Yuzvendra Chahal: ವೈವಾಹಿಕ ಜೀವನದಲ್ಲಿ ಬಿರುಕು,​ ಊಹಾಪೋಹಗಳಿಗೆ ತೆರೆ ಎಳೆದ ಚಹಾಲ್

ಚಹಾಲ್ ಹಾಗೂ ಧನಶ್ರೀ ಇಬ್ಬರ ಜೀವನದಲ್ಲಿ ಬಿರುಕು ಮೂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ಇದನ್ನು ಗಮನಿಸಿದ ಚಹಾಲ್ ಎಲ್ಲದಕ್ಕೂ ಉತ್ತರ ನೀಡುವ ಮೂಲಕ ಅಂತಿಮವಾಗಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಚಹಾಲ್​ ಮತ್ತು ಧನಶ್ರೀ

ಚಹಾಲ್​ ಮತ್ತು ಧನಶ್ರೀ

  • Share this:
ಟೀಂ ಇಂಡಿಯಾದ ಖ್ಯಾತ ಬೌಲರ್​ ಯುಜ್ವೇಂದ್ರ ಚಹಾಲ್ (Yuzvendra Chahal) ಮತ್ತು  ಪತ್ನಿ ಧನಶ್ರೀ ವರ್ಮಾ (Dhanashree Verma) ಅವರು ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ (Social media) ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಜೊತೆಗೆ ಈ ಕುರಿತು ಎಲ್ಲಡೆ ಸಾಕಷ್ಟು ಊಹಾಪೋಹಗಳು ಮತ್ತು ವದಂತಿಗಳು ಹಬ್ಬಿದ್ದವು. ಇವೆಲ್ಲವನ್ನೂ ಗಮನಿಸಿದ ಚಹಾಲ್​ ಸ್ವತಃ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಈ ಸಂಬಂಧ ಚಹಾಲ್ ಇನ್ಸ್ಟಾಗ್ರಾಂ (Instagram) ಸ್ಟೋರಿಯೊಂದನ್ನು ಹಂಚಿಕೊಂಡಿದ್ದಾರೆ. ಈ ಸ್ಟೋರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳನ್ನು ನಂಬಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇದಕ್ಕೂ ಮೊದಲು ಇವರಿಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಈ ಎಲ್ಲಾ ವದಂತಿಗಳು ಹಬ್ಬಲು ಕಾರಣವಾಗಿದ್ದವು. 

ವದಂತಿಗಳಿಗೆ ತೆರೆ ಎಳೆದ ಚಹಾಲ್:

ಹೌದು, ಕಳೆದ ದಿನ ಚಹಾಲ್ ಹಾಗೂ ಧನಶ್ರೀ ಇಬ್ಬರ ಜೀವನದಲ್ಲಿ ಬಿರುಕು ಮೂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ಇದನ್ನು ಗಮನಿಸಿದ ಚಹಾಲ್ ಎಲ್ಲದಕ್ಕೂ ಉತ್ತರ ನೀಡುವ ಮೂಲಕ ಅಂತಿಮವಾಗಿ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಈ ಸಂಬಂಧ ಅವರು ಇನ್ಸ್ಟಾಗ್ರಾಂ ಸ್ಟೋರಿಯೊಂದನ್ನು ಹಾಕಿದ್ದು, ‘ನಮ್ಮ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ವದಂತಿಗಳನ್ನು ನಂಬಬೇಡಿ ಎಂದು ನಿಮಗೆಲ್ಲರಲ್ಲಿಯೂ ಮನವಿ ಮಾಡುತ್ತೇನೆ. ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ‘ ಎಂದು ಚಹಾಲ್ ಎಲ್ಲರಲ್ಲಿಯೂ ಮನವಿ ಮಾಡಿದ್ದಾರೆ.

ಚಹಾಲ್ ಪೋಸ್ಟ್


ಅನುಮಾನ ಮೂಡಿಸಿದ್ದ ಚಹಾಲ್-ಧನಶ್ರೀ ಪೋಸ್ಟ್:

ಚಹಾಲ್ ಪತ್ನಿ ಧನಶ್ರೀ ವರ್ಮಾ ಅವರು ಇನ್​ಸ್ಟಾಗ್ರಾಂ ನಲ್ಲಿ ತಮ್ಮ ಹೆಸರಿನ ಮುಂದೆ ಪತಿ ಚಹಾಲ್ ಅವರ ಹೆಸರನ್ನು ಸೇರಿಸಿದ್ದರು. ಆದರೆ ಇದೀಗ ಈ ಹೆಸರು ಬದಲಾಗಿದ್ದು, ಕೇವಲ ಧನಶ್ರೀ ಎಂಬ ಹೆಸರು ಉಳಿದುಕೊಂಡಿತ್ತು. ಚಹಾಲ್ ಎಂಬ ಉಪನಾಮವು ಇಲ್ಲವಾಗಿದ್ದು, ಹಲವು ಅನುಮಾನಗಳು ಅವರ ಅಭಿಮಾನಿಗಳಲ್ಲಿ ಮೂಡಿದ್ದವು. ಇದರ ನಡುವೆ ಚಹಾಲ್ ಸಹ ಇನ್ಸ್ಟಾಗ್ರಾಂ ಸ್ಟೋರಿ ಅಲ್ಲಿ  ‘ಹೊಸ ಜೀವನ ಪ್ರಾರಂಭವಾಗುತ್ತಿದೆ‘ ಎಂಬ ಫೋಟೋವನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಈ ಜೋಡಿಯ ನಡುವೆ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೇ ಕಾರಣಕ್ಕಾಗಿ ಇವರಿಬ್ಬರೂ ಎಲ್ಲಿಯೂ ಸಾಮಾಜಿಕವಾಗಿ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿತ್ತು.

ಪ್ರೀತಿಸಿ ಮದುವೆ ಆಗಿದ್ದ ಜೋಡಿ:

ಟೀಂ ಇಂಡಿಯಾದ ಖ್ಯಾತ ಬೌಲರ್​ ಯುಜ್ವೇಂದ್ರ ಚಾಹಾಲ್ ಮತ್ತು ಪತ್ನಿ ಧನಶ್ರೀ ವರ್ಮಾ ಇಬ್ಬರೂ ಲವ್ ಮಾಡಿ ಮದುವೆ ಆಗಿದ್ದರು. ಇವರಿಬ್ಬರೂ ಮೊದಲ ಬಾರಿಗೆ ಆನ್​ಲೈನ್​ ತರಗತಿಯಲ್ಲಿ ಪರಿಚಯವಾಗಿದ್ದರು. ಚಹಾಲ್​ ಅವರು ಡ್ಯಾನ್ಸ್ ಕಲಿಯುವುದಕ್ಕಾಗಿ ಧನಶ್ರೀ ವರ್ಮಾ ಅವರ ಆನ್​ಲೈನ್​ ಕ್ಲಾಸ್​ಗೆ ಸೇರಿಕೊಂಡಿದ್ದರು. ಹೀಗಾಗಿ ಇವರಿಬ್ಬರೂ ದಿನವೂ ತರಗತಿಯ ಕಾರಣದಿಂದ ಆನ್​ಲೈನ್​ನಲ್ಲಿ ಭೇಟಿ ಆಗುತ್ತಿದ್ದರು. ಇದು ದಿನ ಕಳೆದಂತೆ ಪ್ರೀತಿಗೆ ತಿರುಗಿದೆ. ನಂತರ ಇಬ್ಬರೂ ಒಪ್ಪಿಕೊಂಡು 2020ರಲ್ಲಿ ಡಿಸೆಂಬರ್​ 22ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇದನ್ನೂ ಓದಿ: India vs Zimbabwe 1st ODI: ಭರ್ಜರಿ ಕಂಬ್ಯಾಕ್​ ಮಾಡಿದ ದೀಪಕ್ ಚಹಾರ್, ಟೀಂ ಇಂಡಿಯಾ ದಾಳಿಗೆ ಜಿಂಬಾಬ್ವೆ ತತ್ತರ

ಸದ್ಯ, ಚಹಾಲ್​ ಮುಂಬರುವ ಏಷ್ಯಾ ಕಪ್​ 2022ಗೆ ಆಯ್ಕೆ ಆಗಿದ್ದಾರೆ. ಅಲ್ಲದೇ ಅನೇಕ ದಿನಗಳ ನಂತರ ಅವರು ಮತ್ತೊಮ್ಮೆ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದು, ಅವರ ಆಟದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇನ್ನು, ಚಹಾಲ್ ಐಪಿಎಲ್​ ನಲ್ಲಿ ಆರ್​ಸಿಬಿ ತಂಡದಿಂದ ನಿರ್ಗಮಿಸಿದ್ದು, ರಾಜಸ್ಥಾನ್ ತಂಡದಲ್ಲಿ ಮಿಂಚುತ್ತಿದ್ದಾರೆ.
Published by:shrikrishna bhat
First published: