ಚಿಕ್ಕಮಗಳೂರು : ಕುರಿಯನ್ನು (Sheep) ಬಡವರ ಸಣ್ಣ ಮತ್ತು ಅತಿ ಸಣ್ಣ ರೈತರ ‘ಕಿರುಕಾಮಧೇನು’ ಎಂದು ಕರೆಯಲಾಗುತ್ತದೆ. ಉಣ್ಣೆ, ಮಾಂಸ, ಚರ್ಮ, ಗೊಬ್ಬರ ಇತ್ಯಾದಿ ಉಪಯುಕ್ತ ವಸ್ತುಗಳಿಂದ ದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಉತ್ತಮ ಪಾತ್ರವನ್ನು ವಹಿಸುತ್ತದೆ. ಕುರಿ ಸಾಕಾಣಿಕೆ ಸಣ್ಣ, ಅತಿ ಸಣ್ಣ ರೈತರ ಮತ್ತು ಕೃಷಿ ಕಾರ್ಮಿಕರ (Agricultural workers) ಮುಖ್ಯ ಕಸುಬಾಗಿದೆ. ಎಷ್ಟೋ ರೈತರು (Farmer) ಕುರಿ ಸಾಕಾಣಿಕೆ ಮೂಲಕವೇ ತಮ್ಮ ಜೀವನ ನಡೆಸುತ್ತಿರುತ್ತಾರೆ. ಇನ್ನೂ ಸಾಮಾನ್ಯವಾಗಿ ಕುರಿಗೆ ಒಂದು ತಲೆ, ನಾಲ್ಕು ಕಾಲುಗಳಿರುವುದನ್ನು ನಾವು ನೋಡಿರುತ್ತೇವೆ. ಆದರೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ವಿಚಿತ್ರ ಕುರಿ ಮರಿಯೊಂದು ಜನಿಸಿದೆ. ಇನ್ನೂ ಕುರಿ ಮರಿಯನ್ನುನೋಡಿ ನೋಡಲು ಜನ ಸಾಗರವೇ ಹರಿದು ಬಂದಿತ್ತು.
ಒಂದು ದೇಹಕ್ಕೆ ತಲೆಯೇ ಇಲ್ಲ, ಒಂದು ದೇಹ ಮತ್ತೊಂದು ದೇಹದೊಂದಿಗೆ ಸೇರ್ಪಡೆ
ಹೌದು, ಚಿಕ್ಕಮಗಳೂರು ಜಿಲ್ಲೆಯಲ್ಲಿ 1 ತಲೆ, 8 ಕಾಲು, 2 ದೇಹ ವಿರುವ ವಿಚಿತ್ರ ಕುರಿ ಮರಿಯೊಂದು ಜನಿಸಿದೆ. ಅದರಲ್ಲಿಯೂ ಒಂದು ದೇಹಕ್ಕೆ ತಲೆಯೇ ಇಲ್ಲ, ಒಂದು ದೇಹ ಮತ್ತೊಂದು ದೇಹದ ಜೊತೆ ಸೇರ್ಪಡೆಗೊಂಡಿದೆ. ಇನ್ನೂ ಈ ಘಟನೆ ಕಡೂರು ತಾಲೂಕಿನ ಕೇದಿಗೆರೆ ಗ್ರಾಮದಲ್ಲಿ ವರದಿಯಾಗಿದೆ.
ಕುರಿ ನೋಡಲು ಮುಗಿಬಿದ್ದ ಅಕ್ಕ-ಪಕ್ಕದ ಊರಿನ ಜನ
ಅಷ್ಟಕ್ಕೂ ಈ ಕುರಿ ಕೇದಿಗೆರೆ ಗ್ರಾಮದ ಈಶಣ್ಣ ಎಂಬವರ ಮನೆಯಲ್ಲಿ ಜನಿಸಿದೆ. ಈಶಣ್ಣ ಅವರು ಸುಮಾರು 30ಕ್ಕೂ ಹೆಚ್ಚು ಕುರಿಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಸದ್ಯ ಈರಣ್ಣ ಅವರು ಸಾಕಿರುವ ಕುರಿಗಳಲ್ಲೊಂದು ಕುರಿ ವಿಚಿತ್ರ ಮರಿಗೆ ಜನ್ಮ ನೀಡಿದ್ದು, ಇನ್ನೂ ಈ ಕುರಿ ಮರಿಯನ್ನು ನೋಡಲು ಅಕ್ಕಪಕ್ಕದ ಹಳ್ಳಿಗಳಿಂದೆಲ್ಲಾ ಜನರು ಜಮಾಯಿಸಿದ್ದರು. ಆದರೆ ಹುಟ್ಟಿದ ಒಂದೇ ಗಂಟೆಯಲ್ಲಿಯೇ ಈ ಕುರಿ ಮರಿ ಸತ್ತು ಹೋಗಿದೆ.
ಇದನ್ನೂ ಓದಿ: Viral News: 360 ಡಿಗ್ರಿಯಲ್ಲೂ ನೋಡುತ್ತೆ 2 ತಲೆ, 4 ಕಣ್ಣುಗಳ ಕುರಿಮರಿ!
ಮೈಸೂರಿನಲ್ಲೂ ಒಂದು ತಲೆ, ಎರಡು ದೇಹ, ಎಂಟು ಕಾಲುಗಳಿಂದ ವಿಚಿತ್ರ ಕುರಿ ಜನಿಸಿತ್ತು
ಇದೇ ರೀತಿ ಕೆಲ ವರ್ಷಗಳ ಹಿಂದೆ ಮೈಸೂರಿನ ಕೃಷ್ಣರಾಜನಗರ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಕುರಿಯೊಂದು ಒಂದು ತಲೆ, ಎರಡು ದೇಹ, ಎಂಟು ಕಾಲು ಹಾಗೂ ಮೂರು ಕಿವಿ ಹೊಂದಿರುವ ವಿಚಿತ್ರ ಮರಿಗೆ ಜನ್ಮನೀಡಿತ್ತು. ಇನ್ನೂ ಈ ಕುರಿ ಮರಿಯನ್ನು ಜನ ಅಚ್ಚರಿ ವ್ಯಕ್ತ ಪಡಿಸಿದ್ದರು.
ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ನಾಲ್ಕು ಕಾಲುಗಳಿದ್ದ ಹೆಣ್ಣು ಮಗು ಜನನ
ಪ್ರಾಣಿಗಳಷ್ಟೇ ಅಲ್ಲದೇ ಇತ್ತೀಚೆಗಷ್ಟೇ ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಜನ್ಮ ನೀಡಿದ್ದರು. ಇನ್ನೂ ಮಗು ಜನಿಸಿದಾಗ 2.3 ಕೆ.ಜಿ. ತೂಕವಿದ್ದು, ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದರು.
ಮಗು ಹುಟ್ಟುವಾಗಲೇ ನಾಲ್ಕು ಕಾಲುಗಳನ್ನು ಹೊಂದಿದೆ. ಆಕೆಗೆ ದೈಹಿಕ ವಿಕಲತೆ ಇದೆ. ಕೆಲವು ಭ್ರೂಣಗಳ ಬೆಳವಣಿಗೆ ಹೆಚ್ಚುವರಿಯಾಗುತ್ತವೆ. ಇದನ್ನು ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ.
ಭ್ರೂಣವು ಎರಡು ಭಾಗಗಳಾಗಿ ವಿಭಜನೆಯಾದಾಗ, ದೇಹವು ಎರಡು ಸ್ಥಳಗಳಲ್ಲಿ ಬೆಳವಣಿಗೆಯಾಗುತ್ತದೆ, ಈ ಹೆಣ್ಣು ಮಗುವಿನ ಸೊಂಟದ ಕೆಳಗಿನ ಭಾಗವು ಎರಡು ಹೆಚ್ಚುವರಿ ಕಾಲುಗಳೊಂದಿಗೆ ಅಭಿವೃದ್ಧಿಗೊಂಡಿದೆ, ಆದರೆ ಆ ಕಾಲುಗಳು ನಿಷ್ಕ್ರಿಯವಾಗಿವೆ.
ಇದನ್ನೂ ಓದಿ: Four Legs Baby: ಆಗತಾನೇ ಹುಟ್ಟಿದ ಕಂದಮ್ಮನಿಗೆ ಎರಡಲ್ಲ, 4 ಕಾಲು! ವಿಚಿತ್ರ ಮಗು ನೋಡಿ ತಂದೆ-ತಾಯಿಗೇ ಶಾಕ್
ದೇಹದ ಯಾವುದೇ ಭಾಗದಲ್ಲಿ ಬೇರೆ ಯಾವುದೇ ಅಂಗವಿಕಲತೆ ಇದೆಯೇ ಎಂದು ತಪಾಸಣೆ ನಡೆಸುತ್ತೇವೆ. ಪರೀಕ್ಷೆ ನಡೆಸಿದ ಬಳಿಕ ಮಗು ಆರೋಗ್ಯವಾಗಿದ್ದರೆ ಶಸ್ತ್ರಚಿಕಿತ್ಸೆ ಮೂಲಕ ಆ ಕಾಲುಗಳನ್ನು ತೆಗೆಯುತ್ತೇವೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ