Yuzvendra Chahal: ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ! ಅವಳೇ ನನ್ನ ಶಕ್ತಿ ಎಂದ ಫೇಮಸ್​ ಆಟಗಾರ

Yuzvendra Chahal: ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಚಾಹಲ್ ಧನಶ್ರೀ ಜೊತೆಗಿನ ರೊಮ್ಯಾಂಟಿಕ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ.

ಚಹಾಲ್​ ಮತ್ತು ಧನಶ್ರೀ

ಚಹಾಲ್​ ಮತ್ತು ಧನಶ್ರೀ

  • Share this:
ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (Yuzvendra Chahal) ಅವರ ಪತ್ನಿ ಧನಶ್ರೀ ವರ್ಮಾ  (Dhanashree Verma) ಅವರು ತಮ್ಮ ಇನ್ಸ್ಟಾಗ್ರಾಂ (Social media) ದಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ.  ಯುಜ್ವೇಂದ್ರ ಚಹಾಲ್ ಸಹ ಏಷ್ಯಾಕಪ್ ನಂತರ ತಮ್ಮ ಪತ್ನಿ ಧನಶ್ರೀ ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.  ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇದರ ನಡುವೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ದಂಪತಿ ನಡುವೆ ಮನಸ್ತಾಪವಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದಾಗ್ಯೂ, ಮೊದಲು ಯುಜ್ವೇಂದ್ರ ಚಹಾಲ್ ಮತ್ತು ನಂತರ ಅವರ ಪತ್ನಿ ಧನಶ್ರೀ ವರ್ಮಾ ಅವರು ತಮ್ಮಿಬ್ಬರ ಜೀವನದ ಕುರಿತು ಸ್ಪಷ್ಟನೆ ನೀಡಿದ್ದರು. ಇದೀಗ ರೊಮ್ಯಾಂಟಿಕ್ ವಿಡಿಯೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಇಬ್ಬರಿಗೂ ಸಖತ್ ಕ್ಯೂಟ್​ ಜೋಡಿ ಎಂದು ಹೇಳುತ್ತಿದ್ದಾರೆ.

ಪತ್ನಿ ಜೊತೆ ರೊಮ್ಯಾಂಟಿಕ್ ವಿಡಿಯೋ ಶೇರ್​ ಮಾಡಿದ ಚಹಾಲ್:

ಹೌದು, ಚಹಾಲ್​ ಪತ್ನಿ ಧನಶ್ರೀ ವರ್ಮಾ ಜೊತೆಗಿನ ರೊಮ್ಯಾಂಟಿಕ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಎಲ್ಲಡೆ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ  ಸಿಲ್ಸಿಲಾ ಚಿತ್ರದ ದೇಖಾ ಏಕ್ ಖ್ವಾಬ್ ಹಾಡನ್ನು ಬಳಸಿದ್ದಾರೆ. ಚಾಹಲ್ ವಿಡಿಯೋ ಶೀರ್ಷಿಕೆಯಲ್ಲಿ "ತನ್ನ ಹೆಂಡತಿ ತನ್ನ ದೊಡ್ಡ ಶಕ್ತಿ" ಎಂದು ಬರೆದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಲೈಕ್ ಆಗುತ್ತಿದೆ.






ತಮಾಷೆ ವಿಡಿಯೋ ಹಂಚಿಕೊಳ್ಳುವ ದಂಪತಿಗಳು:

ಇನ್ನು, ಚಹಾಲ್ ಪತ್ನಿ ಧನಶ್ರೀ ಅವರು ಇನ್ಸ್ಟಾಗ್ರಾಂ ನಲ್ಲಿ ಹೆಚ್ಚಾಗಿ ಸಕ್ರೀಯರಾಗಿದ್ದು, ಫೋಟೋ ಮತ್ತು ವಿಡಿಯೋಗಳನ್ನು  ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೇ ಈ ರೀಲ್ಸ್​ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಸಹ ಆಗುತ್ತಿರುತ್ತದೆ. ಅದೇ ರೀತಿ ಕಳೆದ ಕೆಲ ದಿನಗಳ ಹಿಂದೆ ಧನಶ್ರೀ ಚಹಾಲ್ ಬಳಿ ತಾನು ಒಂದು ತಿಂಗಳ ಕಾಲ ತನ್ನ ತಾಯಿಯ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳುತ್ತಿರುವುದು ಕಂಡುಬರುತ್ತದೆ.






ಇದನ್ನು ಕೇಳಿದ ತಕ್ಷಣ ಚಹಾಲ್ ಖುಷಿಯಿಂದ ಡ್ಯಾನ್ಸ್ ಮಾಡುತ್ತಾರೆ. ಈ ತಮಾಷೆಯ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಇಬ್ಬರ ನಡುವಿನ ದಾಂಪತ್ಯದ ವದಂತಿಗೆ ಇದೀಗ ಸಂಪೂರ್ಣವಾಗಿ ತೆರೆ ಎಳೆದಿದ್ದಾರೆ. ಅಲ್ಲದೇ  ಈ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ಗೆ 9 ತಂಡಗಳು ಪ್ರಕಟ, ಯಾರೆಲ್ಲಾ ಸ್ಟಾರ್​ ಪ್ಲೇಯರ್ಸ್​ ಇದ್ದಾರೆ ನೋಡಿ; ಇಲ್ಲಿದೆ ಸಂಪೂರ್ಣ ಪಟ್ಟಿ

ದಾಂಪತ್ಯ ಜೀವನದ ಕುರಿತು ಸ್ವಷ್ಟನೆ ನೀಡಿದ್ದ ಚಹಾಲ್:

ಚಹಾಲ್ ಹಾಗೂ ಧನಶ್ರೀ ಇಬ್ಬರ ಜೀವನದಲ್ಲಿ ಬಿರುಕು ಮೂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ಇದನ್ನು ಗಮನಿಸಿದ ಚಹಾಲ್ ಎಲ್ಲದಕ್ಕೂ ಉತ್ತರ ನೀಡುವ ಮೂಲಕ ಅಂತಿಮವಾಗಿ ವದಂತಿಗಳಿಗೆ ತೆರೆ ಎಳೆದಿದ್ದರು. ಈ ಸಂಬಂಧ ಅವರು ಇನ್ಸ್ಟಾಗ್ರಾಂ ಸ್ಟೋರಿಯೊಂದನ್ನು ಹಾಕಿದ್ದು, ‘ನಮ್ಮ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ವದಂತಿಗಳನ್ನು ನಂಬಬೇಡಿ ಎಂದು ನಿಮಗೆಲ್ಲರಲ್ಲಿಯೂ ಮನವಿ ಮಾಡುತ್ತೇನೆ. ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ‘ ಎಂದು ಮನವಿ ಮಾಡಿದ್ದರು. ಒಟ್ಟಾರೆಯಾಗಿ ಕ್ರಿಕೆಟ್​ ಲೋಕದಲ್ಲಿ ಈ ಜೋಡಿಯನ್ನು ಅಭಿಮಾನಿಗಳು ಸಖತ್​ ಕ್ಯೂಟ್​ ಜೋಡಿ ಎಂದು ಹೇಳುತ್ತಿದ್ದಾರೆ.
Published by:shrikrishna bhat
First published: