Weather Report: ಮಳೆ ನಿಂತರೆ ಸಾಕು ಅನ್ನೋ ಮಾತುಗಳು ಎಲ್ಲರ ಬಾಯಲ್ಲಿ ಕೇಳುತ್ತಿದ್ದೇವೆ. ದಕ್ಷಿಣ, ಉತ್ತರ ಒಳನಾಡು ಸೇರಿದಂತೆ ಎಲ್ಲಾ ಭಾಗಗಳಲ್ಲಿ ಕಳೆದ ಮೂರು ವಾರಗಳಿಂದ ನಿರಂತರ ಮಳೆ (Rainfall) ಆಗ್ತಿದೆ. ತೊಳೆದು ಹಾಕಿರೋ ಬಟ್ಟೆ ಒಣಗುತ್ತಿಲ್ಲ. ಸೂರ್ಯದೇವ (Sun) ಕೃಪೆ ತೋರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡಿಕೊಳ್ತಿದ್ದಾರೆ. ಇಂದಿನಿಂದ ಮೂರು ದಿನ ರಾಜ್ಯದ 10 ಜಿಲ್ಲೆಗಳಲ್ಲಿ ಮಳೆಯ ಅಲರ್ಟ್ (Rain Alert) ಘೋಷಣೆ ಮಾಡಲಾಗಿದೆ. ಇನ್ನು ನಿರಂತರ ಮಳೆಯಿಂದಾಗಿ ನದಿಗಳು (River) ಅಪಾಯಮಟ್ಟದಲ್ಲಿ ಹರಿಯುತ್ತಿವೆ. ವಾಹನಗಳು (Vehicles) ನೀರಿನಲ್ಲಿ ಕೊಚ್ಚಿ ಹೋಗಿರುವ ವರದಿಗಳು ರಾಜ್ಯದ ಮೂಲೆ ಮೂಲೆಯಿಂದಲೂ ಬರುತ್ತಿವೆ. ಕೆಲವಡೆ ಪ್ರಾಣಹಾನಿ ಸಹ ಸಂಭವಿಸಿವೆ.
ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಇಂದೂ ಸಹ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಜಡಿ ಮಳೆಯಾಗಲಿದೆ. ಹಾಗಾಗಿ ಮನೆಯಿಂದ ಹೊರ ಹೋಗುವ ಮುನ್ನ ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಕೊಡೆ ಅಥವಾ ರೇನ್ ಕೋಟ್ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ 26 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನೂ ಮಳೆಯ ಜೊತೆಯಲ್ಲಿ ಚಳಿ ಸಹ ಏರಿಕೆಯಾಗಿದೆ.
ಜಿಲ್ಲಾವಾರು ಹವಾಮಾನ ವರದಿ: (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ಗಳಲ್ಲಿ)
ಬೆಂಗಳೂರು 26-20, ಮೈಸೂರು 26-21, ಚಾಮರಾಜನಗರ 27-21, ರಾಮನಗರ 27-21, ಮಂಡ್ಯ 27-21, ಬೆಂಗಳೂರು ಗ್ರಾಮಾಂತರ 26-20, ಚಿಕ್ಕಬಳ್ಳಾಪುರ 24-19, ಕೋಲಾರ 27-21, ಹಾಸನ 22-19, ಚಿತ್ರದುರ್ಗ 25-21, ಚಿಕ್ಕಮಗಳೂರು 21-18, ದಾವಣಗೆರೆ 25-21, ಶಿವಮೊಗ್ಗ 24-21, ಕೊಡಗು 20-17, ತುಮಕೂರು 26-21, ಉಡುಪಿ 27-24
ಇದನ್ನೂ ಓದಿ: Heavy Rain: ಸ್ಮಶಾನಕ್ಕೆ ಹೋಗಲು ರಸ್ತೆಯೇ ಇಲ್ಲ; ನೀರಿನಲ್ಲೇ ಶವ ಹೊತ್ತು ಸಾಗಿದ ಗ್ರಾಮಸ್ಥರು!
ಮಂಗಳೂರು 27-25, ಉತ್ತರ ಕನ್ನಡ 23-21, ಧಾರವಾಡ 23-20, ಹಾವೇರಿ 25-22, ಹುಬ್ಬಳ್ಳಿ 24-21, ಬೆಳಗಾವಿ 23-20, ಗದಗ 24-21, ಕೊಪ್ಪಳ 26-22, ವಿಜಯಪುರ 24-22, ಬಾಗಲಕೋಟ 26-22, ಕಲಬುರಗಿ 24-22, ಬೀದರ್ 23-21, ಯಾದಗಿರಿ 26-23, ರಾಯಚೂರ 26-23 ಮತ್ತು ಬಳ್ಳಾರಿ 28-23
ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಆರ್ಭಟ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ 2 ದಿನ ವ್ಯಾಪಕ ಮಳೆಯಾಗಿದ್ದು, ಉಳಿದೆಡೆ ಸಾಧಾರಣ ಮಳೆ ಬೀಳಲಿದೆ. ನಂತರದ ದಿನಗಳಲ್ಲಿ ಮಳೆಯು ಉತ್ತರ ಭಾರತದತ್ತ ಹೊರಳಲಿದ್ದು, ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ.
ಈಗಾಗಲೇ ಮುಂಗಾರು ಆರ್ಭಟ ತುಸು ಕಡಿಮೆಯಾಗುತ್ತಿದೆ. ಮುಂದಿನ 2 ರಿಂದ 3 ದಿನ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗಲಿದ್ದು, ನಂತರದ ದಿನದಲ್ಲಿ ಉತ್ತರ ಭಾರತದತ್ತ ಮುಂಗಾರು ಚಲಿಸಲಿದ್ದು ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ.
10 ಜಿಲ್ಲೆಗಳಲ್ಲಿ ವ್ಯಾಪಕ ಮಳೆ
ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾನುವಾರ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಹಾಸನ, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳಿಗೆ ಆರೆಂಜ್ ಹಾಗೂ ಬೆಳಗಾವಿ, ರಾಯಚೂರು, ವಿಜಯಪುರ, ಚಾಮರಾಜನಗರ, ದಾವಣಗೆರೆ ಮತ್ತು ಮೈಸೂರು ಜಿಲ್ಲೆಗಳಿಗೆ ಯಲ್ಲೊ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: Heavy Rain: ರಾಮನಗರ ಜಿಲ್ಲೆಯಲ್ಲಿ ಅತಿವೃಷ್ಟಿ, ರೈತರ ಜಮೀನಿನಲ್ಲೇ ಏಕಾಏಕಿ ಹಳ್ಳ ಸೃಷ್ಟಿ!
ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತ
ನಿರಂತರ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೆನಾಡು ಭಾಗದಲ್ಲಿ ಹರಿಯುವ ಭದ್ರಾ, ತುಂಗಾ, ಹೇಮಾವತಿ ಸೇರಿದಂತೆ ಸಣ್ಣಪುಟ್ಟ ಹಳ್ಳಕೊಳ್ಳಗಳೂ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕೆಲ ಗ್ರಾಮಗಳಲ್ಲಿ ನದಿ, ಹಳ್ಳಗಳ ನೆರೆ ನೀರು ಕಾಫಿ, ಅಡಿಕೆ, ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ನಷ್ಟ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದರೇ, ಭೂ ಕುಸಿತದಿಂದಾಗಿ ಹಲವು ಗ್ರಾಮಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ