ವಿಧಾನಸೌಧದ ಪೂರ್ವ ದ್ವಾರದ (Vidhansoudha East Gate) ಬಳಿ ಭದ್ರತಾ ಸಿಬ್ಬಂದಿ 10 ಲಕ್ಷ ಹಣ ತೆಗೆದುಕೊಂಡು ಹೋಗುತ್ತಿದ್ದ ಮೊತ್ತವನ್ನು ವಶಕ್ಕೆ ಪಡೆಯಲಾಗಿದೆ. ಅಸಿಸ್ಟೆಂಟ್ ಎಂಜಿನೀಯರ್ ಜಗದೀಶ್ ಎಂಬವರ ಬಳಿ 10 ಲಕ್ಷ ರೂಪಾಯಿ ನಗದು (10 Lakh Cash Found) ಪತ್ತೆಯಾಗಿದೆ. ಹಣ ಸಿಕ್ಕ ವೇಳೆ ತಾನು ಪ್ರಮುಖ ವ್ಯಕ್ತಿಯೊಬ್ಬರನ್ನು ಭೇಟಿಯಾಗಲು ಬಂದಿರೋದಾಗಿ ಆ ವ್ಯಕ್ತಿ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ (Vidhanasoudha Police Station) ಪ್ರಕರಣ ದಾಖಲಾಗಿದೆ. ವಿಧಾನಸೌಧದ ಈಸ್ಟ್ ಗೆ ಬಳಿ ಬ್ಯಾಗ್ ಚೆಕ್ ಮಾಡುವಾಗ ಅಸಿಸ್ಟೆಂಟ್ ಎಂಜನೀಯರ್ ಜಗದೀಶ್ ಎಂಬವರ ಬಳಿ ಹಣ ವಶಕ್ಕೆ ಪಡೆಯಲಾಗಿದೆ.
ಜಗದೀಶ್ ಮಂಡ್ಯದಲ್ಲಿ ಕಾಮಗಾರಿ ಕೆಲಸ ಪ್ರಯುಕ್ತ ಕೆಲವರಿಗೆ ಪೇಮೆಂಟ್ ಮಾಡಬೇಕು ಎಂದು ಪೊಲೀಸರಿಗೆ ಉತ್ತರ ನೀಡಿದ್ದಾನೆ. ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿಕೆ
ನಿನ್ನೆ ವಿಕಾಸೌಧದ ಗೇಟ್ ಬಳಿ ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ಹಣ ಸಿಕ್ಕಿದೆ. ಆ ವ್ಯಕ್ತಿ ಸರ್ಕಾರಿ ಉದ್ಯೋಗಿಯಾಗಿದ್ದು,ಅಧಿಕಾರಿಗಳ ಭೇಟಿಗೆ ಬಂದಿದ್ದೆ ಎಂದಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿದೆ. ಹಣ ಸ್ವಂತದ್ದು ಎಂದು ಅಧಿಕಾರಿ ಹೇಳಿದ್ದರಿಂದ ದಾಖಲೆಗಳನ್ನ ತರಲು ಹೇಳಿದ್ದೇವೆ. ಹಣ ಯಾಕೆ ತಂದ್ರು? ಯಾರ ಭೇಟಿಗೆ ಬಂದಿದ್ರು ಎಂಬ ಬಗ್ಗೆ ತನಿಖೆ ನಡೆರಯುತ್ತಿದೆ ಎಂದು ನ್ಯೂಸ್ 18 ಕನ್ನಡಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ವಿಧಾನಸೌಧದಲ್ಲಿ ಹಣ ಸಿಕ್ಕಿರುವ ವಿಚಾರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಯಾವ ಉದ್ದೇಶಕ್ಕೆ ಯಾರಿಗೆ ಹಣ ತಂದಿದ್ದ ಅನ್ನೋದು ಗೊತ್ತಾಗಬೇಕು. ಈಗಷ್ಟೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಸಂದರ್ಭದಲ್ಲಿ ನಾನು ಪ್ರತಿಕ್ರಿಯೆ ನೀಡುವುದು ತಪ್ಪಾಗುತ್ತದೆ. ಅವನ ಹೇಳಿಕೆ ಪಡೆದ ಬಳಿಕವಷ್ಟೇ ಗೊತ್ತಾಗಬೇಕು ಎಂದಿದ್ದಾರೆ.
40% ಅದು ಇದೂ ಎಲ್ಲವರ ಸರ್ಕಾರದಲ್ಲೇ ನಡೆದಿತ್ತು. ಇಲ್ಲದಿದ್ದರೆ ಅವರು ಸರ್ಕಾರದಿಂದ ಯಾಕೆ ಇಳಿಯುತ್ತಿದ್ದರು? ಸುಮ್ಮನೆ ಚುನಾವಣೆ ಸಂದರ್ಭ ಗಿಮಿಕ್ ಮಾಡ್ತಿದ್ದಾರೆ. ಈಗಾಗಲೇ ಒಬ್ಬ ಮಂತ್ರಿ ಕೇಸ್ ಹಾಕಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಜಗದೀಶ್ ಭೇಟಿಯಾಗಲು ಬಂದಿದ್ದ ಆ ಪ್ರಮುಖ ವ್ಯಕ್ತಿ ಯಾರು ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ.
‘ಪಂಚಮಸಾಲಿ’ ಮೀಸಲಾತಿ ಚರ್ಚೆ
ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಡಿ ಪ್ರವರ್ಗ ಘೋಷಣೆ ಮಾಡಿದೆ. ಅದರಿಂದ ಲಾಭ ಏನು? ನಷ್ಟಗಳೇನು? ಅಂತ ಸರ್ಕಾರದ ನಿರ್ಧಾರದ ಬಗ್ಗೆ ಇಂದು ಪಂಚಮಸಾಲಿ ಸಮುದಾಯದ ಶ್ರೀಗಳು, ನಾಯಕರು ಚರ್ಚೆ ಮಾಡಿದ್ದಾರೆ.
ಬೆಳಗಾವಿಯ ಗಾಂಧಿ ಭವನದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಬಸನಗೌಡ ಪಾಟೀಲ್ ಯತ್ನಾಳ, ವಿಜಯಾನಂದ ಕಾಶಪ್ಪನವರ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮ ಸಂಗ್ರಹ
ಜಗಮೆಚ್ಚಿದ್ದ ಶ್ರೀಗಳು ಎಂದೇ ಖ್ಯಾತಿ ಪಡೆದಿದ್ದ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ಸಂಗ್ರಹ ಕಾರ್ಯ ನಡೀತು. ಹಲವು ಸ್ವಾಮೀಜಿಗಳ ಸಮ್ಮುಖದಲ್ಲಿ ಅಸ್ಥಿ ಸಂಗ್ರಹ ಮಾಡಲಾಗಿದ್ದು, ಮೂರು ಮಡಿಕೆಗಳಲ್ಲಿ ಶ್ರೀಗಳ ಅಸ್ಥಿ ಸಂಗ್ರಹಿಸಿ, 4 ನದಿಗಳು, 1 ಸಮುದ್ರದಲ್ಲಿ ವಿಸರ್ಜನೆಗೆ ನಿರ್ಧರಿಸಲಾಗಿದೆ. ಜನವರಿ 8ರಂದು ಶ್ರೀಗಳ ಚಿತಾಭಸ್ಮ ವಿಸರ್ಜನೆ ಕಾರ್ಯ ನಡೆಯಲಿದೆ.
ಇದನ್ನೂ ಓದಿ: Nitin Gadkari: ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಪರಿಶೀಲನೆಗೆ ಬಂದಿರೋ ಗಡ್ಕರಿಯನ್ನು ಸ್ವಾಗತಿಸಿದ ಜೆಡಿಎಸ್
ಇಂದೂ ಕೂಡ ಅಪಾರ ಸಂಖ್ಯೆಯ ಭಕ್ತರು ಜ್ಞಾನಯೋಗಾಶ್ರಮಕ್ಕೆ ಆಗಮಿಸ್ತಿದ್ದಾರೆ. ಶ್ರೀಗಳನ್ನ ನೆನೆದು ಕಣ್ಣೀರು ಹಾಕಿದ್ದಾರೆ. ಶ್ರೀಗಳು ಎಲ್ಲೂ ಹೋಗಿಲ್ಲ ಇಲ್ಲಿಯೇ ನಮ್ಮ ಮಧ್ಯೆಯೇ ಇದ್ದಾರೆ ಎಂದು ಹೇಳ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ