Yuzvendra Chahal: ಮನೆ ಬಿಟ್ಟು ತಾಯಿ ಮನೆಗೆ ಹೊರಟ ಧನಶ್ರೀ, ಕುಣಿದು ಕುಪ್ಪಳಿಸಿದ ಸ್ಪಿನ್​ ಮಾಂತ್ರಿಕ ಚಹಾಲ್​!

ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (Yuzvendra Chahal) ಅವರ ಪತ್ನಿ ಧನಶ್ರೀ ವರ್ಮಾ  (Dhanashree Verma) ಅವರು ತಮ್ಮ ಇನ್ಸ್ಟಾಗ್ರಾಂ (Social media) ಖಾತೆಯಲ್ಲಿ ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಚಹಾಲ್ ಮತ್ತು  ಧನಶ್ರೀ ವರ್ಮಾ

ಚಹಾಲ್ ಮತ್ತು ಧನಶ್ರೀ ವರ್ಮಾ

  • Share this:
ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (Yuzvendra Chahal) ಅವರ ಪತ್ನಿ ಧನಶ್ರೀ ವರ್ಮಾ  (Dhanashree Verma) ಅವರು ತಮ್ಮ ಇನ್ಸ್ಟಾಗ್ರಾಂ (Social media) ಖಾತೆಯಲ್ಲಿ ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಧನಶ್ರೀ ವರ್ಮಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲವು ಸಮಯದಿಂದ ಚರ್ಚೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ದಂಪತಿ ನಡುವೆ ಮನಸ್ತಾಪವಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದಾಗ್ಯೂ, ಮೊದಲು ಯುಜ್ವೇಂದ್ರ ಚಹಾಲ್ ಮತ್ತು ನಂತರ ಅವರ ಪತ್ನಿ ಧನಶ್ರೀ ವರ್ಮಾ ಅವರು ತಮ್ಮಿಬ್ಬರ ಜೀವನದ ಕುರಿತು ಸ್ಪಷ್ಟನೆ ನೀಡಿದ್ದರು.  ಆದರೆ ಈಗ ಧನಶ್ರೀ ಇನ್ಸ್ಟಾಗ್ರಾಂನಲ್ಲಿ ಯುಜ್ವೇಂದ್ರ ಚಹಾಲ್ ಅವರೊಂದಿಗೆ ತಮಾಷೆಯ ರೀಲ್ಸ್ ಅನ್ನು ಹಂಚಿಕೊಳ್ಳುವ ಮೂಲಕ ಎಲ್ಲಾ ವದಂತಿಗಳಿಗೆ ಸಂಪೂರ್ಣವಾಗಿ ತೆರೆ ಎಳೆದಿದ್ದಾರೆ.

ತಮಾಷೆಯ ವಿಡಿಯೋ ಹಂಚಿಕೊಂಡ ಧನಶ್ರೀ:

ಇನ್ನು, ಚಹಾಲ್ ಪತ್ನಿ ಧನಶ್ರೀ ಅವರು ಇನ್ಸ್ಟಾಗ್ರಾಂ ನಲ್ಲಿ ಹೊಸ ರೀಲ್ಸ್ ಹಂಚಿಕೊಂಡಿದ್ದು, ಸಖತ್ ತಮಾಷೆಯಾಗಿದೆ. ದೀವಾನ ಚಿತ್ರದ 'ತೇರಿ ಇಸ್ಸಿ ಅದ ಕೊ ಸನಮ್‘ ಹಾಡಿನಲ್ಲಿ ರೀಲ್ಸ್ ಮಾಡಿದ್ದಾರೆ. ವಿಡಿಯೋದಲ್ಲಿ, ಧನಶ್ರೀ ಚಹಾಲ್ ಬಳಿ ತಾನು ಒಂದು ತಿಂಗಳ ಕಾಲ ತನ್ನ ತಾಯಿಯ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಇದನ್ನು ಕೇಳಿದ ತಕ್ಷಣ ಚಹಾಲ್ ಖುಷಿಯಿಂದ ಡ್ಯಾನ್ಸ್ ಮಾಡುತ್ತಾರೆ. ಈ ತಮಾಷೆಯ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಇಬ್ಬರ ನಡುವಿನ ದಾಂಪತ್ಯದ ವದಂತಿಗೆ ಇದೀಗ ಸಂಪೂರ್ಣವಾಗಿ ತೆರೆ ಎಳೆದಿದ್ದಾರೆ. ಅಲ್ಲದೇ  ಈ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಸುಮಾರು 9 ಲಕ್ಷ ಮಂದಿ ಲೈಕ್ ಮಾಡಿದ್ದಾರೆ.


ವದಂತಿಗಳಿಗೆ ತೆರೆ ಎಳೆದ ಚಹಾಲ್:

ಚಹಾಲ್ ಹಾಗೂ ಧನಶ್ರೀ ಇಬ್ಬರ ಜೀವನದಲ್ಲಿ ಬಿರುಕು ಮೂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ಇದನ್ನು ಗಮನಿಸಿದ ಚಹಾಲ್ ಎಲ್ಲದಕ್ಕೂ ಉತ್ತರ ನೀಡುವ ಮೂಲಕ ಅಂತಿಮವಾಗಿ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಈ ಸಂಬಂಧ ಅವರು ಇನ್ಸ್ಟಾಗ್ರಾಂ ಸ್ಟೋರಿಯೊಂದನ್ನು ಹಾಕಿದ್ದು, ‘ನಮ್ಮ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ವದಂತಿಗಳನ್ನು ನಂಬಬೇಡಿ ಎಂದು ನಿಮಗೆಲ್ಲರಲ್ಲಿಯೂ ಮನವಿ ಮಾಡುತ್ತೇನೆ. ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ‘ ಎಂದು ಚಹಾಲ್ ಎಲ್ಲರಲ್ಲಿಯೂ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Hardik Pandya: ಸೋದರಳಿಯನ ಜೊತೆ ಫೋಟೋ ಹಂಚಿಕೊಂಡ ಹಾರ್ದಿಕ್, ಕೃನಲ್​ ಪಾಂಡ್ಯ ಮಗುವಿನ ಫೋಟೋ ವೈರ

ಏಷ್ಯಾ ಕಪ್​ 2022ಗೆ ತಯಾರಿ:

ಯುಜ್ವೇಂದ್ರ ಚಹಾಲ್ ಇತ್ತೀಚೆಗೆ ನಡೆದ ಜಿಂಬಾಬ್ವೆ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಆದರ ಭಾಗವಾಗಿ ಏಷ್ಯಾಕಪ್‌ಗಾಗಿ ತಯಾರಿಯಲ್ಲಿ ನಿರತರಾಗಿದ್ದಾರೆ. ಏಷ್ಯಾಕಪ್ 2022ರ ವಿರುದ್ಧ ಆಗಸ್ಟ್ 27ರಿಂದ ಆರಂಭವಾಗಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಗಸ್ಟ್ 28 ರಂದು (ಭಾನುವಾರ) ಆಡಲಿದೆ. ಲೆಗ್ ಸ್ಪಿನ್ನರ್ ಚಹಾಲ್ ಪಾಕಿಸ್ತಾನದ ವಿರುದ್ಧ ಆಡಲಿದ್ದಾರೆ. ಈಗಾಗಲೇ ಈ ಪಂದ್ಯದ ಮೇಲೆ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯಿದೆ.

ಇದನ್ನೂ ಓದಿ: Asia Cup 2022: ಭಾರತ-ಪಾಕ್​ ಪಂದ್ಯವನ್ನು ಉಚಿತವಾಗಿ ವೀಕ್ಷಿಸಿ, ಏಷ್ಯಾಕಪ್​ನ್ನು ಫ್ರೀ ಆಗಿ ನೋಡಲು ಇಲ್ಲಿದೆ ಸೂಪರ್​ ಪ್ಲ್ಯಾ

ಏಷ್ಯಾ ಕಪ್​ 2022 ಭಾರತ​ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.
Published by:shrikrishna bhat
First published: