ಬೆಂಗಳೂರು (ಅ.19): ಪೋಟೊ ಫ್ರೇಮ್, ಪೋಟೊ ಅಲ್ಬಮ್ ಮತ್ತು ಬಳೆಗಳ ಮೂಲಕ ಸುಮಾರು 13 ಕೋಟಿ ಮೌಲ್ಯದ ಡ್ರಗ್ಸ್ನ್ನು ಕಳ್ಳಸಾಗಣೆ ಮಾಡಲಾಗುತ್ತಿದ್ದು, ಇದನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕಳೆದ ವಾರ ಚೈನ್ನೈನಿಂದ ಬೆಂಗಳೂರು ಮಾರ್ಗದ ಮೂಲಕ ಈಗಾಗಲೇ ಸಿಂಗಾಪುರಕ್ಕೆ ಈ ಡ್ರಗ್ಸ್ ಸಾಗಟ ಮಾಡಲಾಗಿತ್ತು. ಇದಾದ ಬಳಿಕ ವಿಮಾನದಲ್ಲಿ ಡ್ರಗ್ಸ್ ಸಾಗಣೆ ಮಾಡಿರುವ ಬಗ್ಗೆ ಆಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದ್ದು, ಅದನ್ನು ಇದೀಗ ವಾಪಸ್ ತರಿಸಿಕೊಳ್ಳಲಾಗಿದೆ.
ಈ ಕುರಿತು ಮಾತನಾಡಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು, ಸೊಡೊಫೆಡ್ರಿನ್ ಎಂಬ ಮಾದಕ ದ್ರವ್ಯವನ್ನು ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ನಮಗ ಮಾಹಿತಿ ಬಂದಿತು. ಈ ಹೊತ್ತಿಗೆ ಈ ಮಾದಕದ್ರವ್ಯ ಸಿಂಗಾಪೂರ ತಲುಪಿದ್ದವು. ಈಗ ಅವನ್ನು ವಾಪಸ್ ತರಿಸಿಕೊಳ್ಳಲಾಗಿದೆ ಎಂದರು. ಸುಮಾರು 13.2 ಕೋಟಿ ಮೌಲ್ಯದ ಈ ಮಾದಕ ದ್ರವ್ಯಗಳನ್ನು ಮೆಥಾಂಫೆಟಮೈನ್ ಸೇರಿದಂತೆ ಹಲವಾರು ಮಾದಕ ವಸ್ತುಗಳ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತದೆ. ಈ ಸೊಡೊಫೆಡ್ರಿನ್ ಎನ್ಡಿಪಿಎಸ್ ಕಾಯ್ದೆ ಪ್ರಕಾರ ನಿಯಂತ್ರಿತ ವಸ್ತುವಾಗಿದೆ.
ಫೋಟೋ ಫ್ರೇಮ್, ಬಳೆ ಸೇರಿದಂತೆ ಹಲವು ವೈಯಕ್ತಿಕ ವಸ್ತುಗಳಲ್ಲಿ ಈ ಮಾದಕ ದ್ರವ್ಯಗಳನ್ನು ಅಡಗಿಸಿಡಲಾಗಿದೆ. ಇದನ್ನು ನೋಡಿದಾಕ್ಷಣ ಯಾವುದೋ ಕುಟುಂಬದ ವಸ್ತುಗಳಂತೆ ಇದ್ದು ಅನುಮಾನ ಬಾರದಂತೆ ನೋಡಿಕೊಳ್ಳಲಾಗಿದೆ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಫೋಟೋ ಆಲ್ಬಮ್ನ ಕವರ್, ಹಾಗೂ ಫ್ರೇಮ್ಗಳು ದಪ್ಪ ಇರುವುದು ಕಂಡು ಬಂದಿದೆ. ಅದರ ಮೂಲಕ ಇದನ್ನು ಸಾಗಣೆ ಮಾಡಲಾಗಿದೆ,
ಇನ್ನು ಈ ಸೊಡೊಫೆಡ್ರಿನ್ ಎಂಬ ವಸ್ತುವು ಮಾರುಕಟ್ಟೆಯಲ್ಲಿ ಕೆ.ಜಿಗೆ 1 ಕೋಟಿ ಮೌಲ್ಯವುಳ್ಳದ್ದಾಗಿದೆ. ಇವನ್ನು ಆಸ್ಟೇಲಿಯಾದಲ್ಲಿ ಮಾದಕ ದ್ರವ್ಯಗಳ ಬಳಕೆಗೆ ಉಪಯೋಗಿಸಿಕೊಳ್ಳಲಾಗುತ್ತಿತ್ತು.
ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದ ಪ್ರಕರಣದಲ್ಲಿ ಇದು ದೊಡ್ಡದಾಗಿದೆ, ಲಾಕ್ಡೌನ್ ವಿಧಿಸಲಾಗಿದ್ದರೂ ವಿಮಾನಗಳ ಮೂಲಕ ಡ್ರಗ್ಸ್ ಸಾಗಾಣೆ ಪ್ರಕರಣಗಳು ಕಂಡು ಬರುತ್ತಲೇ ಇದೆ, ಈ ಹಿಂದೆ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಈ ಡ್ರಗ್ಸ್ಗಳನ್ನು ಸಾಗಾಟ ಮಾಡುವ ಪ್ರಯತ್ನ ನಡೆದಿತ್ತು. ಮೂರು ವಾರಗಳ ಹಿಂದಷ್ಟೇ 25ಕೆಜಿಯ ಸಿಡಿಫೆಡ್ರಿನ್ ಅನ್ನು ಚೆನ್ನೈನ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಆ ಘಟನೆ ಬೆನ್ನಲ್ಲೇ ಈಗ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ