Rain Effect: ಕೋಲಾರದಲ್ಲಿ ಮಳೆ ಆರ್ಭಟಕ್ಕೆ ಫಾರಂನಲ್ಲಿದ್ದ 10 ಸಾವಿರ ಕೋಳಿ ನೀರುಪಾಲು!

ಕೋಲಾರದಲ್ಲಿ ಕಳೆದೆರಡು ದಿನದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಅಪಾರ ಪ್ರಮಾಣದ ಬೆಳೆಹಾನಿ ಸಂಭವಿಸಿದೆ. ಕೋಲಾರ ನಗರದಲ್ಲಿನ ಕೋಲಾರಮ್ಮ ಕೆರೆ, ರಾಜಕಾಲುವೆಯ ನೀರು ಅಕ್ಕ ಪಕ್ಕದ ತೋಟಗಳಿಗೆ ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಕೋಳಿಗಳ ಮಾರಣಹೋಮವಾಗಿದೆ.

ಮಳೆಗೆ ಕೋಳಿಗಳ ಸಾವು

ಮಳೆಗೆ ಕೋಳಿಗಳ ಸಾವು

  • Share this:
ಬಯಲುಸೀಮೆಯಲ್ಲಿ ಈ ಬಾರಿ ಕಂಡುಕೇಳರಿಯದಷ್ಟು ಮಳೆಯಾಗಿದೆ (Heavy Rain). ನಿರಂತರ ಮಳೆ ಸುರಿಯುತ್ತಾನೇ ಇದೆ. ಕಳೆದ ದಿನ ವೂ ಕೋಲಾರ (Kolar) ಜಿಲ್ಲೆಯಲ್ಲಿ ವರುಣದೇವ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಕಳೆದ ತಿಂಗಳು ಸುರಿದ ಮಳೆಯಿಂದಾಗಿ ಕೋಟ್ಯಾಂತರ ರೂಪಾಯಿ ಬೆಳೆಹಾನಿಯಾಗಿದ್ದು (Crop loss) ಇನ್ನೂ ರೈತರಿಗೆ ಪರಿಹಾರ (Money) ದೊರೆತಿಲ್ಲ. ಆದರೆ ಇದೀಗ ಮತ್ತೆ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಮತ್ತೊಮ್ಮೆ ರೈತರು ಸಂಕಷ್ಟಕ್ಕೆ (Farmers problem) ಗುರಿಯಾಗಿದ್ದಾರೆ. ಕೋಲಾರ ತಾಲೂಕಿನ ಚೆಲುವನಹಳ್ಳಿ ಗ್ರಾಮದ ಚೌಡಪ್ಪ ಎನ್ನುವರಿಗೆ ಸೇರಿದ ಕೋಳಿಫಾರಂಗೆ (Chicken farm) ಮಳೆನೀರು ನುಗ್ಗಿ ಅವಾಂತರ ಉಂಟಾಗಿದೆ. ಫಾರಂನಲ್ಲಿದ್ದ ಬರೋಬ್ಬರಿ 10 ಸಾವಿರದಷ್ಟು ಕೋಳಿಗಳು ನೀರುಪಾಲಾಗಿದೆ. ಪರಿಣಾಮ ಮಾಲೀಕ ಕಣ್ಣೀರು ಹಾಕುವಂತಾಗಿದೆ.

ಕೋಲಾರದಲ್ಲಿ ಕಳೆದೆರಡು ದಿನದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಅಪಾರ ಪ್ರಮಾಣದ ಬೆಳೆಹಾನಿ ಸಂಭವಿಸಿದೆ. ಕೋಲಾರ ನಗರದಲ್ಲಿನ ಕೋಲಾರಮ್ಮ ಕೆರೆ ರಾಜಕಾಲುವೆ ಅಕ್ಕ ಪಕ್ಕದ ತೋಟಗಳಿಗೆ ಮಳೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಕೋಳಿಗಳ ಮಾರಣಹೋಮವಾಗಿ ಹೋಗಿದೆ.

10000 chickens in the farm were watered for rain in Kolar
ಕೋಲಾರದಲ್ಲಿ ಮಳೆ ಆರ್ಭಟ


ಕೋಳಿಫಾರಂಗೆ ನೀರು ನುಗ್ಗಿ 10 ಸಾವಿರ ಕೋಳಿಗಳು ಸಾವು
ಕೋಲಾರ ತಾಲೂಕಿನ ಚೆಲುವನಹಳ್ಳಿ ಗ್ರಾಮದ ಚೌಡಪ್ಪ ಎನ್ನುವರಿಗೆ ಸೇರಿದ ಕೋಳಿಫಾರಂಗೆ ಮಳೆನೀರು ನುಗ್ಗಿ ಅವಾಂತರ ಉಂಟಾಗಿದೆ. 10 ಸಾವಿರ ಕೋಳಿಗಳು ಸಾವನ್ನಪ್ಪಿದೆ. ತಡರಾತ್ರಿ ಮಳೆಯಿಂದಾಗಿ ರಾಜಕಾಲುವೆಯಿಂದ ನೀರು ಹರಿದು ಕೋಳಿಗಳು ಸಾವನ್ನಪ್ಪಿದೆ. ಸುಮಾರು 15 ಲಕ್ಷಕ್ಕೂ ಹೆಚ್ಚು ಹಣ ನಷ್ಟವಾಗಿದೆ.

10000 chickens in the farm were watered for rain in Kolar
ಮಳೆಗೆ ಕೋಳಿಗಳ ಸಾವು


ಕೋಳಿಗಳ ಸಾವಿಗೆ ಪರಿಹಾರ ನೀಡುವಂತೆ ಆಗ್ರಹ
ಕೋಳಿಗಳ ಸಾವಿನಿಂದ ಮಾಲೀಕ ಚೌಡಪ್ಪ ಕಂಗಾಲಾಗಿದ್ದಾರೆ. ಹಾಗಾಗಿ ಸೂಕ್ತ ಪರಿಹಾರ ನೀಡುವಂತೆ ರೈತ ಚೌಡಪ್ಪ ಆಗ್ರಹಿದ್ದಾರೆ. ಸ್ಥಳಕ್ಕೆ ಕೋಲಾರ ತಹಶಿಲ್ದಾರ್ ಕಚೇರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಮಲಗಿದ್ದವಳ ಮೈಮೇಲೆ ನಾಗರಹಾವಿನ ನರ್ತನ! ಸಾವಿನ ದವಡೆಯಿಂದ ಮಹಿಳೆ ಪಾರಾದ ರೋಚಕ ವಿಡಿಯೋ ಇಲ್ಲಿದೆ

ರಾಜಕಾಲುವೆ ನೀರು ನುಗ್ಗಿ ಅವಾಂತರ
ರಾಜಕಾಲುವೆ ನೀರು ನುಗ್ಗಿ ರೈಲ್ವೆ ಸ್ಟೇಷನ್ ಪಕ್ಕದ ನಾರಾಯಣಪ್ಪ ಎನ್ನುವರಿಗೆ ಸೇರಿದ ಕೊತ್ತಂಬರಿ, ಬೀಟ್​ರೂಟ್ ಬೆಳೆ ನಾಶವಾಗಿದೆ. ನಗರದ ಆರ್.ಟಿ.ಒ ಕಚೇರಿ ಸುತ್ತಲೂ ಮಳೆನೀರು ಆವರಿಸಿದ್ದು, ಪಕ್ಕದ ಗಣೇಶ ದೇಗುಲ ಸಂಪೂರ್ಣವಾಗಿ ಜಲಾವೃತಗೊಂಡಿತ್ತು.

ತಗ್ಗುಪ್ರದೇಶಗಳ ಬಡಾವಣೆಗಳಿಗೆ ಮಳೆ ನೀರು ನುಗ್ಗಿ ರಾತ್ರಿಯಿಡೀ ಜಾಗರಣೆ
ಕೋಲಾರ ನಗರದಲ್ಲಿ ಸುರಿದ ಮಳೆಯಿಂದಾಗಿ ತಗ್ಗುಪ್ರದೇಶಗಳ ಬಡಾವಣೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ, ಜನರು ರಾತ್ರಿಯಿಡೀ ಜಾಗರಣೆ ಕಳೆದಿದ್ದಾರೆ. ಕೋಲಾರದ ಚೌಡೇಶ್ವರಿ ನಗರದ ಹಲವು ಮನೆಗಳು ಜಲಾವೃತವಾಗಿದೆ. ಕೋಲಾರದ ಶಾಂತಿನಗರ ಮತ್ತು ರೆಹಮತ್ ನಗರದಲ್ಲು ಇದೇ ಪರಿಸ್ಥಿತಿಯಿದೆ. ಮಳೆಯಾದಗಲೆಲ್ಲಾ ಇದೇ ಪರಿಸ್ಥಿತಿ ಮುಂದುವರಿಯುತ್ತದೆ.

ಗ್ರಾಮದ ಜನರಿಂದಲೇ ನಡೆದಿದ್ಯಾ ರಾಜಕಾಲುವೆ ಒತ್ತುವರಿ
ಕೋಲಾರ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರೇ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ಹಾಗಾಗಿ ಮಳೆಯಾದಗಲೆಲ್ಲಾ ತೋಟಗಳಿಗೆ ನೀರು ಹರಿದು ಅವಾಂತರ ಸೃಷ್ಟಿಯಾಗುತ್ತಿದೆ. ಆದರೆ ಮಳೆ ನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಅವ್ಯವಸ್ಥೆ ಆಗಿದ್ದು ಇದಕ್ಕೆ ಜಿಲ್ಲಾಡಳಿತ ಹೊಣೆಯೆಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಭಾನುಮತಿ ಖೆಡ್ಡಾಕ್ಕೆ ಬಿದ್ದ ಹಾವೇರಿ ಟಸ್ಕರ್! ಮಲೆನಾಡಿಗರ ನಿದ್ದೆಗೆಡಿಸಿದ್ದ ಒಂಟಿ ಸಲಗ ಸೆರೆ

ಸಿ.ಎಮ್.ಆರ್ ಶ್ರೀನಾಥ್, ಕೋಳಿಗಳ ನಾಶ ಹಾಗು ರಾಜಕಾಲುವೆ ಒತ್ತವರಿಯನ್ನ ಪರಿಶೀಲನೆ ನಡೆಸಿದರು. ಇದೇ ವೇಳೆ ಗ್ರಾಮದಲ್ಲಿನ ಒತ್ತುವರಿಯನ್ನ ತೆರವು ಮಾಡುವಂತೆ ಕೋಲಾರ ತಹಶಿಲ್ದಾರ್ ನಾಗರಾಜ್ ರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಕೋಲಾರದ ಬೋರ್​ಗಳಲ್ಲಿ ಚಿಮ್ಮುತ್ತಿವೆ ನೀರು
ಕೋಲಾರದಲ್ಲಿ ಬೋರ್ ವೆಲ್ ನಿಂದ ನೀರು ಚಿಮ್ಮುತ್ತಿರುವ ದೃಶ್ಯಗಳು ಕಂಡುಬಂದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದ ರೈತ ಎಲ್ಲಪ್ಪ ಎನ್ನುವರಿಗೆ ಸೇರಿದ ಬೋರ್ ನಿಂದ ನೀರು ಚಿಮ್ಮುತ್ತಿದೆ. ಇತ್ತೀಚೆಗೆ ಕೋಲಾರದಲ್ಲಿ ಉತ್ತಮ ಮಳೆ ಹಿನ್ನಲೆ ಅಂತರ್ಜಲ ಮಟ್ಟ ವೃದ್ಧಿಯಾಗಿದೆ.
Published by:Thara Kemmara
First published: