆ, ಮುಖ ನೋಡಲು ಕೇವಲ ಜಾಲರಿಯ ಪರದೆಯನ್ನು ಮಾತ್ರ ಬಿಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ