ವೀರಾಪುರದಲ್ಲಿ 111 ಅಡಿ ಎತ್ತರದ ಶಿವಕುಮಾರ್ ಸ್ವಾಮೀಜಿ ಪ್ರತಿಮೆ ನಿರ್ಮಾಣಕ್ಕೆ ಸಿಎಂ ಶಂಕುಸ್ಥಾಪನೆ

ಕಾರ್ಯಕ್ರಮದಲ್ಲಿ ಹಾಜರಿದ್ದ ಸಂಸದ ಡಿ.ಕೆ.ಸುರೇಶ್ ಅವರು ಮೆಡಿಕಲ್ ಕಾಲೇಜು ವಿಚಾರ ಪ್ರಸ್ತಾಪ ಮಾಡಿದ ವಿಷಯವಾಗಿ ಮಾತನಾಡಿದ ಸಿಎಂ, ಸುರೇಶ್ ಅವರು ಮೆಡಿಕಲ್ ಕಾಲೇಜು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಡಿಕೆ ಶಿವಕುಮಾರ್ ನನ್ನ ಆತ್ಮೀಯ ಸ್ನೇಹಿತರು. ಕನಕಪುರಕ್ಕೂ ಮೆಡಿಕಲ್ ಕಾಲೇಜು ಕೊಡುತ್ತೇವೆ ಎಂದು ಭರವಸೆ ನೀಡಿದರು.

HR Ramesh | news18-kannada
Updated:November 8, 2019, 5:31 PM IST
ವೀರಾಪುರದಲ್ಲಿ 111 ಅಡಿ ಎತ್ತರದ ಶಿವಕುಮಾರ್ ಸ್ವಾಮೀಜಿ ಪ್ರತಿಮೆ ನಿರ್ಮಾಣಕ್ಕೆ ಸಿಎಂ ಶಂಕುಸ್ಥಾಪನೆ
ಶಿವಕುಮಾರ್ ಸ್ವಾಮೀಜಿ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಮಾಗಡಿ: ಇದೊಂದು ಅವಿಸ್ಮರಣೀಯ ಕ್ಷಣ. ವೀರಾಪುರದಲ್ಲಿ ವಾಸ ಮಾಡುತ್ತಿರುವ ನೀವು ಧನ್ಯರು. ಶಿವಕುಮಾರ್ ಸ್ವಾಮೀಜಿಗಳು ಹಸಿದು ಬಂದವರಿಗೆ ಅನ್ನ ನೀಡಿದವರು, ದೇಶಕ್ಕೆ ಮಾದರಿಯಾಗಿದ್ದವರು. ಇನ್ಮುಂದೆ ಸಿದ್ದಗಂಗಾ ಮಠಕ್ಕೆ ಬರುವವರು ವೀರಾಪುರಕ್ಕೆ ಬರುವಂತಾಗಲಿ. ಇನ್ನು ಸರಿಯಾಗಿ ಎರಡು ವರ್ಷದಲ್ಲಿ ಎಂಬತ್ತು ಕೋಟಿ ವೆಚ್ಚದಲ್ಲಿ 111 ಅಡಿ ಎತ್ತರದ ಶಿವಕುಮಾರ್ ಸ್ವಾಮೀಜಿ ಪ್ರತಿಮೆ ನಿರ್ಮಾಣ ಆಗಲಿದೆ  ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶಿವಕುಮಾರ್ ಸ್ವಾಮೀಜಿಯ ಹುಟ್ಟೂರಾದ ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿ ಸಿದ್ಧಗಂಗಾ ಶ್ರೀಗಳ  111 ಅಡಿ ಎತ್ತರದ ಪ್ರತಿಮೆ ಸ್ಥಾಪನೆ ಹಾಗೂ ವಿವಿಧ ಗ್ರಾಮಾಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಪಕ್ಷ ಭೇದ ಮರೆತು ನಾವು ಇಂದು ಇಲ್ಲಿ ಒಂದಾಗಿದ್ದೇವೆ. ಶಿವಕುಮಾರ್ ಸ್ವಾಮಿಜಿಗಳು ಇನ್ನು ಬದುಕಿರಬೇಕಿತ್ತು. ಈಗಲೂ ಅವರಿಂದ ನಾನು ಆಶೀರ್ವಾದ ಪಡೆಯುತ್ತಿದ್ದೇನೆ ಎಂದೇ ಭಾಸವಾಗುತ್ತಿದೆ. ಎರಡು ವರ್ಷದಲ್ಲಿ ಐವತ್ತು ಸಾವಿರ ಜನರನ್ನು ಸೇರಿಸಿ ಇಲ್ಲಿ ಕಾರ್ಯಕ್ರಮ ಮಾಡೋಣ ಎಂದ ಹೇಳಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಸಂಸದ ಡಿ.ಕೆ.ಸುರೇಶ್ ಅವರು ಮೆಡಿಕಲ್ ಕಾಲೇಜು ವಿಚಾರ ಪ್ರಸ್ತಾಪ ಮಾಡಿದ ವಿಷಯವಾಗಿ ಮಾತನಾಡಿದ ಸಿಎಂ, ಸುರೇಶ್ ಅವರು ಮೆಡಿಕಲ್ ಕಾಲೇಜು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಡಿಕೆ ಶಿವಕುಮಾರ್ ನನ್ನ ಆತ್ಮೀಯ ಸ್ನೇಹಿತರು. ಕನಕಪುರಕ್ಕೂ ಮೆಡಿಕಲ್ ಕಾಲೇಜು ಕೊಡುತ್ತೇವೆ ಎಂದು ಭರವಸೆ ನೀಡಿದರು.

ಇದನ್ನು ಓದಿ: ಸಿಬಿಐ ಒಂದು ಒಳ್ಳೆಯ ಸಂಸ್ಥೆ; ಇಡಿಯಂತೆ ನಿಯಮಾವಳಿ ಮೀರಲ್ಲ; ಯಾರ ಮಾತೂ ಕೇಳಲ್ಲ: ಡಿಕೆ ಶಿವಕುಮಾರ್​

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ