HOME » NEWS » State » 12TH BENGALURU INTERNATIONAL FILM FEST INAUGURATION TODAY ASN HK

12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

ಇಂದಿನಿಂದ ಫೆಬ್ರುವರಿ 26 ರವರೆಗೆ 8 ದಿನಗಳವರೆಗೆ ನಡೆಯಲಿರುವ ಚಲನಚಿತ್ರೋತ್ಸವದಲ್ಲಿ 60 ರಾಷ್ಟ್ರಗಳ 200 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

news18-kannada
Updated:February 26, 2020, 11:09 PM IST
12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ
ಚಲನಚಿತ್ರೋತ್ಸವಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು
  • Share this:
ಬೆಂಗಳೂರು(ಫೆ.26) : ಅಂತಾರಾಷ್ಟ್ರೀಯ ಸಿನಿಮಾಗಳನ್ನು ನೋಡಲು ಬಯಸುವ ಸಿನಿ ಪ್ರಿಯರಿಗಿದು ರಸದೌತಣ. ಇಂದಿನಿಂದ 8 ದಿನಗಳ ಕಾಲ ನಡೆಯುವ ಅಂತಾರಾಷ್ಟ್ರೀಯ ಚಲಚಿತ್ರೋತ್ಸವಕ್ಕೆ ಇಂದು ಚಾಲನೆ ದೊರೆತಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಸಂಜೆ ಸಿನಿಮೋತ್ಸವ ಉದ್ಘಾಟನೆ ಮಾಡಿದರು. 

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನೆ ಕಾರ್ಯಕ್ರಮದಲ್ಲಿ, ಬಾಲಿವುಡ್ ಗಾಯಕ ಸೋನು ನಿಗಮ್, ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್, ನಟ ಯಶ್ ಹಾಗೂ ಹಿರಿಯ ನಟಿ ಜಯಪ್ರದಾ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ಇಂದಿನಿಂದ ಫೆಬ್ರುವರಿ 26 ರವರೆಗೆ 8 ದಿನಗಳವರೆಗೆ ನಡೆಯಲಿರುವ ಚಲನಚಿತ್ರೋತ್ಸವದಲ್ಲಿ 60 ರಾಷ್ಟ್ರಗಳ 200 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಸಿನಿಮಾಗಳ ಪ್ರದರ್ಶನವನ್ನು ರಾಜಾಜಿನಗರದಲ್ಲಿರುವ ಒರಾಯನ್​ ಮಾಲ್​ನ 11 ಪರದೆಗಳಲ್ಲಿ ಹಾಗೂ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಸಿನಿಮಾ ಕಲಾವಿದರ ಸಂಘದ ನೂತನ ಕಟ್ಟಡದಲ್ಲಿರುವ ಥಿಯೇಟರ್​ನಲ್ಲಿ 400 ಪ್ರದರ್ಶನಗಳು ನಡೆಯಲಿವೆ.

ಇದನ್ನೂ ಓದಿ :  ನಿಮ್ಮ ಅಭಿಮಾನವೇ ದೊಡ್ಡ ಉಡುಗೊರೆ; ಹುಟ್ಟುಹಬ್ಬಕ್ಕೆ ಹಾರ-ತುರಾಯಿ ಬೇಡ ಎಂದ ಬಿಎಸ್​ವೈ

ತುಳು, ಬಂಜಾರ, ಕೊಡವ, ಕೊಂಕಣಿ, ಪಣಿಯ, ಇರುಳ, ಖಾಸಿ ಮತ್ತು ಪೆಂಗ್ ಚೆನ್ಪ ಸಹಿತ ವಿವಿಧ ಭಾಷೆಗಳ ಚಿತ್ರಗಳು ಪ್ರದರ್ಶನಗೊಳ್ಳದ್ದು, ನಾಳೆಯಿಂದ ಚಿತ್ರ ಪ್ರದರ್ಶನಗಳು ನಡೆಯಲಿವೆ.

ಮೊದಲ ದಿನ ಪ್ರದರ್ಶನ ಆಗುವ ಕನ್ನಡ ಸಿನಿಮಾಗಳು 

ಮಿಂಚಿನ ಓಟ (ಒರಾಯನ್ ಮಾಲ್), ಒಂದು ಶಿಕಾರಿಯ ಕಥೆ (ನವರಂಗ್), ಭಿನ್ನ (ಒರಾಯನ್ ಮಾಲ್), ಅಬ್ಯಂಜನ (ಒರಾಯನ್ ಮಾಲ್), ನಟ ಸಾರ್ವಭೌಮ (ಒರಾಯನ್ ಮಾಲ್), ಕಾಳಿದಾಸ ಕನ್ನಡ ಮೇಷ್ಟ್ರು (ಒರಾಯನ್ ಮಾಲ್), ಐ ಲವ್ ಯೂ (ಕಲಾವಿದರ ಸಂಘ), ಸುಗಂಧಿ (ನವರಂಗ್), ಸವರ್ಣದೀರ್ಘ ಸಂಧಿ (ನವರಂಗ್)ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ 3, ಬನಶಂಕರಿಯ ಸುಚಿತ್ರದಲ್ಲಿ 3, ಡಾ ರಾಜ್ ಕುಮಾರ್ ರಸ್ತೆಯಲ್ಲಿರುವ ನವರಂಗ್ ಚಿತ್ರಮಂದಿರದಲ್ಲಿ 4 ಸಿನಿಮಾಗಳು ಗುರುವಾರ ಪ್ರದರ್ಶನ ಆಗಲಿದೆ
First published: February 26, 2020, 10:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading