• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ACB Investigation: ವಿಚಾರಣೆಗೆ ಹಾಜರಾದ ಶಾಸಕ ಜಮೀರ್​ಗೆ ಎಸಿಬಿ ಡ್ರಿಲ್​, ಇವರ ಕಣ್ಣಿಗೆ ಕಾಣೋದು ನಾನು ಹಾಗೂ ಡಿಕೆಶಿ ಮಾತ್ರನಾ?

ACB Investigation: ವಿಚಾರಣೆಗೆ ಹಾಜರಾದ ಶಾಸಕ ಜಮೀರ್​ಗೆ ಎಸಿಬಿ ಡ್ರಿಲ್​, ಇವರ ಕಣ್ಣಿಗೆ ಕಾಣೋದು ನಾನು ಹಾಗೂ ಡಿಕೆಶಿ ಮಾತ್ರನಾ?

ಶಾಸಕ ಜಮೀರ್ ಅಹ್ಮದ್ ಖಾನ್

ಶಾಸಕ ಜಮೀರ್ ಅಹ್ಮದ್ ಖಾನ್

ಎಸಿಬಿ ಅಧಿಕಾರಿಗಳು ಶಾಸಕ ಜಮೀರ್ ಅಹಮದ್ ಖಾನ್ ಮೊದಲ ದಿನದ ವಿಚಾರಣೆಯಲ್ಲೇ ಶಾಕ್ ಕೊಟ್ಟಿದ್ದಾರೆ. ಆರಂಭದಲ್ಲಿ ಜಮೀರ್​ ಖಾನ್​ಗೆ ನೂರಕ್ಕೂ ಅಧಿಕ ಪ್ರಶ್ನೆಗಳನ್ನ ಎಸಿಬಿ ಅಧಿಕಾರಿಗಳು ಕೇಳಿದ್ದಾರೆ. 100 ಪ್ರಶ್ನೆಗಳಿಗೆ ಉತ್ತರವನ್ನು ಲಿಖಿತ ರೂಪದಲ್ಲಿ ನೀಡುವಂತೆ ಎಸಿಬಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಮುಂದೆ ಓದಿ ...
 • Share this:

ಬೆಂಗಳೂರು (ಆ.6): ಮಾಜಿ ಸಚಿವ (Ex Minister), ಬೆಂಗಳೂರಿನ (Bengaluru) ಚಾಮರಾಜಪೇಟೆ (Chamarajpet) ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ (MLA) ಬಿ.ಝಡ್. ಜಮೀರ್ ಅಹ್ಮದ್ ಖಾನ್ (B.Z. Zameer Ahmed Khan) ಅವರಿಗೆ ಎಸಿಬಿ ನೋಟಿಸ್​ ಜಾರಿ ಮಾಡಿತ್ತು. ಈ ಹಿನ್ನೆಲೆ ಇವತ್ತು ಎಸಿಬಿ ವಿಚಾರಣೆಗೆ ಶಾಸಕ‌ ಜಮೀರ್ ಅಹಮದ್ ಹಾಜರಾಗಿದ್ದಾರೆ. ಎಸಿಬಿ ಕಚೇರಿಯಲ್ಲಿ ಜಮೀರ್ ಅಹ್ಮದ್​ ಖಾನ್​ ಅವರನ್ನು ತೀವ್ರ ವಿಚಾರಣೆಗೆ (Investigation) ಒಳಪಡಿಸಲಾಗಿದೆ. ಎಸಿಬಿ ಅಧಿಕಾರಿಗಳಾದ ಎಸ್ ಪಿ ಯತೀಶ್ ಚಂದ್ರ ಹಾಗೂ ಡಿವೈಎಸ್ ಪಿ ರವಿಶಂಕರ್ ರಿಂದ ವಿಚಾರಣೆ ನಡೆಸಲಾಗುತ್ತಿದೆ. ಈ ಹಿಂದೆ ಜಮೀರ್ ಅಹ್ಮದ್ ಮನೆ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು, ದಾಳಿ ವೇಳೆ ಹಲವು ದಾಖಲೆ ಪತ್ರಗಳು ವಶಕ್ಕೆ ಪಡೆದುಕೊಂಡಿದ್ರು.


ಜಮೀರ್​ಗೆ ಮೊದಲ ದಿನವೇ ಬಿಗ್​ ಶಾಕ್


ಎಸಿಬಿ ಅಧಿಕಾರಿಗಳು ಶಾಸಕ ಜಮೀರ್ ಅಹಮದ್ ಖಾನ್ ಮೊದಲ ದಿನದ ವಿಚಾರಣೆಯಲ್ಲೇ ಶಾಕ್ ಕೊಟ್ಟಿದ್ದಾರೆ. ಆರಂಭದಲ್ಲಿ ಜಮೀರ್​ ಖಾನ್​ಗೆ ನೂರಕ್ಕೂ ಅಧಿಕ ಪ್ರಶ್ನೆಗಳನ್ನ ಎಸಿಬಿ ಅಧಿಕಾರಿಗಳು ಕೇಳಿದ್ದಾರೆ ಅನ್ನೋ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ. 100 ಪ್ರಶ್ನೆಗಳಿಗೆ ಉತ್ತರವನ್ನು ಲಿಖಿತ ರೂಪದಲ್ಲಿ ನೀಡುವಂತೆ ಎಸಿಬಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಜೊತೆಗೆ ಉತ್ತರವನ್ನ ಬರೆದು ಕೊಡಲು ಒಬ್ಬ ಸಿಬ್ಬಂದಿಯನ್ನು ನೀಡಲಾಗಿದೆ. ಜಮೀರ್​ ಈವರೆಗೆ ಗಳಿಕೆ‌ ಮಾಡಿರುವ ಅಪಾರ ಪ್ರಮಾಣದ ಆಸ್ತಿಯ ಮೂಲದ ಕುರಿತು 100 ಪ್ರಶ್ನೆಗಳನ್ನು ಕೇಳಿದ್ದಾರೆ.


​ಇವರ ಕಣ್ಣಿಗೆ ಕಾಣೋದು ನಾನು ಹಾಗೂ ಡಿಕೆಶಿ ಮಾತ್ರನಾ?


ಎಸಿಬಿ ವಿಚಾರಣೆ ಬಳಿಕ ಮಾತಾಡಿದ ಶಾಸಕ ಜಮೀರ್ ಖಾನ್​ , ಸಮನ್ಸ್ ಮೂಲಕ‌‌ ಕೆಲವು ದಾಖಲೆಗಳ ಕೇಳಿದ್ದರು. ನಾವು ಇಡಿಗೆ ಸಲ್ಲಿದ್ದ ದಾಖಲೆಗಳನ್ನು ಸಲ್ಲಿಸಿದ್ದೇನೆ. ಮತ್ತೆ ವಿಚಾರಣೆಗೆ ಕರೆಯುವುದಾಗಿ ಹೇಳಿದ್ದಾರೆ. ಅವಶ್ಯಕತೆ ಇದ್ದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗುತ್ತೇನೆ ಎಂದ್ರು. ಇಡೀ ರಾಜ್ಯದಲ್ಲಿ ಕಾಂಗ್ರೆಸ್​ನ ಡಿಕೆ ಶಿವಕುಮಾರ್ ಮತ್ತು ಜಮೀರ್ ಅಹಮ್ಮದ್ ಮಾತ್ರ ಅವರ ಕಣ್ಣಿಗೆ ಕಾಣಿಸುತ್ತೆ, ದೇಶದಲ್ಲಿ ಬಿಜೆಪಿ ಶಾಸಕರು ಯಾರು ಮನೆ ಕಟ್ತಿಲ್ಲ , ಆಸ್ತಿ ಮಾಡಿಲ್ಲ ಎಂದು ಇದೇ ವೇಳೆ ಕಿಡಿಕಾರಿದ್ದಾರೆ.
ಜಮೀರ್​​ ಮನೆ ಮೇಲೆ ನಡೆದಿತ್ತು ಎಸಿಬಿ ದಾಳಿ


ದಿನಾಂಕ 05.07.2022 ರಂದು ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಒಟ್ಟು 85 ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ 5 ವಿವಿಧ ತಂಡಗಳಿಂದ ಜಮೀರ್ ಅಹಮ್ಮದ್ ಅವರ ತಮ್ಮ ಬಲ್ಲ ಮೂಲಗಳಿಗಿಂತ ಅಕ್ರಮ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ಜಾರಿ ನಿರ್ದೇಶನಾಲಯ ಹಾಗೂ ದಾಖಲಾತಿಗಳನ್ನು ಆಧರಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ 4 ಸ್ಥಳಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಲಾಗಿತ್ತು.


ಇದನ್ನೂ ಓದಿ: Zameer Ahmed: ಜಮೀರ್ ಅಹ್ಮದ್ ವಿರುದ್ಧ ಎಸಿಬಿ ಎಫ್​​ಐಆರ್, ಶಾಸಕರಿಗೆ ಉರುಳಾಯ್ತಾ ಅಕ್ರಮ ಆಸ್ತಿ ಪ್ರಕರಣ?


ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ವರದಿ


ಶೇ. 2031ರಷ್ಟು ಅಕ್ರಮ ಆಸ್ತಿ ಬಗ್ಗೆ ವರದಿ ಮಾಡಿದ್ದ ಜಾರಿ ನಿರ್ದೇಶನಾಲಯದ ವರದಿಯಲ್ಲಿ ಶಾಸಕರು ರೂ.87,44,05,057/- ರಷ್ಟು ಅಂದರೆ ಶೇಕಡಾ 2031ರಷ್ಟು ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ವರದಿ ಇದ್ದು, ಆ ವರದಿಯನ್ನು ಪರಿಗಣಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ. ಆ ವರದಿ ಮೇರೆಗೆ ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆಗೆ ಒಳಪಡಿಸಲಾಗಿತ್ತು.


87.44 ಲಕ್ಷ ಕೋಟಿ ಅಕ್ರಮ ಆಸ್ತಿ ಬಗ್ಗೆ ವರದಿ


ಎಸಿಬಿ ತನಿಖೆ ವೇಳೆ ಜಮೀರ್ ಅಹ್ಮದ್ ಅವರು 87 ಕೋಟಿ 44 ಲಕ್ಷ 05 ಸಾವಿರದ 057 ಮೌಲ್ಯದ ಅಕ್ರಮ ಆಸ್ತಿ ಹೊಂದಿರೋದು ಎಬಿಸಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಹಿಂದೆ ದಾಳಿ‌ ನಡೆಸಿ ಆಸ್ತಿ ಬಗ್ಗೆ ಇಡಿ ವರದಿ ನೀಡಿತ್ತು. ಇ.ಡಿ ಅಧಿಕಾರಿಗಳ ರೆಫೆರೆನ್ಸ್ ನಲ್ಲಿ ಎಸಿಬಿ ಅಧಿಕಾರಿಗಳು ಇತ್ತೀಚೆಗೆ  ದಾಳಿ ನಡೆಸಿದ್ದರು. 85 ಅಧಿಕಾರಿಗಳ 5 ತಂಡಗಳಿಂದ ದಾಳಿ ನಡೆದಿದ್ದು, ಜಮೀರ್ ಮನೆ, ಕಚೇರಿ ಸೇರಿ ನಾಲ್ಕು ಕಡೆ ಅಮೂಲ್ಯ ಕಡತಗಳ ಪರಿಶೀಲನೆ‌‌ ನಡೆಸಲಾಗಿತ್ತು. ಈ ವೇಳೆ ಆಸ್ತಿ ಗಳಿಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು ಪತ್ತೆಯಾಗಿತ್ತು.


ಇದನ್ನೂ ಓದಿ: Zameer Ahmed: ಅಕ್ರಮ ಆಸ್ತಿ ಗಳಿಸಿದ್ದಾರಾ ಜಮೀರ್ ಅಹ್ಮದ್? ಎಸಿಬಿ ದಾಳಿ ವೇಳೆ ಸ್ಫೋಟಕ ಮಾಹಿತಿ

top videos


  ಎಸಿಬಿ ಸುಮಾರು 16 ವರ್ಷಗಳ ಆದಾಯ ಹಾಗೂ ತೆರಿಗೆ ಪಾವತಿ ತನಿಖೆ ನಡೆಸಲು ಎಸಿಬಿ ಮುಂದಾಗಿದೆ. ಇಡಿ ರಿಪೋರ್ಟ್ ಇಟ್ಟುಕೊಂಡು ಎಸಿಬಿ ತನಿಖೆ ಆರಂಭಿಸಿದೆ. ಇನ್ನು ಪ್ರತಿ ವರ್ಷ ತೆರಿಗೆ ಪಾವತಿ ಮಾಡಿದ್ದೇನೆ, ಎಲ್ಲ ದಾಖಲೆಗಳನ್ನ ಒದಗಿಸುತ್ತೇನೆ ಅಂತಾ ಜಮೀರ್ ಎಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರಂತೆ. ಇದೀಗ ಜಮೀರ್ ಅಹಮ್ಮದ್ ಮನೆಯಲ್ಲಿ ವಶಕ್ಕೆ ಪಡೆದ ಕಡತಗಳು, ಆಸ್ತಿ ಪತ್ರಗಳು, ಆದಾಯ ವಿವರಗಳನ್ನ ಪರಿಶೀಲನೆ ನಡೆಸಲಾಗಿದೆ.

  First published: