ತಾಯಿಯ ಪ್ರೀತಿಗೆ ಸರಿಸಾಟಿ ಉಂಟೆ..? ಇಲ್ಲಿದೆ ನೋಡಿ ಮನಕಲಕುವ ವಿಡಿಯೋ..

ಗಾಜಿನ ಹತ್ತಿರ ಬಂದು ನಮ್ಮ ಮಗುವಿನ ಮೂಗನ್ನು ಗಾಜಿನ ಅಕಡೆಯಿಂದಲೇ ಸ್ಪರ್ಶಿಸುತ್ತಿರುವುದನ್ನು ನೋಡಿದ ನಮ್ಮಿಬ್ಬರಿಗೂ ಕಣ್ಣಲ್ಲಿ ನೀರು ಬಂತು

ಗೊರಿಲ್ಲಾದ ತಾಯಿ ಪ್ರೀತಿ..

ಗೊರಿಲ್ಲಾದ ತಾಯಿ ಪ್ರೀತಿ..

 • Share this:
  ಪ್ರಾಣಿಗಳಿಗೂ ಮತ್ತು ಮನುಷ್ಯರ ನಡುವೆ ಒಂದು ಅವಿನಾಭಾವ ಸಂಬಂಧ ಇದೆ ಎಂದರೆ ಅತಿಶಯೋಕ್ತಿಯಲ್ಲ. ಅದರಲ್ಲೂ ಕೆಲವು ಪ್ರಾಣಿಗಳಿಗೆ ಮಕ್ಕಳನ್ನು ನೋಡುವುದು ಎಂದರೆ ತುಂಬಾ ಪ್ರೀತಿ.ಅಂತಹ ಪ್ರಾಣಿಗಳ ಸಾಲಿಗೆ ಗೊರಿಲ್ಲಾ ಸಹ ಸೇರುತ್ತದೆ. ತಾಯಿಗೆ ತನ್ನ ಮಕ್ಕಳೆಂದರೆ ಅದೆಷ್ಟು ಪ್ರೀತಿ, ಇದು ಬರೀ ಮಾನವರಿಗೆ ಸಂಬಂಧ ಪಡದೆ ಪ್ರಾಣಿಗಳ ವಿಷಯದಲ್ಲಿಯೂ ಅನ್ವಯಿಸುತ್ತದೆ. ಇಲ್ಲಿ ಒಂದು ವಿಡಿಯೋ ಇದೆ. ಅದರಲ್ಲಿಯೂ ಪ್ರಾಣಿಗಳು ತಮ್ಮ ಮಕ್ಕಳೊಂದಿಗೆ ಮನುಷ್ಯರಷ್ಟೇ ಭಾಂದವ್ಯ ಹೊಂದಿರುವುದು ನಾವು ಕಾಣಬಹುದು.ಮೈಕೆಲ್ ಆಸ್ಟಿನ್ ಇತ್ತೀಚೆಗೆ ಚಿತ್ರೀಕರಿಸಿದ ವಿಡಿಯೋದಲ್ಲಿ ಈ ಭಾಂದವ್ಯವನ್ನು ಸುಂದರವಾಗಿ ತೋರಿಸಲಾಗಿದೆ. ಅವರು ಮತ್ತು ಅವರ ಪತ್ನಿ ಎಮ್ಮೆಲಿನಾ ಆಸ್ಟಿನ್ ಇತ್ತೀಚೆಗೆ ತಮ್ಮ ಒಂದು ತಿಂಗಳ ಮಗು ಕ್ಯಾನ್ಯನ್‌ನೊಂದಿಗೆ ಬೋಸ್ಟನ್‌ನಲ್ಲಿರುವ ಫ್ರಾಂಕ್ಲಿನ್ ಪಾರ್ಕ್ ಮೃಗಾಲಯಕ್ಕೆ ಭೇಟಿ ನೀಡಿದ್ದರು.


  ಅವರು ಗೊರಿಲ್ಲಾ ಆವರಣದಲ್ಲಿದ್ದಾಗ, ಕಿಕಿ ಎಂಬ ಹೆಣ್ಣು ಗೊರಿಲ್ಲಾ ಮತ್ತು ಅದರ ಮಗುವಾದ ಏಳು ತಿಂಗಳಿನ ಪ್ಯಾಬ್ಲೋ ಗೋರಿಲ್ಲಾವನ್ನು ನೋಡಿದರು. ಆಸ್ಟಿನ್ ತನ್ನ ಹೆಂಡತಿ ಮತ್ತು ಕಿಕಿ ಗಾಜಿನ ಮೂಲಕ ನೋಡಿದಾಗ ತಮ್ಮ ಮಕ್ಕಳನ್ನು ಪರಸ್ಪರ ಪರಿಚಯಿಸುವಂತಹ ಆ ಮಧುರವಾದ ಮತ್ತು ಪವಿತ್ರವಾದ ಪ್ರೇಮದ ಕ್ಷಣವನ್ನು ಚಿತ್ರೀಕರಿಸಿದರು.


  "ನಮ್ಮ ಮಗನನ್ನು ಕಿಕಿಗೆ ತೋರಿಸಲು ನನ್ನ ಹೆಂಡತಿ ಮಗುವನ್ನು ಎತ್ತಿ ಹಿಡಿದಳು. ಗಾಜಿನ ಆ ಕಡೆ ಇರುವಂತಹ ಕಿಕಿ ನಮ್ಮ ಮಗುವನ್ನು ತುಂಬಾ ಸಮಯದವರೆಗೆ ನೋಡುತ್ತಲೇ ಇತ್ತು. ನಂತರ ಕಿಕಿ ತನ್ನ ಮಗು ಪ್ಯಾಬ್ಲೋನನ್ನು ಹಿಡಿದುಕೊಂಡು ಅವಳ ಕಾಲಿನ ಮೇಲೆ ಕೂರಿಸಿಕೊಂಡು ತನ್ನ ಮಗುವನ್ನು ನಮಗೆ ಪರಿಚಯಿಸಿತು. ನಮ್ಮ ಮತ್ತು ಕಿಕಿ ಮಧ್ಯೆ ಒಂದು ಗಾಜು ಇತ್ತು. ಅಷ್ಟು ಬಿಟ್ಟರೆ ತಾಯಿಯ ಪ್ರೀತಿಯು ಅಲ್ಲಿ ಎದ್ದು ಕಾಣುತ್ತಿತ್ತು. ಮಾತು ಬರದೆ ಇದ್ದರೂ ಕಿಕಿ ಮತ್ತು ನನ್ನ ಹೆಂಡತಿ ತಮ್ಮ ಮಕ್ಕಳನ್ನು ಪರಸ್ಪರ ಪರಿಚಯಿಸಿ ಸಂಭ್ರಮಿಸುತ್ತಿರುವ ಕ್ಷಣ ಇದೆಯಲ್ಲ. ಅದಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ" ಎಂದು ಮೈಕೆಲ್ ಹೇಳಿದರು.
  "ಪ್ಯಾಬ್ಲೋ ಗಾಜಿನ ತುಂಬಾ ಹತ್ತಿರ ಬಂದು ನಮ್ಮ ಮಗುವಿನ ಮೂಗನ್ನು ಗಾಜಿನ ಅಕಡೆಯಿಂದಲೇ ಸ್ಪರ್ಶಿಸುತ್ತಿರುವುದನ್ನು ನೋಡಿದ ನಮ್ಮಿಬ್ಬರಿಗೂ ಕಣ್ಣಲ್ಲಿ ನೀರು ಬಂತು" ಎಂದು ಮೈಕೆಲ್ ಹೇಳಿದರು.


  ಎಮ್ಮೆಲಿನಾ ತನ್ನ ಮಗ ಕ್ಯಾನ್ಯನ್ನ ಪುಟ್ಟ ಕೈಯನ್ನು ಗಾಜಿನ ಮೇಲೆ ತಾಗಿಸಿದಾಗ ಕಿಕಿ ಮತ್ತು ಪ್ಯಾಬ್ಲೋ ಪುಟ್ಟ ಮಗುವಿನ ಕೈಯನ್ನು ಪ್ರೀತಿಯಿಂದ ಚುಂಬಿಸಲು ಪ್ರಯತ್ನಿಸಿದವು. ಕಿಕಿಗೆ ಈ ನಮ್ಮ ಭೇಟಿ ನಮ್ಮಷ್ಟೇ ಖುಷಿ ಕೊಟ್ಟಿದ್ದಂತೂ ನಿಜ ಎಂದು ಮೈಕೆಲ್ ಹೇಳುತ್ತಾರೆ. ಇದರಿಂದ ನಮಗೆ ಗೊರಿಲ್ಲಾಗಳು ಭಾವನಾತ್ಮಕ ಬುದ್ದಿವಂತಿಕೆಯನ್ನು ಹೊಂದಿರುವುದು ಅರ್ಥವಾಗುತ್ತದೆ.  ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದು ತುಂಬಾ ವೈರಲ್ ಆಗಿದೆ. ಇದು ಮಾನವರ ಮತ್ತು ಪ್ರಾಣಿಗಳು ಹೇಗೆ ತಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಬಹುದು ಎನ್ನುವುದಕ್ಕೆ ಹೃದಯಸ್ಪರ್ಶಿ ಉದಾಹರಣೆಯಾಗಿದೆ.

  Published by:Kavya V
  First published: