• Home
  • »
  • News
  • »
  • state
  • »
  • Shivamogga: ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗು ಸಾವು; ಮೊದಲ ಹುಟ್ಟುಹಬ್ಬಕ್ಕೆ ಕಾದಿತ್ತು ಆಘಾತ

Shivamogga: ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗು ಸಾವು; ಮೊದಲ ಹುಟ್ಟುಹಬ್ಬಕ್ಕೆ ಕಾದಿತ್ತು ಆಘಾತ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಗುವಿನ ಮೊದಲ ವರ್ಷದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಮಗು ಅಕ್ಷಯ್ ತಂದೆ ದೇವರಾಜ್ ತಯಾರಿ ನಡೆಸಿದ್ದರು.

  • Share this:

ಶಿವಮೊಗ್ಗ: ಹನ್ನೊಂದು ತಿಂಗಳ ಮಗುವೊಂದು ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ (Shocking News) ಶಿವಮೊಗ್ಗ ಜಿಲ್ಲೆಯ (Shivamogga) ಶಿಕಾರಿಪುರ ತಾಲ್ಲೂಕಿನ (Shikaripura) ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಜೋಗಿಹಳ್ಳಿಯ ಛಾಯಾಗ್ರಾಹಕ ದೇವರಾಜ್ ಹಾಗೂ ಅನುಷಾ ದಂಪತಿಯ ಮಗ 11 ತಿಂಗಳ ಅಕ್ಷಯ್ ನೀರಿನ ತೊಟ್ಟಿಗೆ ಬಿದ್ದ ದುರ್ದೈವಿ ಮಗು. ಮುಂದಿನ ವಾರ ಒಂದನೇ ವರ್ಷಕ್ಕೆ ಕಾಲಿಡುತ್ತಿದ್ದು ಅಕ್ಷಯ್ ಎಂಬ 11 ತಿಂಗಳು ಮಗು ಮನೆಯ ಮುಂದಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದೆ. ಮೊದಲ ವರ್ಷದ ಹುಟ್ಟು ಹಬ್ಬ ಆಚರಿಸುವ ಮುನ್ನವೇ 11 ತಿಂಗಳ ಮದು ಅಕ್ಷಯ್ ಇಹಲೋಕ ತ್ಯಜಿಸಿರುವುದು ಪೋಷಕರ ಆಕ್ರಂದನಕ್ಕೆ ಕಾರಣವಾಗಿದೆ.


ಮಗುವಿನ ಮೊದಲ ವರ್ಷದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಮಗು ಅಕ್ಷಯ್ ತಂದೆ ದೇವರಾಜ್ ತಯಾರಿ ನಡೆಸಿದ್ದರು. ಆದರೆ ಜನ್ಮದಿನ ಆಚರಣೆಗೂ ಮುನ್ನವೇ ದುರ್ದೈವಿ ಮಗು ನೀರಿನ ತೊಟ್ಟಿಯಲ್ಲಿ ಬಿದ್ದು ಅಸುನೀಗಿದೆ.


ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ
ವಾಹನ ತೊಳೆಯಲು ನೀರಿನ ತೊಟ್ಟಿಯಲ್ಲಿ ಮಗುವಿನ ಅಜ್ಜ ಬಗ್ಗಿದಾಗ ಮಗು ತೊಟ್ಟಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಮಗುವನ್ನು ಎತ್ತಿಕೊಂಡು ತಕ್ಷಣ ಶಿವಮೊಗ್ಗದ ಶಿಕಾರಿಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರೂ ಪ್ರಯೋಜನವಾಗಿಲ್ಲ. 11 ತಿಂಗಳ ಮಗು ಅಕ್ಷಯ್ ಮೊದಲ ವರ್ಷದ ಜನ್ಮದಿನ ಆಚರಿಸಿಕೊಳ್ಳುವ ಮುನ್ನವೇ ಅಸುನೀಗಿದೆ.


ಶಿವಮೊಗ್ಗದಲ್ಲಿ ಎರಡು ಕಾಡಾನೆ ಸಾವು
ಶಿವಮೊಗ್ಗದಲ್ಲಿ ಎರಡು ಕಾಡಾನೆಗಳು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಶೆಟ್ಟಿಹಳ್ಳಿ ಕಾಡಿನ ಆನೆಸರದಲ್ಲಿ ದುರ್ಘಟನೆ ನಡೆದಿದ್ದು ವನ್ಯಜೀವಿ ವಲಯದ ಕಾಡಂಚಿನ ತೋಟದಲ್ಲಿ ಘಟನೆ ಸಂಭವಿಸಿದೆ.


ಇದನ್ನೂ ಓದಿ: Hubballi: ಬಲವಂತದ ಮತಾಂತರ ಪ್ರಕರಣಕ್ಕೆ ಟ್ವಿಸ್ಟ್; ಪ್ರೀತಿಸಿದ ಹುಡುಗಿಯನ್ನ ಕನ್ವರ್ಟ್​ ಮಾಡಲು ಬಂದಿದ್ದನಾ?


ಐಬೆಕ್ಸ್ ಬೇಲಿ ತಗುಲಿ ಎರಡು ಕಾಡಾನೆ ಮೃತ
ಚಂದ್ರನಾಯಕ್ ಎಂಬುವರ ತೋಟದಲ್ಲಿ ಅಳವಡಿಸಿದ್ದ ಐಬೆಕ್ಸ್ ಲೈನ್ ತಗುಲಿ ಎರಡು ಗಂಡು ಕಾಡಾನೆ ಮೃತಪಟ್ಟಿವೆ. ಭದ್ರಾ ವನ್ಯಜೀವಿ ವಲಯದಿಂದ ವಲಸೆ ಬಂದ ಏಳು ಕಾಡಾನೆಗಳು ಶೆಟ್ಟಿಹಳ್ಳಿ ಕಾಡಿನಲ್ಲಿ ಬೀಡುಬಿಟ್ಟಿದ್ದವು. ಆಯನೂರು ವಲಯ ಅರಣ್ಯಾಧಿಕಾರಿಗಳು ಐಬೆಕ್ಸ್ ಬೇಲಿ ತಗುಲಿ ಎರಡು ಕಾಡಾನೆಗಳು ಮೃತಪಟ್ಟ ದುರ್ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.


ಕೆರೆಯಲ್ಲಿ ಈಜಲು ಹೋದ ಅಣ್ಣ ತಮ್ಮಂದಿರು ಸಾವು
ಕೆರೆಯಲ್ಲಿ ಈಜಲು ಹೋದ ಅಣ್ಣ ತಮ್ಮ ನೀರಲ್ಲಿ ಮುಳುಗಿ‌ ಸಾವನ್ನಪ್ಪಿದ ದುರ್ಘಟನೆಯೊಂದು ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ನಡೆದಿದೆ. ವಿನಯ (20) ವೀರೇಶ್ (17) ಸಾವೀಗೀಡಾದ ದುರ್ದೈವಿ ಯುವಕರು. ಇಬ್ಬರು ಮಕ್ಕಳು ಸಾವು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಮರ ಕಡಿಯುವಾಗ ರೆಂಬೆ ಬಿದ್ದು ವ್ಯಕ್ತಿ ಸಾವು
ಶಾಲಾ ಆವರಣದಲ್ಲಿನ ಮರ ಕಡಿಯುವಾಗ ಮರ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ದುರ್ಘಟನೆಯೊಂದು ನಡೆದಿದೆ. ಬೀದರ್ ತಾಲೂಕಿನ ಹೊನ್ನಿಕೇರಿ ಸರ್ಕಾರಿ ಮಾದರಿ ಶಾಲೆಯಲ್ಲಿ ಈ ದುರ್ಘಟನೆ ನಡೆದಿದ್ದು ಹೊನ್ನಿಕೇರಿ ಗ್ರಾಮದ ಸಿದ್ಧಪ್ಪ (42) ಮರಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.


ಇದನ್ನೂ ಓದಿ: Electricity Bill Hike: ಅಕ್ಟೋಬರ್ 1ರಿಂದ ದುನಿಯಾ ಇನ್ನಷ್ಟು ದುಬಾರಿ! ಹೆಚ್ಚಲಿದೆ ಕರೆಂಟ್ ಬಿಲ್


ಗಾಳಿಯಿಂದ ಶಾಲಾ ಆವರಣಲ್ಲಿ ನೆಲಕ್ಕೆ ಬಿದ್ದಿದ್ದ ಮರವನ್ನು ಕಡಿಯುವಾಗ ರೆಂಬೆ ಬಿದ್ದು ಸಿದ್ದಪ್ಪ ಮೃತಪಟ್ಟಿದ್ದಾರೆ. ಜನವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: