• Home
  • »
  • News
  • »
  • state
  • »
  • freedom fighter Doreswamy RIP : ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಇನ್ನಿಲ್ಲ

freedom fighter Doreswamy RIP : ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಇನ್ನಿಲ್ಲ

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ

ಇಂದು ಮಧ್ಯಾಹ್ನ 1:35ರ ಸುಮಾರಿಗೆ ಹೃದಯಸ್ತಂಭನದಿಂದ ದೊರೆಸ್ವಾಮಿ ಅವರು ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ದೊರೆಸ್ವಾಮಿ ಅವರು ಕೊರೋನಾ ಸೋಂಕಿಗೆ ತುತ್ತಾಗಿದ್ದರು.

  • Share this:

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್​.ಎಸ್​.ದೊರೆಸ್ವಾಮಿ (104) ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ 15 ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮಧ್ಯಾಹ್ನ 1:35ರ ಸುಮಾರಿಗೆ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ದೊರೆಸ್ವಾಮಿ ಅವರು ಕೊರೋನಾ ಸೋಂಕಿಗೆ ತುತ್ತಾಗಿದ್ದರು.


ಆದರೆ ಕೆಲವೇ ದಿನಗಳಲ್ಲಿ ಚೇತರಿಸಿಕೊಂಡು ಸೋಂಕನ್ನು ಗೆದ್ದಿದ್ದರು. ಕೊರೋನಾದಿಂದ ಗುಣಮುಖರಾಗಿ ಮನೆಗೆ ಬಂದಿದ್ದರು. ಆದರೆ ಕೋವಿಡ್​​ ವರದಿ ನೆಗೆಟಿವ್​ ಬಂದ ಬಳಿಕವೂ ಅವರ ಆರೋಗ್ಯ ಸುಧಾರಿಸಿರಲಿಲ್ಲ. ಕಳೆದ ಸೋಮವಾರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡು ಬಂದಿತ್ತು. ಉಸಿರಾಟದ ಸಮಸ್ಯೆ ಎದುರಾದ ತಕ್ಷಣ ಜಯದೇವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.


ರಾಜ್ಯದ ಸಾಕ್ಷಿಪ್ರಜ್ಞೆಯಂತಿದ್ದ ದೊರೆಸ್ವಾಮಿಯವರು ತಮ್ಮ ಜೀವನದುದ್ದಕ್ಕೂ ಹಲವು ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನೂರಾರು ಹೋರಾಟಗಳಲ್ಲಿ ಭಾಗಿಯಾಗಿದ್ದರು. ಅನ್ಯಾಯದ ಪರ ದನಿ ಎತ್ತುವಲ್ಲಿ ಅವರು ಎಂದೂ ಎರಡನೇ ಯೋಚನೆಯನ್ನೇ ಮಾಡಿದವರಲ್ಲ.


ರಾಜ್ಯದ ಅಮೂಲ್ಯರತ್ನ ಇಂದು ಕಣ್ಮರೆಯಾಗಿರುವುದಕ್ಕೆ ಸಿಎಂ ಬಿ.ಎಸ್​.ಯಡಿಯೂರಪ್ಪ ಸೇರಿದಂತೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದು, ಸಾವಿನ ಸುದ್ದಿಯಿಂದ ಆಘಾತವಾಗಿದೆ. ಮನೆಯ ಹಿರಿಯನನ್ನು ಕಳೆದುಕೊಂಡ ದುಃಖ ನನ್ನದಾಗಿದೆ. ಅವರು ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿಗಳ ಶೋಕ ಸಾಗರದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಸಂತಾಪ ಸೂಚಿಸಿದ್ದಾರೆ.


ದೊರೆಸ್ವಾಮಿ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ಸಂತಾಪ ಸೂಚಿಸಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದರು. ಕೋವಿಡ್ ಕುರಿತ ಸಭೆಗೆ ನನಗೂ ಆಹ್ವಾನಿಸಿದ್ದರು. ನೂರಕ್ಕೂ ಹೆಚ್ಚು ವರ್ಷಗಳ ಕಾಲ ಜೀವಿಸಿದವರು. ಕೊನೆಯ ಉಸಿರಿನವರೆಗೂ ಹೋರಾಟಕ್ಕೆ ಆದ್ಯತೆ ಕೊಟ್ಟವರು. ಅವರು ನಮ್ಮ ತಾಲೂಕಿನವರಾಗಿದ್ದು, ನಾನು ಬಹಳ ದಿನಗಳಿಂದಲೂ ಅವರನ್ನ ಬಲ್ಲೆ.  ಅವರ ಹಿರಿತನ, ತ್ಯಾಗ, ಹೋರಾಟಕ್ಕೆ ಗೌರವ ನೀಡುತ್ತಿದ್ದರು.  ಪಕ್ಷ ಬೇಧವಿಲ್ಲದೆ ಸಮಾಜದ ಧ್ವನಿಯಾಗಿದ್ದರು. ಪಕ್ಷದ ಪರವಾಗಿ ನಾನು ಸಂತಾಪ ಸಲ್ಲಿಸುತ್ತೇನೆ. ಅವರ ನಿಧನ ರಾಜ್ಯಕ್ಕೆ ನಷ್ಟ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಡಿಕೆಶಿ ಸಂತಾಪ ಸೂಚಿಸಿದರು.

Published by:Kavya V
First published: