Yuzvendra Chahal: ಚಹಾಲ್​ ದಾಂಪತ್ಯ ಜೀವನದಲ್ಲಿ ಬಿರುಕು? ಅನುಮಾನಕ್ಕೆ ಇದೇ ಕಾರಣ!

ಟೀಂ ಇಂಡಿಯಾದ ಖ್ಯಾತ ಬೌಲರ್​ ಯುಜವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ಮೂಡಿದೆ.

ಚಹಾಲ್ ಮತ್ತು  ಧನಶ್ರೀ ವರ್ಮಾ

ಚಹಾಲ್ ಮತ್ತು ಧನಶ್ರೀ ವರ್ಮಾ

  • Share this:
ಟೀಂ ಇಂಡಿಯಾದ ಖ್ಯಾತ ಬೌಲರ್​ ಯುಜವೇಂದ್ರ ಚಹಲ್ (Yuzvendra Chahal) ಮತ್ತು  ಪತ್ನಿ ಧನಶ್ರೀ ವರ್ಮಾ (Dhanashree Verma) ಅವರನ್ನು ಕ್ರಿಕೆಟ್​ (Cricket) ಲೋಕದಲ್ಲಿ ಕ್ಯೂಟ್​ ಜೋಡಿ ಎಂದು ಕರೆಯಲಾಗುತ್ತದೆ.  ಚಹಾಲ್​ ಮತ್ತು ಧನಶ್ರೀ ಸಾಮಾಜಿಕ ಜಾಲತಾಣದಲ್ಲಿ (Social media) ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಪೋಟೋಗಳನ್ನು ಹಾಕುವ ಮೂಲಕ ಇವರಿಬ್ಬರೂ ಎಂದಿಗೂ ಸಂತಸದಿಂದ ಇರುತ್ತಿದ್ದರು. ಆದರೆ ಇದೀಗ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ಮೂಡಿದೆ. ಹೌದು, ಇದಕ್ಕೂ ಒಂದು ಬಲವಾದ ಕಾರಣವಿದ್ದು, ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜೊತೆಗೆ ಇವರಿಬ್ಬರ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ ಗಳು ಸಾಕಷ್ಟು ಅನುಮಾನ ಮೂಡಿಸಿದೆ.

ಅನುಮಾನ ಮೂಡಿಸಿದ ದಂಪತಿ ಪೋಸ್ಟ್​:

ಹೌದು, ಕ್ರಿಕೆಟ್​ ಲೋಕದ ಕ್ಯೂಟ್​ ಜೋಡಿಯಾಗಿದ್ದ ಚಹಾಲ್ ಮತ್ತು ಧನಶ್ರೀ ಜೀವನದಲ್ಲಿ ಇದೀಗ ಬಿರುಕು ಮೂಡಿದೆ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣ ಅವರಿಬ್ಬರ ಸಾಮಾಜಿಕ ಜಾಲತಾಣವಾಗಿದೆ. ಹೌದು, ಮೊದಲಿಗೆ ಚಹಾಲ್ ಪತ್ನಿ ಧನಶ್ರೀ ವರ್ಮಾ ಅವರು ಇನ್​ಸ್ಟಾಗ್ರಾಂ ನಲ್ಲಿ ತಮ್ಮ ಹೆಸರಿನ ಮುಂದೆ ಪತಿ ಚಹಾಲ್ ಅವರ ಹೆಸರನ್ನು ಸೇರಿಸಿದ್ದರು. ಆದರೆ ಇದೀಗ ಈ ಹೆಸರು ಬದಲಾಗಿದ್ದು, ಕೇವಲ ಧನಶ್ರೀ ಎಂಬ ಹೆಸರು ಉಳಿದುಕೊಂಡಿದೆ. ಚಹಾಲ್ ಎಂಬ ಉಪನಾಮವು ಇಲ್ಲವಾಗಿದ್ದು, ಹಲವು ಅನುಮಾನಗಳು ಅವರ ಅಭಿಮಾನಿಗಳಲ್ಲಿ ಮೂಡಿದೆ.


ಹೊಸ ಜೀವನದ ನಿರೀಕ್ಷೆಯಲ್ಲಿ ಚಹಾಲ್:

ಇದೆಲ್ಲಾ ನಡೆಯುತ್ತಿರುವುದರ ನಡುವೆ ಚಹಾಲ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್​ವೊಂದು ದೊಡ್ಡಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಹೌದು, ಚಹಾಲ್ ಸಹ ಇನ್ಸ್ಟಾಗ್ರಾಂ ಸ್ಟೋರಿ ಅಲ್ಲಿ  ‘ಹೊಸ ಜೀವನ ಪ್ರಾರಂಭವಾಗುತ್ತಿದೆ‘ ಎಂಬ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಈ ಜೋಡಿಯ ನಡುವೆ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣಕ್ಕಾಗಿ ಇವರಿಬ್ಬರೂ ಎಲ್ಲಿಯೂ ಸಾಮಾಜಿಕವಾಗಿ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.

ಚಹಾಲ್ ಹಂಚಿಕೊಂಡ ಪೋಸ್ಟ್


ಲವ್​ ಮಾಡಿ ಮದುವೆ ಆಗಿದ್ದ ಜೋಡಿ:

ಟೀಂ ಇಂಡಿಯಾದ ಖ್ಯಾತ ಬೌಲರ್​ ಯುಜ್ವೇಂದ್ರ ಚಾಹಾಲ್ ಮತ್ತು ಧನಶ್ರೀ ವರ್ಮಾ ಇಬ್ಬರೂ ಲವ್ ಮಾಡಿ ಮದುವೆ ಆಗಿದ್ದರು. ಇವರಿಬ್ಬರೂ ಮೊದಲ ಬಾರಿಗೆ ಆನ್​ಲೈನ್​ ತರಗತಿಯಲ್ಲಿ ಪರಿಚಯವಾಗಿದ್ದರು. ಚಹಾಲ್​ ಅವರು ಡ್ಯಾನ್ಸ್ ಕಲಿಯುವುದಕ್ಕಾಗಿ ಧನಶ್ರೀ ವರ್ಮಾ ಅವರ ಆನ್​ಲೈನ್​ ಕ್ಲಾಸ್​ಗೆ ಸೇರಿಕೊಂಡಿದ್ದರು. ಹೀಗಾಗಿ ಇವರಿಬ್ಬರೂ ದಿನವೂ ತರಗತಿಯ ಕಾರಣದಿಂದ ಆನ್​ಲೈನ್​ನಲ್ಲಿ ಭೇಟಿ ಆಗುತ್ತಿದ್ದರು.

ಇದನ್ನೂ ಓದಿ: ICC Cricket Schedule: 2027ರ ವರೆಗಿನ ಕ್ರಿಕೆಟ್ ವೇಳಾಪಟ್ಟಿ ಪ್ರಕಟ, ಹೇಗಿದೆ ಟೀಂ ಇಂಡಿಯಾ ಶೆಡ್ಯೂಲ್​? ಇಲ್ಲಿದೆ ಸಂಪೂರ್ಣ ವಿವರ

ಇದು ದಿನ ಕಳೆದಂತೆ ಪ್ರೀತಿಗೆ ತಿರುಗಿದೆ. ನಂತರ ಇಬ್ಬರೂ ಒಪ್ಪಿಕೊಂಡು 2020ರಲ್ಲಿ ಡಿಸೆಂಬರ್​ 22ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇದೀಗ ಇವರಿಬ್ಬರ ನಡೆ ನೋಡಿದರೆ ಜೀವನದಲ್ಲಿ ವೈಮನಸ್ಸು ಮೂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಈ ಜೋಡಿ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.

ಏಷ್ಯಾ ಕಪ್​ 2022ರಲ್ಲಿ ಚಹಾಲ್:

ಚಹಾಲ್​ ಇದೀಗ ಏಷ್ಯಾ ಕಪ್​ 2022ಗೆ ಆಯ್ಕೆ ಆಗಿದ್ದಾರೆ. ಅಲ್ಲದೇ ಅನೇಕ ದಿನಗಳ ನಂತರ ಅವರು ಮತ್ತೊಮ್ಮೆ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದು, ಅವರ ಆಟದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇನ್ನು, ಚಹಾಲ್ ಐಪಿಎಲ್​ ನಲ್ಲಿ ಆರ್​ಸಿಬಿ ತಂಡದಿಂದ ನಿರ್ಗಮಿಸಿದ್ದು, ರಾಜಸ್ಥಾನ್ ತಂಡದಲ್ಲಿ ಮಿಂಚುತ್ತಿದ್ದಾರೆ.
Published by:shrikrishna bhat
First published: