CBSE-ICSE ಶಾಲೆಗಳಲ್ಲಿ ಕನ್ನಡ ಕಡ್ಡಾಯ ಪ್ರಶ್ನಿಸಿ ರಾಜ್ಯ ಹೈಕೋರ್ಟ್‌ ಮೊರೆ ಹೋದ 10 ವರ್ಷದ ವಿದ್ಯಾರ್ಥಿ..!

ಈ ಅರ್ಜಿಯ ಸಂಬಂಧ ವಾದ ವಿವಾದ ಆಲಿಸಿದ ನ್ಯಾಯಮೂರ್ತಿ ಆರ್. ದೇವದಾಸ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಸಲ್ಲಿಸಲು ಆದೇಶಿಸಿದರು. ಸರ್ಕಾರಿ ನಿರ್ದೇಶನಗಳ ಪ್ರಕಾರ ಈಗ ಕನ್ನಡವನ್ನು ಎರಡನೇ ಭಾಷೆಯಾಗಿ ಪರಿಚಯಿಸಬೇಕು ಎಂದು ಶಾಲಾ ಅಧಿಕಾರಿಗಳು ಪೋಷಕರಿಗೆ ತಿಳಿಸಿದ್ದರಿಂದ ಇದನ್ನು ವಿರೋಧಿಸಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೇಂದ್ರ ಮಂಡಳಿಗೆ  ಸೇರಿದ ಶಾಲೆಯಲ್ಲಿ ಓದುತ್ತಿರುವ 10 ವರ್ಷದ ವಿದ್ಯಾರ್ಥಿಯು ಕನ್ನಡ ಭಾಷಾ ಕಲಿಕೆ (KLL) ಕಾಯ್ದೆ 2015ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಕರ್ನಾಟಕದ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಸಿಬಿಎಸ್‌ಇ/ಐಸಿಎಸ್‌ಇಯ(CBSE/ICSE) ಸಂಯೋಜಿತ ಶಾಲೆಗಳಲ್ಲಿ ಸಹ 2015-16 ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಮೊದಲ ಅಥವಾ ಎರಡನೆಯ ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂದು KLL ಕಾಯ್ದೆ ಹೇಳಿದೆ.

ಬೆಂಗಳೂರಿನ ಬಿಷಪ್ ಕಾಟನ್ ಬಾಯ್ಸ್ ಸ್ಕೂಲ್ ವಿದ್ಯಾರ್ಥಿ ಕೀರ್ತನ್ ಸುರೇಶ್ ಎಂಬ ಅರ್ಜಿದಾರನ ಪರವಾಗಿ ತಾಯಿ ಸುಜಾತಾ ಎನ್ ಕೋರ್ಟ್‌ನಲ್ಲಿ ಪ್ರತಿನಿಧಿಸಿದ್ದು, ಕೆಎಲ್‌ಎಲ್ ಕಾಯ್ದೆ 2015 "ಕಠಿಣವಾದ, ತಾರತಮ್ಯ ಪೂರಿತ ಮತ್ತು ಭಾರತದ ಸಂವಿಧಾನದ ಉಲ್ಲಂಘನೆಯಾಗುತ್ತದೆ" ಎಂದು ಹೇಳಿದ್ದಾರೆ.

ಈ ಅರ್ಜಿಯ ಸಂಬಂಧ ವಾದ ವಿವಾದ ಆಲಿಸಿದ ನ್ಯಾಯಮೂರ್ತಿ ಆರ್. ದೇವದಾಸ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಸಲ್ಲಿಸಲು ಆದೇಶಿಸಿದರು. ಸರ್ಕಾರಿ ನಿರ್ದೇಶನಗಳ ಪ್ರಕಾರ ಈಗ ಕನ್ನಡವನ್ನು ಎರಡನೇ ಭಾಷೆಯಾಗಿ ಪರಿಚಯಿಸಬೇಕು ಎಂದು ಶಾಲಾ ಅಧಿಕಾರಿಗಳು ಪೋಷಕರಿಗೆ ತಿಳಿಸಿದ್ದರಿಂದ ಇದನ್ನು ವಿರೋಧಿಸಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: UPSC Civil Services Result: 2016ರ ಟಾಪರ್ ಟೀನಾ ಡಾಬಿ ತಂಗಿ ರಿಯಾಗೆ ಯುಪಿಎಸ್​ಸಿಯಲ್ಲಿ 15ನೇ rank

ಸಿಬಿಎಸ್‌ಇ/ ಐಸಿಎಸ್‌ಇಗೆ ಸೇರಿದ ಶೈಕ್ಷಣಿಕ ಸಂಸ್ಥೆಗಳಲ್ಲಿ KLL ಕಾಯ್ದೆ, 2015 ಅನ್ನು ಜಾರಿಗೊಳಿಸದಂತೆ ರಾಜ್ಯ ಸರ್ಕಾರವನ್ನು ನಿರ್ಬಂಧಿಸಲು ನ್ಯಾಯಾಲಯ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಶಾಲೆ ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಪರೀಕ್ಷೆ (ICSE) ಸ್ಟ್ರೀಮ್‌ಗೆ ಸೇರಿದೆ.

ಕೆಎಲ್‌ಎಲ್ ಕಾಯ್ದೆಯು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಬಂಧನೆಗಳಿಗೆ ವಿರುದ್ಧವಾಗಿದೆ. 1983ರ ನಿಬಂಧನೆಯ ಪ್ರಕಾರ ಸಿಬಿಎಸ್‌ಇ ಅಥವಾ ಐಸಿಎಸ್‌ಇಗೆ ಸಂಬಂಧಿತ ಬೋರ್ಡ್‌ಗಳಿಗೆ ಪಠ್ಯಕ್ರಮವನ್ನು ನಿಯಂತ್ರಿಸುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ಅರ್ಜಿದಾರರು ವಾದ ಮಾಡಿದ್ದಾರೆ.

ಕೆಎಲ್‌ಎಲ್ ಕಾಯ್ದೆಯು ಅಸಮಾನವಾಗಿದೆ ಮತ್ತು ಅರ್ಜಿದಾರರ ಮೇಲೆ ಅನಗತ್ಯ ಹೊರೆ ಹಾಗೂ ಸಂಕಷ್ಟವನ್ನು ಹೇರುತ್ತದೆ ಮತ್ತು "ಸಂವಿಧಾನದ 19 ಮತ್ತು 30 ನೇ ವಿಧಿಯ ಅಡಿಯಲ್ಲಿ ಅವರ ಹಕ್ಕುಗಳ ಮೇಲೆ ಅವಿವೇಕದ ನಿರ್ಬಂಧಗಳನ್ನು ವಿಧಿಸುತ್ತದೆ" ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

ಮೊದಲ ಅಥವಾ ದ್ವಿತೀಯ ಭಾಷೆಯಾಗಿ ಕಲಿಯಲು ಕನ್ನಡ ಭಾಷೆ ಕಡ್ಡಾಯಗೊಳಿಸುವಾಗ, ಆಯಾ ಪೋಷಕರ ವರ್ಗಾವಣೆಯಿಂದಾಗಿ ಮಕ್ಕಳು ಸಹ ಕರ್ನಾಟಕ ರಾಜ್ಯದಲ್ಲಿ ಪುನರ್ವಸತಿಯಾಗಬಹುದು ಎಂಬ ಅಂಶ ರಾಜ್ಯಕ್ಕೆ ತಿಳಿದಂತಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಆದಾಯ ತೆರಿಗೆ ಪೋರ್ಟಲ್​ನಲ್ಲಿ ಈಗ ತಾಂತ್ರಿಕ ದೋಷಗಳಿಲ್ಲ, ಮತ್ತಷ್ಟು ಉತ್ತಮ ಸ್ವರೂಪ ಪಡೆದುಕೊಂಡಿದೆ; ಇನ್ಫೋಸಿಸ್

ಕರ್ನಾಟಕದಲ್ಲಿ ಕನ್ನಡವನ್ನು ಕಡ್ಡಾಯ ಭಾಷೆಯಾಗಿ ಒಂದರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಕಲಿಸುವ ಸಂಬಂಧ ರಾಜ್ಯ ಸರ್ಕಾರ KLL ಕಾಯ್ದೆ, 2015 ಯನ್ನು ಜಾರಿಗೊಳಿಸಿದೆ. ಇದು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಾಥ್ರವಲ್ಲದೆ ಅನುದಾನ ರಹಿತ ಹಾಗೂ ಸಿಬಿಎಸ್‌ಇ / ಐಸಿಎಸ್‌ಇ ಪಠ್ಯಕ್ರಮಕ್ಕೆ ಸೇರಿದ ಶಾಲೆಗಳಲ್ಲೂ ಜಾರಿಯಾಗುತ್ತದೆಂದು ಸರ್ಕಾರ ಕಾಯ್ದೆಯನ್ನು ಹೊರಡಿಸಿತ್ತು. ರಾಜ್ಯ ಸರ್ಕಾರದ ಪಠ್ಯಕ್ರಮಕ್ಕೆ ಸೇರಿದ ಶಾಲೆಗಳಲ್ಲಿ ಪಠ್ಯಕ್ರಮ ಬೇರೆ ಇರುತ್ತದೆ ಹಾಗೂ ಸಿಬಿಎಸ್‌ಇ / ಐಸಿಎಸ್‌ಇ ಪಠ್ಯಕ್ರಮಕ್ಕೆ ಸೇರಿದ ಶಾಲೆಗಳಲ್ಲಿ ಪಠ್ಯ ಕ್ರಮ ಬೇರೆ ಇರುತ್ತದೆ ಹಾಗೂ ಪಠ್ಯ ಕ್ರಮ ಜಾರಿಗೊಳಿಸುವ ಅಧಿಕಾರ ಅವರಿಗೇ ಬಿಟ್ಟಿದ್ದು ಎಂದು ಕರ್ನಾಟಕ ಶಿಕ್ಷಣ ಕಾಯ್ದೆ 1983 ಹೇಳುತ್ತದೆ.
Published by:Sandhya M
First published: