Yuzvendra Chahal: ಚಹಾಲ್ ಪತ್ನಿ ಧನಶ್ರೀ ವರ್ಮಾ ಆಸ್ಪತ್ರೆಗೆ ದಾಖಲು

Yuzvendra Chahal: ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (Yuzvendra Chahal) ಅವರ ಪತ್ನಿ ಧನಶ್ರೀ ವರ್ಮಾ (Dhanashree Verma) ಕಳೆದ ಕೆಲ ದಿಕನಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಅದೇ ರೀತಿ ಇದೀಗ ಸಹ ಧನಶ್ರೀ ಆಸ್ಪತ್ರೆಗೆ ದಾಖಲಾಗುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಚಹಾಲ್ ಮತ್ತು  ಧನಶ್ರೀ ವರ್ಮಾ

ಚಹಾಲ್ ಮತ್ತು ಧನಶ್ರೀ ವರ್ಮಾ

  • Share this:
ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (Yuzvendra Chahal) ಅವರ ಪತ್ನಿ ಧನಶ್ರೀ ವರ್ಮಾ  (Dhanashree Verma) ಕಳೆದ ಕೆಲ ದಿನಗಳಿಂದ ಸಖತ್ ಸುದ್ದಿಯಲ್ಲಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸಕ್ರಿಯರಾಗಿರುವ ಈ ಜೋಡಿ ನಡುವೆ ಬಿರುಕು ಮೂಡಿತ್ತು ಎಂದು ಸುಳ್ಳು ಸುದ್ದಿಯೊಂದು ಹರಡಿತ್ತು. ಇದಾದ ಬಳಿಕ ಈ ಗಾಸಿಫ್​ಗೆ ಇಬ್ಬರೂ ಪ್ರತಿಕ್ರಿಯಿಸುವ ಮೂಲಕ ಸ್ಪಷ್ಟನೆ ನೀಡಿದ್ದರು. ಆದರೆ ಇದೀಗ ಏಷ್ಯಾ ಕಪ್​ಗಾಗಿ (Asia Cup) ಚಹಾಲ್​ ದುಬೈನಲ್ಲಿದ್ದಾರೆ (Dubai). ಇತ್ತ ಅವರ ಪತ್ನಿ ಧನಶ್ರೀ ವರ್ಮಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೌದು, ಮೊಣಕಾಲಿನ ಗಾಯದ ಸಮಸ್ಯೆಯಿಂದ ಧನಶ್ರೀ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕುರಿತ ಪೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.

ಆಸ್ಪತ್ರಗೆ ದಾಖಲಾದ ಚಹಾಳ್ ಪತ್ನಿ:

ಹೌದು, ಚಹಾಲ್​ ಪತ್ನಿ ಧನಶ್ರೀ ವರ್ಮಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.  ಮೊಣಕಾಲಿನ ಗಾಯದ ಸಮಸ್ಯೆಯಿಂದ ಧನಶ್ರೀ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಡ್ಯಾನ್ಸ್ ಮಾಡುವಾಗ ಬಿದ್ದು, ಮೊಣಕಾಲಿಗೆ ಗಂಭೀರ ಗಾಯವಾಗಿತ್ತು. ಅಸ್ಥಿರಜ್ಜು ಮುರಿದಿದ್ದ ಕಾರಣ  ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದೀಗ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಆಗಿದೆ ಎಂದು ಧನಶ್ರೀ ಅವರು ಫೋಟೋವನ್ನು ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.

ಇನ್ನು, ಫೋಟೋ ಹಂಚಿಕೊಂಡಿರುವ ಅವರು, ‘ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಜೀವನದಲ್ಲಿ ಹಿನ್ನಡೆಯು ಮತ್ತೆ ಮುಂಬರಲು ಉತ್ತಮ ವೇದಿಕೆಯಾಗಿದೆ. ನಾನು ಸಹ ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡುತ್ತೇನೆ. ಇದು ದೇವರ ಇಚ್ಛೆ. ನಿಮ್ಮೆಲ್ಲರ ಪ್ರೀತಿಯ ಪ್ರಾರ್ಥನೆಗಳಿಗೆ ಧನ್ಯವಾದಗಳು‘ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇವರ ಪೋಸ್ಟ್ ಗೆ ಪತಿ ಚಹಾಲ್ ಬೇಗ ಗುಣಮುಖರಾಗಿ ಎಂದು ಕಾಮೆಂಟ್​ ಮಾಡಿದ್ದಾರೆ. ಅಲ್ಲದೇ ಅಶ್ವಿನ್ ಪತ್ನಿ ಪ್ರೀತಿ ನಾರಾಯಣ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಅನೇಕರು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Mohammed Shami: 3 ಬಾರಿ ಆತ್ಮಹತ್ಯೆಗೆ ಆಲೋಚಿಸಿದ್ದ ಟೀಂ ಇಂಡಿಯಾ ಸ್ಟಾರ್​ ಆಟಗಾರ, ರಿವೀಲ್​ ಆಯ್ತು ಕರಾಳ ಸತ್ಯ!

ಡಿವೋರ್ಸ್ ವದಂತಿ ಕುರಿತು ಮನವಿ ಮಾಡಿದ್ದ ಚಹಾಲ್:

ಇನ್ನು, ಕೆಲ ದಿನಗಳ ಹಿಂದೆ ಚಹಾಲ್ ಮತ್ತು ಧನಶ್ರೀ ಇಬ್ಬರ ನಡುವೆ ಡಿವೋರ್ಸ್ ಆಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡಿತ್ತು. ಆದರೆ  ಇದನ್ನು ಗಮನಿಸಿದ ಚಹಾಲ್ ಎಲ್ಲದಕ್ಕೂ ಉತ್ತರ ನೀಡುವ ಮೂಲಕ ಅಂತಿಮವಾಗಿ ವದಂತಿಗಳಿಗೆ ತೆರೆ ಎಳೆದಿದ್ದರು. ಈ ಸಂಬಂಧ ಅವರು ಇನ್ಸ್ಟಾಗ್ರಾಂ ಸ್ಟೋರಿಯೊಂದನ್ನು ಹಾಕಿದ್ದರು. ಅದರಲ್ಲಿ,  ‘ನಮ್ಮ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ವದಂತಿಗಳನ್ನು ನಂಬಬೇಡಿ ಎಂದು ನಿಮಗೆಲ್ಲರಲ್ಲಿಯೂ ಮನವಿ ಮಾಡುತ್ತೇನೆ. ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ‘ ಎಂದು ಚಹಾಲ್ ಎಲ್ಲರಲ್ಲಿಯೂ ಮನವಿ ಮಾಡಿದ್ದರು. ಸದ್ಯ ಏಷ್ಯಾ ಕಪ್​ 2022ಗಾಗಿ ಚಹಾಲ್​ ದುಬೈನಲ್ಲಿದ್ದಾರೆ. ಸೂಪರ್ 4 ಹಂತಕ್ಕೆ ಹೋಗಿರುವ ಟೀಂ ಇಂಡಿಯಾ, ನಾಳೆ ಪಾಕಿಸ್ತಾನದ ವಿರುದ್ಧ ಸೆಣಸಲಿದೆ.
Published by:shrikrishna bhat
First published: