ಎಟಿಪಿ ಟೆನಿಸ್: ವಿಶ್ವದ ನಂ.1 ಆಟಗಾರ ಜೊಕೊವಿಕ್​ಗೆ ಸೋಲುಣಿಸಿ ಪ್ರಶಸ್ತಿ ಮುಡಿಗೇರಿಸಿದ 21ರ ಝ್ವೆರೆವ್

16 ಗ್ರಾಂಡ್ ಸ್ಲಾಮ್‌ ಪ್ರಶಸ್ತಿಗಳ ಒಡೆಯ ಜೊಕೊವಿಕ್‌ಗೆ ವಿಶ್ವದ 5ನೇ ಶ್ರೇಯಾಂಕದ ಆಟಗಾರ ಜರ್ಮನಿಯ ಅಲೆಕ್ಸಾಂಡರ್‌ ಝ್ವೆರೆವ್ ವಿರುದ್ಧ ಸೋಲುವ ಮೂಲಕ ವರ್ಷಾಂತ್ಯವನ್ನು ಮುಗಿಸಿದ್ದಾರೆ.

zahir | news18
Updated:November 19, 2018, 11:26 AM IST
ಎಟಿಪಿ ಟೆನಿಸ್: ವಿಶ್ವದ ನಂ.1 ಆಟಗಾರ ಜೊಕೊವಿಕ್​ಗೆ ಸೋಲುಣಿಸಿ ಪ್ರಶಸ್ತಿ ಮುಡಿಗೇರಿಸಿದ 21ರ ಝ್ವೆರೆವ್
Zverev
  • Advertorial
  • Last Updated: November 19, 2018, 11:26 AM IST
  • Share this:
ಲಂಡನ್​ : ವಿಶ್ವದ ನಂಬರ್​ 1 ಟೆನಿಸ್​ ಆಟಗಾರ ನೊವಾಕ್​ ಜೊಕೊವಿಕ್ ಸೋಲುಣಿಸುವ ಮೂಲಕ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಅಲೆಕ್ಸಾಂಡರ್ ಝ್ವೆರೆವ್ ಚೊಚ್ಚಲ ಬಾರಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ 6-4, 6-3 ನೇರ ಸೆಟ್​ಗಳಿಂದ ಜೊಕೊವಿಕ್​ರನ್ನು ಮಣಿಸಿದರು. ಸೆಮಿ ಫೈನಲ್​ನಲ್ಲಿ ಆರು ಬಾರಿಯ ಎಟಿಪಿ ಚಾಂಪಿಯನ್ ರೋಜರ್ ಫೆಡರರ್‌ರನ್ನು 7-5, 7-6(5) ಸೆಟ್‌ಗಳ ಅಂತರದಿಂದ ಮಣಿಸಿ ಝ್ವೆರೆವ್ ವಿಶ್ವದ ಗಮನ ಸೆಳೆದಿದ್ದರು.

ಹೀಗಾಗಿ ಎಟಿಪಿ ಫೈನಲ್​ ತೀವ್ರ ಹಣಾಹಣಿ ನಿರೀಕ್ಷಿಸಲಾಗಿತ್ತು. ಅದರಂತೆ ಜೀವಮಾನದ ಶ್ರೇಷ್ಠ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದ ಝ್ವೆರೆವ್ ಪ್ರತಿ ಸರ್ವ್​ನಲ್ಲೂ ವಿಶ್ವದ ಶ್ರೇಷ್ಠ ಆಟಗಾರನನ್ನು ಕಾಡಿದರು. ಅಲ್ಲದೆ ಯುವ ಆಟಗಾರನ ಅದ್ಭುತ ಸರ್ವ್ ಮತ್ತು ತೀಕ್ಷ್ಣ ಹೊಡೆತಕ್ಕೆ ಜೊಕೊವಿಕ್ ನಿರುತ್ತರವಾದರು.

ಕರಾರುವಾಕ್ ಸರ್ವ್​ಗಳ ಮೂಲಕ ಜೊಕೊವಿಕ್​ಗೆ ಪಾಯಿಂಟ್​ಗಳ ಅವಕಾಶ ನೀಡದೆ 21ರ ಹರೆಯದ ಅಲೆಕ್ಸಾಂಡರ್ ಝ್ವೆರೆವ್ ಟೆನಿಸ್ ಅಂಗಳದ ಹೊಸ ದೊರೆಯಾಗಿ ಮಿಂಚಿದ್ದಾರೆ. ಐದು ಬಾರಿಯ ಎಟಿಪಿ ಚಾಂಪಿಯನ್ ಆಗಿರುವ ನೊವಾಕ್ ಜೊಕೊವಿಕ್ ಈ ಪ್ರಶಸ್ತಿಯನ್ನು ಗೆದ್ದಿದ್ದರೆ, ರೋಜರ್ ಫೆಡರರ್ ಜೊತೆ ಅತಿ ಹೆಚ್ಚು ಎಟಿಪಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ದಾಖಲೆಯನ್ನು ಹಂಚಿಕೊಳ್ಳುತ್ತಿದ್ದರು.

'ಈ ಅದ್ಭುತ ಗೆಲುವನ್ನು ವಿವರಿಸಲು ಸಾಧ್ಯವಿಲ್ಲ. ಜೀವಮಾನದಲ್ಲೇ ನಾನು ಗೆಲ್ಲುತ್ತಿರುವ ಅತೀ ದೊಡ್ಡ ಪ್ರಶಸ್ತಿ ಇದಾಗಿದೆ. ಜೊಕೊವಿಕ್ ಟೆನಿಸ್​ ಆಡುವ ಪರಿ ನಮಗೆಲ್ಲರಿಗೂ ಗೊತ್ತಿದೆ. ಅಂತಹ ಶ್ರೇಷ್ಠ ಆಟಗಾರ ನನ್ನದೊಂದಿಗೆ ಸೋತಿರುವುದಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ' ಎಂದು ಪಂದ್ಯದ ಬಳಿಕ ಅಲೆಕ್ಸಾಂಡರ್ ಝ್ವೆರೆವ್ ಹೇಳಿದರು.

ಇದನ್ನೂ ಓದಿ: ಕೇವಲ 15 ಓವರ್ ಮಾತ್ರ ಬೌಲಿಂಗ್ ಮಾಡುವಂತೆ ಮೊಹಮ್ಮದ್ ಶಮಿಗೆ ಸೂಚನೆ..!

16 ಗ್ರಾಂಡ್ ಸ್ಲಾಮ್‌ ಪ್ರಶಸ್ತಿಗಳ ಒಡೆಯ ಜೊಕೊವಿಕ್‌ಗೆ ವಿಶ್ವದ 5ನೇ ಶ್ರೇಯಾಂಕದ ಆಟಗಾರ ಜರ್ಮನಿಯ ಅಲೆಕ್ಸಾಂಡರ್‌ ಝ್ವೆರೆವ್ ವಿರುದ್ಧ ಸೋಲುವ ಮೂಲಕ ವರ್ಷಾಂತ್ಯವನ್ನು ಸೋಲಿನೊಂದಿಗೆ ಮುಗಿಸಿದ್ದಾರೆ.ಇದನ್ನೂ ಓದಿ: ಐಪಿಎಲ್​ 2019: ಮೂರು ತಂಡಗಳ ನಾಯಕತ್ವ ಬದಲಾವಣೆ..!

First published:November 19, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ