ಸಿಎಂ ಅಂಕಲ್​, ಜಗತ್ತನ್ನೇ ಬಿಟ್ಟು ಹೋಗುವ ತಪ್ಪನ್ನು ನಾನೇನು ಮಾಡಿದ್ದೆ? ಸ್ವರ್ಗದಿಂದ ಸರ್ಕಾರಕ್ಕೆ ಪತ್ರ ಬರೆದ 12 ವರ್ಷದ ಬಾಲಕಿ

ನನಗೆ ಶಾಲೆ ಹಾಗೂ ಮನೆಯಲ್ಲಿ ಶುದ್ದವಾದ ವಾತಾವರಣ ಇತ್ತು. ಆದರೆ ನಂಗ್ಯಾಕೆ ಹೀಗಾಯ್ತು. ನಾನೆಲ್ಲಿ ಸೊಳ್ಳೆ ಕಚ್ಚಿಸಿಕೊಂಡೆ? ನಾನು ಮಾಡದ ತಪ್ಪಾದ್ರೂ ಏನು? ಜಗತ್ತೆ ಬಿಟ್ಟು ಹೋಗುವಷ್ಟು ಕೆಟ್ಟವಳಾ? ನಂಗೆ ಕೇವಲ 12 ವರ್ಷ!

G Hareeshkumar | news18
Updated:September 11, 2019, 4:19 PM IST
ಸಿಎಂ ಅಂಕಲ್​, ಜಗತ್ತನ್ನೇ ಬಿಟ್ಟು ಹೋಗುವ ತಪ್ಪನ್ನು ನಾನೇನು ಮಾಡಿದ್ದೆ? ಸ್ವರ್ಗದಿಂದ ಸರ್ಕಾರಕ್ಕೆ ಪತ್ರ ಬರೆದ 12 ವರ್ಷದ ಬಾಲಕಿ
ಮೃತಪಟ್ಟ ಬಾಲಕಿ ಅನನ್ಯಾ
  • News18
  • Last Updated: September 11, 2019, 4:19 PM IST
  • Share this:
ಬೆಂಗಳೂರು(ಸೆ.11): ಡೆಂಘಿಯಿಂದ ಇತ್ತೀಚೆ್ಗೆ ಮೃತಪಟ್ಟ 12 ವರ್ಷದ ಅನನ್ಯಾ ಎಂಬ ಮಗು ಸ್ವರ್ಗದಿಂದಲೇ ಸಿಎಂ, ಮೇಯರ್​ ಅವರಿಗೆ ಮನಕಲಕುವ ಪತ್ರವೊಂದನ್ನು ಬರೆದಿದ್ದಾಳೆ. ಯಾರ ತಪ್ಪಿಗಾಗಿ ನಾನು ಬಲಿಯಾದೆ, ನನ್ನ ಸಾವಿಗೆ ಕಾರಣ ಯಾರು, ಮುಂದೆ ನನ್ನಂತೆ ಇನ್ನೆಷ್ಟು ಮಕ್ಕಳು ಬಲಿಯಾಗಿ, ಎಲ್ಲರಿಂದ ದೂರವಾಗಬೇಕು ಎಂಬ ಪ್ರಶ್ನೆಗಳನ್ನು ಮಗು ಪತ್ರದಲ್ಲಿ ಎತ್ತಿದೆ. ಪತ್ರವನ್ನು ಓದಿದವರ ಕಣ್ಣುಗಳು ಒದ್ದೆಯಾಗಿ, ಮನಸ್ಸು ಭಾರವಾಗುತ್ತದೆ.

"ಕಳೆದ ಜುಲೈ19ರಂದು ಶಾಲೆಯಿಂದ ಮನೆಗೆ ಬಂದಾಗ ಜ್ವರ ಕಾಣಿಸಿಕೊಂಡಿತು, ಜೊತೆಗೆ ವಾಂತಿಯೂ ಆಯಿತು. ಕೂಡಲೇ ಅಪ್ಪ-ಅಮ್ಮ ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ವೈದ್ಯರು ಗಾಬರಿಯಿಂದ ಓಡಾಡುತ್ತಿದ್ದರು. ನನ್ನನ್ನು ಐಸಿಯುಗೆ ಶಿಫ್ಟ್​​ ಮಾಡಿದ್ರು. ಆಗ ನಿಂಗೆ ಡೆಂಘಿ ಬಂದಿದೆ ಎಂದು ಹೇಳಿದ್ರು. ವೈದ್ಯರು ಹಂತ ಹಂತವಾಗಿ ಔಷಧಿ ಕೊಟ್ಟು ಉಳಿಸಲು ಪ್ರಯತ್ನಪಟ್ಟರು ದೇಹದ ಎಲ್ಲಾ ಭಾಗಗಳಲ್ಲಿ ಚುಚ್ಚುಮದ್ದುಗಳನ್ನು ಚುಚ್ಚಿದ್ರು. ಸಹಿಸಲಾಗದ ಹಿಂಸೆ ಅನುಭವಿಸಿದೆ''.

ಅಂಕಲ್​​ ನನಗೆ ಈಗಲೂ ಚೆನ್ನಾಗಿ ನೆನಪಿದೆ ಎಲ್ಲರೂ ಅಧಿಕಾರ ಹಿಡಿಯಲು ಬ್ಯೂಸಿಯಾಗಿದ್ರಿ. ಆದರೆ ಅದೇ ಸಮಯದಲ್ಲಿ ನಾನು ಬಲಿಯಾದೆ. ಗಂಗಾಂಬಿಕೆ ಆಂಟಿ, ಎಚ್​ಡಿಕೆ ಅಂಕಲ್​​​​​​​ ನಿಮಗೆ ಗೊತ್ತಾ? ಡೆಂಘಿ ಬರೋದು ಸೊಳ್ಳೆ ಕಚ್ಚೋದ್ರಿಂದ ಅಂತ.

ನಮ್ಮ ಅಮ್ಮ ಯಾವಾಗಲೂ ಹೇಳುತ್ತಿದ್ದಳು, ನೀನು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊ ಅಂತಿದ್ರು. ನನ್ನ ಇರುವುದು ಹೆಸರಾಂತ ಅಪಾರ್ಟ್​ಮೆಂಟ್​​​ ಒಂದರಲ್ಲಿ. ಆರ್ಟ್​​ ಆಫ್ ಲಿವಿಂಗ್​​ ರವಿಶಂಕರ್​ ಗುರೂಜಿ ಅವರ ಶಾಲೆಯಲ್ಲಿ ಓದುತ್ತಿದ್ದೆ.ನನಗೆ ಶಾಲೆ ಹಾಗೂ ಮನೆಯಲ್ಲಿ ಶುದ್ದವಾದ ವಾತಾವರಣ ಇತ್ತು. ಆದರೆ ನಂಗ್ಯಾಕೆ ಹೀಗಾಯ್ತು. ನಾನೆಲ್ಲಿ ಸೊಳ್ಳೆ ಕಚ್ಚಿಸಿಕೊಂಡೆ? ನಾನು ಮಾಡದ ತಪ್ಪಾದ್ರೂ ಏನು? ಜಗತ್ತೆ ಬಿಟ್ಟು ಹೋಗುವಷ್ಟು ಕೆಟ್ಟವಳಾ? ನಂಗೆ ಕೇವಲ 12 ವರ್ಷ!

ಇದನ್ನೂ ಓದಿ :  ದಸರಾ ಸಂಭ್ರಮ 2019: ಗೋಲ್ಡನ್​ ಸ್ಟಾರ್​ ಗಣೇಶ್​ರಿಂದ ಈ ಬಾರಿ ಯುವ ದಸರಾ ಉದ್ಘಾಟನೆ

ನಂಗೆ ಸ್ನೇಹಿತರು ಅಪ್ಪ, ಅಮ್ಮಾ ಹೀಗೆ ನನ್ನದೊಂದು ಜಗತ್ತೆ ಇತ್ತು. ಅವರನ್ನೆಲ್ಲಾ ಬಿಟ್ಟು ಹೋದೆ, ಮನೆ ಶಾಲೆ ಎಲ್ಲೂ ನಾನು ಸೊಳ್ಳೆ ಸಾಕಿಲ್ಲ. ಹೀಗಿದ್ದರೂ ಬೆಂಗಳೂರಿನಲ್ಲಿ ಸೊಳ್ಳೆ ಬೆಳೆಯೋಕೆ ನೀವು ಯಾಕೆ ಬಿಟ್ರಿ. ಆದರೆ ನೀವೆಲ್ಲ ಬ್ಯೂಸಿಯಾಗಿ ನಗರವನ್ನು ಸ್ವಚ್ಛ ಮಾಡುವುದನ್ನು ಮರೆತು ಬಿಟ್ಟರಾ. ಬಿಎಸ್​ವೈ ಅಂಕಲ್​​​ ನೀವಾದ್ರೂ ಇದರ ಬಗ್ಗೆ ಗಮನಕೊಡಿ. ಗಂಗಾಂಬಿಕೆ ಆಂಟಿ ಬೆಂಗಳೂರನ್ನು ದಯವಿಟ್ಟು ಸ್ವಚ್ಛವಾಗಿ ಇಡಿ. ಕರ್ನಾಟಕದಲ್ಲಿ, ಎಲ್ಲಾ ಕಡೆ ಹೀಗೆ ಆಗಿದೆ ಎಂದು ಪತ್ರಿಕೆಯಲ್ಲಿ ಓದಿದ್ದೇನೆ. ಮಳೆ ನಿಂತ ಕೂಡಲೇ ನಿಂತ ನೀರಿನಲ್ಲಿ ಸೊಳ್ಳೆ ಬೆಳೆಯುತ್ತದೆ. ಇದನ್ನು ತಡೆಯಲು ಸಾಧ್ಯವಿದೆ.

ಪ್ಲೀಸ್​​​ ನನ್ನ ಸ್ನೇಹಿತರನ್ನು ಅವರ ಅಪ್ಪ-ಅಮ್ಮನಿಂದ ದೂರ ಮಾಡಬೇಡಿ. ನಾನಿದ್ದ ಆಸ್ಪತ್ರೆಯಲ್ಲಿ ನನ್ನ ಎದುರೇ ಇಬ್ಬರು ಪ್ರಾಣ ಬಿಟ್ಟರು. ಇದೆಲ್ಲಾ ಯಾಕೆ ವರದಿಯಾಗುತ್ತಿಲ್ಲ. ಎಲಿಸಾ ರಕ್ತ ಪರೀಕ್ಷೆಗೆ 1500 ರೂ. ಕೊಡಬೇಕು. ಹಣ ಕೊಡಲು ಸಾಮಾನ್ಯರಿಂದ ಸಾಧ್ಯವಿದೆಯೇ?," ಹೀಗೆ ಪತ್ರದಲ್ಲಿ ಹಲವು ಪ್ರಶ್ನೆಗಳನ್ನು ಬಾಲಕಿ ಅನನ್ಯಾ ಕೇಳಿದ್ದಾರೆ. ಅಸಲಿಗೆ ಈ ಪತ್ರವನ್ನು ಬರೆದಿರುವುದು ಬಾಲಕಿ ದೊಡ್ಡಪ್ಪ. ಮಗಳ ಸಾವಿನ ದುಃಖ ಅವರನ್ನು ಬಹುವಾಗಿ ಬಾಧಿಸಿದ್ದು, ನಮ್ಮ ಪರಿಸ್ಥಿತಿ ಇತರೆ ತಂದೆ-ತಾಯಿಗೆ, ಮಕ್ಕಳಿಗೆ ಬರುವುದು ಬೇಡ ಎಂಬ ಕಳಕಳಿಯೊಂದಿಗೆ ಈ ಪತ್ರವನ್ನು ಬಾಲಕಿ ದೊಡ್ಡಪ್ಪ ಸಿಎಂ ಹಾಗೂ ಮೇಯರ್​ಗೆ ಬರೆದಿದ್ದಾರೆ.ಡೆಂಘಿ ಜ್ವರಕ್ಕೆ ನಗರದಲ್ಲಿ ಹತ್ತಾರು ಜನರು ಸಾವನ್ನಪಿದ್ದಾರೆ. ಆದರೆ ಸಂಬಂಧಪಟ್ಟ ಇಲಾಖೆ ಮಾತ್ರ ಸೊಳ್ಳೆಯಗಳ ನಿಯಂತ್ರಣಕ್ಕೆ ಕಡಿವಾಣ ಮಾತ್ರ ಹಾಕಿಲ್ಲ. ಡೆಂಘಿಗೆ ಈ ಬಾಲಕಿ ಸಾವನ್ನಪಿದ್ದಳು. ಈಕೆಯಂತೆ ನಗರದಲ್ಲಿ ಡೆಂಘಿಗೆ ಬಲಿಯಾದ ಮಕ್ಕಳ ಸಂಖ್ಯೆ ಮಾತ್ರ ಸರ್ಕಾರ ಪಟ್ಟಿಗೆ ಸೇರಿಸಿಲ್ಲ ಏಕೆ?

ಇದನ್ನೂ ಓದಿ : ಹೊಸ ಸಂಚಾರಿ​ ನಿಯಮ; ದಂಡದ ಪ್ರಮಾಣ ಇಳಿಸಲು ಸಿಎಂ ಬಿಎಸ್​ವೈ ಚಿಂತನೆ

ಅನನ್ಯಾಳ ಹೆಸರಿನಲ್ಲಿ ಅವರ ದೊಡ್ಡಪ್ಪ ಬರೆದ ಈ ಪತ್ರದಲ್ಲಿ ವ್ಯವಸ್ಥೆಯಯ ವಿರುದ್ದ ಅವರಿಗಿರುವ ಅಸಹನೆಯನ್ನು ಎತ್ತಿ ತೋರಿಸುತ್ತಿದೆ. ನಾನು ಇದ್ದ ಆಸ್ಪತ್ರೆಯಲ್ಲಿ ನನ್ನ ಕಣ್ಣೆದುರಿಗೆ ಒಂದು ಮಗು ಡೆಂಘಿಯಿಂದ ಪ್ರಾಣ ಬಿಟ್ಟಿತು ಎಂದು ಪತ್ರದಲ್ಲಿ ಬರೆದಿದ್ದಾರೆ. ಆದರೆ ಆರೋಗ್ಯ ಇಲಾಖೆ ಪ್ರಕಾರ ಬೆಂಗಳೂರಿನಲ್ಲಿ ಇದುವರೆಗೂ ಡೆಂಘಿಗೆ ಒಂದೂ ಮಗು ಸಾವನ್ನಪ್ಪಿಲ್ಲ. ಮಕ್ಕಳ ಸಾವನ್ನು ಇಲಾಖೆ ನಿರ್ಲಕ್ಷಿಸುತ್ತಿದೆಯೇ ಎಂದು ಪತ್ರದಲ್ಲಿ ಹೇಳಿದ್ದಾರೆ.

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ