News18 India World Cup 2019

ಈ ವರ್ಷದ ಮಳೆಗೆ ದೇಶದಲ್ಲಿ 1,276 ಬಲಿ; ಕೇರಳವೊಂದರಲ್ಲೇ 443 ಸಾವು

news18
Updated:August 27, 2018, 8:17 PM IST
ಈ ವರ್ಷದ ಮಳೆಗೆ ದೇಶದಲ್ಲಿ 1,276 ಬಲಿ; ಕೇರಳವೊಂದರಲ್ಲೇ 443 ಸಾವು
Alappuzha: NDRF personnel hold rescue and evacuation drive at flood-affected regions in Chengannur taluk of Alappuzha on Sunday, Aug 19, 2018. (NDRF Twitter via PTI) (PTI8_19_2018_000159B)
news18
Updated: August 27, 2018, 8:17 PM IST
ನ್ಯೂಸ್​18 ಕನ್ನಡ

ನವದೆಹಲಿ (ಆ. 27): ಈ ವರ್ಷದ ಭಾರೀ ಮಳೆಗೆ ದೇಶದಲ್ಲಿ 1,276 ಜನರು ಸಾವನ್ನಪ್ಪಿದ್ದಾರೆ. ಈ ಬಾರಿ ಸಂಭವಿಸಿದ ಪ್ರವಾಹದಲ್ಲಿ ಕೇರಳವೊಂದರಲ್ಲೇ 443 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಗೃಹ ಸಚಿವಾಲಯದ ಎನ್​ಇಆರ್​ಸಿ ಪ್ರಕಾರ, ಕೇರಳದಲ್ಲಿ 443 ಜನ ಜೀವ ಕಳೆದುಕೊಂಡಿದ್ದಾರೆ. ಇಲ್ಲಿನ 14 ಜಿಲ್ಲೆಗಳ 54.11 ಲಕ್ಷ ಜನರು ಮಳೆ ಮತ್ತು ಪ್ರವಾಹದ ಹೊಡೆತಕ್ಕೆ ನಲುಗಿಹೋಗಿದ್ದಾರೆ. 47,727 ಹೆಕ್ಟೇರ್​ ಪ್ರದೇಶದ ಕೃಷಿ ಜಮೀನು ಕೊಚ್ಚಿಹೋಗಿದೆ ಎಂದು ವರದಿ ನೀಡಿದೆ. ಇಲ್ಲಿನ 14.52 ಲಕ್ಷ ಜನರು ನಿರಾಶ್ರಿತ ಕೇಂದ್ರಗಳಲ್ಲಿ ಆಸರೆ ಪಡೆದಿದ್ದಾರೆ.

ಉಳಿದಂತೆ, ಉತ್ತರ ಪ್ರದೇಶದಲ್ಲಿ 218, ಪಶ್ಚಿಮ ಬಂಗಾಳದಲ್ಲಿ 198, ಕರ್ನಾಟಕದಲ್ಲಿ 166, ಮಹಾರಾಷ್ಟ್ರದಲ್ಲಿ 139, ಗುಜರಾತ್​ನಲ್ಲಿ 52, ಅಸ್ಸಾಂನಲ್ಲಿ 49 ಮತ್ತು ನಾಗಾಲ್ಯಾಂಡ್​ನಲ್ಲಿ 11 ಜನರು ಮಳೆಯಿಂದಾಗಿ ಸಾವನ್ನಪ್ಪಿದ್ದಾರೆ.ದೇಶದಲ್ಲಿ ಮಳೆಯ ಕಾರಣದಿಂದ 37 ಜನ ನಾಪತ್ತೆಯಾಗಿದ್ದಾರೆ. ಕೇರಳದಲ್ಲಿ 15, ಉತ್ತರಪ್ರದೇಶದಲ್ಲಿ 14, ಪಶ್ಚಿಮ ಬಂಗಾಳದಲ್ಲಿ 5, ಕರ್ನಾಟಕದಲ್ಲಿ ಮೂವರು ಕಾಣೆಯಾಗಿದ್ದಾರೆ. 349 ಜನರಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Loading...

2005ರವರೆಗೆ ಪ್ರವಾಹಕ್ಕೆ ಪ್ರತಿವರ್ಷ 1,600 ಜನರು ಬಲಿಯಾಗಿದ್ದಾರೆ. 4,745 ಕೋಟಿ ಮೌಲ್ಯದ ಬೆಳೆ, ಆಸ್ತಿ-ಪಾಸ್ತಿ ನಷ್ಟವಾಗಿದೆ.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...