Puttur: ಕಾರು, ಲಾರಿ, ಟಿಪ್ಪರ್ ಎಲ್ಲಾ ಓಡಿಸ್ತಾನೆ ಈ 12ರ ಪೋರ! ಈತನ ಹೊಸ ಆವಿಷ್ಕಾರಕ್ಕೆ ಜನರು ಫಿದಾ

ಎರಡು ವರ್ಷಗಳ ಕೊರೋನ ರಜೆಯ ಸಂದರ್ಭ ಎಲ್ಲಾ ಮಕ್ಕಳಂತೆ ಮೊಬೈಲ್ ಕೈಗೆತ್ತಿಕೊಂಡವನೇ ಗೇಮ್‌ಗಳ ಕಡೆ ಗಮನಹರಿಸದೆ ವಿಜ್ಞಾನಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಹುಡುಕಲು ಆರಂಭಿಸಿದ. ನಾನೂ ಹೊಸದಾಗಿ ಏನಾದರೂ ಆವಿಷ್ಕಾರಿಸಬೇಕೆಂದು ಯೋಚನೆ ಮಾಡಿಕೊಂಡಿದ್ದ.

ತನ್ನ ಆವಿಷ್ಕಾರದ ಜೊತೆ ಧ್ಯಾನ್

ತನ್ನ ಆವಿಷ್ಕಾರದ ಜೊತೆ ಧ್ಯಾನ್

  • Share this:
ಪುತ್ತೂರು(ಜು.07): ಕೊರೋನ ಕಾಲದಲ್ಲಿ ಶಾಲೆಯು (School) ಇಲ್ಲದೆ, ಮನೆಯಿಂದ ಹೊರಗೂ ಬಾರದೆ ಮನೆಯಲ್ಲೇ ಕೂತು ಮೊಬೈಲ್ ಚಟಕ್ಕೆ (Mobile Addict) ಮಕ್ಕಳು ಹಾಳಾದರೆಂದು ಬೊಬ್ಬಿಡುವ ಪೋಷಕರೇ ಹೆಚ್ಚು.ಇದಕ್ಕೆ ಅಪವಾದ ಎಂಬಂತೆ ಇಲ್ಲೊಬ್ಬ 12 ರ ಪೋರ (Boy) ರಜಾ ದಿನಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಹೊಸ ಆವಿಷ್ಕಾರಗಳಿಗೆ ಮಣೆ ಹಾಕಿದ್ದಾನೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ಧ್ಯಾನ್ (Dhyan) ಈ ರೀತಿಯ ಆವಿಷ್ಕಾರದಲ್ಲಿ ನಿರತ ಪೋರ.  ಅರೆಗಳಿಗೆಯೂ ಸುಮ್ಮನಿರದ ಪಾದರಸದಂತೆ ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಧ್ಯಾನ್  ಕೊಕ್ಕಡದ ರಕ್ತೇಶ್ವರಿ ಪೆಟ್ರೋ ಪಾಯಿಂಟ್ ಮಾಲಕ ನಾರಾಯಣ ಗೌಡ ಹಾಗೂ ಧ್ಯಾನ್ ದಿಯಾ ಕೆಫೆ ಮಾಲಕಿ ಶೋಭವತಿ ದಂಪತಿಗಳ ಪುತ್ರ.

ಎರಡು ವರ್ಷಗಳ ಕೊರೋನ ರಜೆಯ ಸಂದರ್ಭ ಎಲ್ಲಾ ಮಕ್ಕಳಂತೆ ಮೊಬೈಲ್ ಕೈಗೆತ್ತಿಕೊಂಡವನೇ ಗೇಮ್‌ಗಳ ಕಡೆ ಗಮನಹರಿಸದೆ ವಿಜ್ಞಾನಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಹುಡುಕಲು ಆರಂಭಿಸಿದ. ನಾನೂ ಹೊಸದಾಗಿ ಏನಾದರೂ ಆವಿಷ್ಕಾರಿಸಬೇಕೆಂದು ಯೋಚನೆ ಮಾಡಿಕೊಂಡಿದ್ದ. ತತ್ಫಲವಾಗಿ ಈತನೇ ತಯಾರಿಸಿದ ಹಿಟಾಚ್, ರೈಸ್ ಮಿಲ್, ಏರ್ ಕೂಲರ್ ಮಾಡೆಲ್‌ಗಳು ಈತನ ಕೈಯಿಂದ  ಮೂಡಿಬಂದಿದೆ.

ಬಿಡುವಿನ ವೇಳೆಯಲ್ಲಿ ಹೊಸ ಹೊಸ ಆವಿಷ್ಕಾರ

ನಿಜವಾದ ಹಿಟಾಚನ್ನೇ ಹೋಲುವ  ಅದರಂತೆ ರ್ಯನಿರ್ವಹಿಸುವ ಮಾದರಿಯೊಂದನ್ನು ತಯಾರಿಸಿ ಪ್ರಯೋಗಕ್ಕಿಳಿಸಿದ್ದಾನೆ. ರೈಸ್ ಮಿಲ್ಲರ್ ನಲ್ಲಿ ಅಕ್ಕಿ ಹಾಕಿದೊಡನೆ ಅಕ್ಕಿ ಹಿಟ್ಟು ತಯಾರಾಗುವಂತೆಯೂ, ಸೆಕೆಗಾಲದಲ್ಲಿ ಸೆಕೆಯನ್ನು ತಣಿಸಲು ಏರ್ ಕೂಲರ್‌ಗಳನ್ನು ಕೂಡ ತಯಾರಿಸಿದ್ದಾನೆ. ಕೇವಲ ಹವ್ಯಾಸವಾಗಿ ಅಭ್ಯಾಸ ಮಾಡಿಕೊಂಡ ಈ ಪೋರ ತನ್ನ ಬಿಡುವಿನ ವೇಳೆಯಲ್ಲಿ ಈ ಬಗ್ಗೆ ಹೆಚ್ಚು ಗಮನಹರಿಸಿ ಹೊಸ ಹೊಸ ಆವಿಷ್ಕಾರದತ್ತ ಮನ ಮಾಡುತ್ತಿದ್ದಾನೆ.

ಕಾರುಗಳೆಂದರೆ ಭಾರೀ ಇಷ್ಟ

12 ರ ಈ ಪೋರನಿಗೆ ಕಾರುಗಳೆಂದರೆ ಪ್ರಾಣ. ಕಾರು ಓಡಿಸುತ್ತಾನೆ. ಅಲ್ಲದೆ ನಿಜವಾದ ಹಿಟಾಚನ್ನು ಆಪರೇಟ್ ಮಾಡುತ್ತಾನೆ. ಲಾರಿ ಟಿಪ್ಪರ್ ಗಳನ್ನು ಕೂಡ ಚಲಾಯಿಸುತ್ತಾನೆ. ಕ್ರೀಡೆಯಲು ಸದಾ ಮುಂದಿರುವ ಈತ ಸುಂದರವಾದ ಚಿತ್ರಗಳನ್ನು ಕೂಡಾ ಬಿಡಿಸುತ್ತಾನೆ. ಯಕ್ಷಗಾನದ ಪಕ್ಕ ವಾದ್ಯವಾದ ಚೆಂಡೆಯನ್ನು ಕೂಡ ಅಭ್ಯಾಸಿಸುವ ಈತ ಹೊಸ ಹೊಸ ತರಹದ ಕಲಿಕೆಯಲ್ಲಿ ಸದಾ ತಲ್ಲೀನನಾಗುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಕಿಂಚಿತ್ತು ಕೊಡುಗೆಯನ್ನು ನೀಡಬೇಕು ಎನ್ನುವ ನಿಟ್ಟಿನಲ್ಲಿ ಸಾಧನೆಯಲ್ಲಿ ತೊಡಗಿಕೊಂಡಿದ್ದಾನೆ.

ಇದನ್ನೂ ಓದಿ: Karnataka Weather Report: ಮೂರು ಜಿಲ್ಲೆಗೆ ರೆಡ್ ಅಲರ್ಟ್, ನಾಲ್ಕು ಜಿಲ್ಲೆಗೆ ಆರೆಂಜ್; ರಜೆ ವಿಸ್ತರಣೆ

ರಟ್ಟುಗಳು, ಡಿಸಿ ಮೋಟಾರ್, ಬ್ಯಾಟರಿ, ಇಂಜೆಕ್ಷನ್ ಗೆ ಉಪಯೋಗಿಸುವ ಸಿರಿಂಜ್ ಪೈಪುಗಳು, ಗ್ಲುಕೋಸ್ ವಯರ್ ಗಳು, ಮೈಕ್ರೋ ಸ್ವಿಚ್ ಗಳನ್ನು ಈ ಸಾಧನದಲ್ಲಿ ಬಳಸಲಾಗಿದೆ. 12  ವ್ಯಾಟ್‌ ನ ಬ್ಯಾಟರಿ ಇರುವ ಈ ಸಾಧನದಲ್ಲಿ 6 ಮೈಕ್ರೋ ಸ್ವಿಚ್ ಗಳಿವೆ. 3 ಡಿಸಿ ಮೋಟಾರ್‌ಗಳಿವೆ. 2 ಸಣ್ಣ ಕಡ್ಡಿಗಳನ್ನು ಹಿಟಾಚಿನ ಚಕ್ರಗಳಿಗೆ ಸಂಪರ್ಕಿಸಿ, ಚಾಲಕನ ಜಾಗದಲ್ಲಿ 2 ಮೈಕ್ರೋ ಸ್ವಿಚ್ ಗಳನ್ನು ಅಳವಡಿಸಲಾಗಿದೆ.

ಪ್ರತಿಯೊಂದು ಸ್ವಿಚ್ ಗೂ ನಂಬರ್

ಪ್ರತಿಯೊಂದು ಸ್ವಿಚ್ ಗೂ ನಂಬರ್ ಗಳನ್ನು ಕೊಡಲಾಗಿದ್ದು, ಸ್ವಿಚ್ ಗಳ ಮೂಲಕವೇ ಹಿಟಾಚಿ ಮುಂದೆ, ಹಿಂದೆ, ಎಡ, ಬಲ ಚಲಿಸಲು ಅನುಕೂಲ ಮಾಡಿ ಕೊಡಲಾಗಿದೆ. ಉಳಿದ ಸ್ವಿಚ್ ಹಿಟಾಚಿನ ಬಕೆಟ್ ಭಾಗವನ್ನು ಮೇಲೆ ಕೆಳಗೆ ಮಾಡಲು, ಭಾರ ಎತ್ತಲು, ಗುಂಡಿ ತೆಗೆಯಲು ಸಹಕರಿಸುತ್ತದೆ.

ಇದನ್ನೂ ಓದಿ: Zameer Ahmed: ಅಕ್ರಮ ಆಸ್ತಿ ಗಳಿಸಿದ್ದಾರಾ ಜಮೀರ್ ಅಹ್ಮದ್? ಎಸಿಬಿ ದಾಳಿ ವೇಳೆ ಸ್ಫೋಟಕ ಮಾಹಿತಿ

ಏನಾದರೂ ಹೊಸದನ್ನು ತಯಾರಿಸಬೇಕೆಂದು ಆಸೆ ಪಡ್ತಾನೆ ರ‍್ತೇನೆ. ಚೆನ್ನಾಗಿ ಓದಿ ಎಂಜಿನಿಯರ್ ಆಗಿ ದೇಶ ಕಾಯುವ ಯೋಧರಿಗೆ ಸ್ವಯಂಚಾಲಿತ ಆಯುಧಗಳನ್ನು ಸಿದ್ದಪಡಿಸಿಕೊಡಬೇಕು ಎಂಬುದೇ ನನ್ನಾಸೆ ಎನ್ನುತ್ತಾನೆ ಧ್ಯಾನ್..
Published by:Divya D
First published: