• Home
  • »
  • News
  • »
  • state
  • »
  • Bengaluru Crime News: ಶಾಲೆಗೆ ಚಕ್ಕರ್ ಹಾಕಿದ್ದಕ್ಕೆ ತಾಯಿಯಿಂದ ಏಟು; 14ರ ಬಾಲಕ ನೇಣಿಗೆ ಶರಣು

Bengaluru Crime News: ಶಾಲೆಗೆ ಚಕ್ಕರ್ ಹಾಕಿದ್ದಕ್ಕೆ ತಾಯಿಯಿಂದ ಏಟು; 14ರ ಬಾಲಕ ನೇಣಿಗೆ ಶರಣು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಾಯಿ ಸವಿತಾ ಬೈದು, ಒಂದೆರಡು ಏಟು ನೀಡಿ ತಿಳಿ ಹೇಳಿದ್ದರು. ಪೃಥ್ವಿರಾಜ್ ಕಡಬಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು.

  • News18 Kannada
  • Last Updated :
  • Bangalore [Bangalore], India
  • Share this:

ಶಾಲೆಗೆ (School) ಚಕ್ಕರ್ ಹಾಕಿದ್ದಕ್ಕೆ ತಾಯಿ (mother) ಬೈದು, ಒಂದೆರಡು ಏಟು ಕೊಟ್ಟಿದ್ದಕ್ಕೆ 14 ವರ್ಷದ ಬಾಲಕನೋರ್ವ (Boy Death) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೃಥ್ವಿರಾಜ್ ನೇಣಿಗೆ ಕೊರಳೊಡ್ಡಿದ ಬಾಲಕ. ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ (Kadabagere) ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಪೃಥ್ವಿರಾಜ್ ಶಾಲೆಗೆ ಗೈರಾಗುತ್ತಿದ್ದನು. ಕಡಬಗೆರೆ ನಿವಾಸಿ ವಿಜಯ್ ಕುಮಾರ್ ಮತ್ತು ಸವಿತಾ ದಂಪತಿಯ ಮಗ. ಈ ಹಿನ್ನೆಲೆ ತಾಯಿ ಸವಿತಾ ಬೈದು, ಒಂದೆರಡು ಏಟು ನೀಡಿ ತಿಳಿ ಹೇಳಿದ್ದರು. ಪೃಥ್ವಿರಾಜ್ ಕಡಬಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು.


ಮನೆಯಲ್ಲಿ ಯಾರು ಇಲ್ಲದ ವೇಳೆ ಸೀರೆಯಿಂದ ನೇಣು ಬಿಗಿದುಕೊಂಡು‌ ಪೃಥ್ವಿರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮರಣೋತ್ತರ ಶವ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.


ಜೈಲಿನಲ್ಲಿ ಕೈದಿ ಆರೋಪಿ ಆತ್ಮಹತ್ಯೆ


ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಳೆದ ಅಕ್ಟೋಬರ್​ 14 ರಂದು ಮಹಿಳೆ ಹತ್ಯೆಗೈದು ಜೈಲು ಸೇರಿದ್ದ ಆರೋಪಿ ಆನಂದ್​ ದುಧನಿ ಆತ್ಮಹತ್ಯೆಗೆ ಶರಣಾಗಿದ್ದಾನೆ.


ಧಾರವಾಡದ ಜಿಲ್ಲಾಸ್ಪತ್ರೆ ಎದುರು ಸವಿತಾ ಕಿತ್ತೂರು ಎನ್ನುವ ಮಹಿಳೆಯನ್ನ ಹತ್ಯೆಗೈದಿದ್ದನು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಆನಂದ್​​ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಇದೀಗ ಕೇಂದ್ರ ಕಾರಾಗೃಹದಲ್ಲಿ ಬೆಡ್ ಶೀಟ್ ಹರಿದು ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಉಪನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


14 year old boy died by suicide in bengaluru mrq
ಸಾಂದರ್ಭಿಕ ಚಿತ್ರ


ಟಂಟಂ ವಾಹನ ಪಲ್ಟಿ, ಐವರಿಗೆ ಗಾಯ


ಕೊಪ್ಪಳದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟಂಟಂ ಪಲ್ಟಿ ಹೊಡೆದು, ಐವರು ಗಾಯಗೊಂಡಿದ್ದಾರೆ. ಯಲಬುರ್ಗಾ ತಾಲೂಕಿನ ಮಲಕಸಮುದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಹೊರ ವಲಯದ ಕೊರವಮ್ಮನ ಹಳ್ಳದ ಹತ್ತಿರ ಟಂಟಂ ಪಲ್ಟಿಯಾಗಿದೆ. ಕೂಲಿ ಕೆಲಸ ಮುಗಿಸಿಕೊಂಡು ಟಂಟಂನಲ್ಲಿ 12 ಜನ ಪ್ರಯಾಣಿಸುತ್ತಿದ್ದರು. ಗಾಯಳುಗಳನ್ನ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನೆ‌ ಮಾಡಲಾಗಿದೆ.


ಇದನ್ನೂ ಓದಿ: Thief: ಕದ್ದ ಹಣದಲ್ಲಿ ದೇವಸ್ಥಾನ, ಚರ್ಚ್​ ಹುಂಡಿಗೆ ಹಣ ಹಾಕ್ತಿದ್ದ ಕಳ್ಳ ಅರೆಸ್ಟ್


ಕಾಂಗ್ರೆಸ್​ ಅಹೋರಾತ್ರಿ ಧರಣಿ


ತುಮಕೂರಿನ ಶಿರಾ ನಗರಸಭೆಯಲ್ಲಿ ಅಹೋರಾತ್ರಿ ಧರಣಿ ಮಾಡಲಾಗ್ತಿದೆ. ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರ ಆಯ್ಕೆಯಲ್ಲಿ ಗೊಂದಲ ಹಿನ್ನೆಲೆ 17 ಜನರ ಕಾಂಗ್ರೆಸ್ ಸದಸ್ಯರು ಧರಣಿ ಮಾಡಿದ್ದಾರೆ. ಕೋರಂ ಇಲ್ಲದ ಹಿನ್ನೆಲೆಯಲ್ಲಿ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನ ಅಧ್ಯಕ್ಷ ಅಂಜಿನಪ್ಪ ಮುಂದೂಡಿದ್ರು. ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರ ಆಯ್ಕೆ ಮಾಡುವಂತೆ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ.


14 year old boy died by suicide in bengaluru mrq
ಸಾಂದರ್ಭಿಕ ಚಿತ್ರ


ಹಾರೆಯಿಂದ ಹೊಡೆದು ಪತ್ನಿ, ಮಗುವನ್ನು ಕೊಂದ ನೀಚ


ಮದ್ಯಪಾನ ಮಾಡಲು ಹಣ (Money) ಕೊಟ್ಟಿಲ್ಲ ಎಂಬ ಕಾರಣಕ್ಕೆ ಪಾತಕಿಯೋರ್ವ ಹಾರೆಯಿಂದ ಹೆಂಡತಿ ಮತ್ತು ಮಗುವನ್ನು ಹತ್ಯೆ (Double Murder) ಮಾಡಿದ್ದಾನೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮಾವಿನಹಳ್ಳಿಯಲ್ಲಿ (Mavinahalli, Tumakuru) ಈ ಕೊಲೆ ನಡೆದಿದೆ.


ಇದನ್ನೂ ಓದಿ: Honour Killing: ಇಬ್ಬರನ್ನ ಒಂದು ಮಾಡ್ತೀವಿ ಬನ್ನಿ ಅಂತ ಕರೆಸಿ ಕೊಲೆ; ಬಾಗಲಕೋಟೆಯಲ್ಲಿ ಮರ್ಯಾದಾ ಹತ್ಯೆ

 ಗಂಡ ಹೆಂಡತಿ ಜಗಳದಲ್ಲಿ ನಾಲ್ಕು ವರ್ಷದ ಹಾಲುಗಲ್ಲದ ಕಂದಮ್ಮ ಸಹ ಕೊಲೆಯಾಗಿದೆ. ಎಳೆ ಮಗು ಅನ್ನೋದನ್ನು ನೋಡದ ಪಾಪಿ ಹೆಂಡತಿಯ ಜೊತೆಗೆ 4 ವರ್ಷದ ಮಗುವನ್ನೂ ಹತ್ಯೆ ಮಾಡಿದ್ದಾನೆ. ಮೋಹನ್ ಕುಮಾರ್ ಅಲಿಯಾಸ್‌ ಸ್ವಾಮಿ ತನ್ನ ಹೆಂಡತಿ ಕಾವ್ಯಾ ಹಾಗೂ ಮಗು ಜೀವನ್ ತಲೆಗೆ ಹಾರೆ ಕೋಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬುಧವಾರ ಬೆಳಗ್ಗೆ 7 ಗಂಟೆಗೆ ಕೊಲೆ ನಡೆದಿದೆ

Published by:Mahmadrafik K
First published: