HOME » NEWS » State » 110 TONNE OXYGEN PRODUCTION AT KOPPAL DAILY AMID OXYGEN CRISIS SBR LG

Oxygen Crisis: ಆಕ್ಸಿಜನ್ ಬಿಕ್ಕಟ್ಟಿನ ನಡುವೆ ಕೊಪ್ಪಳ ಜಿಲ್ಲೆಯಲ್ಲಿ ಪ್ರತಿದಿನ ಉತ್ಪಾದನೆಯಾಗುತ್ತಿದೆ 110 ಟನ್​ ಪ್ರಾಣವಾಯು..!

ಇಲ್ಲಿಯ ಆಕ್ಸಿಜನ್ ತಯಾರಿಕಾ ಘಟಕದಿಂದ ವಿಜಯಪುರ, ಕೊಪ್ಪಳ, ಬಳ್ಳಾರಿ, ಗದಗ, ಹಾವೇರಿ, ಸಿಂಧನೂರಿನ ವರೆಗೂ ನಿತ್ಯ ಆಕ್ಸಿಜನ್ ಸರಬರಾಜು ಮಾಡುತ್ತಿದ್ದು, ಕಳೆದ ಒಂದು ವಾರದಿಂದ‌ ಆಕ್ಸಿಜನ್ ಬೇಡಿಕೆ ಅಧಿಕವಾಗಿದೆ. ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಸರಬರಾಜು ಮಾಡಲು ಘಟಕದ ಕಾರ್ಮಿಕರು ದುಡಿಯುತ್ತಿದ್ದಾರೆ‌. ಈಗ ಸದ್ಯದ ಬೇಡಿಕೆಯಷ್ಟು ಇಲ್ಲಿ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ.

news18-kannada
Updated:May 4, 2021, 9:57 AM IST
Oxygen Crisis: ಆಕ್ಸಿಜನ್ ಬಿಕ್ಕಟ್ಟಿನ ನಡುವೆ ಕೊಪ್ಪಳ ಜಿಲ್ಲೆಯಲ್ಲಿ ಪ್ರತಿದಿನ ಉತ್ಪಾದನೆಯಾಗುತ್ತಿದೆ 110 ಟನ್​ ಪ್ರಾಣವಾಯು..!
ಆಕ್ಸಿಜನ್ ಉತ್ಪಾದನೆ
  • Share this:
ಕೊಪ್ಪಳ(ಮೇ 04): ರಾಜ್ಯದಲ್ಲಿ ಈಗ ಆಕ್ಸಿಜನ್ ಎಮೆರ್ಜನ್ಸಿ ಉಂಟಾಗಿದೆ.ಚಾಮರಾಜನಗರ ಹಾಗೂ ಕಲಬುರಗಿಯಲ್ಲಿ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಎಮೆರ್ಜನ್ಸಿಯ ಮಧ್ಯೆಯೂ ಕೊಪ್ಪಳ ಜಿಲ್ಲೆ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಆಕ್ಸಿಜನ್ ತೊಂದರೆಯಾಗುವುದು ಅನುಮಾನ. ಕಾರಣ ಕೊಪ್ಪಳ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್. ಇಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್ ನ್ನು ಈಗ ಆರೋಗ್ಯ ಇಲಾಖೆಗೆ ನೀಡಲಾಗುತ್ತಿದೆ. ಕೊರೊನಾ ಸೋಂಕಿತರಿಗೆ ಈಗ ಆಕ್ಸಿಜನ್ ಸಮಸ್ಯೆ ಉಂಟಾಗಿದೆ. ಆಕ್ಸಿಜನ್ ಕೊರತೆ ಅಧಿಕವಾಗಿದೆ. ಈ ಮಧ್ಯೆ ಕೊಪ್ಪಳ ಜಿಲ್ಲೆಯಿಂದ ನಿತ್ಯ 110 ಟನ್  ಆಕ್ಸಿಜನ್ ಉತ್ಪಾದನೆಯಾಗುತ್ತದೆ.

ಈ ಮೊದಲು ಇಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ನಲ್ಲಿ ಬಹುತೇಕ ಕಾರ್ಖಾನೆಗಳಿಗೆ ಬಳಕೆಯಾಗುತ್ತಿತ್ತು. ಆದರೆ ಕಳೆದ ಹಲವು‌ ದಿನಗಳಿಂದ ಸಂಪೂರ್ಣವಾಗಿ ಆರೋಗ್ಯ ಸೇವೆಗೆ ಬಳಕೆ ಮಾಡಲಾಗುತ್ತಿದೆ. ಕೈಗಾರಿಕಾ ಪ್ರದೇಶವಾಗಿರುವ ಕೊಪ್ಪಳದ ಗಿಣಗೆರೆ ಬಳಿಯಲ್ಲಿ ಎಂಎಸ್ ಪಿಎಲ್, ಪ್ರಾಕ್ಸರಿ, ಕಲ್ಯಾಣಿ ಕಾರ್ಖಾನೆಗಳಲ್ಲಿ ದ್ರವ ರೂಪದ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ರೇಣುಕಾ ಆಕ್ಸಿಜನ್ ಕಂಪನಿಯಲ್ಲಿ ಉತ್ಪಾದನೆಯಾಗುತ್ತಿದೆ.

ಕೆಲವು ಕಾರ್ಖಾನೆಯಲ್ಲಿ ದ್ರವ ರೂಪದ ಆಕ್ಸಿಜನ್  ಇದನ್ನು ಅನಿಲ ರೂಪದಲ್ಲಿ ತಯಾರಿಸಿ ಸಿಲಿಂಡರ್ ಹಾಗೂ ಕಂಟೇನರ್ ಗಳಲ್ಲಿ ಅವಶ್ಯವಿರುವಲ್ಲಿ ಕಳುಹಿಸುವ ಗದಗ ಆಕ್ಸಿಜನ್ ಕಂಪನಿಯೊಂದು ಹಲವು ವರ್ಷಗಳಿಂದ ಇಲ್ಲಿ ಆಕ್ಸಿಜನ್ ತಯಾರಿ ಮಾಡುತ್ತಿದ್ದಾರೆ. ಈ ಮೊದಲು ತಿಂಗಳಿಗೆ 2500 ಕ್ಯೂಬಿಕ್ ಮೀಟರ್ ಆಕ್ಸಿಜನ್ ಇಲ್ಲಿಂದ ಹೋಗುತ್ತಿತ್ತು, ಅದರಲ್ಲಿ ಶೇ.70 ರಷ್ಟು ಕೈಗಾರಿಕೆಗಳಿಗೆ ಬಳಕೆಯಾಗುತ್ತಿದ್ದರೆ, ಉಳಿದ ಶೇ 30 ರಷ್ಟು ಆಸ್ಪತ್ರೆಗೆ ರವಾನೆಯಾಗುತ್ತಿತ್ತು.

ಆದರೆ ಇತ್ತೀಚಿಗೆ ಕೈಗಾರಿಕೆಗಳಿಗೆ ಇಲ್ಲಿಂದ ಆಕ್ಸಿಜನ್ ನೀಡುವದನ್ನು ನಿಲ್ಲಿಸಲು ಸೂಚಿಸಿದ್ದರಿಂದ ನಿತ್ಯ 600 ಸಿಲೆಂಡರ್ ಹಾಗೂ 20 ಕಂಟೇನರ್ ಗಳಲ್ಲಿ ಆಕ್ಸಿಜನ್ ಸರಬರಾಜು ಮಾಡಲಾಗುತ್ತಿದೆ. ಇಲ್ಲಿಯ ಆಕ್ಸಿಜನ್ ತಯಾರಿಕಾ ಘಟಕದಿಂದ ವಿಜಯಪುರ, ಕೊಪ್ಪಳ, ಬಳ್ಳಾರಿ, ಗದಗ, ಹಾವೇರಿ, ಸಿಂಧನೂರಿನ ವರೆಗೂ ನಿತ್ಯ ಆಕ್ಸಿಜನ್ ಸರಬರಾಜು ಮಾಡುತ್ತಿದ್ದು, ಕಳೆದ ಒಂದು ವಾರದಿಂದ‌ ಆಕ್ಸಿಜನ್ ಬೇಡಿಕೆ ಅಧಿಕವಾಗಿದೆ. ಬೇಡಿಕೆಗೆ ತಕ್ಕಂತೆ ಆಕ್ಸಿಜನ್ ಸರಬರಾಜು ಮಾಡಲು ಘಟಕದ ಕಾರ್ಮಿಕರು ದುಡಿಯುತ್ತಿದ್ದಾರೆ‌. ಈಗ ಸದ್ಯದ ಬೇಡಿಕೆಯಷ್ಟು ಇಲ್ಲಿ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ.

Chikkamagaluru: ಕೊರೋನಾ ಟೆಸ್ಟ್ ಮಾಡಿಸಲು ಮುಗಿಬಿದ್ದ ಕಾಫಿನಾಡಿನ ಜನ

ಉತ್ತರ ಕರ್ನಾಟಕ ಭಾಗದಲ್ಲಿ ಆಕ್ಸಿಜನ್ ಘಟಕಗಳು ಈಗ ಅಧಿಕ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿರುವದರಿಂದ ಸದ್ಯ ಕೊರತೆ ಇಲ್ಲ. ಆದರೆ ಆಕ್ಸಿಜನ್ ಸರಬರಾಜು ವಾಹನಗಳ ಕೊರತೆ ಇದೆ. ಕೊಪ್ಪಳ ಜಿಲ್ಲೆಯು ಆಕ್ಸಿಜನ್ ಅಧಿಕವಾಗಿ ಉತ್ಪಾದಿಸಿ ಸೋಂಕಿತರಿಗೆ ಸಂಜೀವಿನಿಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 10 ಕೊವಿಡ್ ಆಸ್ಪತ್ರೆಗಳಿವೆ, ನಿತ್ಯ 4-10 ಟನ್ ಆಕ್ಸಿಜನ್ ಅವಶ್ಯವಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ 6 ಟನ್ ಆಕ್ಸಿಜನ್ ಸಂಗ್ರಹ ಘಟಕವಿದೆ. ಉಳಿದ ಕಡೆ ಜಂಬೋ ಸಿಲಿಂಡರ್ ಗಳಿವೆ. ಇವುಗಳಿಂದ ಅವಶ್ಯವಿರುವಷ್ಟು ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಪೂರೈಕೆ, ಬೇಡಿಕೆಯ ಕುರಿತು ಮಾನಟರಿಂಗ್ ಮಾಡಲು ಅಧಿಕಾರಿಗಳ ತಂಡ ರಚಿಸಲಾಗಿದೆ. ಈ ತಂಡವು ಈಗಾಗಲೇ ನಿತ್ಯ ಮಾನಟರಿಂಗ್ ಮಾಡುತ್ತಿದೆ. ಸದ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಕೊರತೆ ಇಲ್ಲ.

ಜಿಲ್ಲೆಯಲ್ಲಿ ಈಗ ನಿತ್ಯ 500-700 ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಅಧಿಕವಾಗಿದೆ. ಆದರೆ ಅದಕ್ಕೆ ಆಕ್ಸಿಜನ್ ಕೊರತೆ ಅಲ್ಲ ಎನ್ನಲಾಗಿದೆ. ಮುಂದೆಯೂ ಎಚ್ಚರಿಕೆಯಿಂದ ಆಕ್ಸಿಜನ್ ಸರಬರಾಜು ಮೇಲೆ ನಿಗಾ ವಹಿಸಿದರೆ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗದು ಎನ್ನಲಾಗಿದೆ.
Published by: Latha CG
First published: May 4, 2021, 9:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories