HOME » NEWS » State » 1 5 YEAR OLD BABY LIFE SAVE WHO FALL IN WATER SUMP IN BENGALURU RHHSN CANK

ಸಂಪಿಗೆ ಬಿದ್ದು, 1 ನಿಮಿಷ 10 ಸೆಕೆಂಡ್ ನೀರಿನಲ್ಲಿ ಮುಳುಗಿದರೂ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಮಗು!

ಒಂದು ನಿಮಿಷ ಹತ್ತು ಸೆಕೆಂಡ್ ನೀರಿನಲ್ಲಿ ಮುಳುಗಿದ್ದರು ಪವಾಡ ಸದೃಷ ರೀತಿಯಲ್ಲಿ ಪರಾಗಿದೆ. ಆದರೆ ಎಲ್ಲಾ ಮಕ್ಕಳಿಗೂ ಬದುಕುವ ಭಾಗ್ಯ ಸಿಗುವುದಿಲ್ಲ. ಹಾಗಾಗಿ ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಜಾಗರೂಕತೆಯಿಂದ ಇರಬೇಕು. ಇಲ್ಲವಾದರೆ ಸಣ್ಣ ನಿರ್ಲಕ್ಷ ದೊಡ್ಡ ದುರಂತಕ್ಕೆ ಕಾರಣವಾಗಿಬಿಡುತ್ತದೆ.

news18-kannada
Updated:April 13, 2021, 8:33 PM IST
ಸಂಪಿಗೆ ಬಿದ್ದು, 1 ನಿಮಿಷ 10 ಸೆಕೆಂಡ್ ನೀರಿನಲ್ಲಿ ಮುಳುಗಿದರೂ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಮಗು!
ಸಂಪ್​ಗೆ ಬಿದ್ದಿರುವ ಮಗು ರಕ್ಷಣೆ ಮಾಡಿರುವುದು.
  • Share this:
ಆನೇಕಲ್: ಆ ಮಗು ಆಯತಪ್ಪಿ ನೀರಿನ ಸಂಪಿಗೆ ಬಿದ್ದು ಬಿಟ್ಟಿತ್ತು. ಬಿದ್ದು ಎರಡು ನಿಮಿಷ ಕಳೆದರೂ ಯಾರೊಬ್ಬರೂ ಗಮನಿಸಿರಲಿಲ್ಲ. ಇನ್ನೇನು ಮಗು ಕಥೆ ಮುಗಿಯಿತು ಎನ್ನುವಷ್ಟರಲ್ಲಿ ಅಪತ್ಬಾಂಧವ ಎಂಟ್ರಿ ಕೊಟ್ಟಿದ್ದ. ಕ್ಷಣ ಮಾತ್ರದಲ್ಲಿ ಸಂಪಿಗೆ ಇಳಿದು ಸಾವಿನ ಅಂಚಿನಲ್ಲಿದ್ದ ಮಗುವನ್ನು ರಕ್ಷಣೆ ಮಾಡಿದ್ದ. ಮಗುವಿನ ಅಯಸ್ಸು ಗಟ್ಟಿ ಇತ್ತು ಅನ್ಸುತ್ತೆ. ನೀರಿನಲ್ಲಿ ಎರಡು ನಿಮಿಷ ಇದ್ದರು ಪವಾಡ ಸದೃಷ ರೀತಿಯಲ್ಲಿ ಪ್ರಾಣಾಪಾಯದಿಂದ ಪರಾಗಿದೆ. ಒಟ್ಟಾರೆ ಘಟನೆ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಒಂದು ಕ್ಷಣ ಝಲ್ ಎನಿಸದೆ ಇರದು.

ಸುಮಾರು ಒಂದೂವರೆ ವರ್ಷದ ಮಗುವೊಂದು ಅನಾಮತ್ತಾಗಿ ನೀರಿನ ಸಂಪೊಂದರಲ್ಲಿ ಬಿದ್ದು ಕೆಲ ನಿಮಿಷಗಳ ಬಳಿಕ ಅಪತ್ಬಾಂಧವನೊಬ್ಬ ಮಗುವನ್ನು ರಕ್ಷಿಸುತ್ತಿರುವ ಸಿಸಿಟಿವಿ ದೃಶ್ಯ ಕಂಡು ಬಂದದ್ದು ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ. ಆಂಧ್ರ ಪ್ರದೇಶ ಮೂಲದ ಸತೀಶ್ ಮತ್ತು ಕೃಷ್ಣಮ್ಮ ದಂಪತಿಯ ಮಗು ಭವಿಷ್ಯ(ಒಂದೂವರೆ ವರ್ಷ) ಸಾವಿನ ದವಡೆಯಿಂದ ಪರಾದ ಅದೃಷ್ಟದ ಮಗು. ಇದೇ ತಿಂಗಳ ಮೂರನೇ ತಾರೀಖು ಬೆಳಗ್ಗೆ 8 ಗಂಟೆ ಸುಮಾರಿಗೆ ನಡೆದಿರುವ ಘಟನೆ. ಸಂಬಂಧಿಕರ ಮನೆಗೆ ಬಂದಿದ್ದ ಮಗುವಿನ ಪೋಷಕರು ನೆಂಟರಿಷ್ಟರ ಜೊತೆ ಮಾತಿನಲ್ಲಿ ತಲ್ಲೀನರಾಗಿ ಮಗುವನ್ನು ಮರೆತಿದ್ದರು.  ಮನೆಯಿಂದ ಹೊರ ಬಂದ ಮಗು ತನಗೆ ಅರಿವಿಲ್ಲದೆ ಸಂಪಿನ ಬಳಿ ಬಂದಿದೆ. ಅದೇ ಸಮಯದಲ್ಲಿ ಮನೆಯ ಮಾಲೀಕ ಸಂಪಿನಲ್ಲಿ ನೀರು ಖಾಲಿಯಾಗಿದ್ದರಿಂದ ಟ್ಯಾಂಕರ್ ನಲ್ಲಿ ನೀರು ತುಂಬಿಸಲು ಸಂಪಿನ ಮುಚ್ಚಳ ತೆಗೆದಿದ್ದಾರೆ. ಇದನ್ನು ಅರಿಯದ ಮಗು ನೇರವಾಗಿ ಸಂಪಿಗೆ ಬಿದ್ದು ಬಿಟ್ಟಿದೆ. ಮಗು ಸಂಪಿಗೆ ಬಿದ್ದಿರುವುದು ಮತ್ತು ವ್ಯಕ್ತಿಯೊಬ್ಬ ರಕ್ಷಣೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.

ಪ್ರಾಣಾಪಾಯದಿಂದ ಪಾರಾದ ಮಗು.


ಇದನ್ನು ಓದಿ: ರಾಮನಗರ- ಚನ್ನಪಟ್ಟಣ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಹವಾ, ಕಾಂಗ್ರೆಸ್ ಸೇಫ್ ಜೋನ್, ಬಿಜೆಪಿ ಫುಲ್ ಫೈಟ್!

ಇನ್ನೂ ಮನೆಯ ಸಂಪಿನಲ್ಲಿ ನೀರು ಖಾಲಿಯಾಗಿದ್ದರಿಂದ ಸ್ವಂತ ಟ್ರ್ಯಾಕ್ಟರ್ ಟ್ಯಾಂಕರ್ ಮೂಲಕ ಸಂಪಿಗೆ ನೀರು ತುಂಬಿಸುತ್ತಿದ್ದೆ. ಟ್ಯಾಂಕರ್ ಖಾಲಿಯಾಗುವುದರೊಳಗೆ ತಿಂಡಿ ಮಾಡಿ ಬರೋಣ ಎಂದು ಮನೆಗೆ ಹೋದೆ. ಕೆಲ ಹೊತ್ತಿನಲ್ಲಿಯೇ ಬೈಕ್ ಸವಾರನೊಬ್ಬ ಬಂದಿದ್ದರಿಂದ ನೀರಿನ ಪೈಪ್ ಮೇಲೆ ಹಾದು ಹೋಗುತ್ತಾನೆ ಎಂದು ಹೊರಗಡೆ ಬಂದೆ. ಅಷ್ಟೊತ್ತಿಗೆ ಬೈಕ್ ಸವಾರ ವಾಪಸ್ ಹೋಗಿದ್ದು, ಸಂಪಿನಲ್ಲಿ ನೀರು ತುಂಬಿದ್ಯಾ ಎಂದು ಪರಿಶೀಲನೆ ನಡೆಸಲು ನೋಡಿದಾಗ ಮಗು ನೀರಿನಲ್ಲಿ ಮುಳುಗಿ ಒದ್ದಾಡುತ್ತಿತ್ತು. ಕೂಡಲೇ ಸಂಪಿಗೆ ಇಳಿದು ಮಗುವನ್ನು ರಕ್ಷಣೆ ಮಾಡಿದೆ. ಸಂಪಿನಲ್ಲಿ ಸುಮಾರು ಹತ್ತು ಅಡಿ ನೀರು ತುಂಬಿದ್ದು, ಮಗು ನೀರು ಕುಡಿದು ಬಿಟ್ಟಿತ್ತು. ಮಗುವಿಗೆ ನೀರು ವಾಂತಿ ಮಾಡಿಸಿದ ಬಳಿಕ ಸರಿ ಹೋಯಿತು ಎಂದು ಮಗುವನ್ನು ರಕ್ಷಿಸಿದ ಮನೆ ಮಾಲೀಕ ತಿಳಿಸಿದ್ದಾರೆ.
Youtube Video

ಒಟ್ಟಿನಲ್ಲಿ ಮಗುವಿನ ಅಯಸ್ಸು ಗಟ್ಟಿ ಇತ್ತು ಅನ್ಸುತ್ತೆ. ಒಂದು ನಿಮಿಷ ಹತ್ತು ಸೆಕೆಂಡ್ ನೀರಿನಲ್ಲಿ ಮುಳುಗಿದ್ದರು ಪವಾಡ ಸದೃಷ ರೀತಿಯಲ್ಲಿ ಪರಾಗಿದೆ. ಆದರೆ ಎಲ್ಲಾ ಮಕ್ಕಳಿಗೂ ಬದುಕುವ ಭಾಗ್ಯ ಸಿಗುವುದಿಲ್ಲ. ಹಾಗಾಗಿ ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಜಾಗರೂಕತೆಯಿಂದ ಇರಬೇಕು. ಇಲ್ಲವಾದರೆ ಸಣ್ಣ ನಿರ್ಲಕ್ಷ ದೊಡ್ಡ ದುರಂತಕ್ಕೆ ಕಾರಣವಾಗಿಬಿಡುತ್ತದೆ.ವರದಿ : ಆದೂರು ಚಂದ್ರು 
Published by: HR Ramesh
First published: April 13, 2021, 8:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories