• Home
  • »
  • News
  • »
  • state
  • »
  • ಬೆಳ್ತಂಗಡಿಯಲ್ಲಿ ಬೆಳ್ಳಂಬೆಳಗ್ಗೆ ಭಾರೀ ದರೋಡೆ; ಮನೆಯವರನ್ನು ಕಟ್ಟಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿ

ಬೆಳ್ತಂಗಡಿಯಲ್ಲಿ ಬೆಳ್ಳಂಬೆಳಗ್ಗೆ ಭಾರೀ ದರೋಡೆ; ಮನೆಯವರನ್ನು ಕಟ್ಟಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಳ್ತಂಗಡಿ ತಾಲೂಕಿನ ಕಲ್ಮಂಜದ ಗ್ರಾಮದ ನೀರಚಿಲುಮೆ ಎಂಬಲ್ಲಿ ಘಟನೆ ನಡೆದಿದೆ. ಇಂದು ಮುಂಜಾನೆ ಮುಸುಕುಧಾರಿ ದರೋಡೆಕೋರರ ತಂಡ ಮನೆಗೆ ನುಗ್ಗಿದೆ.

  • Share this:

ಬೆಳ್ತಂಗಡಿ (ಜೂ.26): ದರೋಡೆಕೋರರ ಅಟ್ಟಹಾಸಕ್ಕೆ ದಕ್ಷಿಣ ಕನ್ನಡದ ಬೆಳ್ತಂಗಡಿ ಬೆಚ್ಚಿಬಿದ್ದಿದೆ. ಮುಂಜಾನೆ ಮುಸುಕುಧಾರಿಗಳು ಮನೆಯೊಳಗೆ ನುಗ್ಗಿ ಅಪಾರ ಪ್ರಮಾಣದ ನಗ-ನಾಣ್ಯ ದೋಚಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಲ್ಮಂಜದ ಗ್ರಾಮದ ನೀರಚಿಲುಮೆ ಎಂಬಲ್ಲಿ ಘಟನೆ ನಡೆದಿದೆ. ಇಂದು ಮುಂಜಾನೆ ಮುಸುಕುಧಾರಿ ದರೋಡೆಕೋರರ ತಂಡ ಮನೆಗೆ ನುಗ್ಗಿದೆ. ಮನೆಯೊಳಗೆ ನುಗ್ಗುತ್ತಿದ್ದಂತೆ ಈ ತಂಡ ಶಸ್ತ್ರಾಸ್ತ್ರ ತೋರಿಸಿ ಮನೆ ಮಂದಿಯನ್ನು ಕಟ್ಟಿ ಹಾಕಿದೆ. ನಂತರ ಮನೆಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದೆ.

40 ಪವನ್ ಚಿನ್ನ, 1 ಕಿಲೋ ಬೆಳ್ಳಿ, 25 ಸಾವಿರ ನಗದು ಲೂಟಿ ಮಾಡಲಾಗಿದೆ. ಇದರ ಮೌಲ್ಯ ಸುಮಾರು 13 ಲಕ್ಷ ಎಂದು ಅಂದಾಜು ಮಾಡಲಾಗಿದೆ. ಅಚ್ಚುತ ಭಟ್ ಮನೆಯ ಮಾಲೀಕರಾಗಿದ್ದು ಇವರು ಉಜಿರೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದರು.  ಪೋಲೀಸರಿಂದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಇದನ್ನೂ ಓದಿ:  5 ಲಕ್ಷ ಸಮೀಪಿಸಿದ ದೇಶದ ಕೊರೋನಾ ಪೀಡಿತರ ಸಂಖ್ಯೆ; ಒಂದೇ ದಿನ 17,296 ಕೇಸುಗಳು ಪತ್ತೆ; ಈವರೆಗೆ 15 ಸಾವಿರ ಮಂದಿ ಬಲಿ


ಬೆಳ್ತಂಗಡಿ ಭಾಗದಲ್ಲಿ ಈ ರೀತಿಯ ದರೋಡೇ ತುಂಬಾನೇ ಅಪರೂಪ. ಈಗ ಈ ಭಾಗದಲ್ಲಿ ಇಷ್ಟು ದೊಡ್ಡ ದರೋಡೆ ನಡೆದಿರುವುದು ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲದೆ, ದರೋಡೆ ಮಾಡಿದವರು ಹೊರಗಿನವರೋ ಅಥವಾ ಸ್ಥಳೀಯರೋ ಎನ್ನುವ ಪ್ರಶ್ನೆಯೂ ಮೂಡಿದೆ.

First published: