ಸ್ವದೇಶಿ ವಿಮಾನ ಪ್ರಯಾಣ; 100 ದಿನಗಳ ಯಶಸ್ವಿ ಕಾರ್ಯಾಚರಣೆ 

ಬೆಂಗಳೂರು ವಿಮಾನ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣ

ಆಗಸ್ಟ್ 2020ಕ್ಕೆ ಹೋಲಿಸಿದರೆ ಪ್ರಯಾಣಿಕರ ಸಂಚಾರ ಶೇ.47ಕ್ಕೂ ಹೆಚ್ಚಿನ ಬೆಳವಣಿಗೆ ಕಂಡಿದೆ. ಇದು ಭಾರತೀಯ ಆರ್ಥಿಕ ಶಕ್ತಿಗೆ ಚಾಲನೆ ನೀಡಲು ಸತತ ಕ್ರಮಗಳ ಸಕಾರಾತ್ಮಕ ಒಲವನ್ನು ಸೂಚಿಸಿದೆ.

  • Share this:

ಬೆಂಗಳೂರು(ಸೆ.26):  ಭಾರತದಲ್ಲಿ ಸ್ಥಳೀಯ ವಿಮಾನ ಪ್ರಯಾಣ ಪುನರಾರಂಭವಾಗಿ  ನೂರು ದಿನಗಳು ಮುಗಿದಿವೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಲಾಕ್‍ಡೌನ್ ನಂತರ ವಿಮಾನಯಾನ ಕಾರ್ಯಾಚರಣೆಗಳಿಗೆ ನಾಗರಿಕ ವಿಮಾನಯಾನ ಪರವಾನಗಿ ನೀಡಿದ್ದರು. ಲಾಕ್‍ಡೌನ್ ಸಂದರ್ಭದಲ್ಲಿ ವಿಮಾನಯಾನ ಸಮುದಾಯದ ಜೊತೆಗೆ ಬಿ.ಐ.ಎ.ಎಲ್. ದಣಿವಿಲ್ಲದೆ ಕೆಲಸ ಮಾಡಿದ್ದು, ಅತ್ಯುತ್ತಮ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿತ್ತು. ಪ್ರಯಾಣಿಕರಿಗೆ ಸುರಕ್ಷಿತ ಬಗ್ಗೆ ಕಾಳಜಿ ವಹಿಸಿತ್ತು. ತಂತ್ರಜ್ಞಾನವನ್ನು ಅಳವಡಿಸಲಾದ ಹಾಗೂ ಪಾರ್ಕಿಂಗ್‍ನಿಂದ ವಿಮಾನ ಹತ್ತುವವರೆಗಿನ ಸಂಪರ್ಕರಹಿತ ಪ್ರಯಾಣವನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗೆ ಸಂಪರ್ಕ ಅಥವಾ ಸ್ಪರ್ಶರಹಿತ ಪ್ರಕ್ರಿಯೆಗಳನ್ನು ಅಭಿವೃದ್ದಿಪಡಿಸಲಾಗಿದೆ. ಈ ಕ್ರಮವನ್ನು ಎರಡು ವಾರಗಳಲ್ಲಿ ಆರಂಭಿಸಲಾಗಿತ್ತು. ಪ್ರಯಾಣಿಕರ ಮುಖಚಹರೆ ಗುರುತಿಸುವ ಹಾಗೂ ಸ್ವಯಂ ಆಗಿ ಹೋಗಿ ವಿಮಾನ ಹತ್ತಲು ನೆರವಾಗುವ ಫೇಸ್ ರೆಕಗ್ನಿಷನ್ ವ್ಯವಸ್ಥೆಯನ್ನು ಈ ಮುನ್ನವೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರಂಭಿಸಲಾಗಿತ್ತು.


ಜೊತೆಗೆ ಇದರೊಂದಿಗೆ ನೈರ್ಮಲ್ಯೀಕರಣ ಮತ್ತು ಕ್ರಿಮಿ ನಿವಾರಕಗಳನ್ನು ಸಿಂಪಡಿಸುವ ಕ್ರಮಗಳಿಂದಾಗಿ ಪ್ರಯಾಣಿಕರು ಸೀಮಾತೀತ ಸಂಪರ್ಕ ಮುಕ್ತವಾದ ವಿಮಾನ ನಿಲ್ದಾಣದ ಅನುಭವವನ್ನು ಹೊಂದುವುದನ್ನು ಮುಂದುವರಿಸಿದ್ದರು. ನೂರು ದಿನಗಳಲ್ಲಿ ವಿಮಾನ ನಿಲ್ದಾಣ 1.4 ದಶಲಕ್ಷ ಸ್ವದೇಶಿ ಪ್ರಯಾಣಿಕರನ್ನು ಸ್ವಾಗತಿಸಿತ್ತಲ್ಲದೆ, 15,658 ವಾಯು ಸಂಚಾರ ಚಲನೆ ಮಾಡಿತ್ತು. ಜುಲೈ 2020ಕ್ಕೆ ಹೋಲಿಸಿದರೆ ಇದು ಎಟಿಎಂನಲ್ಲಿ ಶೇ.39ರಷ್ಟು ಬೆಳವಣಿಗೆಯಾಗಿತ್ತು.


ಆಗಸ್ಟ್ 2020ಕ್ಕೆ ಹೋಲಿಸಿದರೆ ಪ್ರಯಾಣಿಕರ ಸಂಚಾರ ಶೇ.47ಕ್ಕೂ ಹೆಚ್ಚಿನ ಬೆಳವಣಿಗೆ ಕಂಡಿದೆ. ಇದು ಭಾರತೀಯ ಆರ್ಥಿಕ ಶಕ್ತಿಗೆ ಚಾಲನೆ ನೀಡಲು ಸತತ ಕ್ರಮಗಳ ಸಕಾರಾತ್ಮಕ ಒಲವನ್ನು ಸೂಚಿಸಿದೆ. ನಿರ್ಬಂಧಗಳನ್ನು ಸಡಿಲಗೊಳಿಸುವುದು ಮತ್ತು ವಿಮಾನಯಾನ ಸಂಸ್ಥೆಗಳ ಸಾಮರ್ಥ್ಯ ಹೆಚ್ಚಿಸುವುದರೊಂದಿಗೆ ಮುಂಬರುವ ದಿನಗಳು ಮತ್ತು ತಿಂಗಳುಗಳಲ್ಲಿ ಈ ಸಂಖ್ಯೆಗಳು ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.


ಫೈನಾನ್ಶಿಯರ್ ನವೀನ್​​​ ಕಿಡ್ನಾಪ್ ಪ್ರಕರಣದಲ್ಲಿ ಸುನಾಮಿ ಕಿಟ್ಟಿ ಹೆಸರು; ಪೊಲೀಸರಿಂದ ತನಿಖೆ


ಸ್ವದೇಶಿ ಕಾರ್ಯಾಚರಣೆಗಳನ್ನು ಪುನರಾರಂಭಿಸಿದಾಗಿನಿಂದ ಬೆಂಗಳೂರು ವಿಮಾನ ನಿಲ್ದಾಣ ದೇಶದ 58 ನಗರಗಳ ಪೈಕಿ 49 ನಗರಗಳೊಂದಿಗೆ ಸಂಪರ್ಕವನ್ನು ಪುನರ್ ಸ್ಥಾಪಿಸಿಕೊಂಡಿದ್ದು, ಕೋವಿಡ್ ಸಾಂಕ್ರಾಮಿಕದ ಹಿಂದಿನ ಕಾರ್ಯಕ್ಕೆ ಹೋಲಿಸಿದರೆ ಇದು ಶೇ. 84ರಷ್ಟು ಸಾಧನೆಯಾಗಿದೆ. ಶೇ.13ರಷ್ಟು ಒಟ್ಟಾರೆ ಸ್ವದೇಶಿ ಪ್ರಯಾಣಿಕರೊಂದಿಗೆ ಕೊಲ್ಕತ್ತಾ ಅಗ್ರಮಾನ್ಯ ಗುರಿಯಾಗಿದ್ದು, ಆನಂತರದ ಸ್ಥಾನವನ್ನು ದಿಲ್ಲಿ(ಶೇ.11) ಮತ್ತು ಪಾಟ್ನಾ(ಶೇ.6) ಪಡೆದಿವೆ.ಶೇ.33.7ರಷ್ಟು ಇರುವುದರೊಂದಿಗೆ ಪೂರ್ವ/ಈಶಾನ್ಯ ಪ್ರದೇಶಗಳ ಕಡೆಗೆ ಪ್ರಯಾಣಿಕರ ಚಲನೆ ಕಂಡುಬಂದಿತ್ತು.


ದಕ್ಷಿಣ ಭಾರತದ ಸ್ಥಳಗಳ ಕಡೆಗೆ ಚಲನೆ ನಂತರದ ಸ್ಥಾನದಲ್ಲಿದ್ದು,ಶೇ.30.9ರಷ್ಟಿತ್ತು. ಪ್ರದೇಶ ಪ್ರಯಾಣಿಕರ ಶೇಕಡಾವಾರು ಪಾಲು ಪೂರ್ವ 33.7%ದಕ್ಷಿಣ 30.9%ಉತ್ತರ 25.8%ಪಶ್ಚಿಮ 9.6% ಎಂ.ಒ.ಸಿ.ಎ, ಎಂ.ಒ.ಎಚ್.ಎಫ್.ಡಬ್ಲ್ಯು., ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳಿಂದ ಅನುಕೂಲಕರ ನೀತಿಗಳು ವಿಮಾನ ಹಾರಾಟವನ್ನು ಪುನರ್ ಸ್ಥಾಪಿಸಲು, ವಿಮಾನಯಾನ ಸಂಸ್ಥೆಗಳು ಬಿ.ಐ.ಎ.ಎಲ್ ಮತ್ತು ಇತರೆ ಪಾಲುದಾರರಾದ ಎಂ.ಒ.ಎಚ್.ಎಫ್.ಡಬ್ಲ್ಯು ಮುಂತಾದವ ನಡುವೆ ಸಂಪರ್ಕ ಸ್ಥಾಪನೆಯಿಂದ ನೂತನ ವಾತಾವರಣಕ್ಕೆ ಹೊಂದಿಕೊಳ್ಳಲು ನೆರವಾಯಿತು.

Published by:Latha CG
First published: