HOME » NEWS » State » 1000 JAN AUSHADHI CENTER OPEN BY MARCH END IN THE STATE SAYS UNION MINISTER SADANANDA GOWDA RH

ಮಾರ್ಚ್ ಅಂತ್ಯದೊಳಗೆ ರಾಜ್ಯದಲ್ಲಿ 1000 ಜನೌಷಧ ಕೇಂದ್ರ ಆರಂಭ; ಸಚಿವ ಸದಾನಂದ ಗೌಡ

ಜನೌಷಧ ಕೇಂದ್ರಗಳಲ್ಲಿ 1270ಕ್ಕಿಂತ ಹೆಚ್ಚು ಬಗೆಯ ಮಾತ್ರೆ ಹಾಗೂ ಔಷಧಗಳು ಲಭ್ಯವಿವೆ. ಹಾಗೆಯೇ 160 ನಮೂನೆಯ ವೈದ್ಯಕೀಯ ಉಪಕರಣಗಳು ಲಭ್ಯವಿವೆ. ಇವೆಲ್ಲವೂ ಉತ್ತಮ ಗುಣಮಟ್ಟದ್ದಾಗಿವೆ. ಸಾಮಾನ್ಯ ಜನ ಇದರ ಉಪಯೋಗ ಪಡೆದುಕೊಳ್ಳಬೇಕು. ಜನೌಷಧ ಕೇಂದ್ರಗಳಲ್ಲಿ ಇನ್ನು ಮೇಲೆ ಕೆಲವು ಆಯುರ್ವೇದ ಔಷಧಗಳನ್ನೂ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವರು ಪ್ರಕಟಿಸಿದರು.

news18-kannada
Updated:November 6, 2020, 7:14 PM IST
ಮಾರ್ಚ್ ಅಂತ್ಯದೊಳಗೆ ರಾಜ್ಯದಲ್ಲಿ 1000 ಜನೌಷಧ ಕೇಂದ್ರ ಆರಂಭ; ಸಚಿವ ಸದಾನಂದ ಗೌಡ
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ
  • Share this:
ಬೆಂಗಳೂರು; ಮುಂದಿನ ವರ್ಷ ಮಾರ್ಚ್‌ ಅಂತ್ಯದೊಳಗೆ ರಾಜ್ಯದಲ್ಲಿ ಒಟ್ಟು 1000 ಜನೌಷಧ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಅವರು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ವತಿಯಿಂದ ಹುಬ್ಬಳ್ಳಿಯಲ್ಲಿ ಆರಂಭಿಸಲಾಗುತ್ತಿರುವ ಜನೌಷಧ ಸಗಟು ವಿತರಣಾ ಕೇಂದ್ರವನ್ನು ಬೆಂಗಳೂರಿನ ಕೇಂದ್ರ ಕಚೇರಿಯಿಂದ ವರ್ಚವಲ್‌ ಸಭೆಯ ಮೂಲಕ ಉದ್ಘಾಟಿಸಿ ಸಚಿವರು ಮಾತನಾಡಿದರು.

ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಸಹಕಾರ ಸಂಸ್ಥೆಯೊಂದಕ್ಕೆ ಜನೌಷಧ ವಿತರಣಾ ಜವಾಬ್ಧಾರಿ ನೀಡಲಾಗಿದೆ. ರಾಜ್ಯ ಸಹಕಾರ ಮಾರಾಟ ಮಹಾಮಂಡಲದವರು ಇದನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ತಮಗಿದೆ. ಇದರಿಂದ ಜನೌಷಧಿಯ ಸರಬರಾಜನ್ನು ರಾಜ್ಯದ ಮೂಲೆಮೂಲೆಗೂ ವಿಶೇಷವಾಗಿ ಗ್ರಾಮಾಂತರ ಭಾಗಕ್ಕೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ದೇಶಾದ್ಯಂತ 6600ಕ್ಕಿಂತ ಹೆಚ್ಚು ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ 715 ಜನೌಷಧ ಕೇಂದ್ರಗಳು ಇದ್ದು, ಈ ಸಂಖ್ಯೆಯನ್ನು 2021ರ ಮಾರ್ಚ್‌ ಅಂತ್ಯದ ವೇಳೆಗೆ ಒಂದು ಸಾವಿರಕ್ಕೆ ಏರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಪ್ರಕಟಿಸಿದರು.

ಜನೌಷಧಿಯ ದರ ಉಳಿದ ಬ್ರಾಂಡೆಡ್‌ ಔಷಧಗಳಿಗೆ ಹೋಲಿಸಿದರೆ ಶೇಕಡಾ 10ರಿಂದ ಶೇಕಡಾ 90ರಷ್ಟು ಕಡಿಮೆಯಿದೆ. ದರ ಕಡಿಮೆ ಇದೆ ಅಂದಾಕ್ಷಣ ಜನೌಷಧಿಯ ಗುಣಮಟ್ಟದಲ್ಲಿ ಕೊರತೆಯಿದೆ ಎಂದು ತಿಳಿಯಬೇಕಾಗಿಲ್ಲ.  ಜನೌಷಧ ಕೇಂದ್ರಗಳಲ್ಲಿ 1270ಕ್ಕಿಂತ ಹೆಚ್ಚು ಬಗೆಯ ಮಾತ್ರೆ ಹಾಗೂ ಔಷಧಗಳು ಲಭ್ಯವಿವೆ. ಹಾಗೆಯೇ 160 ನಮೂನೆಯ ವೈದ್ಯಕೀಯ ಉಪಕರಣಗಳು ಲಭ್ಯವಿವೆ. ಇವೆಲ್ಲವೂ ಉತ್ತಮ ಗುಣಮಟ್ಟದ್ದಾಗಿವೆ. ಸಾಮಾನ್ಯ ಜನ ಇದರ ಉಪಯೋಗ ಪಡೆದುಕೊಳ್ಳಬೇಕು. ಜನೌಷಧ ಕೇಂದ್ರಗಳಲ್ಲಿ ಇನ್ನು ಮೇಲೆ ಕೆಲವು ಆಯುರ್ವೇದ ಔಷಧಗಳನ್ನೂ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವರು ಪ್ರಕಟಿಸಿದರು.

ಇದನ್ನು ಓದಿ: 108 ಆರೋಗ್ಯ ಸೇವೆಗೆ ಮೇಜರ್ ಸರ್ಜರಿಗೆ ನಿರ್ಧಾರ, ಜಾಗತಿಕ ಗುಣಮಟ್ಟದ ಸೇವೆಗೆ ಆದ್ಯತೆ ನೀಡಲು ಸಚಿವ ಸುಧಾಕರ್ ಸೂಚನೆ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ ಎಂ ಎನ್‌ ರಾಜೇಂದ್ರಕುಮಾರ್‌ ಅವರು ಮಾತನಾಡಿ, ಜನರ ಅನುಕೂಲಕ್ಕಾಗಿ ಸಹಕಾರ ಸಂಘಗಳ ಸಹಯೋಗದಲ್ಲಿ ಹೆಚ್ಚೆಚ್ಚು ಜನೌಷಧ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದರು.
Youtube Video

ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಮಾತನಾಡಿ, ರಾಜ್ಯದಲ್ಲಿ ಜನೌಷಧದ ಲಾಭವನ್ನು ಬಡವರಿಗೆ ತಲುಪಿಸಲು ಸಹಕಾರ ಇಲಾಖೆಯು ಸಂಪೂರ್ಣ ಸಹಕಾರ ನೀಡಲಿದೆ ಎಂದರು.
Published by: HR Ramesh
First published: November 6, 2020, 7:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories