• Home
  • »
  • News
  • »
  • state
  • »
  • Belagavi: ಬೆಳಗಾವಿ ಜಿಲ್ಲೆಯಿಂದ 12 ಜನರು ಗಡಿಪಾರು; ಆರೋಪಿಗಳ ವಿರುದ್ಧ 132 ಪ್ರಕರಣಗಳು

Belagavi: ಬೆಳಗಾವಿ ಜಿಲ್ಲೆಯಿಂದ 12 ಜನರು ಗಡಿಪಾರು; ಆರೋಪಿಗಳ ವಿರುದ್ಧ 132 ಪ್ರಕರಣಗಳು

ಸಂಜೀವ್ ಪಾಟೀಲ್, ಎಸ್​ಪಿ

ಸಂಜೀವ್ ಪಾಟೀಲ್, ಎಸ್​ಪಿ

ಅಥಣಿ ಉಪವಿಭಾಗದಲ್ಲಿ ಬರುವ ಅಥಣಿ, ಐಗಳಿ, ಕಾಗವಾಡ ಹಾಗೂ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜೂಜಾಟ, ಮಟಕಾ, ಸಾರಾಯಿ ಮತ್ತು ಅಕ್ರಮ ಮರಳು ಸಾಗಾಣಿಕೆಯಲ್ಲಿ ಹಾಗೂ ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಿದ್ದರ ಬಗ್ಗೆ 132 ಪ್ರಕರಣಗಳು ದಾಖಲಾಗಿದ್ದವು.

  • News18 Kannada
  • Last Updated :
  • Belgaum, India
  • Share this:

ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗಿದ್ದ 12 ಆರೋಪಿಗಳನ್ನ (Accused) ಗಡಿಪಾರು ಮಾಡಲಾಗಿದೆ. 12 ಜನರ ವಿರುದ್ಧ 132 ಪ್ರಕರಣಗಳಿವೆ ಎಂದು ಬೆಳಗಾವಿ ಎಸ್​​ಪಿ (Belagavi SP) ಡಾ.ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಉಪವಿಭಾಗದಲ್ಲಿ ಮದಬಾವಿ ಗ್ರಾಮದ ಮೀರಸಾಬ್ ಬಾಗಡಿ, ರಡ್ಡೇರಹಟ್ಟಿ ಗ್ರಾಮದ ಸದಾಶಿವ್ ಗೊಡಮಾಲೆ,  ಉಗಾರ ಬಿ.ಕೆ.ಗ್ರಾಮದ ಮಹಾದೇವ್ ಕಾಂಬಳೆ, ಕೋಹಳಿ ಗ್ರಾಮದ ರವಿ ಶಿಂಗೆ, ಹಾಲಳ್ಳಿ ಗ್ರಾಮದ ಕಾಶಪ್ಪ ಕಾರಿಕೊಳ್ಳ, ಕಕಮರಿ ಗ್ರಾಮದ ಪ್ರದೀಪ್ ಕರಡಿ, ಕುಡಚಿ ಗ್ರಾಮದ ಅಲಿಮುರ್ತುಜಾ ಚಮನಮಲೀಕ್, ಸಾಹೇಬಹುಸೇನ್ ಚಮನಮಲೀಕ್, ನಜೀರ್ ಹುಸೇನ್ ತಾಂಬೋಳಿ, ಮೊರಬ ಗ್ರಾಮದ ಬಾಬಾಸಾಬ್ ನದಾಫ್, ಚಿಂಚಲಿ ಗ್ರಾಮದ ಲಕ್ಷ್ಮಣ್ ಪೋಳ, ಅಲ್ತಾಪ್ ಹುಸೇನ ಮೇವಗಾರ ಎಂಬುವವರನ್ನು ಗಡಿಪಾರು (Deported) ಮಾಡಿರುವ ಆರೋಪಿಗಳಾಗಿದ್ದಾರೆ‌.


ಗಡಿಪಾರು ಆಗಿರುವ ಎಲ್ಲಾ ಆರೋಪಿಗಳ ಮಾಹಿತಿ


ಅಥಣಿ ಉಪವಿಭಾಗದಲ್ಲಿ ಬರುವ ಅಥಣಿ, ಐಗಳಿ, ಕಾಗವಾಡ ಹಾಗೂ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜೂಜಾಟ, ಮಟಕಾ, ಸಾರಾಯಿ ಮತ್ತು ಅಕ್ರಮ ಮರಳು ಸಾಗಾಣಿಕೆಯಲ್ಲಿ ಹಾಗೂ ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಿದ್ದರ ಬಗ್ಗೆ 132 ಪ್ರಕರಣಗಳು ದಾಖಲಾಗಿದ್ದವು.


ಮದಬಾವಿ ಗ್ರಾಮದ ಮೀರಾಸಾಬ್ ಬಾಗಡಿ ಹಾಗೂ ರಡ್ಡೇರಹಟ್ಟಿ ಗ್ರಾಮದ ಸದಾಶಿವ ಗೋಡಮಾಲೆ ವಿರುದ್ಧ 5 ಮಟಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಇಬ್ಬರನ್ನು ಬೆಳಗಾವಿ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಗೆ ಒಂದು ತಿಂಗಳ ಕಾಲ ಗಡಿಪಾರು ಮಾಡಲಾಗಿದೆ.


ಎರಡು ತಿಂಗಳು ಗಡಿಪಾರು


ಕಾಗವಾಡ ತಾಲೂಕಿನ ಉಗಾರ ಬಿ.ಕೆ.ಗ್ರಾಮದ ಮಹಾದೇವ್ ಯಲ್ಲಪ್ಪ ಕಾಂಬಳೆ ವಿರುದ್ಧ 5 ಮಟಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ವಿಜಯಪುರ ಜಿಲ್ಲೆಗೆ ಎರಡು ತಿಂಗಳ ಕಾಲ ಗಡಿಪಾರು ಹಾಗೂ ಕೋಹಳ್ಳಿ ಗ್ರಾಮದ ರವಿ ಸುರೇಶ ಶಿಂಗೆ ಮೇಲೆ 4 ಮಟಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಕೊಪ್ಪಳ ಜಿಲ್ಲೆಗೆ ಎರಡು ತಿಂಗಳ ಕಾಲ ಗಡಿಪಾರು‌ ಮಾಡಲಾಗಿದೆ.


accused deported, belagavi news, belagavi crime news, kannada news, karnataka news, ಬೆಳಗಾವಿ ನ್ಯೂಸ್, ಆರೋಪಿಗಳು ಗಡಿಪಾರು
ಸಾಂದರ್ಭಿಕ ಚಿತ್ರ


ಹಾಲಳ್ಳಿ ಗ್ರಾಮದ ಕಾಶಪ್ಪ ಕಾರಿಕೊಳ್ಳ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗಿದ್ದರಿಂದ ಹಾಲಳ್ಳಿ ಗ್ರಾಮದಿಂದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮಕ್ಕೆ ಒಂದು ತಿಂಗಳ ಕಾಲ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ.


ಅಕ್ರಮ ಮರಳು ಸಾಗಾಣಿಕೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿ


ಕಕಮರಿ ಗ್ರಾಮದ ಪ್ರದೀಪ ಕರಡಿ ಅಕ್ರಮ ಮರಳು ಸಾಗಾಣಿಕೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ಕೋಲಾರ ಜಿಲ್ಲೆಗೆ ಎರಡು ತಿಂಗಳ ಕಾಲ ಗಡಿಪಾರು ಹಾಗೂ ಕುಡಚಿ ಪಟ್ಟಣದ ಅಲಿಮುರ್ತುಜಾ ಚಮನಮಲೀಕ 13 ಮಟಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ಮೂರು ತಿಂಗಳ ಕಾಲ ಗಡಿಪಾರು ಮಾಡಿದ್ದಾರೆ.


ಮೊರಬ ಗ್ರಾಮದ ಬಾಬಾಸಾಬ್ ನದಾಫ್‌  21 ಮಟಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ಐದು ತಿಂಗಳ ಕಾಲ ಗಡಿಪಾರು ಹಾಗೂ ಕುಡಚಿ ಗ್ರಾಮದ ಸಾಹೇಬಹುಸೇನ ಚಮನಮಲೀಕ 22 ಮಟಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ಆರು ತಿಂಗಳ ಕಾಲ ಗಡಿಪಾರು ಮಾಡಲಾಗಿದೆ.


ಇದನ್ನೂ ಓದಿ:  Rishab Shetty: ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನಕ್ಕೆ ಬಂದ ರಿಷಬ್ ಶೆಟ್ಟಿ; ಧರ್ಮಾಧಿಕಾರಿಗಳ ಆಶೀರ್ವಾದ ಪಡೆದ ದಂಪತಿ


ಬೆಳಗಾವಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ


ಇದಲ್ಲದೇ ಕುಡಿಚಿ ಪಟ್ಟಣದ ನಜೀರ್ ಹುಸೇನ ತಾಂಬೋಳ 10 ಮಟಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ಮೂರು ತಿಂಗಳ ಕಾಲ ಗಡಿಪಾರು ಮಾಡಲಾಗಿದೆ. ಚಿಂಚಲಿ ಗ್ರಾಮದ ಲಕ್ಷ್ಮಣ ವಸಂತ 7ಮಟಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ಮೂರು ತಿಂಗಳ ಕಾಲ ಗಡಿಪಾರು ಮಾಡಿದ್ದಾರೆ.


accused deported, belagavi news, belagavi crime news, kannada news, karnataka news, ಬೆಳಗಾವಿ ನ್ಯೂಸ್, ಆರೋಪಿಗಳು ಗಡಿಪಾರು
ಬೆಳಗಾವಿ


ಅಲ್ತಾಪ್ ಹುಸೇನ್ ಮೇವೆಗಾರ 15ಮಟಕಾ ಪ್ರಕರಣಗಳಲ್ಲಿ ಹಾಗೂ 3ಜೂಜಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ಆರು ತಿಂಗಳ ಕಾಲ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ.
ಉಪವಿಭಾಗದ ಅಧೀನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇಲಿಂದ್ಮೇಲೆ ಅಕ್ರಮ ಮಟಕಾ, ಜೂಜಾಟ, ಸಾರಾಯಿ, ಮರಳು ಸಾಗಾಣಿಕೆ ಹಾಗೂ ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗುವ ಆರೋಪಿತರ ಮೇಲೆ ತೀವ್ರ ನಿಗಾ ಇಡಲಾಗಿದೆ.


ಇದನ್ನೂ ಓದಿ: congress Tweet: ಬಿಜೆಪಿ ಕೆಟ್ಟು ನಿಂತಿರುವ ಡಕೋಟ ಇಂಜಿನ್​, ರಾಮುಲು ಹೋರಾಟದ ಬಗ್ಗೆಯೂ ಕಾಂಗ್ರೆಸ್​ ವ್ಯಂಗ್ಯ


ಒಂದು ವೇಳೆ ಇಂತಹ ಸಮಾಜ ಘಾತುಕ ಕೃತ್ಯಗಳನ್ನು ಎಸಗುತ್ತಿರುವವ ಬಗ್ಗೆ ಮಾಹಿತಿ ನೀಡಬೇಕು. ಮಾಹಿತಿ ನೀಡುವವರ ಗೌಪ್ಯತೆ ಕಾಪಾಡಿಕೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಬೆಳಗಾವಿ ಎಸ್ಪಿ ಮನವಿ ಮಾಡಿದ್ದಾರೆ.

Published by:Mahmadrafik K
First published: