Yuzvendra Chahal: ಶತಕವೀರ ಯಜುವೇಂದ್ರ ಚಹಾಲ್.. ಒನ್​ ಡೇ ಪಂದ್ಯಗಳಲ್ಲಿ 104 ವಿಕೆಟ್​ ಕಬಳಿಸಿದ ಸ್ಪಿನ್​ ಮಾಂತ್ರಿಕ!

51 ವರ್ಷಗಳ ಹಿಂದೆ ಮೆಲ್ಬೋರ್ನ್‍ನಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯಾ-ಇಂಗ್ಲೆಂಡ್(Australia-Engaland) ನಡುವಿನ ಆ್ಯಶಸ್ ಟೆಸ್ಟ್ ಪಂದ್ಯ ಮೊದಲ ಮೂರು ದಿನದಾಟದ ನಂತರ ಮಳೆಗೆ ಆಹುತಿಯಾದ್ದರಿಂದ ಏಕದಿನ ಪಂದ್ಯ(ODI) ಎಂಬ ಚುಟುಕು ಕ್ರಿಕೆಟ್ ಮಾದರಿ ಆರಂಭವಾಯಿತು.

ಯಜುವೇಂದ್ರ ಚಹಾಲ್

ಯಜುವೇಂದ್ರ ಚಹಾಲ್

  • Share this:
ಏಕದಿನ ಕ್ರಿಕೆಟ್(ODI) ಮಾದರಿಯಲ್ಲಿ ಭಾರತ(India)ದ ಲೆಗ್ ಸ್ಪಿನ್ನರ್(Leg Spinner) ಯಜುವೇಂದ್ರ ಚಾಹಲ್(Yuzvendra Chahal) ಅತ್ಯಂತ ಅರ್ಹವಾದ ಮೈಲಿಗಲ್ಲಿನ ಸಾಧಿಸಿದ್ದಾರೆ. 51 ವರ್ಷಗಳ ಹಿಂದೆ ಮೆಲ್ಬೋರ್ನ್‍ನಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯಾ-ಇಂಗ್ಲೆಂಡ್(Australia-England) ನಡುವಿನ ಆ್ಯಶಸ್ ಟೆಸ್ಟ್ ಪಂದ್ಯ ಮೊದಲ ಮೂರು ದಿನದಾಟದ ನಂತರ ಮಳೆಗೆ ಆಹುತಿಯಾದ್ದರಿಂದ ಏಕದಿನ ಪಂದ್ಯ(ODI) ಎಂಬ ಚುಟುಕು ಕ್ರಿಕೆಟ್ ಮಾದರಿ ಆರಂಭವಾಯಿತು. ಈ ಮಾದರಿಯಲ್ಲಿ ಬಲಗೈ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಸ್ಮರಣೀಯ 100 ವಿಕೆಟ್‍(Wicket)ಗಳ ಸಾಧನೆ ಮಾಡಿದ್ದಾರೆ. ಚದುರಂಗದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿರುವ ಹಿನ್ನೆಲೆ ಹೊಂದಿರುವ 31 ವರ್ಷದ ಈ ಲೆಗ್ ಸ್ಪಿನ್ನರ್, ಇತ್ತೀಚಿನ ದಿನಗಳಲ್ಲಿ ಅಸಾಂಪ್ರದಾಯಿಕ ಹಾಗೂ ಕಠಿಣ ಮಾದರಿಯಾಗಿ ಬದಲಾಗಿರುವ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‍(International)ನಲ್ಲಿ ಆಡುತ್ತಿರುವವರ ಪೈಕಿ ಒಬ್ಬರಾಗಿದ್ದಾರೆ. ಇಲ್ಲಿಯವರೆಗೆ 60 ಪಂದ್ಯಗಳನ್ನಾಡಿರುವ ಚಹಾಲ್‍, 27.88 ಸರಾಸರಿಯೊಂದಿಗೆ 104 ವಿಕೆಟ್‍ಗಳನ್ನು ಕಬಳಿಸಿದ್ದಾರೆ.

ಯಜುವೇಂದ್ರ ಚಹಾಲ್ ನೀಡಿರುವ ರನ್ ಸರಾಸರಿ 32.19ರಷ್ಟಿದೆ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ತಮ್ಮ 5 ವರ್ಷಗಳ ಪಯಣದಲ್ಲಿ ಎರಡು ಬಾರಿ ಪಂದ್ಯವೊಂದರಲ್ಲಿ 5 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ. ಚಹಲ್ 2016ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಕ್ರಿಕೆಟ್ ಪಂದ್ಯಗಳಿಗೆ ಪದಾರ್ಪಣೆ ಮಾಡಿದರು.

ಒಂದೇ ಪಂದ್ಯದಲ್ಲಿ 6 ವಿಕೆಟ್​ ಕಬಳಿಸಿದ್ದ ಚಹಾಲ್​!

2017 ಹಾಗೂ 2019ರಲ್ಲಿ ಅವರ ವಿಕೆಟ್ ಗಳಿಕೆ ಅತ್ಯುತ್ತಮ ಸರಾಸರಿ ಹೊಂದಿತ್ತು. 2017ರಲ್ಲಿ ಅವರು 21 ವಿಕೆಟ್‍ಗಳನ್ನು ಕಿತ್ತರೆ, 2018 ಹಾಗೂ 2019ರ ನಡುವೆ 28 ವಿಕೆಟ್‍ಗಳನ್ನು ಉರುಳಿಸಿದ್ದರು. ಜನವರಿ 2019ರಲ್ಲಿ ಮೆಲ್ಬೋರ್ನ್‍ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 42 ರನ್ ನೀಡಿ 6 ವಿಕೆಟ್‍ ಗಳಿಸಿದ್ದು ಅವರ ಜೀವನಶ್ರೇಷ್ಠ ಸಾಧನೆಯಾಗಿದೆ. ಚಾಹಲ್ ತಮ್ಮ ಕುಶಲತೆ ಹಾಗೂ ಅಂಕಿಯನ್ನು ವೃದ್ಧಿಸಿಕೊಳ್ಳಲು ಸಾಂಕ್ರಾಮಿಕ ಸುಗಮ ಹಾದಿ ನೀಡದಿರಬಹುದು

ಎಲ್ಲ ತಂಡದೊಂದಿಗೂ ಪಂದ್ಯವಾಡಿದ್ದಾರೆ ಚಹಾಲ್​!

ಶಿಖರ್ ಧವನ್ ನಾಯಕತ್ವದಲ್ಲಿ ಕೊಲೊಂಬೊದಲ್ಲಿ ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿ ಸೇರಿದಂತೆ 2016-2021ರವರೆಗೆ ಭಾರತ ಜಯಿಸಿರುವ 40 ಪಂದ್ಯಗಳಲ್ಲಿ ಚಹಾಲ್ ತಂಡದ ಜೊತೆಗಿದ್ದರು. ಅವರು ಈವರೆಗೆ ಏಕದಿನ ಕ್ರಿಕೆಟ್ ಪಂದ್ಯಗಳ ಮಾದರಿಯಲ್ಲಿ 11 ದೇಶಗಳ ವಿರುದ್ಧ ಆಟವಾಡಿದ್ದು, ಈ ಪೈಕಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧ ಎರಡು ಅಂಕಿಯ (16-122) ವಿಕೆಟ್ ಗಳಿಕೆ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಭಾರತೀಯ ಮೂಲದ ಗೆಳತಿ ಜೊತೆ ಸಪ್ತಪದಿ ತುಳಿಯಲು ಸಜ್ಜಾದ ಮ್ಯಾಕ್ಸ್‌ವೆಲ್

ಟೀ ಇಂಡಿಯಾದ  ಪ್ರಮುಖ ಬೌಲರ್​ ಚಹಾಲ್​!

2019ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಐಸಿಸಿ ವಿಶ್ವಕಪ್‍ನಲ್ಲಿ ಚಾಹಲ್ ಭಾರತ ತಂಡದ ಪ್ರಮುಖ ಬೌಲರ್​​ಗಳ ಪೈಕಿ ಒಬ್ಬರಾಗಿದ್ದರು. ಈ ಕ್ರೀಡಾಕೂಟದಲ್ಲಿ 74 ಓವರ್ ಬೌಲ್ ಮಾಡಿದ್ದ ಚಾಹಲ್, 36.83ರ ಸರಾಸರಿಯಲ್ಲಿ 12 ವಿಕೆಟ್ ಕಬಳಿಸಿದ್ದರು. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನಂತರ ರವಿಚಂದ್ರನ್ ಅಶ‍್ವಿನ್ ಹಾಗೂ ರವೀಂದ್ರ ಜಡೇಜಾ ಅವರನ್ನು ತಂಡದಿಂದ ಕೈಬಿಟ್ಟಿತ್ತು.

ಇದನ್ನು ಓದಿ: KKR ಪರ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡ ಶಾರುಖ್, ಜೂಹಿ ಚಾವ್ಲಾ ಮಕ್ಕಳು

ಇದಾದ ನಂತರ 35 ಪಂದ್ಯಗಳನ್ನಾಡಿರುವ ಮಣಿಕಟ್ಟಿನ ಬೌಲರ್​ ಜೋಡಿಗಳಾದ ಚಹಾಲ್ ಹಾಗೂ ಯಾದವ್, 71 ವಿಕೆಟ್‍ಗಳನ್ನು ಗಳಿಸಿದ್ದು, ಅನಿಲ್ ಕುಂಬ್ಳೆ ಹಾಗೂ ಸಚಿನ್ ತೆಂಡೂಲ್ಕರ್ ನಂತರ(167 ಪಂದ್ಯಗಳಲ್ಲಿ 131 ವಿಕೆಟ್‍ಗಳು)ದ ಮೂರನೆ ಅತ್ಯುತ್ತಮ ಬೌಲಿಂಗ್ ಜೋಡಿ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ. ಇದೇ ಹೊತ್ತಿನಲ್ಲಿ 84 ಪಂದ್ಯಗಳಲ್ಲಿ 128 ವಿಕೆಟ್ ಕಬಳಿಸುವ ಮೂಲಕ ಅಶ್ವಿನ್ ಹಾಗೂ ಜಡೇಜಾ ಜೋಡಿ ಎರಡನೆ ಅತ್ಯುತ್ತಮ ಬೌಲರ್ ಜೋಡಿ ಎಂಬ ಗರಿಮೆಗೆ ಪಾತ್ರವಾಗಿದೆ.
Published by:Vasudeva M
First published: