ಮಂಗಳೂರು: ಕರಾವಳಿ (Coastal Karnataka) ಅಂದ್ರೆ ನೆನಪಾಗೋದು ಧರ್ಮ ದಂಗಲ್, ಉಗ್ರರ ಅಡುಗುತಾಣ. ಹಿಂದೂ ಮುಸ್ಲಿಂ ಸಂಘರ್ಷಗಳು. ಅದೇ ಕರಾವಳಿಯಲ್ಲೀಗ ಮಾದಕ ನಶೆ ಮಾತಾಡ್ತಿದೆ. ಗಾಂಜಾ ಘಾಟು ಆವರಿಸಿದೆ. ಅದು ಮೆಡಿಕಲ್ ಕಾಲೇಜು ಕ್ಯಾಂಪಸ್ಗಳಲ್ಲೇ (Medical College Campus) ಈ ನಶೆ ಆವರಿಸಿದೆ. ಮಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಜಾಲದ ರಾಕೆಟ್ ಸಿಕ್ಕಿಬಿದ್ದಿದೆ. ನಿಷೇಧಿತ ಮಾದಕ ಪದಾರ್ಥ ಗಾಂಜಾ ಮಾರಾಟ ಹಾಗೂ ಸೇವನೆ (Ganja Consuming And Selling) ಪ್ರಕರಣದಲ್ಲಿ ಒಟ್ಟು 10 ಜನರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹತ್ತು ಆರೋಪಿಗಳನ್ನ ಬಂಧಿಸಿ ಪೊಲೀಸರು ಎಫ್ಐಆರ್ ಹಾಕಿದ್ದಾರೆ. ಆರೋಪಿಗಳು ನಗರದ ಬಂಟ್ಸ್ ಹೋಟೆಲ್ ಬಳಿಯಿದ್ದ ಫ್ಲಾಟ್ನಲ್ಲಿ ಗಾಂಜಾ ಮಾರಾಟ ಮಾಡ್ತಿದ್ರು ಅಂತ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದರು. ಮಾರಾಟದ ಜೊತೆ ನಶೆಯಲ್ಲೂ ಇದ್ದಾಗ್ಲೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಗಳು
ಆರೋಪಿ 01 : ನೀಲ್ಕಿಶೋರ್ ರಾಮ್ಜಿ ಷಾ
ವಯಸ್ಸು 38 ವರ್ಷ - ಇಂಗ್ಲೆಂಡ್ ಪ್ರಜೆ
ಆರೋಪಿ 02 : ಡಾ.ಸಮೀರ್ ಕೇರಳ
ವಯಸ್ಸು 32 ವರ್ಷ - ವೈದ್ಯಕೀಯ ಶಸ್ತ್ರಚಿಕಿತ್ಸಕ
ಆರೋಪಿ 03 : ಡಾ.ಮಣಿಮಾರನ್, 28 ವರ್ಷ
ತಮಿಳುನಾಡು ಮೂಲದ ವೈದ್ಯ
ಆರೋಪಿ 04 : ನದಿಯಾ ಸಿರಾಜ್, 24 ವರ್ಷ
ವೈದ್ಯ ವಿದ್ಯಾರ್ಥಿನಿ-ಕೇರಳದವರು
ಆರೋಪಿ 05 : ಇರಾ ಬಾಸಿನ್, 23 ವರ್ಷ
ವೈದ್ಯ ವಿದ್ಯಾರ್ಥಿನಿ-ಮಹಾರಾಷ್ಟ್ರದವರು
ಆರೋಪಿ 06 : ರಿಯಾ ಚಡ್ಡಾ, 22 ವರ್ಷ
ವೈದ್ಯ ವಿದ್ಯಾರ್ಥಿನಿ - ಚಂಡೀಗಢ
ಆರೋಪಿ 07 : ವರ್ಷಿಣಿ ಪ್ರಾಥಿ, 26 ವರ್ಷ
ವೈದ್ಯ ವಿದ್ಯಾರ್ಥಿನಿ- ಆಂಧ್ರಪ್ರದೇಶ
ಆರೋಪಿ 08 : ಭಾನು ದಹಿಯಾ, 27 ವರ್ಷ
ವೈದ್ಯ ವಿದ್ಯಾರ್ಥಿ- ಚಂಡೀಗಢ
ಆರೋಪಿ 09 : ಕ್ಷಿತಿಜ್ ಗುಪ್ತ, 25 ವರ್ಷ
ವೈದ್ಯ ವಿದ್ಯಾರ್ಥಿ,ದೆಹಲಿ
ಆರೋಪಿ 10 : ಮಹಮ್ಮದ್ ರವೂಫ್, 34 ವರ್ಷ
ವೈದ್ಯ ವಿದ್ಯಾರ್ಥಿ- ಬಂಟ್ವಾಳ ತಾಲ್ಲೂಕು
ದಾಳಿಯಲ್ಲಿ ಸಿಕ್ಕಿದ್ದೇನು?
ದಾಳಿ ವೇಳೆ ಪೊಲೀಸರು 2 ಕೆ.ಜಿ ಗಾಂಜಾ, 2 ಮೊಬೈಲ್ ಫೋನ್, 7,000 ಮೌಲ್ಯದ ನಗದು, ಡಿಜಿಟಲ್ ಉಪಕರಣಗಳು, ಟಾಯ್ ಗನ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕೆಎಂಸಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗು ಯೆನೇಪೋಯಾ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಡ್ರಗ್ಸ್ ದಂಧೆ ಹಣ ಬಿಜೆಪಿ ಸರ್ಕಾರಕ್ಕೆ ಹೋಗ್ತಿತ್ತು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಎರಡು ದಿನ ಪೊಲೀಸ್ ಕಸ್ಟಡಿಗೆ
ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳ ವೈದ್ಯರುಗಳೇ ಗಾಂಜಾ ಗುಂಗಲ್ಲಿ ಸಿಕ್ಕಿಬಿದ್ದಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ಇಷ್ಟು ದೊಡ್ಡ ಮಾದಕಜಾಲದ ಬೇಟೆ ಆಗಿರೋದು ಇತ್ತೀಚೆಗೆ ಇದೇ ಮೊದಲು. ಎಲ್ಲಾ ಆರೋಪಿಗಳನ್ನೂ ನ್ಯಾಯಾಲಯ 2 ದಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದು ಇನ್ನಷ್ಟು ಮಾದಕ ಜಾಲದ ಬಿಲ ಸಿಕ್ಕಿದ್ರೂ ಸಿಗಬಹುದು.
ಇದನ್ನೂ ಓದಿ: Namma Metro Tragedy: ದುರಂತ ಸ್ಥಳಕ್ಕೆ IISC ತಜ್ಞರು; ಪ್ರಾಥಮಿಕ ತನಿಖಾ ವರದಿಯಲ್ಲಿ ಏನಿದೆ?
ಆಸ್ತಿಗಾಗಿ ಮಹಿಳೆ ಮೇಲೆ ಹಲ್ಲೆ
ಜಮೀನು ವಿವಾದದ ಹಿನ್ನೆಲೆಯಲ್ಲಿ ಮಹಿಳೆಯ ಮೇಲೆ ಹಲ್ಲೆಯ ನಡೆಸಿದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆದಿದೆ. ರಾಮಾಪುರ ಗ್ರಾಮದಲ್ಲಿ ಶ್ರೀನಿವಾಸ್ ಎನ್ನುವವರು ಕವಿತಾ ಎಂಬ ಮಹಿಳೆ ಮೇಲೆ ಹಲ್ಲೆ ನಡೆಸಿರೋ ವಿಡಿಯೋ ವೈರಲ್ ಆಗಿದೆ. ಹಲ್ಲೆ ನಡೆಸಿದ್ರೂ ಆರೋಪಿ ವಿರುದ್ದ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ.
3 ಮಕ್ಕಳಿಗೆ ವಿಷವುಣಿಸಿ, ತಾಯಿ ಆತ್ಮಹತ್ಯೆ
ಮೂವರು ಪುತ್ರಿಯರಿಗೆ ವಿಷವುಣಿಸಿ ತಾನೂ ವಿಷಸೇವಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. 28 ವರ್ಷದ ತಾಯಿ ರೇಖಾ, 7 ವರ್ಷದ ಸನ್ನಿದಿ, 4 ವರ್ಷದ ಸಮೃದ್ಧಿ, 2 ವರ್ಷದ ಶ್ರೀನಿಧಿ ಮೃತ ದುರ್ದೈವಿಗಳು. ಮೂವರು ಹೆಣ್ಣು ಮಕ್ಕಳೇ ಹುಟ್ಟಿದ್ದಕ್ಕೆ ತಾಯಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ