Dog Birthday: ಯಾರೋ ನಾಯಿಗಳು ಎಂದು ಬೈದಿದ್ದಕ್ಕೆ ಸಾಕು ನಾಯಿಯ ಬರ್ತ್​ ಡೇ ಆಚರಿಸಿ, ಊರಿಗೆಲ್ಲಾ ಬಾಡೂಟ ಹಾಕಿದ್ರು

ನಿಯತ್ತಿಗೆ ಹೆಸರುವಾಸಿ ಶ್ವಾನ. ನೆಚ್ಚಿನ ಸಾಕು ನಾಯಿಯ (ಕ್ರಿಶ್) ಜನ್ಮದಿನವನ್ನು ಆಚರಿಸಿದ ವ್ಯಕ್ತಿಯೋರ್ವ ಗ್ರಾಮಸ್ಥರಿಗೆ ಭರ್ಜರಿ ಊಟ ಹಾಕಿಸಿದ ಪ್ರಸಂಗ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಸಾಕು ನಾಯಿ ಹುಟ್ಟುಹಬ್ಬ ಆಚರಣೆ

ಸಾಕು ನಾಯಿ ಹುಟ್ಟುಹಬ್ಬ ಆಚರಣೆ

  • Share this:
ಬೆಳಗಾವಿ (ಜೂ.23): ಇತ್ತೀಚಿಗೆ ಬಿಡುಗಡೆಯಾದ  777 ಚಾರ್ಲಿ  (777 Charlie) ಚಿತ್ರ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಂಡಿದೆ. ಇನ್ನೂ ಚಿತ್ರದಲ್ಲಿ ನಾಯಿ ಪ್ರೀತಿಯ ಬಗ್ಗೆ ಮನೋಜ್ಞವಾಗಿ ತೋರಿಸಲಾಗಿದೆ. ಚಿತ್ರ ನೋಡಿದ ಪ್ರೇಕ್ಷಕರ ಕಣ್ಣಲ್ಲಿ ನೀರು ಬರೋದು ಸಹಜ. ಸಾಕು ನಾಯಿಯ (Pet Dog) ಅದ್ದೂರಿ ಹುಟ್ಟುಹಬ್ಬ (Birthday) ಆಚರಿಸುವ ಮೂಲಕ ವ್ಯಕ್ತಿಯೊಬ್ಬರು ಸುದ್ದಿಯಾಗಿದ್ದಾರೆ.  ನಾಯಿ ಹುಟ್ಟುಹಬ್ಬದ ಸಂಭ್ರಮಕ್ಕೆ  ಇಡೀ ಗ್ರಾಮದ ಜನರಿಗೆ ಬಾಡೂಟ ಹಾಕಲಾಗಿದೆ. ಹುಟ್ಟುಹಬ್ಬ ಆಚರಣೆ ಮಾಡೋಕೆ ಕಾರಣವಾಗಿದ್ದು, ಆ ಒಂದು ಚುಚ್ಚು ಮಾತು. 

ಕ್ರಿಶ್ ಹುಟ್ಟುಹಬ್ಬಕ್ಕೆ  100 ಕೆ.ಜಿ ಕೇಕ್​

ನಿಯತ್ತು, ಸ್ವಾಮಿನಿಷ್ಠೆಗೆ ಹೆಸರುವಾಸಿ ಶ್ವಾನ. ಇದಕ್ಕೆ ಸಾಕ್ಷಿ ಎಂಬಂತೆ ನೆಚ್ಚಿನ ಸಾಕು ನಾಯಿಯ (ಕ್ರಿಶ್) ಜನ್ಮದಿನವನ್ನು ಆಚರಿಸಿ ಗ್ರಾಮದ ಜನರಿಗೆ ವ್ಯಕ್ತಿಯೋರ್ವ ವಿಶೇಷ ಊಟ ಹಾಕಿಸಿದ ಪ್ರಸಂಗ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ. ನಾಯಿಯ ಜನ್ಮದಿನಕ್ಕೆ 1 ಕ್ವಿಂಟಲ್​ ಕೇಕ್​​ನ್ನು ಕತ್ತರಿಸಿದ್ದಾರೆ.

5 ಸಾವಿರ ಜನರಿಗೆ ಬಾಡೂಟ

ಅಲ್ಲದೇ ಗ್ರಾಮದ 5 ಸಾವಿರ ಜನರಿಗೆ 3 ಕ್ವಿಂಟಲ್ ಚಿಕನ್, ಮೊಟ್ಟೆ ಊಟ ಹಾಕಿಸಿದ್ದಾರೆ. ಜತೆಗೆ ಸಸ್ಯಹಾರಿಗಳಿಗೆ 50ಕೆಜಿ ಕಾಜೂಕರಿ ಊಟ ಹಾಕಿಸಿದ್ದಾರೆ. ನಾಯಿ ಮಾಲೀಕರಾಗಿರುವ ಇಲ್ಲಿನ ಗ್ರಾಮ ಪಂಚಾಯತ್​ ಸದಸ್ಯ ಶಿವಪ್ಪ‌ ಯಲ್ಲಪ್ಪ ಮರ್ದಿ ಎಂಬುವರು ಈ ರೀತಿ ತಮ್ಮ ನೆಚ್ಚಿನ ನಾಯಿಯ ಜನ್ಮದಿನ ಆಚರಿಸುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.

ಗ್ರಾಮ ಪಂಚಾಯತ್​ ಸದಸ್ಯ ಶಿವಪ್ಪ‌ ಯಲ್ಲಪ್ಪ ಮರ್ದಿಗೆ ಹಿಂದಿನ ಗ್ರಾಮ ಪಂಚಾಯಿತಿ ಸದಸ್ಯರು ನಾಯಿಯಂತೆ ತಿಂದು ಹೋಗಿದ್ದಾರೆಂದು ಅವಮಾನ ಮಾಡಿದ್ದಾರಂತೆ. ಹೀಗಾಗಿ ಅವರಿಗೆ ಪ್ರತ್ಯುತ್ತರ ಕೊಡಲು ನಾಯಿ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಲ್ಲದೇ ಐದು ಸಾವಿರ ಜನರಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ: Mysuru: 21 ವರ್ಷದ ಅರ್ಚಕನ ಜೊತೆ 35 ವರ್ಷದ ಮಹಿಳೆ ಎಸ್ಕೇಪ್; ನಂಬಿಸಿ ಕರೆದೊಯ್ದು ಕಾಡಲ್ಲೇ ಬಿಟ್ಟು ಹೋದ!

ವಾದ್ಯಗಳ ಮೂಲಕ ಕ್ರಿಶ್​ ಭರ್ಜರಿ ಮೆರವಣಿಗೆ

ಕೇಕ್​ ಕತ್ತರಿಸಿದ ನಂತರ ನಾಯಿಗೆ ಗ್ರಾಮದಲ್ಲಿ ವಾದ್ಯಗಳ ಮೂಲಕ ಅದ್ಧೂರಿಯಾಗಿ ಮೆರವಣಿಗೆಯನ್ನು ಸಹ ಮಾಡಿಸಲಾಗಿದೆ. ಈ ವೇಳೆ ಊರಿನ ಜನರೆಲ್ಲಾ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.
ಜನ್ಮದಿನ ಆಚರಣೆಗೆ ಕಾರಣ? ನಾಯಿ ಕ್ರಿಶ್ ಸಾಕಿರೋ ಶಿವಪ್ಪ ಮರ್ದಿ ಕಳೆದ 20 ವರ್ಷಗಳಿಂದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ. ಈ ವೇಳೆ ನೂತನ ಸದಸ್ಯರೊಬ್ಬರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಹಳೆ ಸದಸ್ಯರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ.

ಅವನಹೇಳನಕ್ಕೆ ಈ ಮೂಲಕ ಪ್ರತ್ಯುತ್ತರ

ಹಿಂದಿನ ಸದಸ್ಯರು ನಾಯಿಯಂತೆ ತಿಂದು ಹೋಗಿದ್ದಾರೆಂದು ಅವಮಾನ ಮಾಡಿದ್ದಾರಂತೆ. ಹೀಗಾಗಿ ಅವರಿಗೆ ಪ್ರತ್ಯುತ್ತರ ಕೊಡಲು ನಾಯಿ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಲ್ಲದೇ 5 ಸಾವಿರ ಜನರಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ.

ನಾನು 10 ಸಾವಿರ ಜನರಿಗೆ ಊಟ ಹಾಕಿಸಲು ಸಿದ್ದ

ಈ ಬಗ್ಗೆ ಮಾತನಾಡಿದ ಶಿವಪ್ಪ ಮರ್ದಿ, ಗ್ರಾ ಪಂ ಪಂಚಾಯತಿಯವರು ಮತ್ತೆ ಏನಾದ್ರು ಸಭೆ ಮಾಡಿ ಊಟ ಹಾಕಿಸಿದ್ರೆ.‌ ನಾನು 10 ಸಾವಿರ ಜನರಿಗೆ ಊಟ ಹಾಕಿಸಲು ಸಿದ್ದ. ನಾನೇನು ಶ್ರೀಮಂತ ಅಲ್ಲ ಆದರೇ ನಾವೆಲ್ಲಾ ಸಂಬಂಧಿಕರು ಸೇರಿ ಸಾಕು ನಾಯಿಯ ಬರ್ತ್ ಡೇ ಮಾಡಿದ್ದೇವೆ. ಗ್ರಾಮ ರೈತ ಮುಖಂಡ ಭೀಮಶಿ ಗಡಾದ್ ಮಾತನಾಡಿ, ನಾಯಿಗೆ ಇರೋ ಬೆಲೆ ಮನುಷ್ಯನಿಗೆ ಇಲ್ಲ. ನಮ್ಮ ಬಗ್ಗೆ ಮಾತನಾಡಿರೋದು ನಾಯಿಗಿಂತ ಕೀಳು. ಯಾರ ಬಗ್ಗೆ ಏನ್ ಮಾತನಾಡಬೇಕು ಎಂಬ ಅರಿವು ನಮ್ಮ ಬಗ್ಗೆ ಮಾತನಾಡಿರೋವರಿಗೆ ಇಲ್ಲ.
Published by:Pavana HS
First published: