• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Dowry: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ; ಕಲಬುರಗಿಯಲ್ಲಿ ತಂದೆಯಿಂದಲೇ ಮಗಳ ಅತ್ಯಾಚಾರ

Dowry: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ; ಕಲಬುರಗಿಯಲ್ಲಿ ತಂದೆಯಿಂದಲೇ ಮಗಳ ಅತ್ಯಾಚಾರ

ಗುರುಪ್ರಸಾದ್ ಮತ್ತು ಮಾಧುರಿ

ಗುರುಪ್ರಸಾದ್ ಮತ್ತು ಮಾಧುರಿ

ಎರಡು ದಿನದ ಹಿಂದೆ ಬಾಲಕಿ ಸತತವಾಗಿ ವಾಂತಿ ಮಾಡಿಕೊಂಡಿದ್ದಾಳೆ. ಹೀಗಾಗಿ ಜನವರಿ 31ರಂದು ತಾಯಿ ಮಗಳನ್ನು ಆಸ್ಪತ್ರೆಗೆ ಕರೆ ತಂದಿದ್ದರು. ತಪಾಸಣೆ ವೇಳೆ ಬಾಲಕಿ ಗರ್ಭಿಣಿ ಎಂಬ ವಿಷಯ ಬಯಲಾಗಿದೆ. ಈ ವೇಳೆ ತಂದೆಯೇ ತನ್ನ ಮೇಲೆ ಅತ್ಯಾಚಾರ ನಡೆಸಿರುವ ವಿಷಯವನ್ನು ತಿಳಿಸಿದ್ದಾಳೆ.

  • Share this:

ಬೆಂಗಳೂರು: ವರದಕ್ಷಿಣೆ ಕಿರುಕುಳ ಹಿನ್ನೆಲೆ ಗೃಹಿಣಿ (Woman) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಬೆಂಗಳೂರಿನಲ್ಲಿ (Bengaluru) ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ರೆ, ಕಲಬುರಗಿಯಲ್ಲಿ (Kalburagi Case) ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ಎಸಗಲಾಗಿದೆ. ಮಾಧುರಿ (26) ವಿಷ‌ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 2016ರಲ್ಲಿ ಗುರುಪ್ರಸಾದ್ ಎಂಬಾತನನ್ನ ಮಾಧುರಿ ಮದುವೆಯಾಗಿದ್ದರು (Marriage). ಮದುವೆಯಾದ ಮೇಲೆ ಮಾಧುರಿಗೆ ಕಿರುಕುಳ ನೀಡ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ವರದಕ್ಷಿಣೆ ಕಿರುಕುಳದ (Dowry Case) ಜೊತೆಗೆ ಹಲ್ಲೆ ಮಾಡ್ತಿದ್ದಾಗಿ ಮಾಧುರಿ ಕುಟುಂಬಸ್ಥರ ಆರೋಪ ಮಾಡಿದ್ದಾರೆ.


ಕೂಡಲೇ ವಿಷ ಸೇವಿಸಿದ್ದ ಮಾಧುರಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾಧುರಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೂರು ವರ್ಷದ ಬಾಲಕಿಯ ಕೊಲೆ, ಅತ್ಯಾಚಾರ


ಬೆಂಗಳೂರಿನಲ್ಲಿ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜನವರಿ 31ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


husband cut his wife s hair and beat her because he found her hair in the meal
ಪ್ರಾತಿನಿಧಿಕ ಚಿತ್ರ (ಚಿತ್ರ: Internet)


22 ವರ್ಷದ ಯುವಕ ಅತ್ಯಾಚಾರ ಎಸಗಿದ್ದನೆ ಎಂಬ ಆರೋಪ ಕೇಳಿ ಬಂದಿದ್ದು, ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಆರೋಪಿ ಯುವಕ ಬಾಲಕಿಗೆ ಪರಿಚಯಸ್ಥ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.


ಕಲಬುರಗಿ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ


ತಂದೆಯೇ 13 ವರ್ಷದ ಮಗಳ ಮೇಲೆ  ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಂದೆಯ ನೀಚ ಕೃತ್ಯಕ್ಕೆ ಬಲಿಯಾದ ಬಾಲಕಿ ಸದ್ಯ ಎಂಟು ತಿಂಗಳ ಗರ್ಭಿಣಿ. ಬಾಲಕಿ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.


ಎರಡು ದಿನದ ಹಿಂದೆ ಬಾಲಕಿ ಸತತವಾಗಿ ವಾಂತಿ ಮಾಡಿಕೊಂಡಿದ್ದಾಳೆ. ಹೀಗಾಗಿ ಜನವರಿ 31ರಂದು ತಾಯಿ ಮಗಳನ್ನು ಆಸ್ಪತ್ರೆಗೆ ಕರೆ ತಂದಿದ್ದರು. ತಪಾಸಣೆ ವೇಳೆ ಬಾಲಕಿ ಗರ್ಭಿಣಿ ಎಂಬ ವಿಷಯ ಬಯಲಾಗಿದೆ. ಈ ವೇಳೆ ತಂದೆಯೇ ತನ್ನ ಮೇಲೆ ಅತ್ಯಾಚಾರ ನಡೆಸಿರುವ ವಿಷಯವನ್ನು ತಿಳಿಸಿದ್ದಾಳೆ.


ಇದನ್ನೂ ಓದಿ:  Bengaluru: ಮಾಜಿ ಪತಿ ಕೊಲೆಗೆ 10 ಲಕ್ಷಕ್ಕೆ ಸುಪಾರಿ; ಉಲ್ಟಾ ಹೊಡೆದ ಹಂತಕರು, ಮುಂದೇನಾಯ್ತು?


ಈ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.
ವಿಜಯಪುರ: ವಿವಾಹಿತೆ ಜೊತೆ ಸಿಕ್ಕಬಿದ್ದ ಯುವಕ


ಅಕ್ರಮ ಸಂಬಂಧ (Illegal Relationship) ಹೊಂದಿದ್ದ ಜೋಡಿ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಮಹಿಳೆಯ ಸಂಬಂಧಿಕರು ಈ ಜೋಡಿಯನ್ನು ಜಮೀನಿನಲ್ಲಿ ಕಟ್ಟಿ ಹಾಕಿ ಥಳಿಸಿದ್ದು, ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.


13 year old girl pregnant in jevargi kalburagi mrq
ಸಾಂದರ್ಭಿಕ ಚಿತ್ರ


ಜಿಲ್ಲೆಯ ಬಸವನ ಬಾಗೇವಾಡಿ (Basavana Bagewadi) ತಾ. ಹತ್ತರಕಿಹಾಳ ಗ್ರಾಮದಲ್ಲಿ ಸಂಗಪ್ಪ ಹೂಗಾರ್ ಮತ್ತು ವಿವಾಹಿತ ಮಹಿಳೆ ಏಕಾಂತದಲ್ಲಿ ಇದ್ದಾಗಲೇ ಸಿಕ್ಕಿಬಿದ್ದಿದ್ದಾರೆ.


ವಿಡಿಯೋ ವೈರಲ್ 


ಈ ಘಟನೆ ಜನವರಿ 19ರಂದು ನಡೆದಿದ್ದು ವಿಡಿಯೋ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಏಕಾಂತದಲ್ಲಿದ್ದಾಗಲೇ ಸಿಕ್ಕಿಬಿದ್ದ ಸಂಗಪ್ಪ ಹೂಗಾರ್ ಹಾಗೂ ವಿವಾಹಿತ ಮಹಿಳೆಯನ್ನು ಆಕೆಯ ಸಂಬಂಧಿಕರು ಪಕ್ಕದ ದೇಗಿನಾಳ ಗ್ರಾಮಕ್ಕೆ ಹೊತ್ತೊಯ್ದು ಕಟ್ಟಿ ಹಾಕಿ ಥಳಿಸಿದ್ದಾರೆ ಎನ್ನಲಾಗಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು