ಡ್ರಗ್ಸ್ ಪ್ರಕರಣದ ಮಾಸ್ಟರ್ ಮೈಂಡ್ ವೈಭವ್ ಜೈನ್-ಬೆನಾಲ್ಡ್ ಉಡೇನ್ಗೆ 14 ದಿನಗಳ ನ್ಯಾಯಾಂಗ ಬಂಧನ
ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಮುರಿದು ಬಿದ್ದಿರುವ ಪೊಲೀಸ್ ಇಲಾಖೆ ವಿದೇಶಿ ಪ್ರಜೆಗಳು ಸೇರಿದಂತೆ ನಗರದ ಅನೇಕ ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಇದಲ್ಲದೆ ಸ್ಯಾಂಡಲ್ ವುಡ್ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರನ್ನು ಬಂಧಿಸಿ ಇದೇ ಪರಪ್ಪನ ಅಗ್ರಹಾರದಲ್ಲಿ ಬಂಧಿಸಲಾಗಿದೆ.
news18-kannada Updated:September 23, 2020, 7:18 PM IST

ಸ್ಯಾಂಡಲ್ವುಡ್ ಡ್ರಗ್ ಕೇಸ್ನಲ್ಲಿ ಬಂಧಿತನಾಗಿರುವ ಆರೋಪಿ ವೈಭವ್ ಜೈನ್.
- News18 Kannada
- Last Updated: September 23, 2020, 7:18 PM IST
ಬೆಂಗಳೂರು (ಸೆಪ್ಟೆಂಬರ್ 23); ಪ್ರಸ್ತುತ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ಪ್ರಕರಣದ ಮಾಸ್ಟರ್ ಮೈಂಡ್ ವೈಭವ್ ಜೈನ್ ಹಾಗೂ ಬೆನಾಲ್ಡ್ ಉಡೇನ್ ಗೆ ಕೋರ್ಟ್ ಇಂದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಿದೆ. ಕಳೆದ ಹಲವು ದಿನಗಳಿಂದ ಈ ಇಬ್ಬರೂ ಆರೋಪಿಗಳು ಸಿಸಿಬಿ ಪೊಲೀಸರ ವಶದಲ್ಲಿದ್ದರು. ಈ ಇಬ್ಬರನ್ನೂ ಸತತ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು ಅನೇಕ ಮಾಹಿತಿಗಳನ್ನು ಪಡೆದಿದ್ದರು. ಆದರೆ, ಪೊಲೀಸ್ ಕಸ್ಟಡಿ ಇಂದಿಗೆ ಮುಗಿದಿದ್ದು, ಈ ಇಬ್ಬರನ್ನೂ ವಿಡಿಯೋ ಕಾನ್ಪರೇನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ NDPS ವಿಶೇಷ ಕೋರ್ಟ್ ಇಬ್ಬರಿಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಹೀಗಾಗಿ ಈ ಇಬ್ಬರೂ ಆರೋಪಿಗಳು ಇಂದು ರಾತ್ರಿ ವೇಳೆಗೆ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಲಿರುವುದು ಖಚಿತವಾಗಿದೆ.
ಇದಲ್ಲದೆ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಮುರಿದು ಬಿದ್ದಿರುವ ಪೊಲೀಸ್ ಇಲಾಖೆ ವಿದೇಶಿ ಪ್ರಜೆಗಳು ಸೇರಿದಂತೆ ನಗರದ ಅನೇಕ ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಇದಲ್ಲದೆ ಸ್ಯಾಂಡಲ್ ವುಡ್ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರನ್ನು ಬಂಧಿಸಿ ಇದೇ ಪರಪ್ಪನ ಅಗ್ರಹಾರದಲ್ಲಿ ಬಂಧಿಸಲಾಗಿದೆ. ಈ ನಡುವೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ವೈಭವ್ ಜೈನ್ ಯಾರು ಎಂಬ ಸುದ್ದಿ ಇದೀಗ ದೊಡ್ಡ ಸದ್ದು ಮಾಡುತ್ತಿದೆ. ಯಾರೀ ವೈಭವ್ ಜೈನ್?:
ಸ್ಯಾಂಡಲ್ವುಡ್ ಡ್ರಗ್ ದಂಧೆ ಪ್ರಕರಣದಲ್ಲಿ ಸಿಸಿಬಿ ಬಲೆಯಲ್ಲಿ ಬಂಧಿತನಾಗಿರುವ ವೈಭವ್ ಜೈನ್,ಚಿನ್ನದ ವ್ಯಾಪಾರಿಯಾಗಿದ್ದ. ಚಿನ್ನದ ವ್ಯಾಪಾರಿಗೂ, ಸ್ಯಾಂಡಲ್ವುಡ್ಗೂ ಏನು ನಂಟು? ಎಂದು ಅಚ್ಚರಿಯಾಗಬಹುದು. ಈ ಕೇಸ್ನಲ್ಲಿ ಆತ ಸಿಕ್ಕಿಹಾಕಿಕೊಂಡಿದ್ದು ಹೇಗೆಂಬ ಬಗ್ಗೆ ಇಲ್ಲಿದೆ ಮಾಹಿತಿ. ವೈಭವ್ ಮೋಜು ಮಸ್ತಿಗಾಗಿ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ. ಇದೇ ಸಮಯದಲ್ಲಿ ವೈಭವ್ ವಿರುದ್ದ ಆತನ ಹೆಂಡತಿ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಹಲ್ಲೆ ಕೇಸ್ ದಾಖಲಿಸಿದ್ದರು. ಹೀಗೆ ಪಾರ್ಟಿಗಳಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದ ವೈಭವ್ಗೆ ಕೆಲ ನೈಜೀರಿಯನ್ ಡ್ರಗ್ ಫೆಡ್ಲರ್ಗಳ ಪರಿಚಯವಾಗಿತ್ತು. 2018ರಲ್ಲಿ ಪಾರ್ಟಿಯ ವೇಳೆ ವಿರೇನ್ ಖನ್ನಾ ಪರಿಚಯವಾಗಿತ್ತು.
ವೈಭವ್ ಜೈನ್ಗೆ ಹಲವು ಸೆಲೆಬ್ರಿಟಿಗಳ, ನಟ ನಟಿಯರ ಜೊತೆ ಸಂಪರ್ಕವಿದೆ. ಉದ್ಯಮಿ,ರಾಜಕಾರಣಿ ಮಕ್ಕಳ ಸಂಪರ್ಕವಿದ್ದು ಪಕ್ಕಾ ವ್ಯವಹಾರಸ್ಥನಾಗಿ ಕೆಲಸ ಮಾಡುತ್ತಿದ್ದ. ಕೆಲವು ಮಂದಿಗೆ ಲಕ್ಷಾಂತರ ರೂಪಾಯಿ ಸಾಲ ಬೇರೆ ನೀಡಿದ್ದ. ಶ್ರೀಮಂತರ ಹಾಗೂ ಸೆಲಬ್ರೆಟಿಗಳ ರೆಸಾರ್ಟ್, ಫಾರ್ಮ್ಹೌಸ್ ಬಗ್ಗೆ ವಿಚಾರಿಸುತ್ತಿದ್ದ. ಕೊನೆಗೆ ಆತ್ಮೀಯನಾಗಿ ಕಡಿಮೆ ಹಣಕ್ಕೆ ಬಾಡಿಗೆಗೆ ಪಡೆದುಕೊಳ್ಳುತ್ತಿದ್ದ. ಅಕುಲ್ ಬಾಲಾಜಿ, ಸಂತೋಷ್ ಸೇರಿ ಹೀಗೆ ಸಾಕಷ್ಟು ಮಂದಿಯ ರೆಸಾರ್ಟ್, ವಿಲ್ಲಾ ಫಾರ್ಮ್ ಹೌಸ್ಗಳನ್ನು ವೈಭವ್ ಜೈನ್ ಬಾಡಿಗೆಗೆ ಪಡೆದುಕೊಂಡಿದ್ದ. ಅಲ್ಲಿ ಸೆಲೆಬ್ರಿಟಿಗಳಿಗೆ ಆಮಂತ್ರಣ ನೀಡಿ ಜೋರಾಗಿ ಪಾರ್ಟಿ ಮಾಡುತ್ತಿದ್ದ.
ನಿರೂಪಕ ಮತ್ತು ನಟ ಅಕುಲ್ ಬಾಲಾಜಿಯನ್ನು ಬಂಧಿತ ಆರೋಪಿ ಶ್ರೀಗೆ ಪರಿಚಯ ಮಾಡಿಸಿದ್ದೇ ವೈಭವ್ ಜೈನ್. ಬಾಡಿಗೆಗೆ ಪಡೆಯುವಾಗ ಜಸ್ಟ್ ಪಾರ್ಟಿ ಅಂತಿದ್ದ ವೈಭವ್ ಬಳಿಕ ಡ್ರಗ್ಸ್ , ಗಾಂಜಾ ಪೂರೈಕೆ ಮಾಡಿಕೊಂಡು ಯುವತಿ -ಯುವಕರಿಗೆ ಹೆಚ್ಚು ಎಂಜಾಯ್ ಮಾಡಿಸುತ್ತಿದ್ದ. ಪಾರ್ಟಿ ಮಾಡಿಸುತ್ತಿದ್ದದ್ದು ಮಾತ್ರವಲ್ಲದೆ ಸಾಲವನ್ನೂ ನೀಡುತ್ತಿದ್ದ. ದಾಖಲೆ, ಕಾರು, ಚಿನ್ನಾಭರಣ ಅಡವಾಗಿಟ್ಟುಕೊಂಡು ಸಾಲ ಕೊಡುತ್ತಿದ್ದ.
ಇಷ್ಟೇ ಅಲ್ಲದೆ, ಪಾರ್ಟಿಗೆ ಅಂತಾನೇ ಫ್ಲ್ಯಾಟ್ ರೆಡಿ ಮಾಡಿಸಿದ್ದ. ಹೆಣ್ಣೂರಿನ ಬಳಿ ವೈಭವ್ ಜೈನ್ ನ ಐಷಾರಾಮಿ ಪ್ಲಾಟ್ ಇತ್ತು. ಈ ಪ್ಲಾಟ್ ಗೆ ಕೇವಲ ಆಪ್ತರಿಗಷ್ಟೇ ಆಹ್ವಾನ ಕೊಡುತ್ತಿದ್ದ. ಹೊರ ರಾಜ್ಯದಿಂದಲೂ ಉದ್ಯಮಿ ಹಾಗೂ ರಾಜಕಾರಣಿ ಮಕ್ಕಳು ವೈಭವ್ ಸ್ನೇಹ ಬೆಳೆಸಿದ್ದರು. ಎರಡು ಬೆಡ್ ರೂಮ್ ಇದ್ದ ಪ್ಲಾಟ್ ನಲ್ಲಿ ಆಪ್ತರು ವೀಕ್ ಎಂಡ್ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದರು.ಇದನ್ನೂ ಓದಿ : ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ಸಂಖ್ಯೆ; ಸೌದಿ ಅರೇಬಿಯಾದಲ್ಲಿ ಭಾರತದ ವಿಮಾನಗಳಿಗೆ ನಿಷೇಧ!
ಬೆಂಗಳೂರಿನ ಚಿನ್ನದ ವ್ಯಾಪಾರಿಯ ಮಗನಾಗಿರುವ ವೈಭವ್ ಜೈನ್ ಈಗ ಖುದ್ದು ತಾನೇ ಚಿನ್ನದ ಬ್ಯುಸಿನೆಸ್ ಮಾಡುತ್ತಿದ್ದಾನೆ. 2018ರಲ್ಲಿ ರವಿಶಂಕರ್ ಹಾಗೂ ರಾಗಿಣಿ ಪ್ರತಿಷ್ಟಿತ ಹೋಟೆಲ್ನಲ್ಲಿ ಪಾರ್ಟಿಗೆ ಹೋಗಿದ್ದರು. ಈ ವೇಳೆ ರವಿಶಂಕರ್ಗೆ ವೈಭವ್ ಜೈನ್ ಪರಿಚಯವಾಗಿದ್ದ. ಸ್ನೇಹ ಸಲುಗೆ ಜಾಸ್ತಿ ಆಗುತ್ತಾ ಹೋದಂತೆ ಅವನ ವ್ಯವಹಾರ ರವಿಶಂಕರ್ಗೆ ಗೊತ್ತಾಗಿತ್ತು. ಪ್ರತಿಷ್ಠಿತ ಹೊಟೇಲ್ಗಳಲ್ಲಿ ಪಾರ್ಟಿ ಆಯೋಜಿಸಿ ಡ್ರಗ್ಸ್ ದಂಧೆ ಮಾಡುತ್ತಿದ್ದ ವೈಭವ್ ಜೈನ್ ಪಾರ್ಟಿಗೆ ನಗರದ ದೊಡ್ಡ ಶ್ರೀಮಂತರು ಬರುತ್ತಿದ್ದರು.
ಬಂದವರಿಗೆ ವೈಭವ್ ಡ್ರಗ್ ಸಪ್ಲೈ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಿಸಿಬಿ ಪೊಲೀಸರ ಮುಂದೆ ಆರೋಪಿ ರವಿಶಂಕರ್ ಹೇಳಿಕೆ ನೀಡಿದ್ದ. ಡ್ರಗ್ ಕೇಸ್ನಲ್ಲಿ ರಾಗಿಣಿ ದ್ವಿವೇದಿ, ರವಿಶಂಕರ್, ಸಂಜನಾ ಬಂಧನವಾಗುತ್ತಿದ್ದಂತೆ ವೈಭವ್ ಜೈನ್ ತನಗೆ ಕೊರೋನಾ ಪಾಸಿಟಿವ್ ಎಂದು ಹೇಳಿ ಕ್ವಾರಂಟೈನ್ನಲ್ಲಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿದ್ದ ಆತನಿಗಾಗಿ ಸಿಸಿಬಿ ಪೊಲೀಸರು ಸಾಕಷ್ಟು ಶೋಧ ನಡೆಸಿದ್ದರು. ಬಳಿಕ ವೈಯಾಲಿಕಾವಲ್ನಲ್ಲಿರುವ ಆತನ ಮನೆಯ ಮೇಲೆ ದಾಳಿ ನಡೆಸಿ, ಆತನನ್ನು ಬಂಧಿಸಲಾಗಿತ್ತು.
ಇದಲ್ಲದೆ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಮುರಿದು ಬಿದ್ದಿರುವ ಪೊಲೀಸ್ ಇಲಾಖೆ ವಿದೇಶಿ ಪ್ರಜೆಗಳು ಸೇರಿದಂತೆ ನಗರದ ಅನೇಕ ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಇದಲ್ಲದೆ ಸ್ಯಾಂಡಲ್ ವುಡ್ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರನ್ನು ಬಂಧಿಸಿ ಇದೇ ಪರಪ್ಪನ ಅಗ್ರಹಾರದಲ್ಲಿ ಬಂಧಿಸಲಾಗಿದೆ. ಈ ನಡುವೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ವೈಭವ್ ಜೈನ್ ಯಾರು ಎಂಬ ಸುದ್ದಿ ಇದೀಗ ದೊಡ್ಡ ಸದ್ದು ಮಾಡುತ್ತಿದೆ.