• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Mother: ತಾಯಿ ಶವದ ಜೊತೆ 2 ದಿನವಿದ್ದ ಪುಟ್ಟ ಬಾಲಕ! ಬೆಂಗಳೂರಿನಲ್ಲೊಂದು ಮನಕಲಕುವ ಘಟನೆ

Mother: ತಾಯಿ ಶವದ ಜೊತೆ 2 ದಿನವಿದ್ದ ಪುಟ್ಟ ಬಾಲಕ! ಬೆಂಗಳೂರಿನಲ್ಲೊಂದು ಮನಕಲಕುವ ಘಟನೆ

ತಾಯಿಯ ಮೃತದೇಹದೊಂದಿಗೆ ಎರಡು ದಿನ ಕಳೆದ ಮಗ

ತಾಯಿಯ ಮೃತದೇಹದೊಂದಿಗೆ ಎರಡು ದಿನ ಕಳೆದ ಮಗ

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇನ್ನು ಪರಿಶೀಲನೆ ನಡೆಸಿದ ಬಳಿಕ ಅಣ್ಣಮ್ಮ ಅವರದ್ದು ಸಹಜ ಸಾವಿನಂತೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ತಾಯಿ (Mother) ಮೃತಪಟ್ಟಿದ್ದಾಳೆ ಎಂಬ ಅರಿವು ಇಲ್ಲದೆ ಬಾಲಕನೋರ್ವ (Boy) ಎರಡು ದಿನಗಳ ಕಾಲ ತಾಯಿಯ ಮೃತದೇಹದ ಪಕ್ಕದಲ್ಲೇ ಸಮಯ ಕಳೆದಿರುವ ಘಟನೆ ಬೆಂಗಳೂರಿನ (Bengaluru) ಗಂಗಾ ನಗರದಲ್ಲಿ (Ganga Nagara) ನಡೆದಿದೆ. 40 ವರ್ಷದ ಅಣ್ಣಮ್ಮ ಮಲಗಿದ್ದ ಸ್ಥಿತಿಯಲ್ಲೇ ಮನೆಯಲ್ಲಿ ಸಾವನ್ನಪ್ಪಿದ್ದರು. ಆದರೆ ಈ ಬಗ್ಗೆ ತಿಳಿದಯದ ಆಕೆಯ 11 ವರ್ಷದ ಮಗ (Son) ತಾಯಿಯ ಮೃತದೇಹದೊಂದಿಗೆ ಸಮಯ ಕಳೆದಿದ್ದಾರೆ. ಸ್ಥಳೀಯರು ನೀಡಿರುವ ಮಾಹಿತಿ ಅನ್ವಯ ಅಣ್ಣಮ್ಮ ತನ್ನ ಮಗನ ಜೊತೆ ಒಂಟಿಯಾಗಿ ವಾಸವಿದ್ದರು. ಆದರೆ ಅವರು ಕಳೆದ ಎರಡು ದಿನಗಳ ಹಿಂದೆಯೇ ಮೃತಪಟ್ಟಿದ್ದು, ಮನೆಯಿಂದ ದುರ್ವಾಸನೆ ಬಂದ ಕಾರಣ ಅಕ್ಕಪಕ್ಕದ ನಿವಾಸಿಗಳು ಮನೆಯಲ್ಲಿ ಗಮನಿಸಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.


ಮಾತನಾಡಲು ಬಾರದಿದ್ದರು ಕೂಲಿ ಕೆಲಸ ಮಾಡಿ ಮಗನ ಪೋಷಣೆ


ಗಂಗಾನಗರದ ಸ್ಥಳೀಯ ಸರ್ಕಾರಿ ಶಾಲೆಯೊಂದರ ಮನೆಯಲ್ಲಿ ಅಣ್ಣಮ್ಮ ಮಗನೊಂದಿಗೆ ವಾಸಿಸುತ್ತಿದ್ದರು. ಅಣ್ಣಮ್ಮ ಅವರ ಪತಿ ಕಳೆದ ಕೆಲ ವರ್ಷಗಳ ಹಿಂದೆಯಷ್ಟೇ ಸಾವನ್ನಪ್ಪಿದ್ದರು. ಮಾತನಾಡಲು ಬಾರದ ಅಣ್ಣಮ್ಮ ಕೂಲಿ ಕೆಲಸ ಮಾಡಿಕೊಂಡು ಮಗನನ್ನು ನೋಡಿಕೊಳ್ಳುತ್ತಿದ್ದರು. ಆದರೆ ಏಕಾಏಕಿ ಕಳೆದ ಎರಡು ದಿನಗಳ ಹಿಂದೆ ನಿದ್ದೆ ಮಾಡುತ್ತಿದ್ದ ಸ್ಥಿತಿಯಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Shocking News: ಹೆಂಡ್ತಿ ಮುಂದೆ 'ಸತ್ಯವಾನ್ ಸಾವಿತ್ರಪ್ಪ' ಅಂತ ಪ್ರೂವ್ ಮಾಡೋಕೆ ಅಗ್ನಿಪರೀಕ್ಷೆ! ಕಾದ ಕಬ್ಬಿಣ ಕೈಯಲ್ಲಿ ಹಿಡಿದ ಪತಿ!


ಸಂಬಂಧಿಗಳ ಮನೆಯಲ್ಲಿ ಊಟ ಮಾಡಿದ್ದ ಬಾಲಕ


ತಾಯಿ ಸಾವನ್ನಪ್ಪಿರುವ ಬಗ್ಗೆ ಅರಿವು ಇಲ್ಲ ಮಗ ಮೃತದೇಹದೊಂದಿಗೆ ಎರಡು ದಿನ ಕಳೆದಿದ್ದಾನೆ. ಇನ್ನು ತಾಯಿ ಮಲಗಿದ್ದಾಳೆ ಎಂದು ತಿಳಿದುಕೊಂಡಿದ್ದ ಮಗ, ಅಮ್ಮ ಮನೆಯಲ್ಲಿ ಮಲಗಿದ್ದಾಳೆ ಅಡುಗೆ ಏನು ಮಾಡಿಲ್ಲ ಅಂತ ಹೇಳಿ ನಿತ್ಯ ಶಾಲೆಗೆ ಹೋಗುತ್ತಿದ್ದನಂತೆ.


ಸಂಜೆ ಮನೆಗೆ ಬಂದು ಆಟವಾಡುತ್ತಿದ್ದ ಕಾಲ ಕಳೆಯುತ್ತಿದ್ದನಂತೆ. ರಾತ್ರಿಯಾಗುತ್ತಿದ್ದಂತೆ ಸಂಬಂಧಿಗಳ ಮನೆಗೆ ಹೋಗಿ ಅಮ್ಮ ಮಲಗಿದ್ದಾಳೆ ಅಂತ ಹೇಳಿ ಊಟ ಮಾಡಿಕೊಂಡು ಬಂದು ಮನೆಗೆ ಬಂದು ಅಮ್ಮನ ಮೃತದೇಹದ ಪಕ್ಕದಲ್ಲೇ ಮಲಗಿಕೊಳ್ಳುತ್ತಿದ್ದನಂತೆ.


ಪೊಲೀಸರಿಂದ ಪರಿಶೀಲನೆ


ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇನ್ನು ಪರಿಶೀಲನೆ ನಡೆಸಿದ ಬಳಿಕ ಅಣ್ಣಮ್ಮ ಅವರದ್ದು ಸಹಜ ಸಾವಿನಂತೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮೃತ ಮಹಿಳೆಯ ಸಂಬಂಧಿಗಳಿಗೆ ಮಾಹಿತಿ ನೀಡಲಾಗಿದ್ದು, ಕಾನೂನಿನ ಅನ್ವಯ ಮುಂದಿನ ಕ್ರಮಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Crime News: 16 ಬಾರಿ ಚುಚ್ಚಿ ಚುಚ್ಚಿ ಯುವತಿಯ ಕೊಲೆ; ಇದು ದಿನಕರ್-ಲೀಲಾ ಪ್ರೇಮ್ ಕಹಾನಿ


ಬೇಕರಿಗೆ ನುಗ್ಗಿ ದುಷ್ಕರ್ಮಿಯ ದಾಂದಲೇ!


ಬೆಂಗಳೂರಿನಲ್ಲಿ (Bengaluru) ವ್ಯಕ್ತಿಯೊಬ್ಬ ಬೇಕರಿಗೆ ನುಗ್ಗಿ ಧಾಂದಲೆ ಮಾಡಿರುವ ಘಟನೆ ಇಂದು ಬೆಳಿಗ್ಗೆ 7 ಗಂಟೆ ಸುಮಾರಿನಲ್ಲಿ ನಡೆದಿದೆ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯ (Annapurneshwari Police Station) ಮಾಳಗಾಳದಲ್ಲಿರುವ ರಘುನಾಥ್ ಎಂಬಾತನ ಬೇಕರಿಯಲ್ಲಿ ಘಟನೆ ನಡೆದಿದೆ.


ಪ್ರಕಾಶ್ ಎಂಬಾತ ಕೈಯಲ್ಲಿ ಮರದ ದಿಂಬಿಯನ್ನು ಹಿಡ್ಕೊಂಡು ಬಂದಿದ್ದು ದಾಂಧಲೇ ಮಾಡಿದ್ದಾನೆ. ಬೇಕರಿಯಲ್ಲಿ ಏನೇ ತಗೊಂಡರು ದುಡ್ಡು ಕೇಳಬಾರದು ಅಂತ ಬೆದರಿಕೆ ಹಾಕಿದ್ದಾನೆ. ಈ ವೇಳೆ ಶೋಕೇಸ್ ಗ್ಲಾಸ್ ಹೊಡೆದು ರಘುನಾಥ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ಬಗ್ಗೆ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದ್ದು, ಅನ್ನಪೂರ್ಣಶ್ವರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ಪ್ರಕಾಶ್ ನಾಪತ್ತೆಯಾಗಿದ್ದು, ಹುಡುಕಾಟ ಮಾಡುತ್ತಿದ್ದಾರೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು