BBMP: ಸಾಯಿ ಲೇಔಟ್ ಜಲಾವೃತ, 10 ಸಾವಿರ ಪರಿಹಾರ; ಜನರು ಕೆಂಡಾಮಂಡಲ

ಮನೆಯೊಳಗಿದ್ದ ವಸ್ತುಗಳು ಸಂಪೂರ್ಣ ನೀರು ಪಾಲಾಗಿದೆ ಹಾಗೂ ಕೆಲವು ಮನೆಗಳು ಖಾಲಿ ಖಾಲಿ ಬಿದ್ದಿವೆ. ಈಗ ಬಿಬಿಎಂಪಿ ಕೊಡುವ 10 ಸಾವಿರ ರೂಪಾಯಿಂದ ಏನು ಪ್ರಯೋಜನ ಅಂತ ಲೇಔಟ್ ನಿವಾಸಿಗಳು ಸಿಡಿಮಿಡಿಗೊಂಡಿದ್ದಾರೆ. 

ಸಾಯಿ ಲೇಔಟ್ ಜನರ ಆಕ್ರೋಶ

ಸಾಯಿ ಲೇಔಟ್ ಜನರ ಆಕ್ರೋಶ

  • Share this:
ರಾಜಧಾನಿಯಲ್ಲಿ ಬೀಳುತ್ತಿರುವ ಮಳೆಯ (Heavy Rain) ಜೊತೆ ಜೀವನವನ್ನೂ ಮುಳುಗಿಸುತ್ತಿದೆ. ಸದ್ಯ ಮಳೆ ಜಿಟಿಜಿಟಿಯಾಗಿ ಸುರಿಯುತ್ತಿದ್ದರೂ ಕಳೆದ ಕೆಲವು ದಿನಗಳ ಹಿಂದೆ ಬಿದ್ದ ಮಳೆಯ ಪರಿಣಾಮದಿಂದ ಈಗಲೈ ಜನರು ಹೊರ ಬಂದಿಲ್ಲ. ಮುಖ್ಯವಾಗಿ ಸಾಯಿ ಲೇಔಟ್ (Sai layout) ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಇದಕ್ಕೆ ಬಿಬಿಎಂಪಿ (BBMP) ಮೂಡ ಪರಿಹಾರ (Compensation) ಕೊಡ್ತೀವಿ ಅಂತ ಹೇಳಿತ್ತು. ಆದರೆ ಬಿಬಿಎಂಪಿಯ ಬಿಡಿಗಾಸಿನ ಭಿಕ್ಷೆ ನಮಗೆ ಬೇಡ ಅಂತಿದ್ದಾರೆ ಸಾಯಿ ಲೇಔಟ್ ಜನರು. 

ನಿರಂತರ ಮಳೆಯಿಂದಾಗಿ ರಾಜಧಾನಿಯ ಹಲವೆಡೆ ಅವಾಂತರ.. ಜನ ತತ್ತರ 

ಸತತ ಮಳೆಯಿಂದಾಗಿ ಕಟ್ಟಡ ಕುಸಿತ, ಮನೆಯೊಗೆ ನುಗ್ಗುತ್ತಿರುವ ನೀರು. ವಸ್ತುಗಳೆಲ್ಲಾ ನೀರು ಪಾಲಾಗಿ ಜನ ಜೀವನ ಬುಡಮೇಲಾಗುತ್ತಿದೆ. ಈ ಹಿನ್ನೆಲೆ ಬಿಬಿಎಂಪಿ ಮಳೆ ನೀರು ನುಗ್ಗಿ ನಷ್ಟ ಅನುಭವಿಸುತ್ತಿರುವ ಜನರಿಗೆ 10 ಸಾವಿರ ರೂಪಾಯಿ ಪರಿಹಾರ ಕೊಡುವುದಾಗಿ‌ ಹೇಳಿದೆ. ಹೌದು, ಮಳೆ ಅವಾಂತರಕ್ಕೆ ಸಿಲುಕಿದವರಿಗೆ ಬಿಬಿಎಂಪಿಯಿಂದ 10 ಸಾವಿರ ಪರಿಹಾರ ಘೋಷಣೆಯಾಗಿದೆ. ಆದರೆ ಪಾಲಿಕೆ ಪರಿಹಾರ ಕೊಡ್ತೀವಿ ಎಂದಿದ್ದೇ ತಡ ಸಾಯಿ ಲೇಔಟ್ ನಿವಾಸಿಗಳು ಕೆರಳಿ ಕೆಂಡವಾಗಿದ್ದಾರೆ.



ಇದನ್ನೂ ಓದಿ:  Chikkamagaluru: ಮೂರು ವರ್ಷ ಕಳೆದ್ರೂ ಸಿಗದ ಪರಿಹಾರ; ಸರ್ಕಾರದ ವಿರುದ್ಧ ಪ್ರವಾಹ ಸಂತ್ರಸ್ತರ ಆಕ್ರೋಶ

ಬಿಬಿಎಂಪಿಯ 10 ಸಾವಿರ ಪರಿಹಾರಕ್ಕೆ ಕೆರಳಿ ಕೆಂಡವಾದ ಸಾಯಿ ಲೇಔಟ್ ನಿವಾಸಿಗಳು !

ಸಾಯಿ ಲೇಔಟ್‌ ಕೆಲವು ದಿನ ಹಿಂದೆ ಬಿದ್ದ ಮಳೆಗೆ ಸಂಪೂರ್ಣ ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿ ಜನ ಜೀವನ ತತ್ತರಿಸಿ ಹೋಗಿತ್ತು. ಒಂದೇ ವರ್ಷದಲ್ಲಿ ಮೂರು ಬಾರಿ ವಿಪರೀತ ಮಳೆಗೆ‌ ಜಲಾವೃತಗೊಂಡರಿವ ಸಾಯಿ ಲೇಔಟ್ ನಿವಾಸಿಗಳು ಗೋಳು ಹೇಳತೀರದ್ದಾಗಿದೆ. ಸದ್ಯ ಬಡಾವಣೆಗೆ ನುಗ್ಗಿದ್ದ ಮಳೆ ನೀರು ಬಹುತೇಕ ಇಳಿಕೆಯಾಗಿದ್ದರೂ, ಹಲವು ಮನೆಯೊಳಗಿದ್ದ ವಸ್ತುಗಳು ಸಂಪೂರ್ಣ ನೀರು ಪಾಲಾಗಿದೆ ಹಾಗೂ ಕೆಲವು ಮನೆಗಳು ಖಾಲಿ ಖಾಲಿ ಬಿದ್ದಿವೆ. ಈಗ ಬಿಬಿಎಂಪಿ ಕೊಡುವ 10 ಸಾವಿರ ರೂಪಾಯಿಂದ ಏನು ಪ್ರಯೋಜನ ಅಂತ ಲೇಔಟ್ ನಿವಾಸಿಗಳು ಸಿಡಿಮಿಡಿಗೊಂಡಿದ್ದಾರೆ.



ನಮಗೆ ಬಿಬಿಎಂಪಿಯ ಭಿಕ್ಷೆ ಬೇಡ.. ರೊಚ್ಚಿಗೆದ್ದ ಸಾಯಿ ಲೇಔಟ್ ನಿವಾಸಿ !

ಮಳೆ ನೀರು ನುಗ್ಗಿ ಮನೆಯೊಳಗಿನ ಬಹುತೇಕ ವಸ್ತುಗಳು ಕಳೆದುಕೊಂಡಿರುವ ಸಾಯಿ ಲೇಔಟ್ ನಿವಾಸಿ ನಿರ್ಮಲಮ್ಮ ಎಂಬವರು ಬಿಬಿಎಂಪಿಯ ಪರಿಹಾರದ ಬಗ್ಗೆ ಆಕ್ರೋಶ ಹೊರಹಾಕಿದರು. ನಮಗೆ ಬಿಬಿಎಂಪಿ ಕೊಡುವ ಭಿಕ್ಷೆ ಬೇಡ. ಇದಕ್ಕೊಂದು ಶಾಶ್ವತ ಪರಿಹಾರ ಕೊಡಿ. ಮಳೆಗೆ ನೀರು ನುಗ್ಗಿ ನನ್ನ ಮನೆಯೊಳಗಿನ ವಸ್ತುಗಳೆಲ್ಲವೂ ಹಾಳಾಗಿದೆ. ಫ್ರಿಡ್ಜ್, ವಾಷಿಂಗ್ ಮಷಿನ್, ಟಿವಿ, ಸೋಫಾ ಎಲ್ಲಾ ನೀರು ಪಾಲಾಗಿದೆ. ಪ್ರತಿ ವರ್ಷ ಹೊಸ ಫ್ರಿಡ್ಜ್, ವಾಷಿಂಗ್ ಮಷಿನ್, ಟಿವಿ ಖರೀದಿ ಮಾಡೋಕೆ‌ ಆಗುತ್ತಾ..? 10-20 ಸಾವಿರ ಪರಿಹಾರ ಸಿಕ್ಕರೆ ಒಂದು ವಸ್ತು ಕೊಳ್ಳಲು ಸಾಕಾಗಲ್ಲ, ನಮಗೆ ಪರಿಹಾರ ಬೇಡ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ:  Arkavathi River: ದಶಕಗಳ ನಂತರ ಮೈದುಂಬಿ ಹರಿಯುತ್ತಿದ್ದಾಳೆ ಅರ್ಕಾವತಿ; 1962ರಲ್ಲಿ ಕಾಣಿಸಿಕೊಂಡಿತ್ತು ಪ್ರವಾಹ

ಒಟ್ಟಾರೆ ಜಿಟಿಜಿಟಿಯಾಗಿ ಬೀಳುತ್ತಿರುವ ಮಳೆಗೆ ಬೆಂಗಳೂರು ತತ್ತರಿಸಿ ಹೋಗುವುದರ ಜೊತೆಗೆ ಕಷ್ಟ ಬಿದ್ದು ಸಂಪಾದಿಸಿರುವ ಮನೆಯ ವಸ್ತುಗಳನ್ನೂ ಕೊಂಡೊಯ್ಯುತ್ತಿದೆ. ಇದಕ್ಕೆ ಬಿಬಿಎಂಪಿ 10 ಸಾವಿರ ರೂಪಾಯಿ ಪರಿಹಾರ ಕೊಡುತ್ತಿವೆಯಾದರೂ, ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಜನರು ಆಕ್ರೋಶಗೊಳ್ಳುತ್ತಿದ್ದಾರೆ. ಬೇಕಾಬಿಟ್ಟಿ ಹಣ ಪೋಲು ಮಾಡುವ ಬಿಬಿಎಂಪಿ ಅಧಿಕಾರಿಗಳು ಜನರಿಗೆ ಅನುಕೂಲವಾಗುವಂತೆ ಪರಿಹಾರ ಕೊಟ್ಟರೆ ಜನರು ಮತ್ತೆ ತಮ್ಮ ಬದುಕು ಕಟ್ಟಿಕೊಳ್ಳಲು ಸಹಕಾರವಾದೀತು.
Published by:Pavana HS
First published: